ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಸ್ಪಿ- ಬಿಎಸ್ಪಿ ದೋಸ್ತಿಯ ಶಕ್ತಿ ಅರ್ಥ ಮಾಡಿಕೊಳ್ಳದೆ ಸೋತೆವು: ಯೋಗಿ

|
Google Oneindia Kannada News

ಲಖನೌ, ಮಾರ್ಚ್ 14 : "ಸಮಾಜವಾದಿ ಪಕ್ಷ ಹಾಗೂ ಬಹುಜನ ಸಮಾಜ ಪಕ್ಷದ ಪ್ರಾಮುಖ್ಯತೆ ತಿಳಿದುಕೊಳ್ಳುವುದರಲ್ಲಿ ನಾವು ವಿಫಲ ಆದೆವು. ಅದೇ ನಮ್ಮ ಸೋಲಿಗೆ ಕಾರಣ" ಎಂದು ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅಲ್ಲಿನ ಲೋಕಸಭೆ ಉಪಚುನಾವಣೆಯಲ್ಲಿ ಬಿಜೆಪಿ ಹಿನ್ನಡೆಗೆ ಕಾರಣ ವಿಶ್ಲೇಷಿಸಿದ್ದಾರೆ.

ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

ಯೋಗಿ ಆದಿತ್ಯನಾಥ್ ಬುಧವಾರ ಈ ಬಗ್ಗೆ ಮಾತನಾಡಿ, ಪಕ್ಷದಲ್ಲಿನ ಅತಿಯಾದ ಆತ್ಮವಿಶ್ವಾಸ ಕೈ ಕೊಟ್ಟಿದೆ. ಈ ಎರಡು ಸ್ಥಾನಗಳ ಉಪ ಚುನಾವಣೆಗೆ ಹೊಸ ರಣತಂತ್ರ ರೂಪಿಸಲು ಪ್ರಯತ್ನಿಸಬೇಕಿತ್ತು ಎಂದು ಅವರ ಹೇಳಿದ್ದಾರೆ. ಉತ್ತರಪ್ರದೇಶದ ಗೋರಖ್ ಪುರ ಹಾಗೂ ಫುಲ್ ಪುರ್ ನ ಲೋಕಸಭಾ ಸ್ಥಾನಗಳಿಗೆ ನಡೆದ ಉಪಚುನಾವಣೆಯ ಮತ ಎಣಿಕೆ ಬುಧವಾರ ನಡೆದಿದೆ.

"failed to understand the significance" of a partnership scripted by SP and BSP: Yogi

ಯೋಗಿ ಆದಿತ್ಯನಾಥ್ ಹಾಗೂ ಕೇಶವ ಪ್ರಸಾದ್ ಮೌರ್ಯ ಅವರಿಂದ ಎರಡು ಸ್ಥಾನಗಳು ತೆರವಾಗಿದ್ದರಿಂದ ಉಪ ಚುನಾವಣೆ ನಡೆದಿತ್ತು. 2014ರ ಲೋಕಸಭೆ ಚುನಾವಣೆಯಲ್ಲಿ ಇಬ್ಬರೂ ಅಭ್ಯರ್ಥಿಗಳು ಭಾರೀ ಅಂತರದಿಂದಲೇ ಜಯಿಸಿದ್ದರು. ಆದರೆ ಈಗಿನ ಉಪಚುನಾವಣೆ ಫಲಿತಾಂಶ ಉಲ್ಟಾ ಹೊಡೆದಿದೆ.

"failed to understand the significance" of a partnership scripted by SP and BSP: Yogi

2014ರ ಲೋಕಸಭಾ ಚುನಾವಣೆ ವೇಳೆ ಎರಡೂ ಕ್ಷೇತ್ರಗಳಲ್ಲಿ ಬಂದಿದ್ದ ಫಲಿತಾಂಶದ ವಿವರ ಇಲ್ಲಿದೆ.

ಗೋರಖ್ ಪುರ ಲೋಕಸಭಾ ಕ್ಷೇತ್ರ
ಬಿಜೆಪಿ: 5,39,127
ಸಮಾಜವಾದಿ ಪಕ್ಷ : 2,26,344
ಬಹುಜನ ಸಮಾಜ ಪಕ್ಷ :176412
ಕಾಂಗ್ರೆಸ್: 45719

ಫುಲ್ ಪುರ್ ಲೋಕಸಭಾ ಕ್ಷೇತ್ರ
ಬಿಜೆಪಿ: 5,03,564
ಸಮಾಜವಾದಿ ಪಕ್ಷ : 1,95,256
ಬಹುಜನ ಸಮಾಜ ಪಕ್ಷ : 1,63,710
ಕಾಂಗ್ರೆಸ್: 58,127

English summary
Uttar Pradesh Chief Minister Yogi Adityanath said on Wednesday evening that the BJP, which has lost key by-elections in Gorakhpur and Phulpur, two parliament seats it held, "failed to understand the significance" of a partnership scripted by the Samajwadi Party and Mayawati's Bahujan Samaj Party.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X