ಪಂಚ ರಾಜ್ಯಗಳ ಫಲಿತಾಂಶ 2024ರ ಚುನಾವಣೆ ದಿಕ್ಸೂಚಿ; ಮೋದಿ
ನವದೆಹಲಿ, ಮಾರ್ಚ್ 10; ಪಂಚ ರಾಜ್ಯಗಳ ಚುನಾವಣಾ ಫಲಿತಾಂಶ ಗುರುವಾರ ಪ್ರಕಟವಾಗಿದೆ. ಉತ್ತರ ಪ್ರದೇಶ, ಮಣಿಪುರ, ಗೋವಾ, ಉತ್ತರಾಖಂಡದಲ್ಲಿ ಬಿಜೆಪಿ ಜಯಗಳಿಸಿದೆ. ಉತ್ತರ ಪ್ರದೇಶದಲ್ಲಿನ ಬಿಜೆಪಿ ಗೆಲುವು ದೇಶಾದ್ಯಂತ ಪಕ್ಷದ ಕಾರ್ಯಕರ್ತರಲ್ಲಿ ಸ್ಪೂರ್ತಿ ಹೆಚ್ಚಿಸಿದೆ.
ಗುರುವಾರ ಸಂಜೆ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮುಂತಾದ ನಾಯಕರು ದೆಹಲಿಯಲ್ಲಿರುವ ಬಿಜೆಪಿ ಕೇಂದ್ರ ಕಚೇರಿಗೆ ಭೇಟಿ ನೀಡಿದರು.
Prime Minister Narendra Modi arrives at BJP Headquarters in Delhi. The party emerged victorious in Goa, Manipur, Uttarakhand and Uttar Pradesh. #AssemblyElections2022 pic.twitter.com/UjjAX4bjX7
— ANI (@ANI) March 10, 2022
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ. ಪಿ. ನಡ್ಡಾ ಪ್ರಧಾನಿ ಮೋದಿ ಸ್ವಾಗತಿಸಿದರು. ವೇದಿಕೆಗೆ ಆಗಮಿಸಿದ ಮೋದಿಗೆ ಗುಲಾಬಿ ಹೂವಿನ ಹಾರ ಹಾಕಿ ಸ್ವಾಗತಿಸಲಾಯಿತು. ಜೆ. ಪಿ. ನಡ್ಡಾ ಮಾತನಾಡಿ ನಾಲ್ಕು ರಾಜ್ಯಗಳಲ್ಲಿ ಪಕ್ಷಕ್ಕೆ ಬೆಂಬಲ ನೀಡಿದ ಜನರಿಗೆ ಧನ್ಯವಾದ ತಿಳಿಸಿದರು.

"ನಾಲ್ಕು ರಾಜ್ಯಗಳಲ್ಲಿ ನಾವು ಸರ್ಕಾರ ರಚನೆ ಮಾಡುತ್ತಿದ್ದೇವೆ. ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿಯೂ ಸಹ ನಮ್ಮ ಪಕ್ಷ ಅಭೂತಪೂರ್ವ ಜಯಸಾಧಿಸಿದೆ. ನಾವು ನರೇಂದ್ರ ಮೋದಿಗೆ ಅಭಿನಂದನೆ ಸಲ್ಲಿಸುತ್ತೇವೆ" ಎಂದು ಜೆ. ಪಿ. ನಡ್ಡಾ ಹೇಳಿದರು.
"ಪ್ರಧಾನಿ ನರೇಂದ್ರ ಮೋದಿ ಭಾರತದ ರಾಜಕೀಯ ನೀತಿ ಬದಲಿಸಿದರು. ಈ ಹಿಂದೆ ಭ್ರಷ್ಟಾಚಾರ, ಸುಳ್ಳು ಭರವಸೆಗಳ ರಾಜಕಾರಣ ನಡೆಯುತ್ತಿತ್ತು. ಆದರೆ ಮೋದಿ ಅವರು ಜನರ ನಡುವೆ ಹೋಗಿ ಕೆಲಸ ಮಾಡುವ ಅಭಿವೃದ್ಧಿಪರವಾದ ರಾಜಕಾರಣ ಆರಂಭಿಸಿದರು" ಎಂದು ಜೆ. ಪಿ. ನಡ್ಡಾ ಬಣ್ಣಿಸಿದರು.
ಪ್ರಧಾನಿ ಮೋದಿ ಭಾಷಣದ ಮುಖ್ಯಾಂಶಗಳು
* ಇಂದು ಉತ್ಸಾಹದ ದಿನವಾಗಿದೆ. ಪ್ರಜಾಪ್ರಭುತ್ವದ ಹಬ್ಬದಲ್ಲಿ ಪಾಲ್ಗೊಂಡು ಜನರು ನೀಡಿದ ತೀರ್ಪು ಕೋಟ್ಯಾಂತರ ಕಾರ್ಯಕರ್ತರಿಗೆ ಸಂತಸ ತಂದಿದೆ. ಅದರಲ್ಲೂ ಮೊದಲ ಬಾರಿಯ ಮತದಾರರು ಪಕ್ಷಕ್ಕೆ ಬೆಂಬಲ ನೀಡಿದರು ಎಂದರು.
* ನಾನು ಚುನಾವಣಾ ಪ್ರಚಾರಕ್ಕೆ ಹೋದಾಗಲೇ ನಮ್ಮ ಕಾರ್ಯಕರ್ತರು ಮಾರ್ಚ್ 10ರಿಂದಲೇ ಹೋಳಿ ಹಬ್ಬ ಆರಂಭವಾಗಲಿದೆ ಎಂದು ಭರವಸೆ ನೀಡಿದ್ದರು.
When we formed govt in 2019 (at Centre), 'experts' said it was because of the 2017 victory (in UP)... I believe the same 'experts' will say that 2022 election result will decide the fate of 2024 national elections: PM Modi pic.twitter.com/UpU2uwyRlN
— ANI (@ANI) March 10, 2022
* ಉತ್ತರ ಪ್ರದೇಶದಲ್ಲಿ ಇಂದು ಇತಿಹಾಸ ನಿರ್ಮಾಣವಾಗಿದೆ. ಜನರು ಸೇವೆ ಮಾಡಲು ಮತ್ತೊಮ್ಮೆ ನಮಗೆ ಅವಕಾಶ ನೀಡಿದ್ದಾರೆ.
* ಈ ನಾಲ್ಕು ರಾಜ್ಯಗಳ ವಿಜಯ ಪಕ್ಷದ ಕಾರ್ಯಕರ್ತರ ವಿಜಯವಾಗಿದೆ. ಅವರೆಲ್ಲೂ ಪ್ರಭಾಪ್ರಭುತ್ವದ ಹಬ್ಬದಲ್ಲಿ ಪಾಲ್ಗೊಂಡು ಬಿಜೆಪಿಯ ವಿಜಯಕ್ಕೆ ಸಹಕಾರ ನೀಡಿದ್ದಾರೆ. ಮೊದಲ ಬಾರಿಗೆ ಮುಖ್ಯಮಂತ್ರಿ ಎರಡನೇ ಅವಧಿಗೆ ಆಯ್ಕೆಯಾಗಿದ್ದಾರೆ.
* ನಾವು ಆಡಳಿತದಲ್ಲಿ ಪಾರದರ್ಶಕತೆಯನ್ನು ತಂದಿದ್ದೇವೆ. ಬಡವರಿಗೆ ನಿಮಗೆ ನೀಡಿದ ಭರವಸೆ ನಿಮ್ಮ ಮನೆ ತಲುಪುತ್ತದೆ ಎಂದು ಹೇಳಿದ್ದೇವೆ. ಅದು ತಲುಪುವ ತನಕ ಸುಮ್ಮನೆ ಕೂರುವವರು ನಾವಲ್ಲ ಎಂದರು.
* ಹಿಂದೆ ಬಡವರಿಗೆ, ಮಹಿಳೆಯರಿಗೆ ಘೋಷಣೆ ಮಾಡುವ ಯೋಜನೆಗಳು ತಲುಪುತ್ತಿರಲಿಲ್ಲ. ಆದರೆ ನಾವು ಆಡಳಿತದಲ್ಲಿ ಪಾರದರ್ಶಕತೆ ತಂದು ಯೋಜನೆಗಳು ಅವರಿಗೆ ತಲುಪುವಂತೆ ಮಾಡಿದೆವು. ಇದರಿಂದಾಗಿ ಮಹಿಳೆಯರು ಪಕ್ಷಕ್ಕೆ ಬೆಂಬಲ ನೀಡುತ್ತಿದ್ದಾರೆ.
* ಚುನಾವಣಾ ಫಲಿತಾಂಶ ಒಂದು ಮಾತನ್ನು ಖಚಿತಪಡಿಸಿದೆ. ಚುನಾವಣಾ ತಜ್ಞರಿಗೆ, ಜನರಿಗೆ ನಾನು ಹೇಳಲು ಬಯಸುತ್ತೇನೆ. ಉತ್ತರ ಪ್ರದೇಶದ ಜನರನ್ನು ಜಾತಿವಾದದ ವೋಟ್ ಬ್ಯಾಂಕ್ ರೀತಿ ನೋಡುವುದು ಬಿಡಿ. ರಾಜ್ಯದ ಜನರಿಗಾಗಿ ಕೆಲಸ ಮಾಡುವವರಿಗೆ ಅವರು ಬೆಂಬಲ ನೀಡಲಿದ್ದಾರೆ.
* ಎಲ್ಲಾ ಚುನಾವಣೋತ್ತರ ಸಮೀಕ್ಷೆಗಳನ್ನು ಗೋವಾದ ಫಲಿತಾಂಶ ಸುಳ್ಳು ಮಾಡಿದೆ. ಉತ್ತರಾಂಖಡದಲ್ಲಿ ಮೊದಲ ಬಾರಿಗೆ ಒಂದೇ ಪಕ್ಷ ಸತತ ಎರಡು ಬಾರಿ ಅಧಿಕಾರಕ್ಕೆ ಬಂದಿದೆ. ಇದು ಹೊಸ ಇತಿಹಾಸವಾಗಿದೆ ಎಂದರು.
* ಇಂದು ಪ್ರಕಟವಾದ ಚುನಾವಣೆ 2024ರ ಲೋಕಸಭೆ ಚುನಾವಣೆ ದಿಕ್ಕನ್ನು ಸ್ಪಷ್ಟಪಡಿಸಿದೆ ಎಂದು ಪ್ರಧಾನಿ ಮೋದಿ ಬಣ್ಣಿಸಿದರು.
* ಬಹಳ ಕಷ್ಟದ ಪರಿಸ್ಥಿತಿಯಲ್ಲೂ ಪಂಜಾಬ್‌ನಲ್ಲಿ ಪಕ್ಷದ ಕಾರ್ಯಕರ್ತರು ಪಕ್ಷದ ಬಾವುಟವನ್ನು ತಮ್ಮ ಪ್ರಾಣವನ್ನು ಒತ್ತೆಯಿಟ್ಟು ಹಾರಿಸಿದ್ದಾರೆ. ಅವರಿಗೆ ನಾನು ವಿಶೇಷವಾದ ಧನ್ಯವಾದ ಸಲ್ಲಿಸುತ್ತೇನೆ ಎಂದರು.
* ಒಂದು ಸಂಕಷ್ಟದ ಪರಿಸ್ಥಿತಿಯಲ್ಲಿ ಈ ಬಾರಿಯ ಚುನಾವಣೆ ನಡೆದಿದೆ. 100 ವರ್ಷಗಳಲ್ಲೇ ಕಾರಣ ಕೋವಿಡ್ ನಂತಹ ಪರಿಸ್ಥಿತಿ ಎದುರಾಗಿತ್ತು. ಈ ಸಮಯದಲ್ಲಿ ಭಾರತ ಕೈಗೊಂಡ ತೀರ್ಮಾನಗಳು, ಆರ್ಥಿಕ ಉತ್ತೇಜನ ಕ್ರಮಗಳು ಜನರಿಗೆ ಸಹಕಾರಿಯಾದವು.
* ಎಲ್ಲೆಲ್ಲಿ ಡಬಲ್ ಎಂಜಿನ್ ಸರ್ಕಾರವಿದೆಯೋ? ಅಲ್ಲಿ ಜನರ ಹಿತ ಕಾಪಾಡುವ ಕಾರ್ಯ ನಡೆದಿದೆ. ಈ ಕಾರ್ಯಕ್ಕೆ ಜನರು ಬೆಂಬಲ ನೀಡಿದ್ದಾರೆ ಎಂಬುದು ಫಲಿತಾಂಶದಿಂದ ಸಾಬೀತಾಗಿದೆ ಎಂದು ಮೋದಿ ಹೇಳಿದರು.
* ಉಕ್ರೇನ್-ರಷ್ಯಾ ಯುದ್ಧದ ಸಮಯದಲ್ಲಿ ಆಪರೇಷನ್ ಗಂಗಾ ಕಾರ್ಯಾಚರಣೆಯನ್ನು ಭಾರತ ಸರ್ಕಾರ ಆರಂಭಿಸಿತು. ಇದನ್ನು ಕೂಡಾ ವಿರೋಧಿಗಳು ಟೀಕಿಸಿದರು.
It is unfortunate that even when thousands of Indian students, Indian citizens were stranded in #Ukraine, there was talk of breaking the morale of the country. These people also tried to malign #OperationGanga. This is a big concern for the future of India: PM Modi pic.twitter.com/LOEsomS9Og
— ANI (@ANI) March 10, 2022
* ಯುದ್ಧದ ಪರೋಕ್ಷ ಪರಿಣಾಮ ಹಲವು ದೇಶಗಳ ಮೇಲೆ ಬೀರಿದೆ. ಭಾರತ ಶಾಂತಿಯ ಪಕ್ಷದಲ್ಲಿದೆ. ತೈಲ ಸೂರ್ಯಕಾಂತಿ ಎಣ್ಣೆಯನ್ನು ಭಾರತ ಈ ದೇಶಗಳಿಂದ ಖರೀದಿ ಮಾಡುತ್ತದೆ. ನಮ್ಮ ಬಜೆಟ್ ಸಹ ಆತ್ಮನಿರ್ಭರ ಭಾರತದ ಹಾದಿಯಲ್ಲಿ ಸಾಗಲು ಅನುಕೂಲವಾಗಿದೆ.
* ನಾವು ಯಾರ ಕುಟುಂಬದ ವಿರುದ್ಧವೂ ಇಲ್ಲ. ವಂಶಪಾರಂಪರ್ಯ ಆಡಳಿತದಿಂದ ಯಾವುದೇ ದೇಶ ಅಭಿವೃದ್ಧಿಯಾಗಿಲ್ಲ. ಭ್ರಷ್ಟಾಚಾರದ ಆಡಳಿತಕ್ಕೆ ಬಿಜೆಪಿ ಕಡಿವಾಣ ಹಾಕಿದೆ. ಕುಟುಂಬ ರಾಜಕೀಯ ನಿರ್ಮೂಲನೆಯಾಗುವ ದಿನಗಳು ದೂರವಿಲ್ಲ ಎಂದರು.












Click it and Unblock the Notifications