ಕೊರೊನಾ ತಡೆಯಲು ಕಂಟೇನ್‍ಮೆಂಟ್ ಝೋನ್ ಮೇಲೆ ಕಣ್ಣು
ನವದೆಹಲಿ, ಏಪ್ರಿಲ್ 10: ಕೊರೊನಾ ವಿರುದ್ಧದ ಹೋರಾಟದಲ್ಲಿ ಭಾರತ 2ನೇ ಹೆಜ್ಜೆ ಇಡಲಿದೆ. ಮೊದಲ ಹಂತದಲ್ಲಿ ಲಾಕ್ ಡೌನ್ ಆಯಿತು. ಈಗ ಕಂಟೇನ್‍ಮೆಂಟ್ ಝೋನ್‌ಗಳ ಮೇಲೆ ಗಮನ ಕೇಂದ್ರಿಕರಿಸಲಾಗುತ್ತದೆ.
Recommended Video
ದೇಶದಲ್ಲಿ 100ಕ್ಕೂ ಅಧಿಕ ಕೊರೊನಾ ಪ್ರಕರಣಗಳು ದಾಖಲಾದ ರಾಜ್ಯಗಳಲ್ಲಿ ಕಂಟೇನ್‍ಮೆಂಟ್ ಝೋನ್‌ಗಳನ್ನು ಗುರುತಿಸಲಾಗಿದೆ. ಒಟ್ಟು 1,100 ಕಂಟೇನ್‍ಮೆಂಟ್ ಝೋನ್‌ಗಳಿದ್ದು, ಇಲ್ಲಿಂದ ಸೋಂಕು ಹರಡದಂತೆ ಕ್ರಮ ಕೈಗೊಳ್ಳಬೇಕಿದೆ.
ಕಂಟೇನ್‍ಮೆಂಟ್ ಝೋನ್‌ಗಳಲ್ಲಿ ಬಿಗಿಯಾದ ನಿಯಮಗಳು ಜಾರಿಯಲ್ಲಿ ಇರುತ್ತದೆ. ಒಂದು ಪ್ರದೇಶದಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡ ತಕ್ಷಣ ಅದನ್ನು ಕಂಟೇನ್‍ಮೆಂಟ್ ಝೋನ್ ಎಂದು ಘೋಷಣೆ ಮಾಡಲಾಗುತ್ತದೆ.

ಒಂದೊಂದು ಜಿಲ್ಲೆಯನ್ನೂ ಕಂಟೇನ್‍ಮೆಂಟ್ ಝೋನ್ ಎಂದು ಘೋಷಣೆ ಮಾಡಲಾಗಿದೆ. ಇಲ್ಲಿಂದ ಯಾರೂ ಹೊರ ಬರುವಂತಿಲ್ಲ, ಯಾರು ಒಳ ಹೋಗುವಂತಿಲ್ಲ. ಆರೋಗ್ಯ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಬಿಟ್ಟು ಬೇರೆಯವರಿಗೆ ಪ್ರವೇಶವಿಲ್ಲ.
ಪೊಲೀಸರು ಈ ಪ್ರದೇಶವನ್ನು ಸೀಲ್ ಮಾಡುತ್ತಾರೆ. ಈ ಪ್ರದೇಶಕ್ಕೆ ಬರುವ, ಹೋಗುವ ರಸ್ತೆ ಬಂದ್ ಆಗುತ್ತದೆ. ತುರ್ತು ಸಂದರ್ಭದಲ್ಲಿ ಅಂಬ್ಯುಲೆನ್ಸ್ ಹೊರತುಪಡಿಸಿ ಬೇರೆ ಯಾವುದೇ ವಾಹನಗಳ ಸಂಚಾರಕ್ಕೂ ಅವಕಾಶವಿಲ್ಲ.
ಮಹಾರಾಷ್ಟ್ರ ರಾಜ್ಯದಲ್ಲಿ ಅತಿ ಹೆಚ್ಚು ಅಂದರೆ 401 ಕಂಟೇನ್‍ಮೆಂಟ್ ಝೋನ್‌ಗಳಿವೆ (ಮುಂಬೈ 381, ಪುಣೆ 20). ಉತ್ತರ ಪ್ರದೇಶದಲ್ಲಿ 105, ರಾಜಸ್ಥಾನದಲ್ಲಿ 38, ಮಧ್ಯಪ್ರದೇಶದಲ್ಲಿ 180 ಕಂಟೇನ್‍ಮೆಂಟ್ ಝೋನ್‌ಗಳಿವೆ.
ತಮಿಳುನಾಡಿನಲ್ಲಿ 220, ಆಂಧ್ರಪ್ರದೇಶದಲ್ಲಿ 121 ಕಂಟೇನ್‍ಮೆಂಟ್ ಝೋನ್‌ಗಳಿವೆ. ಪೊಲೀಸರು ದಿನದ 24 ಗಂಟೆಯೂ ಇಲ್ಲಿ ಕಾವಲು ಇರುತ್ತಾರೆ. ಇಲ್ಲಿ ಜನರ ಓಡಾಟದ ಮೇಲೆ ನಿಗಾ ಇಡಲು ಸಿಸಿಟಿವಿ, ಡ್ರೋಣ್ ಕ್ಯಾಮರಾಗಳನ್ನು ಬಳಸಿಕೊಳ್ಳಲಾಗುತ್ತಿದೆ.
ಕಂಟೇನ್‍ಮೆಂಟ್ ಝೋನ್‌ಗಳಲ್ಲಿ ಅಗತ್ಯ ವಸ್ತುಗಳ ಖರೀದಿಗೆ ಸಹ ಜನರು ಮನೆಯಿಂದ ಹೊರ ಬರುವಂತಿಲ್ಲ. ಅಗತ್ಯ ವಸ್ತುಗಳ ಸರಬರಾಜಿಗೆ ಕೋವಿಡ್- 19 ಸ್ವಯಂ ಸೇವಕರನ್ನು ನಿಯೋಜನೆ ಮಾಡಲಾಗುತ್ತಿದೆ.












Click it and Unblock the Notifications