ಮೂರು ದಿನಗಳ ನಂತರ ಮತ್ತೆ ಪೆಟ್ರೋಲ್-ಡೀಸೆಲ್ ದರ ಏರಿಕೆ

ನವದೆಹಲಿ, ಫೆಬ್ರವರಿ 27: ಸತತ ಮೂರು ದಿನಗಳಿಂದ ಸ್ಥಿರವಾಗಿದ್ದ ತೈಲ ಬೆಲೆಯಲ್ಲಿ ಶನಿವಾರ ಕೊಂಚ ಏರಿಕೆ ಕಂಡಿದೆ. ತೈಲ ಬೆಲೆ 15-24 ಪೈಸೆ ಏರಿಕೆಯಾಗಿದ್ದು, ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಲೀಟರಿಗೆ 91.17ರೂ ತಲುಪಿದೆ.

ಪೆಟ್ರೋಲಿಗೆ 24 ಪೈಸೆ ಏರಿಕೆಯಾಗಿದ್ದರೆ, ಡೀಸೆಲ್‌ಗೆ 15 ಪೈಸೆ ಏರಿಕೆಯಾಗಿದೆ. ರಾಜ್ಯ ಮಟ್ಟದ ತೆರಿಗೆ ಆಧಾರದ ಮೇಲೆ 20-30 ಪೈಸೆಗಳಷ್ಟು ಹೆಚ್ಚಾಗಬಹುದು ಎಂದು ಅಂದಾಜಿಸಲಾಗಿದೆ.

ಫೆಬ್ರವರಿ 9ರಿಂದಲೂ ದೇಶದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ನಿರಂತರ ಏರಿಕೆಯಾಗಿದೆ. ದೆಹಲಿಯಲ್ಲಿ 2021ರ ಆರಂಭದಿಂದ ಲೀಟರ್ ಪೆಟ್ರೋಲಿಗೆ 7.46 ರೂ ಏರಿಕೆಯಾಗಿದ್ದರೆ, ಡೀಸೆಲ್‌ಗೆ 7.60 ರೂ ಏರಿಕೆ ಕಂಡಿದೆ. ಕೆಲವೇ ದಿನಗಳ ಹಿಂದೆ ರಾಜಸ್ಥಾನ, ಮಧ್ಯಪ್ರದೇಶ ಹಾಗೂ ಮಹಾರಾಷ್ಟ್ರದಲ್ಲಿ ಪೆಟ್ರೋಲ್ ಬೆಲೆ 100 ರೂ ದಾಟಿತ್ತು. ಇದೀಗ ಶನಿವಾರ ಬೆಲೆಯಲ್ಲಿ ಮತ್ತೆ ಕೊಂಚ ಏರಿಕೆ ಕಂಡಿದೆ.

 ಫೆ.27ರಂದು ಪ್ರಮುಖ ನಗರಗಳಲ್ಲಿನ ಇಂಧನ ದರ

ಫೆ.27ರಂದು ಪ್ರಮುಖ ನಗರಗಳಲ್ಲಿನ ಇಂಧನ ದರ

ನಗರ-ಪೆಟ್ರೋಲ್-ಡೀಸೆಲ್ (ದರ ರುಪಾಯಿಗಳಲ್ಲಿ)
ದೆಹಲಿ- 91.17- 81.47
ಮುಂಬೈ- 97.57-88.60
ಚೆನ್ನೈ-93.11-86.45
ಕೋಲ್ಕತಾ-91.35-84.35
ಬೆಂಗಳೂರು-94.22-86.37

 ಕಚ್ಚಾತೈಲ ಬೆಲೆಯಲ್ಲಿಯೂ ಏರಿಕೆ

ಕಚ್ಚಾತೈಲ ಬೆಲೆಯಲ್ಲಿಯೂ ಏರಿಕೆ

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಯು ಕೊಂಚ ಏರಿಕೆಯಾಗಿರುವುದಾಗಿ ತಿಳಿದುಬಂದಿದೆ. ಬ್ಯಾರೆಲ್‌ಗೆ 66 ಡಾಲರ್ ಬೆಲೆಯಾಗಿದ್ದು, ಕೆಲವೇ ದಿನಗಳ ಹಿಂದೆ 60 ಡಾಲರ್‌ಗೂ ಕಡಿಮೆ ಬೆಲೆ ಇತ್ತು ಎಂದು ತಿಳಿದುಬಂದಿದೆ.

 2021ರಲ್ಲಿ 26 ಬಾರಿ ತೈಲ ಬೆಲೆ ಏರಿಕೆ

2021ರಲ್ಲಿ 26 ಬಾರಿ ತೈಲ ಬೆಲೆ ಏರಿಕೆ

ಫೆಬ್ರವರಿ 9ರಿಂದಲೂ ಪೆಟ್ರೋಲ್, ಡೀಸೆಲ್ ಬೆಲೆ ನಿರಂತರ ಏರಿಕೆಯಾಗುತ್ತಿದ್ದು, ಫೆ.9ರಿಂದ ಹದಿನಾಲ್ಕು ಬಾರಿ ಬೆಲೆ ಏರಿಕೆ ಕಂಡಿದೆ. ಕಳೆದ ವಾರ ಪೆಟ್ರೋಲ್ ಬೆಲೆಯಲ್ಲಿ ದಾಖಲೆ ಮಟ್ಟದ ಏರಿಕೆಯಾಗಿದ್ದು, ಕೆಲವು ನಗರಗಳಲ್ಲಿ ಲೀಟರಿಗೆ 100ರೂವರೆಗೂ ತಲುಪಿತ್ತು. 2021ರಲ್ಲಿ 26 ಬಾರಿ ತೈಲ ಬೆಲೆ ಏರಿಕೆಯಾಗಿದೆ.

 ಕೆಲವು ನಗರಗಳಲ್ಲಿ ನೂರರ ಗಡಿ ದಾಟಿದ್ದ ಬೆಲೆ

ಕೆಲವು ನಗರಗಳಲ್ಲಿ ನೂರರ ಗಡಿ ದಾಟಿದ್ದ ಬೆಲೆ

ರಾಜಸ್ಥಾನದ ಶ್ರೀ ಗಂಗಾನಗರದಲ್ಲಿ ಕಳೆದ ವಾರ ಪೆಟ್ರೋಲ್ ಬೆಲೆ ನೂರರ ಗಡಿ ದಾಟಿತ್ತು. ಈಗಲೂ ಅಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 101.59 ಇದ್ದರೆ, ಡೀಸೆಲ್ ದರ ಲೀಟರ್‌ಗೆ 93.61 ರೂ ಇದೆ. ಹಾಗೆಯೇ ಮಧ್ಯಪ್ರದೇಶದ ಅನುಪ್ಪುರ್‌ನಲ್ಲಿ ಪೆಟ್ರೋಲ್ ದರ 101.34 ರೂ ಇದ್ದರೆ, ಡೀಸೆಲ್ 91.81 ರೂ.ಗೆ ಮಾರಾಟವಾಗುತ್ತಿದೆ. ಇದೀಗ ಈ ಬೆಲೆಗಳಲ್ಲಿ ಇನ್ನಷ್ಟು ಏರಿಕೆಯಾಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+