ಅತ್ಯಾಚಾರ ಸಂತ್ರಸ್ಥೆಯ ಮೇಲೆ ನಾಲ್ಕನೇ ಬಾರಿ ಆಸಿಡ್ ದಾಳಿ!
ಲಕ್ನೋ, ಜುಲೈ 3: ಇದೆಂಥ ಅಮಾನವೀಯ ಕೃತ್ಯ! ಅತ್ಯಾಚಾರ ಸಂತ್ರಸ್ಥೆಯಾಗಿ ಕತ್ತಲಲ್ಲೇ ಬದುಕು ಸವೆಸುತ್ತಿದ್ದ 35 ವರ್ಷದ ಮಹಿಳೆಯೊಬ್ಬರ ಮೇಲೆ ನಾಲ್ಕನೇ ಬಾರಿ ಆಸಿಡ್ ದಾಳಿ ನಡೆದಿರುವುದು ದೇಶ ತಲೆತಗ್ಗಿಸಬೇಕಾಕಾದ ವಿಷಯವೇ ಸರಿ!
ಘಟನೆ ನಡೆದಿದ್ದು, ಜು.1 ರ ಸಂಜೆ ಉತ್ತರ ಪ್ರದೇಶದ ಲಕ್ನೋದ ಅಲಿಗಂಜ್ ಎಂಬ ಸ್ಥಳದಲ್ಲಿ. ಸಂಜೆ 8-9 ಗಂಟೆಯ ಸಮಯದಲ್ಲಿ ನೀರು ತುಂಬಿಸಿಕೊಂಡು ತಾನಿದ್ದ ಹಾಸ್ಟೆಲ್ ನತ್ತ ಹೊರಟಿದ್ದ ಯುವತಿಯ ಮೇಲೆ ಆಸಿಡ್ ದಾಳಿ ನಡೆದಿದ್ದು, ದಾಳಿ ನಡೆಸಿದ್ದು ಯಾರ ಎಂಬ ಬಗ್ಗೆ ಮಾಹಿತಿ ದೊರೆತಿಲ್ಲ.
ಆಸಿಡ್ ದಾಳಿಯಿಂದಾಗಿ ಯುವತಿಯ ಮುಖದ ಒಂದು ಪಾರ್ಶ್ವ ಸಂಪೂರ್ಣ ಸುಟ್ಟಿದ್ದು, ಆಕೆ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.
ಆಕೆಯ ಮೇಲೆ ಈ ಮೊದಲು ಮೂರು ಬಾರಿ ಆಸಿಡ್ ದಾಳಿ ನಡೆದಿದ್ದ ಕಾರಣ, ಆಕೆಗೆ ವಿಶೇಷ ಭದ್ರತೆ ನೀಡಲಾಗಿತ್ತು. ಆದರೂ ಈ ದಾಳಿ ನಡೆದಿದ್ದು ಆಶ್ಚರ್ಯದ ಸಂಗತಿ, ನಾವು ಈ ಬಗ್ಗೆ ಹೆಚ್ಚಿನ ನಿಗಾ ವಹಿಸಿ ತನಿಗೆ ನಡೆಸುವುದಾಗಿ, ಉತ್ತರ ಪ್ರದೇಶ ಮಹಿಳಾ ಕಲ್ಯಾಣ ಸಚಿವರಾದ ರಿತಾ ಬಹುಗುಣ ಜೋಶಿ ಹೇಳಿದ್ದಾರೆ.

ಅತ್ಯಾಚಾರದ ಕಹಿನೆನಪು
ಇಬ್ಬರು ಮಕ್ಕಳ ತಾಯಿಯಾಗಿದ್ದ ಆಕೆಯ ಮೇಲೆ ಉತ್ತರ ಪ್ರದೇಶದ ಗ್ರಾಮವೊಂದರಲ್ಲಿ 2008 ರಲ್ಲೇ ಸಾಮೂಹಿಕ ಅತ್ಯಾಚಾರ ನಡೆದಿತ್ತು. ಘಟನೆಗೆ ಸಂಬಂಧಿಸಿದಂತೆ ಇಲ್ಲಿನ ಪೊಲೀಸರು ಇಬ್ಬರನ್ನು ಬಂಧಿಸಿದ್ದರು. ಅದರ ವಿಚಾರಣೆ ಈಗಲೂ ನಡೆಯುತ್ತಿದೆ.

ನಾಲ್ಕು ಬಾರಿ ಆಸಿಡ್ ದಾಳಿ
ಅತ್ಯಾಚಾರದ ಅಸಹನೀಯ ನೋವು ಸಾಲದು ಎಂಬಂತೆ, ಆಕೆಯ ಮೇಲೆ 2011, 2013 ಮತ್ತು 2017ರಲ್ಲಿ ಎರಡು ಬಾರಿ ಆಸಿಡ್ ದಾಳಿ ನಡೆಯಿತು. ಈ ವರ್ಷ ಮಾರ್ಚ್ ನಲ್ಲಿ ಆಕೆಯ ಮೇಲೆ ಆಸಿಡ್ ದಾಳಿ ನಡೆದ ನಂತರ, ಆಕೆ ಚಿಕಿತ್ಸೆ ಪಡೆಯುತ್ತಿದ್ದ ಆಸ್ಪತ್ರೆಗೆ ತೆರಳಿ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸಾಂತ್ವನ ಹೇಳಲಿದ್ದರಲ್ಲದೆ, ಆಕೆಯ ಕುಟುಂಬಕ್ಕೆ ಪರಿಹಾರವನ್ನೂ ಘೋಷಿಸಿದ್ದರು.

ಈ ವಿಕೃತಿಗೂ ರಾಜಕೀಯ ಬಣ್ಣ
ಆ ಹುಡುಗಿ ಸಾವು ಬದುಕಿನ ನಡುವೆ ಹೋರಾಡುತ್ತ, ನೋವನುಭವಿಸುತ್ತ ಆಸ್ಪತ್ರೆಯಲ್ಲಿ ಮಲಗಿದ್ದರೆ, ಇತ್ತ ರಾಜಕೀಯ ಪಕ್ಷಗಳ ಕೆಸರೆರಚಾಟ ಶುರುವಾಗಿದೆ. ಯೋಗಿ ಸರ್ಕಾರದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಕಾಂಗ್ರೆಸ್, ಸಮಾಜವಾದಿ, ಬಹುಜನ ಸಮಾಜವಾದಿ ಪಕ್ಷದ ನಾಯಕರು ಗುಡುಗುತ್ತಿದ್ದಾರೆ.

ದೇಶ ತಲೆತಗ್ಗಿಸುವ ವಿಚಾರ
ಈ ಆಸಿಡ್ ದಾಳಿ ದೇಶ ತಲೆತಗ್ಗಿಸುವ ವಿಚಾರ ಎಂದೇ ಎಲ್ಲೆಡೆಯಿಂದ ಆಕ್ರೋಶ ವ್ಯಕ್ತವಾಗುತ್ತಿದ್ದು, ಆರೋಪಿಗಳನ್ನು ಶೀಘ್ರ ಬಂಧಿಸುವಂತೆ ಒತ್ತಾಯಿಸಲಾಗುತ್ತಿದೆ. ಆರೋಪಿಗಳ ಸುಳಿವಿಗಾಗಿ ಹರಸಾಹಸ ಪಡುತ್ತಿರುವ ಲಕ್ನೋ ಪೊಲೀಸರು ಅತಿ ಶೀಘ್ರವಾಗಿ ಅವರನ್ನು ಪತ್ತೆ ಮಾಡುವುದಾಗಿ ಭರವಸೆ ನೀಡಿದ್ದಾರೆ.
-
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ -
Bengaluru: ಪಬ್ನಲ್ಲಿ 150 ರೂ. ಕೊಟ್ಟು ಆರ್ಡರ್ ಮಾಡಿದ್ರೆ ಬಂದಿದ್ದು ಬರೀ ಹಪ್ಪಳ-ಸಂಡಿಗೆ: ದಂಗಾದ ಗ್ರಾಹಕ -
ಇಂಡೋನೇಷ್ಯಾದಲ್ಲಿ 7.4 ತೀವ್ರತೆಯ ಪ್ರಬಲ ಭೂಕಂಪ: ಏಷ್ಯಾ ರಾಷ್ಟ್ರಗಳಲ್ಲಿ ಸುನಾಮಿ ಆತಂಕ, ಭಾರತದ ಮೇಲಾಗುವ ಪರಿಣಾಮವೇನು? -
Bengaluru House Rent: ಬೆಂಗಳೂರಿನ ಪ್ರೈಮ್ ಏರಿಯಾದಲ್ಲೂ ನಾನ್ವೆಜ್ ಪ್ರಿಯರಿಗೆ ಮನೆ ಸಿಗ್ತಿಲ್ಲ, ಸೋಷಿಯಲ್ ಮೀಡಿಯಾ ಚರ್ಚೆ -
Prakash Raj: ನಾಸ್ತಿಕನಾದರೂ ತಾಯಿಯ ನಂಬಿಕೆಗೆ ಗೌರವ ಕೊಟ್ಟು; ಕ್ರೈಸ್ತ ಧರ್ಮದ ಸಂಪ್ರದಾಯ ಪಾಲನೆ: ನಟ ಪ್ರಕಾಶ್ ರಾಜ್ -
Education: CBSE 9 ಮತ್ತು 10ನೇ ತರಗತಿಯ ಹೊಸ ಪಠ್ಯಕ್ರಮ ಇಂದು ಬಿಡುಗಡೆ -
ಮುಂದಿನ 2 ರಿಂದ 3 ವಾರಗಳಲ್ಲಿ ಇರಾನ್ ಮೇಲೆ ಅತ್ಯಂತ ಭೀಕರ ದಾಳಿ: ಟ್ರಂಪ್ ಎಚ್ಚರಿಕೆ -
ವಿದ್ಯಾರ್ಥಿಗಳ ಮೊಬೈಲ್ ಗೀಳಿಗೆ ಬ್ರೇಕ್: ಹೊಸ 'ಡಿಜಿಟಲ್ ನೀತಿ' ಪ್ರಕಟಿಸಿದ ಆರೋಗ್ಯ ಇಲಾಖೆ -
Raghav Chadha: ಸಂಸದ ರಾಘವ್ ಚಡ್ಡಾಗೆ ಶಾಕ್ ಕೊಟ್ಟ ಎಎಪಿ, ಬಿಜೆಪಿ ಸೇರಲಿದ್ದಾರೆಯೇ ಸ್ಟಾರ್ ರಾಜಕಾರಣಿ -
Nuwan Thushara: ಆರ್ಸಿಬಿಗಾಗಿ ಶ್ರೀಲಂಕಾ ಕ್ರಿಕೆಟ್ ಮಂಡಳಿಯ ವಿರುದ್ಧವೇ ತಿರುಗಿ ಬಿದ್ದ ಸ್ಟಾರ್ ಆಟಗಾರ ನುವಾನ್ ತುಷಾರ












Click it and Unblock the Notifications