ಸ್ವಾತಂತ್ರ್ಯ ದಿನಾಚರಣೆ ಭಾಷಣಕ್ಕೆ ಪ್ರಧಾನಿಗೆ 9 ಸಾವಿರಕ್ಕೂ ಹೆಚ್ಚು ಸಲಹೆ
ಸ್ವಾತಂತ್ರ್ಯ ದಿನಾಚರಣೆ ಭಾಷಣಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಒಂಬತ್ತು ಸಾವಿರಕ್ಕೂ ಹೆಚ್ಚು ಸಲಹೆಗಳು ಬಂದಿವೆ. ಒಂಬತ್ತು ಸಾವಿರಕ್ಕೂ ಹೆಚ್ಚು ಸಲಹೆಗಳು ಸರಕಾರದ MyGov ಪೋರ್ಟಲ್ ಹಾಗೂ ನರೇಂದ್ರ ಮೋದಿ ಅಪ್ಲಿಕೇಷನ್ ಮೂಲಕ ಬಂದಿವೆ.
ಶಿಕ್ಷಣ, ಸ್ವಚ್ಛತೆ, ಪರಿಸರ, ಡಿಜಿಟಲೈಸೇಷನ್, ಮಹಿಳೆಯರ ಸಾಕ್ಷರತೆ ಸೇರಿದಂತೆ ನಾನಾ ವಿಷಯಗಳಿಗೆ ಸಂಬಂಧಿಸಿದ ಸಲಹೆಗಳು ಸ್ವಾತಂತ್ರ್ಯ ದಿನಾಚರಣೆಯ ಭಾಷಣಕ್ಕಾಗಿ ಬಂದಿವೆ. ಪ್ರಧಾನಿ ಮೋದಿ ನಡೆಸಿಕೊಡುವ ಮನ್ ಕೀ ಬಾತ್ ರೇಡಿಯೋ ಕಾರ್ಯಕ್ರಮದಲ್ಲಿ ಜುಲೈ ಮೂವತ್ತರಂದು ಸ್ವಾತಂತ್ರ್ಯೋತ್ಸವ ಭಾಷಣಕ್ಕೆ ಸಲಹೆ ನೀಡುವಂತೆ ಆಹ್ವಾನ ಮಾಡಿದ್ದರು.

ಆಗಸ್ಟ್ ಹದಿನೈದರಂದು ಕೆಂಪು ಕೋಟೆಯಿಂದ ದೇಶದ ಜನರ ಜತೆಗೆ ಮಾತನಾಡುವ ಅವಕಾಶ ಸಿಕ್ಕಿದೆ. ಇದು ಒಬ್ಬ ವ್ಯಕ್ತಿ ಮಾತನಾಡುವುದಲ್ಲ. ಇಡೀ ದೇಶದ ನೂರಿಪ್ಪತ್ತೈದು ಕೋಟಿ ಜನರ ಒಟ್ಟು ಧ್ವನಿ. ನಾನು ನಿಮ್ಮ ಧ್ವನಿಯನ್ನು ತಲುಪಿಸುವವನು ಅಷ್ಟೇ ಎಂದು ಅವರು ಹೇಳಿದ್ದರು.
ಆಗಸ್ಟ್ ಹದಿನೈದರ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಇಡೀ ದೇಶವನ್ನು ಉದ್ದೇಶಿಸಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮಾತನಾಡಲಿದ್ದಾರೆ. ಪ್ರಾಯಶಃ ಇದೇ ಮೊದಲ ಬಾರಿಗೆ ಪ್ರಧಾನಿಯೊಬ್ಬರು ಭಾಷಣದ ಬಗ್ಗೆ ದೇಶದ ಜನರ ಸಲಹೆ ಆಹ್ವಾನಿಸಿದ್ದಾರೆ.












Click it and Unblock the Notifications