Get Updates
Get notified of breaking news, exclusive insights, and must-see stories!

G20 Summit 2023 Live: ಜಿ20 ಒಕ್ಕೂಟಕ್ಕೆ ಆಫ್ರಿಕನ್​ ಒಕ್ಕೂಟ ಸೇರ್ಪಡೆ: ಪ್ರಧಾನಿ ಮೋದಿ ಘೋಷಣೆ

ನವದೆಹಲಿ, ಸೆಪ್ಟಂಬರ್ 9: ಹದಿನೆಂಟನೇ ಜಿ 20 ಶೃಂಗಸಭೆಯು ರಾಜಧಾನಿಯ ಪ್ರಗತಿ ಮೈದಾನದಲ್ಲಿರುವ ಭಾರತ ಮಂಟಪದಲ್ಲಿ ಆರಂಭವಾಗಲಿದೆ. ಜಾಗತಿಕ ಸಮಸ್ಯೆಗಳನ್ನು ಚರ್ಚಿಸಲು ಒಂದು ಕಡೆ ಸಭೆ ಸೇರುವ ವಿಶ್ವದ ಇಪ್ಪತ್ತು ದೇಶದ ಪ್ರಮುಖ ನಾಯಕರುಗಳ ಈ ಶೃಂಗಸಭೆ ನವೆಂಬರ್ 2008ರಲ್ಲಿ ಅಮೆರಿಕಾದ ವಾಷಿಂಗ್ಟನ್ ನಲ್ಲಿ ಆರಂಭಗೊಂಡಿತ್ತು. ಇಂದು (ಸೆ 9) ಮತ್ತು ನಾಳೆ (ಸೆ 10) ನಡೆಯಲಿರುವ ಈ ಸಭೆಯ ಪ್ರಮುಖಾಂಶವನ್ನು ಈ ಲೈವ್ ಪೇಜಿನಲ್ಲಿ ನೀಡಲಾಗುತ್ತದೆ.

g20-summit-2023-delhi-live-updates

Sep 09, 2023, 10:57 pm IST

G20 ರಾಷ್ಟ್ರಗಳು, ಅತಿಥಿ ರಾಷ್ಟ್ರಗಳು ಮತ್ತು ಅಂತರರಾಷ್ಟ್ರೀಯ ಸಂಸ್ಥೆಗಳ ನಿಯೋಗಗಳ ಮುಖ್ಯಸ್ಥರನ್ನು G20 ಶೃಂಗಸಭೆಯ ಗಾಲಾ ಭೋಜನಕ್ಕೆ ಭವ್ಯವಾದ ಭಾರತ್ ಮಂಟಪದಲ್ಲಿ ಭೇಟಿ ಮಾಡಲು ಸಂತೋಷವಾಗಿದೆ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ.
Sep 09, 2023, 10:34 pm IST

ಯುಕೆ ಪಿಎಂ ರಿಷಿ ಸುನಕ್ ಅವರು ದೆಹಲಿಯ ಭಾರತ್ ಮಂಟಪದಲ್ಲಿ ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ರಾಜ್ಯ ಸಚಿವ ಜಿತೇಂದ್ರ ಸಿಂಗ್ ಅವರನ್ನು ಭೇಟಿಯಾದರು.
Sep 09, 2023, 10:33 pm IST

G20 ಒಕ್ಕೂಟಕ್ಕೆ ಸೇರ್ಪಡೆಗೊಂಡ ಸದಸ್ಯ ರಾಷ್ಟ್ರಗಳಿಗೆ ಧನ್ಯವಾದ ಹೇಳಿದ ಪ್ರಧಾನಿ ಮೋದಿ

G20 ಒಕ್ಕೂಟಕ್ಕೆ ಸೇರ್ಪಡೆಗೊಂಡ ಸದಸ್ಯ ರಾಷ್ಟ್ರಗಳಿಗೆ ಧನ್ಯವಾದ ಹೇಳಿದ ಪ್ರಧಾನಿ ಮೋದಿ
G20 ಒಕ್ಕೂಟಕ್ಕೆ ಸೇರ್ಪಡೆಗೊಂಡ ಸದಸ್ಯ ರಾಷ್ಟ್ರಗಳಿಗೆ ಧನ್ಯವಾದ ಹೇಳಿದ ಪ್ರಧಾನಿ ಮೋದಿ
Sep 09, 2023, 10:24 pm IST

"ನವದೆಹಲಿ G20 ನಾಯಕರ ಶೃಂಗಸಭೆಯ ಘೋಷಣೆಯನ್ನು ಅಂಗೀಕರಿಸಿದ ಪ್ರಧಾನಿ ನರೇಂದ್ರ ಮೋದಿ ಮತ್ತು G20 ಸದಸ್ಯ ರಾಷ್ಟ್ರಗಳಿಗೆ ನನ್ನ ಆತ್ಮೀಯ ಅಭಿನಂದನೆಗಳು. ಮಾನವಕುಲದ ಕಲ್ಯಾಣವನ್ನು ಉತ್ತೇಜಿಸುವ ನಮ್ಮ ನಾಗರಿಕತೆಯ ಗುರಿಯನ್ನು ಅನುಸರಿಸುವಲ್ಲಿ, ಗೌರವಾನ್ವಿತ G20 ನಾಯಕರು ಒಮ್ಮತಕ್ಕೆ ಬಂದಿದ್ದಾರೆ. ರಾಜತಾಂತ್ರಿಕತೆ ಮತ್ತು ಸಹಕಾರದ ಮೂಲಕ ರಾಷ್ಟ್ರಗಳ ನಡುವೆ ನಂಬಿಕೆಯ ಸೇತುವೆಗಳನ್ನು ನಿರ್ಮಿಸಲು ಇದು ಎಲ್ಲರಿಗೂ ಉತ್ತಮ ಭವಿಷ್ಯದತ್ತ ಮಹತ್ವದ ಹೆಜ್ಜೆಯನ್ನು ಸೂಚಿಸುತ್ತದೆ" ಎಂದು ಗೃಹ ಸಚಿವ ಅಮಿತ್ ಶಾ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
Sep 09, 2023, 10:07 pm IST

ಕೇಂದ್ರ ಹಣಕಾಸು ಸಚಿವೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಯುಕೆ ಪ್ರಧಾನಿ ರಿಷಿ ಸುನಕ್ ಅವರೊಂದಿಗೆ ನವದೆಹಲಿಯ ಭಾರತ್ ಮಂಟಪದಲ್ಲಿ ರಾತ್ರಿ ಭೋಜ್ ಪರ್ ಸಂವಾದದ ಸಂದರ್ಭದಲ್ಲಿ ಸಂತೋಷವನ್ನು ವಿನಿಮಯ ಮಾಡಿಕೊಂಡರು.
Sep 09, 2023, 9:57 pm IST

ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾರೊಂದಿಗೆ ಮಾತುಕತೆ

ನವದೆಹಲಿಯ ಭಾರತ ಮಂಟಪದಲ್ಲಿ ಅಧ್ಯಕ್ಷ ದ್ರೌಪದಿ ಮುರ್ಮು ಆಯೋಜಿಸಿದ್ದ ಜಿ-20 ಭೋಜನಕೂಟದಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಅವರೊಂದಿಗೆ ಸಂವಾದ ನಡೆಸಿದರು.
Sep 09, 2023, 9:42 pm IST

ದೆಹಲಿಯಲ್ಲಿ ನಡೆಯುತ್ತಿರುವ ಜಿ20 ಶೃಂಗಸಭೆಯ ಹಿನ್ನೆಲೆ ರಾಷ್ಟ್ರಪತಿಗಳು ಇಂದು ವಿಶ್ವ ನಾಯಕರಿಗಾಗಿ ವಿಶೇಷ ಔತಣ ಕೂಟ ಆಯೋಜಿಸಿದ್ದರು. ಈ ವೇಳೆ ಬ್ರಿಟನ್​ ಪ್ರಧಾನಿ ರಿಷಿ ಸುನಕ್ ತಮ್ಮ ಪತ್ನಿ ಜೊತೆ ಆಗಮಿಸಿದರು. ವಿಶೇಷ ಔತಣ ಕೂಟಕ್ಕೆ ಆಗಮಿಸಿದ ಬ್ರಿಟನ್​ ಪ್ರಧಾನಿ ರಿಷಿ ಸುನಕ್ ದಂಪತಿಯನ್ನು ಪ್ರಧಾನಿ ನರೇಂದ್ರ ಮೋದಿ ಸ್ವಾಗತಿಸಿದರು.
Sep 09, 2023, 9:19 pm IST

ಅತ್ತ ಪತಿಯರ ಮೀಟಿಂಗ್, ಇತ್ತ ಪತ್ನಿಯರ ವಾಕಿಂಗ್..! ಜಿ20 ಶೃಂಗಸಭೆ ಹಿನ್ನೆಲೆ ಭಾರತಕ್ಕೆ ಬಂದಿರುವ ವಿಶ್ವದ ವಿವಿಧ ದೇಶಗಳ ನಾಯಕರು ಸಭೆಯಲ್ಲಿ ಬ್ಯುಸಿಯಾಗಿದ್ದರು. ಆದರೆ ಈ ವೇಳೆ ವಿಶ್ವ ನಾಯಕರ ಪತ್ನಿಯರು 'ನ್ಯಾಷನಲ್ ಗ್ಯಾಲರಿ ಆಫ್ ಮಾಡರ್ನ್ ಆರ್ಟ್'ಗೆ ಭೇಟಿ ನೀಡಿ, ಭಾರತದ ಸಾಂಸ್ಕೃತಿಕ ವೈಭವವನ್ನು ಕಣ್ತುಂಬಿಕೊಂಡರು.
Sep 09, 2023, 8:58 pm IST

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆಯುತ್ತಿರುವ ಜಿ20 ಶೃಂಗಸಭೆಯಲ್ಲಿ, ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರ ಜೊತೆ ಪ್ರಧಾನಿ ನರೇಂದ್ರ ಮೋದಿ ದ್ವಿಪಕ್ಷೀಯ ಮಾತುಕತೆ ನಡೆಸಿದರು.
Sep 09, 2023, 8:40 pm IST

ಭಾರತದ ನೇತೃತ್ವದಲ್ಲಿ ಆರಂಭವಾಗಿರುವ ಜಿ20 ಶೃಂಗಸಭೆಯಲ್ಲಿ ಜರ್ಮನಿಯ ಚಾನ್ಸೆಲರ್ ಓಲಾಫ್ ಸ್ಕೋಲ್ಜ್ ಭಾಗವಹಿಸಿದ್ದರು. ತಮ್ಮ ಬಲಗಣ್ಣಿಗೆ ಕಪ್ಪು ಬಟ್ಟೆಯನ್ನು ಕಟ್ಟಿಕೊಂಡು ಬಂದಿರುವ ಓಲಾಫ್ ಸ್ಕೋಲ್ಜ್ ಎಲ್ಲರ ಗಮನ ಸೆಳೆದರು. ಆದರೆ ಕೆಲವು ದಿನಗಳ ಹಿಂದೆ ವಾಯುವಿಹಾರ ಹೊರಟಾಗ ಬಿದ್ದು ಗಾಯ ಮಾಡಿಕೊಂಡಿದ್ದರು ಓಲಾಫ್ ಸ್ಕೋಲ್ಜ್. ಹೀಗೆ ತಮ್ಮ ಬಲಗಣ್ಣಿಗೆ ಗಾಯ ಮಾಡಿಕೊಂಡರೂ ಭಾರತಕ್ಕೆ ಬಂದು, ಜಿ20 ಶೃಂಗಸಭೆಯಲ್ಲಿ ಜರ್ಮನಿಯ ಈ ನಾಯಕ ಭಾಗವಹಿಸಿದ್ದಾರೆ.
Sep 09, 2023, 8:21 pm IST

ಭಾರತ ಮತ್ತೊಂದು ಮೈಲಿಗಲ್ಲು ಸಾಧಿಸುವಲ್ಲಿ ಯಶಸ್ವಿಯಾಗಿದೆ. ಜಿ20 ಶೃಂಗಸಭೆಯಲ್ಲಿ ಭಾರತ-ಮಧ್ಯಪ್ರಾಚ್ಯ-ಯುರೋಪ್ ಆರ್ಥಿಕ ಕಾರಿಡಾರ್ ಚರ್ಚೆ ಸಕ್ಸಸ್ ಆಗಿದೆ. ಈ ಕುರಿತು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿ ಸಂತಸ ಹಂಚಿಕೊಂಡಿದ್ದಾರೆ.
Sep 09, 2023, 8:14 pm IST

ಔತಣಕೂಟಕ್ಕೆ ಆಗಮಿಸಿದ ಅಕ್ಷತಾ ಮೂರ್ತಿ

ಬ್ರಿಟನ್ ಪ್ರಧಾನಿ ರಿಷಿ ಸುನಕ್ ಮತ್ತು ಅವರ ಪತ್ನಿ ಅಕ್ಷತಾ ಮೂರ್ತಿ, ಚೀನಾದ ಪ್ರಧಾನಿ ಲಿ ಕಿಯಾಂಗ್ ಮತ್ತು ರಷ್ಯಾದ ವಿದೇಶಾಂಗ ಸಚಿವ ಸೆರ್ಗೆ ಲಾವ್ರೊವ್ ಅವರು ಅಧ್ಯಕ್ಷ ದ್ರೌಪದಿ ಮುರ್ಮು ಅವರು ಆಯೋಜಿಸಿದ್ದ ಜಿ-20 ಔತಣಕೂಟಕ್ಕೆ ದೆಹಲಿಯ ಭಾರತ್ ಮಂಟಪಕ್ಕೆ ಆಗಮಿಸಿದರು.
Sep 09, 2023, 7:55 pm IST

ಇದು ಹೆಮ್ಮೆಯ ವಿಷಯ

ಪ್ರಧಾನಿ ಮೋದಿ ಮತ್ತು ಭಾರತದ ಜಿ 20 ಅಧ್ಯಕ್ಷತೆಯಲ್ಲಿ ಹಿಂದೆಂದೂ ನಡೆಯದ ಘಟನೆಗಳು ನಡೆದಿವೆ. ಇದು ಹೆಮ್ಮೆಯ ವಿಷಯ. ಆಫ್ರಿಕನ್ ಯೂನಿಯನ್, ಗ್ಲೋಬಲ್ ಜೈವಿಕ ಇಂಧನ ಒಕ್ಕೂಟಕ್ಕೆ ಪ್ರಾತಿನಿಧ್ಯವನ್ನು ನೀಡುತ್ತಿದೆ. .ಇದು ಪ್ರಮುಖ ಕೊಡುಗೆಯಾಗಿದೆ ಎಂದು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಖಾತೆ ಸಚಿವ ಹರ್ದೀಪ್ ಸಿಂಗ್ ಪುರಿ ಹೇಳಿದ್ದಾರೆ.
Sep 09, 2023, 7:40 pm IST

ನೆದರ್ಲ್ಯಾಂಡ್ಸ್ ಪ್ರಧಾನಿ ಮಾರ್ಕ್ ರುಟ್ಟೆ, ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ, ಸಿಂಗಾಪುರದ ಪ್ರಧಾನಿ ಲೀ ಸಿಯೆನ್ ಲೂಂಗ್ ಮತ್ತು ಸ್ಪೇನ್‌ನ ಉಪಾಧ್ಯಕ್ಷ ನಾಡಿಯಾ ಕ್ಯಾಲ್ವಿನೋ ಅವರು ಅಧ್ಯಕ್ಷ ದ್ರೌಪದಿ ಮುರ್ಮು ಆಯೋಜಿಸಿದ್ದ ಜಿ-20 ಭೋಜನಕ್ಕೆ ದೆಹಲಿಯ ಭಾರತ್ ಮಂಟಪಕ್ಕೆ ಆಗಮಿಸಿದರು.
Sep 09, 2023, 7:22 pm IST

G20 ಶೃಂಗಸಭೆಗೆ ಪಾಲ್ಗೊಂಡಿರುವ ಗಣ್ಯರೊಂದಿಗೆ ಔತಣಕೂಟಕ್ಕಾಗಿ ರಾಷ್ಟ್ರಪತಿ ದ್ರೌಪದಿ ಮುರ್ಮು ಹಾಗೂ ಅಂತರರಾಷ್ಟ್ರೀಯ ಹಣಕಾಸು ನಿಧಿ ವ್ಯವಸ್ಥಾಪಕ ನಿರ್ದೇಶಕಿ ಕ್ರಿಸ್ಟಲಿನಾ ಜಾರ್ಜಿವಾ ಅವರು ದೆಹಲಿಯ ಭಾರತ್ ಮಂಟಪಕ್ಕೆ ಆಗಮಿಸಿದರು.
Sep 09, 2023, 7:10 pm IST

ರಷ್ಯಾ ಹಾಗೂ ಚೀನಾಕ್ಕೆ ಎಚ್ಚರಿಕೆ

ಪರಮಾಣು ಅಸ್ತ್ರಗಳ ಬಳಕೆ ಅಥವಾ ಬಳಕೆಯ ಬೆದರಿಕೆ ಸ್ವೀಕಾರಾರ್ಹವಲ್ಲ ಎಂದು ಜಿ 20 ರಾಷ್ಟ್ರಗಳು ಎಚ್ಚರಿಕೆ ನೀಡಿವೆ. ಈ ಮೂಲಕ ರಷ್ಯಾ ಹಾಗೂ ಚೀನಾ ದೇಶಗಳಿಗೆ ಪರೋಕ್ಷವಾಗಿ ಸಂದೇಶ ರವಾನಿಸಲಾದೆ.
Sep 09, 2023, 6:53 pm IST

ಜಿ20 ಶೃಂಗಸಭೆ ಹಿನ್ನೆಲೆಯಲ್ಲಿ ನವದೆಹಲಿಗೆ ಬಂದಿರುವ ಅಮೆರಿಕ ಅಧ್ಯಕ್ಷ ಜೋ ಬೈಡನ್, ಭಾರತದಲ್ಲಿರುವ ಅಮೆರಿಕ ರಾಯಭಾರ ಕಚೇರಿಯ ಸಿಬ್ಬಂದಿಯನ್ನು ಭೇಟಿಯಾದರು. ಈ ವೇಳೆ ಅಮೆರಿಕದ ರಾಯಭಾರ ಕಚೇರಿ ಅಧಿಕಾರಿಗಳು ಕುಟುಂಬ ಸಮೇತ ಬಂದು ತಮ್ಮ ದೇಶದ ಅಧ್ಯಕ್ಷರನ್ನು ಭಾರತದಲ್ಲಿ ಭೇಟಿಯಾಗಿ ಸಂತಸ ವ್ಯಕ್ತಪಡಿಸಿದರು.
Sep 09, 2023, 5:38 pm IST

ಜಿ20 ಶೃಂಗಸಭೆ ಹಿನ್ನೆಲೆಯಲ್ಲಿ ನವದೆಹಲಿಗೆ ಆಗಮಿಸಿದ ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೋನ್, ಭಾರತೀಯ ಶೈಲಿಯಲ್ಲಿ ನಮಸ್ಕಾರ ಮಾಡಿದ್ದು ಎಲ್ಲರ ಗಮನ ಸೆಳೆಯಿತು. ಮೊದಲ ದಿನ 'ಒಂದು ಭೂಮಿ' ಸಭೆಯ ಮೊದಲ ಅಧಿವೇಶನದಲ್ಲಿ ಅವರು ಭಾಗವಹಿಸಲು ಸಾಧ್ಯವಾಗಲಿಲ್ಲ. ಮುಂದೆ ನಡೆಯಲಿರುವ ಇತರ ಸಭೆಗಳಲ್ಲಿ ಫ್ರಾನ್ಸ್ ಅಧ್ಯಕ್ಷ ಮ್ಯಾಕ್ರೋನ್ ಭಾಗವಹಿಸಬಹುದು ಎನ್ನಲಾಗಿದೆ.
Sep 09, 2023, 4:56 pm IST

ಭಾರತವು ಪ್ರತಿ G20 ಸದಸ್ಯರೊಂದಿಗೆ ಪ್ರತಿಧ್ವನಿಸುವ ಪರಿಹಾರಗಳನ್ನು ರೂಪಿಸಿದೆ: ನಿರ್ಮಲಾ ಸೀತಾರಾಮನ್

ಪ್ರತಿ ಜಿ 20 ಸದಸ್ಯರಿಗೆ ಪ್ರತಿಧ್ವನಿಸುವ ಪರಿಹಾರಗಳನ್ನು ಭಾರತ ರೂಪಿಸಿದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಶೃಂಗಸಭೆಯ ಹಲವಾರು ಫಲಿತಾಂಶಗಳು ಭಾರತವು ಮಾತುಕತೆಗಳನ್ನು ಪ್ರಾರಂಭಿಸಿದ ಉದ್ದೇಶಗಳನ್ನು ಪ್ರತಿಬಿಂಬಿಸುತ್ತದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದರು.
Sep 09, 2023, 4:40 pm IST

ನಾಳೆ ಬ್ರಿಟನ್​ ಪ್ರಧಾನಿ ರಿಷಿ ಸುನಕ್ ಅಕ್ಷರಧಾಮಕ್ಕೆ ಭೇಟಿ

ನಾಳೆ ದೆಹಲಿಯ ಅಕ್ಷರಧಾಮಕ್ಕೆ ಬ್ರಿಟನ್​ ಪ್ರಧಾನಿ ರಿಷಿ ಸುನಕ್ ಪತ್ನಿ ಜೊತೆ ಭೇಟಿ ನೀಡಲಿದ್ದಾರೆ.
Sep 09, 2023, 4:19 pm IST

ಪ್ರಧಾನಿ ಋಷಿ ಸುನಕ್ ಅವರನ್ನು ಭೇಟಿಯಾಗಿರುವುದು ಸಂತಸ ತಂದಿದೆ:ಮೋದಿ

ಜಿ20 ಶೃಂಗಸಭೆ ಸಮಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಬ್ರಿಟನ್ ಪ್ರಧಾನಿ ರಿಷಿ ಸುನಕ್ ದ್ವಿಪಕ್ಷೀಯ ಮಾತುಕತೆ ನಡೆಸಿದರು. ಬ್ರಿಟನ್ ಪ್ರಧಾನಿ ರಿಷಿ ಸುನಕ್ ಭಾರತದ ಮೂಲದವರೇ ಆಗಿದ್ದು, ಹಲವು ಬಾರಿ ಭಾರತದ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ್ದರು.
Sep 09, 2023, 4:17 pm IST

ಜಿ20 ಶೃಂಗಸಭೆ ಸಮಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಬ್ರಿಟನ್ ಪ್ರಧಾನಿ ರಿಷಿ ಸುನಕ್ ದ್ವಿಪಕ್ಷೀಯ ಮಾತುಕತೆ ನಡೆಸಿದರು. ಬ್ರಿಟನ್ ಪ್ರಧಾನಿ ರಿಷಿ ಸುನಕ್ ಭಾರತದ ಮೂಲದವರೇ ಆಗಿದ್ದು, ಹಲವು ಬಾರಿ ಭಾರತದ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ್ದರು.
Sep 09, 2023, 4:02 pm IST

ಜಗತ್ತು ಮತ್ತೊಮ್ಮೆ ಜಿ 20 ಕಡೆಗೆ ನೋಡುತ್ತಿದೆ: ರಿಷಿ ಸುನಕ್

ಹದಿನೈದು ವರ್ಷಗಳ ಹಿಂದೆ, ಆರ್ಥಿಕ ಬಿಕ್ಕಟ್ಟಿನ ನಂತರ ಜಾಗತಿಕ ಬೆಳವಣಿಗೆಯನ್ನು ಪುನಃಸ್ಥಾಪಿಸಲು ಜಿ 20 ನಾಯಕರು ಮೊದಲ ಬಾರಿಗೆ ಒಗ್ಗೂಡಿದರು. ಅಗಾಧ ಸವಾಲುಗಳ ಸಮಯದಲ್ಲಿ ನಾವು ಭೇಟಿಯಾಗುತ್ತಿದ್ದೇವೆ . ನಾಯಕತ್ವವನ್ನು ಒದಗಿಸಲು ಜಗತ್ತು ಮತ್ತೊಮ್ಮೆ ಜಿ 20 ಕಡೆಗೆ ನೋಡುತ್ತಿದೆ ಎಂದು ಬ್ರಿಟನ್ ಪ್ರಧಾನಿ ರಿಷಿ ಸುನಕ್ ಹೇಳಿದ್ದಾರೆ.
Sep 09, 2023, 3:49 pm IST

ಆಫ್ರಿಕಾ ಒಕ್ಕೂಟ ಜಿ20ಯಲ್ಲಿ ಸ್ಥಾನ ಪಡೆದಿರುವುದಕ್ಕೆ ಸಂತಸ: ಮೌಸಾ ಫಕಿ ಮಹಾಮತ್

ಆಫ್ರಿಕಾ ಒಕ್ಕೂಟಕ್ಕೆ ಜಿ20 ಒಕ್ಕೂಟದಲ್ಲಿ ಖಾಯಂ ಸ್ಥಾನ ಸಿಕ್ಕಿರುವ ಬಗ್ಗೆ ಆಫ್ರಿಕಾದ ವಿವಿಧ ದೇಶಗಳ ನಾಯಕರು ಹೆಮ್ಮೆ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಚಾದ್ ದೇಶದ ಮಾಜಿ ಪ್ರಧಾನಿ ಮೌಸಾ ಫಕಿ ಮಹಾಮತ್ ಹೆಮ್ಮೆ ವ್ಯಕ್ತಪಡಿಸಿದ್ದಾರೆ. ಆಫ್ರಿಕಾ ಒಕ್ಕೂಟ ಜಿ20ಯಲ್ಲಿ ಸ್ಥಾನ ಪಡೆದಿರುವುದಕ್ಕೆ ಸಂತಸವಾಗುತ್ತಿದೆ ಎಂದಿದ್ದಾರೆ. ಅಲ್ಲದೆ ಹಲವು ವರ್ಷಗಳಿಂದ ಆಫ್ರಿಕಾ ಒಕ್ಕೂಟದ ನಾಯಕರು ಈ ಸ್ಥಾನಮಾನಕ್ಕೆ ಪ್ರಯತ್ನಿಸಿದ್ದ ವಿಚಾರವನ್ನೂ ಮೌಸಾ ಫಕಿ ಮಹಾಮತ್ ಪ್ರಸ್ತಾಪ ಮಾಡಿದ್ದಾರೆ.
Sep 09, 2023, 3:21 pm IST

ಜಿ 20 ಶೃಂಗಸಭೆಯ ಹಿನ್ನೆಲೆಯಲ್ಲಿ ಪಿಎಂ ನರೇಂದ್ರ ಮೋದಿ ಅವರು ಯುಕೆ ಪಿಎಂ ರಿಷಿ ಸುನಕ್ ಅವರೊಂದಿಗೆ ದ್ವಿಪಕ್ಷೀಯ ಸಭೆ ನಡೆಸಿದರು. ಯುಕೆ ಹಾಗೂ ಭಾರತ ನಡುವಿನ ಆರ್ಥಿಕ ಸಂಬಂಧಗಳ ಅಭಿವೃದ್ಧಿ ಕುರಿತು ಇಬ್ಬರು ನಾಯಕರು ಚರ್ಚಿಸಿದರು.
Sep 09, 2023, 3:20 pm IST

ಜಿ-20 ಶೃಂಗಸಭೆ: ದೆಹಲಿಗೆ ಆಗಮಿಸಿದ ಫ್ರಾನ್ಸ್ ಅಧ್ಯಕ್ಷ

ಜಿ 20 ಶೃಂಗಸಭೆಯಲ್ಲಿ ಭಾಗವಹಿಸಲು ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೋನ್ ಶನಿವಾರ ದೆಹಲಿಗೆ ಆಗಮಿಸಿದರು. ಮೊದಲ ದಿನದ ‘ಒಂದು ಭೂಮಿ’ಯ ಮೊದಲ ಅಧಿವೇಶನದಲ್ಲಿ ಭಾಗವಹಿಸಲು ಅವರಿಗೆ ಸಾಧ್ಯವಾಗಲಿಲ್ಲ.
Sep 09, 2023, 2:47 pm IST

ಜಿ20 ಶೃಂಗಸಭೆಯ ಮೊದಲ ಅವಧಿ ಮುಕ್ತಾಯ: ಮೋದಿ

ಜಿ20 ಶೃಂಗಸಭೆಯ ಮೊದಲ ಅವಧಿ ಮುಕ್ತಾಯಗೊಂಡಿದೆ ಎಂದು ಟ್ವೀಟರ್​ ಮೂಲಕ ಪ್ರಧಾನಮಂತ್ರಿ ನರೇಂದ್ರ ಮೋದಿ ಮಾಹಿತಿ ನೀಡಿದ್ದಾರೆ.
Sep 09, 2023, 2:45 pm IST

ಜಿ20 ಶೃಂಗಸಭೆಯ ಮೊದಲ ಅವಧಿ ಮುಕ್ತಾಯ: ಮೋದಿ

ಜಿ20 ಶೃಂಗಸಭೆಯ ಮೊದಲ ಅವಧಿ ಮುಕ್ತಾಯಗೊಂಡಿದೆ ಎಂದು ಟ್ವೀಟರ್​ ಮೂಲಕ ಪ್ರಧಾನಮಂತ್ರಿ ನರೇಂದ್ರ ಮೋದಿ ಮಾಹಿತಿ ನೀಡಿದ್ದಾರೆ. ಒಂದು ಭೂಮಿ ವಿಷಯ ಬಗ್ಗೆ ಮೊದಲ ಅವಧಿಯಲ್ಲಿ ಚರ್ಚೆ ನಡೆದಿದೆ. ಒಂದು ಸೂರ್ಯ, ಒಂದು ವಿಶ್ವ, ಒಂದು ಗ್ರಿಡ್ ಹಾಗೂ ಸೌರ ಶಕ್ತಿಗೆ ಉತ್ತೇಜನ, ನೈಸರ್ಗಿಕ ಕೃಷಿಗೆ ಉತ್ತೇಜನ ನೀಡಲಾಗಿದೆ. ರಾಷ್ಟ್ರೀಯ ಹಸಿರು ಅನಿಲ ಮಿಷನ್, ಹಸಿರು ಗ್ರಿಡ್ಸ್ ಆರಂಭ ಬಗ್ಗೆ ಪ್ರಸ್ತಾಪ ಮಾಡಲಾಗಿದೆ ಎಂದು ತಿಳಿಸಿದರು.
Sep 09, 2023, 2:07 pm IST

G20 ಔತಣಕೂಟದ ಮೆನು ಮಾಹಿತಿ

ರಾಷ್ಟ್ರಪತಿಗಳ G20 ಔತಣಕೂಟದ ಮೆನು ಮಾಹಿತಿ ಬಹಿರಂಗವಾಗಿದೆ. ಔತನಕೂಟದಲ್ಲಿ ಟೇಬಲ್‌ವೇರ್‌ಗಳು ಸ್ಟೀಲ್ ಅಥವಾ ಹಿತ್ತಾಳೆಯ ಬೇಸ್ ಹೊಂದಿರಲಿವೆ, ಕೆಲವು ಟೇಬಲ್ ವೇರ್ ಗಳು ಬೆಳ್ಳಿಯ ಲೇಪನ ಹೊಂದಿರಲಿವೆ, ಸ್ವಾಗತ ಪಾನೀಯಗಳನ್ನು ಪೂರೈಸಲು ಚಿನ್ನದ ಲೇಪಿತ ವಸ್ತುಗಳ ಬಳಕೆ, ಸುಮಾರು 15,000 ಬೆಳ್ಳಿಯ ಸಾಮಾನುಗಳನ್ನು ತಯಾರಿಸಲಾಗಿದೆ. ಔತನಕೂಟವೂ ಭಾರತದ ಪಾಕಶಾಲೆಯ ವೈವಿಧ್ಯತೆಯನ್ನು ಪ್ರತಿಬಿಂಬಿಸಲಿದೆ, ಸಿರಿಧಾನ್ಯಗಳಿಂದ ತಯಾರಿಸಿದ ಭಕ್ಷ್ಯಗಳ ಮೆನು, ಭೋಜನವು 4 ಕೋರ್ಸ್ ಶುದ್ಧ ಸಸ್ಯಾಹಾರಿ ಮೆನುವನ್ನು ಹೊಂದಿರಲಿದೆ, ಪನೀರ್ ಗ್ರೇವಿ, ಸಬ್ಜಿ ಕೊರ್ಮಾ, ಆಲೂ ಲಿಯೋನೈಸ್, ಕಾಜು ಮಟರ್ ಮಖಾನಾ, ಜೋವರ್ ದಾಲ್ ತಡ್ಕಾ, ಪ್ಯಾಜ್ ಜೀರಾ ಕಾ ಪುಲಾವ್, ಸೌತೆಕಾಯಿ ರೈತಾ, ತಂದೂರಿ ರೋಟಿ, ಬಟರ್ ನಾನ್, ಕುಲ್ಚಾ, ಹುರಿದ ಬಾದಾಮಿ ಮತ್ತು ತರಕಾರಿ ಸಾರು, ಗುಲಾಬ್ ಜಾಮೂನ್, ರಸಮಲೈ ಮತ್ತು ಜಿಲೇಬಿಯಂತಹ ವಿವಿಧ ರೀತಿಯ ಸಿಹಿತಿಂಡಿಗಳನ್ನ ಸಿದ್ದ ಪಡಿಸಲಾಗಿದೆ.
Sep 09, 2023, 1:29 pm IST

ಪ್ರಧಾನಿ ಮೋದಿ ಅವರ ಪ್ರಸ್ತಾಪವನ್ನು ಎಲ್ಲಾ ಸದಸ್ಯ ರಾಷ್ಟ್ರಗಳು ಒಪ್ಪಿಕೊಂಡ ಬಳಿಕ ಆಫ್ರಿಕನ್ ಯೂನಿಯನ್ ಜಿ20 ಪಟ್ಟಿಗೆ ಸೇರಿದೆ. ಇದು ಭಾರತದ ನೇತೃತ್ವದಲ್ಲಿ ನಡೆದ ಪ್ರಮುಖ ರಾಜತಾಂತ್ರಿಕ ಸಾಧನೆಯಾಗಿದೆ.
READ MORE

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+