ಕೇಜ್ರಿವಾಲ್ ಮೇಲಿನ ತನಿಖೆಗೆ ಲೋಕಾಯುಕ್ತ ಬಾಗಿಲು ಬಡಿದ ಬಿಜೆಪಿ

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಲಂಚ ಸ್ವೀಕರಿಸಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತಕ್ಕೆ ದೂರು ನೀಡಿರುವ ಬಿಜೆಪಿ, ಕೇಜ್ರಿವಾಲ್ ವಿರುದ್ಧ ತನಿಖೆ ನಡೆಸುವಂತೆ ಕೇಳಿಕೊಂಡಿದೆ.

ದೆಹಲಿ, ಮೇ 8: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಲಂಚ ಸ್ವೀಕರಿಸಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಬಿಜೆಪಿ ಲೋಕಾಯುಕ್ತರ ಮೊರೆ ಹೋಗಿದೆ.

ಲೋಕಾಯುಕ್ತಕ್ಕೆ ಈ ಸಂಬಂಧ ದೂರು ನೀಡಿರುವ ಬಿಜೆಪಿ ಕೇಜ್ರಿವಾಲ್ ವಿರುದ್ಧ ತನಿಖೆ ನಡೆಸುವಂತೆ ಕೇಳಿಕೊಂಡಿದೆ.

ನಿನ್ನೆಯಷ್ಟೇ ಸಂಪುಟದಿಂದ ಹೊರ ಬಿದ್ದಿದ್ದ ಸಚಿವ ಕಪಿಲ್ ಮಿಶ್ರಾ ದೆಹಲಿ ಲೆಫ್ಟಿನೆಂಟ್ ಗವರ್ನರ್ ಗೆ ದೂರು ನೀಡಿದ್ದರು. ಇದಾದ ಬೆನ್ನಿಗೆ ಇಂದು ಭ್ರಷ್ಟಾಚಾರ ನಿಗ್ರಹ ದಳಕ್ಕೆ ದೂರು ನೀಡಿದ್ದಾರೆ. ಇದೀಗ ಲೋಕಾಯುಕ್ತಕ್ಕೆ ಬಿಜೆಪಿ ದೂರು ಸಲ್ಲಿಸಿದ್ದು ಕೇಜ್ರಿವಾಲ್ ವಿರುದ್ದ ಒಂದೇ ಪ್ರಕರಣದಲ್ಲಿ ಎರಡೆರಡು ದೂರು ದಾಖಲಾದಂತಾಗಿದೆ.[ಏನಿದು ಎಎಪಿ ಸರಕಾರವನ್ನೇ ನಡುಗಿಸಿದ 'ವಾಟರ್ ಟ್ಯಾಂಕರ್ ಸ್ಕ್ಯಾಮ್'?]

Arvind Kejriwal

ಇನ್ನು 'ಕಪಿಲ್ ಶರ್ಮಾ ಬಿಜೆಪಿ ಹೇಳಿಕೊಟ್ಟಿದ್ದನ್ನು ಓದುತ್ತಿದ್ದಾರೆ. ಟ್ಯಾಂಕರ್ ಹಗರಣವನ್ನು ನಮ್ಮ ತಲೆಗೆ ಕಟ್ಟಲು ಬಿಜೆಪಿ ಹೊರಟಿದೆ,' ಎಂದು ಎಎಪಿ ಆಪಾದಿಸಿದೆ.[ಜ್ಯೋತಿಷ್ಯ: ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಜಾತಕ ಏನು ಹೇಳುತ್ತದೆ?]

ಇದೇ ವೇಳೆ ಮಿಶ್ರಾ ಆರೋಪವನ್ನು ಎಎಪಿ ತಳ್ಳಿ ಹಾಕಿದೆ. "ಕೇಜ್ರಿವಾಲ್ 2 ಕೋಟಿ ಲಂಚ ಸ್ವೀಕರಿಸಿದ್ದನ್ನು ನೋಡಿದ ಬಗ್ಗೆಯೇ ಮಿಶ್ರಾಗೆ ಅನುಮಾನಗಳಿವೆ. ಜತೆಗೆ ಅವರು ಎಎಪಿಯ ಸಂಸ್ಥಾಪಕ ಸದಸ್ಯರಲ್ಲ," ಎಂದು ಎಎಪಿಯ ದಿಲೀಪ್ ಪಾಂಡೆ ಹೇಳಿದ್ದಾರೆ.[ಕೇಜ್ರಿವಾಲ್ ವಿರುದ್ಧ ಭ್ರಷ್ಟಾಚಾರದ ಆರೋಪ : ತನಿಖೆ ಆರಂಭ]

ತಮ್ಮ ಆರೋಪಕ್ಕೆ ಸಂಬಂಧಿಸಿದ ದಾಖಲೆಯನ್ನು ಕಪಿಲ್ ಮಿಶ್ರಾ ಎಸಿಬಿಗೆ ಸಲ್ಲಿಸಿದ ಮರು ಕ್ಷಣವೇ ಎಎಪಿ ಕಡೆಯಿಂದ ಈ ಹೇಳಿಕೆ ಹೊರ ಬಿದ್ದಿದೆ. ಜತೆಗೆ ಲೋಕಾಯುಕ್ತಕ್ಕೆ ಬಿಜೆಪಿ ದೂರು ನೀಡಿದೆ. (ಒನ್ ಇಂಡಿಯಾ ಸುದ್ದಿ)

{promotion-urls}

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+