ಸಂಸದ ಹೆಗ್ಡೆ ನಿಯೋಗಕ್ಕೆ ಶರದ್ ಪವಾರ್ ಭರವಸೆ
ನವದೆಹಲಿ, ಫೆ 18: ಉಡುಪಿ-ಚಿಕ್ಕಮಗಳೂರು ಸಂಸದ ಜಯಪ್ರಕಾಶ್ ಹೆಗ್ಡೆ ಮತ್ತು ಯುವಜನ ಸೇವೆ ಸಚಿವ ಅಭಯಚಂದ್ರ ಜೈನ್ ನೇತೃತ್ವದ ನಿಯೋಗವೊಂದು ಕೇಂದ್ರ ಕೃಷಿ ಸಚಿವ ಶರದ್ ಪವಾರ್ ಅವರನ್ನು ಫೆಬ್ರವರಿ 17ರಂದು ಭೇಟಿ ಮಾಡಿ, ಕರ್ನಾಟಕ ರಾಜ್ಯದ ಮೀನುಗಾರರ ಸಮಸ್ಯೆಗಳ ಬಗ್ಗೆ ಗಮನ ಸೆಳೆದರು.
ಭೇಟಿಯ ವೇಳೆ ನಿಯೋಗವು ಈ ಕೆಳಗಿನ ಅಂಶಗಳನ್ನು ಕೇಂದ್ರ ಕೃಷಿ ಸಚಿವ ಶರದ್ ಪವಾರ್ ಅವರ ಗಮನಕ್ಕೆ ತಂದಿದ್ದಾರೆ:

2. ಕೋಡಿಕನ್ಯಾನ ಜೆಟ್ಟಿಯ ಹೆಚ್ಚಿನ ಬಳಕೆಗೆ ಅನುವಾಗುವಂತಾಗಲು ಕೋಡಿಕನ್ಯಾನದಿಂದ ಹಂಗರಕುಟ್ಟವರೆಗಿನ ಕಾಲುವೆಯಲ್ಲಿ ಹೂಳೆತ್ತುವ ಯೋಜನೆಯೊಂದು ರಾಜ್ಯ ಸರಕಾರದ ಪ್ರಸ್ತಾವನೆಯಲ್ಲಿದೆ. ಅದನ್ನು ಪರಿಗಣಿಸಿ, ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿ.
3. ತೆಂಗು ಬೆಳೆಗಾರರಿಗೆ ಆರ್ಥಿಕ ಪ್ಯಾಕೇಜ್ ಬಿಡುಗಡೆಗೆ ಮನವಿ.
ಚಾಮರಾಜನಗರ ಸಂಸದರಾದ ಆರ್ ಧ್ರುವನಾರಾಯಣ ಮತ್ತು ಬೆಂಗಳೂರು ಗ್ರಾಮಾಂತರ ಸಂಸದರಾದ ಡಿಕೆ ಸುರೇಶ್ ಮತ್ತು ಇತರೆ ನಾಯಕರು ನಿಯೋಗದಲ್ಲಿದ್ದರು. ನಿಯೋಗ ಸಲ್ಲಿಸಿದ ಅಹವಾಲನ್ನು ಸ್ವೀಕರಿಸಿ, ಮಾತನಾಡಿದ ಕೇಂದ್ರ ಕೃಷಿ ಸಚಿವ ಶರದ್ ಪವಾರ್ ಅವರು ಶೀಘ್ರವೇ ಈ ಸಮಸ್ಯೆಗಳಿಗೆ ಸ್ಪಂದಿಸಿ, ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.












Click it and Unblock the Notifications