• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕೋವಿಡ್ ಕಾಲದಲ್ಲಿ ಎಲೆಕ್ಷನ್: ಪ್ರಚಾರ, ಮತದಾನಕ್ಕೆ ನಿಯಮ ರೂಪಿಸಿದ ಚುನಾವಣಾ ಆಯೋಗ

|

ನವದೆಹಲಿ, ಆಗಸ್ಟ್ 21: ಕೊರೊನಾ ವೈರಸ್ ಸೋಂಕು ಹರಡಿದ ಪರಿಣಾಮವಾಗಿ ದೇಶದಲ್ಲಿ ಯಾವುದೇ ಸ್ಥಳೀಯ ಅಥವಾ ಸಾರ್ವತ್ರಿಕ ಮಟ್ಟದ ಚುನಾವಣೆಗಳು ನಡೆದಿಲ್ಲ. ಆದರೆ ಸ್ಥಳೀಯ ಸರ್ಕಾರಗಳು, ರಾಜ್ಯ ಶಾಸನಸಭೆ, ಸಂಸತ್ ಸೇರಿದಂತೆ ವಿವಿಧೆಡೆ ಉಪ ಚುನಾವಣೆಗಳು ನಡೆಯುವುದು ಬಾಕಿ ಇದೆ. ಬಿಹಾರ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆಯೂ ಸಮೀಪಿಸುತ್ತಿದೆ. ಕೋವಿಡ್ ಸೋಂಕಿನ ಭೀತಿಯ ನಡುವೆಯೇ ಚುನಾವಣೆ ನಡೆಸಲು ಚುನಾವಣಾ ಆಯೋಗ ಸಿದ್ಧತೆ ನಡೆಸಿದೆ.

   ಸ್ಯಾಟಲೈಟ್ ನಲ್ಲಿ ಸೆರೆಯಾಯ್ತು Chinese ಮತ್ತೊಂದು ಮಂಗನಾಟ | Oneindia Kannada

   ಕೊರೊನಾ ವೈರಸ್ ಪಿಡುಗಿನ ಸಂದರ್ಭದಲ್ಲಿ ಸಾರ್ವತ್ರಿಕ ಮತ್ತು ಉಪ ಚುನಾವಣೆಗಳನ್ನು ನಡೆಸಲು ಕೇಂದ್ರ ಚುನಾವಣಾ ಆಯೋಗ ಶುಕ್ರವಾರ ಮಾರ್ಗದರ್ಶಿ ಸೂತ್ರಗಳನ್ನು ಪ್ರಕಟಿಸಿದೆ. ಬಿಹಾರದಲ್ಲಿ ಮಹತ್ವದ ವಿಧಾನಸಭೆ ಚುನಾವಣೆ ಈ ವರ್ಷದ ಅಕ್ಟೋಬರ್-ನವೆಂಬರ್ ತಿಂಗಳಲ್ಲಿ ನಡೆಯಬೇಕಿದ್ದು, ಅದಕ್ಕೆ ಮುನ್ನವೇ ಚುನಾವಣಾ ನಿಯಮಾವಳಿಗಳನ್ನು ಬಿಡುಗಡೆ ಮಾಡಿದೆ.

   ಬಿಹಾರ ಚುನಾವಣೆ: ನಿತೀಶ್ ಹಣೆಬರಹ ಬದಲಿಸಬಹುದಾದ ಐದು ಅಂಶಗಳಿವುಬಿಹಾರ ಚುನಾವಣೆ: ನಿತೀಶ್ ಹಣೆಬರಹ ಬದಲಿಸಬಹುದಾದ ಐದು ಅಂಶಗಳಿವು

   ದೈಹಿಕ ನ್ಯೂನತೆ ಹೊಂದಿರುವ ವ್ಯಕ್ತಿಗಳೆಂದು ಗುರುತಿಸುವವರು, 80 ವರ್ಷ ಮೇಲ್ಪಟ್ಟವರು, ಅಗತ್ಯ ಸೇವೆಗಳಲ್ಲಿ ಗುರುತಿಸಿಕೊಂಡಿರುವ ವ್ಯಕ್ತಿಗಳು ಮತ್ತು ಕೋವಿಡ್-19 ಪಾಸಿಟಿವ್ ಸೋಂಕಿತರು ಹಾಗೂ ಶಂಕಿತರು ಕೂಡ ಈ ಬಾರಿ ಅಂಚೆ ಮತ ಹಾಕಲು ಅವಕಾಶ ನೀಡಲಾಗಿದೆ. ಮುಂದೆ ಓದಿ...

   ಮಾಸ್ಕ್ ಧರಿಸುವುದು ಕಡ್ಡಾಯ

   ಮಾಸ್ಕ್ ಧರಿಸುವುದು ಕಡ್ಡಾಯ

   1. ಪ್ರತಿ ಚುನಾವಣಾ ಸಂಬಂಧಿ ಚಟುವಟಿಕೆಗಳಲ್ಲಿ ಭಾಗವಹಿಸುವ ಪ್ರತಿಯೊಬ್ಬ ವ್ಯಕ್ತಿಯೂ ತಪ್ಪದೇ ಮಾಸ್ಕ್ ಧರಿಸಬೇಕು.

   2. ಚುನಾವಣಾ ಉದ್ದೇಶಕ್ಕೆ ಬಳಸುವ ಕಟ್ಟಡ/ಕೊಠಡಿ/ಹಾಲ್‌ನ ಪ್ರವೇಶದಲ್ಲಿ ಪ್ರತಿ ವ್ಯಕ್ತಿಗೂ ಥರ್ಮಲ್ ಸ್ಕ್ಯಾನಿಂಗ್ ನಡೆಸಬೇಕು. ಅಲ್ಲಿ ಸ್ಯಾನಿಟೈಸರ್, ಸೋಪ್ ಮತ್ತು ನೀರು ಲಭ್ಯವಾಗುವಂತೆ ಇರಬೇಕು.

   3. ರಾಜ್ಯ ಸರ್ಕಾರ ಮತ್ತು ಕೇಂದ್ರ ಗೃಹ ಸಚಿವಾಲಯದ ಕೋವಿಡ್-19 ಮಾರ್ಗದರ್ಶಿ ನಿಯಮಗಳಂತೆ ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು.

   ಮನೆ ಮನೆ ಪ್ರಚಾರಕ್ಕೆ ಐದು ಜನ

   ಮನೆ ಮನೆ ಪ್ರಚಾರಕ್ಕೆ ಐದು ಜನ

   4. ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದನ್ನು ಖಾತರಿಪಡಿಸಲು ಚುನಾವಣೆಗೆ ಸಾಧ್ಯವಾದಷ್ಟು ವಿಶಾಲವಾದ ಸಭಾಂಗಣಗಳನ್ನು ಗುರುತಿಸಿ ಬಳಸಿಕೊಳ್ಳಬೇಕು.

   5. ಚುನಾವಣಾ ಸಿಬ್ಬಂದಿ, ಭದ್ರತಾ ಸಿಬ್ಬಂದಿಯ ಸುಗಮ ಓಡಾಟಕ್ಕೆ ಅನುಕೂಲವಾಗುವಂತೆ ಸೂಕ್ತ ಸಂಖ್ಯೆಯಲ್ಲಿ ವಾಹನಗಳನ್ನು ಒದಗಿಸಬೇಕು.

   ಅಂಚೆ ಮತಗಳ ಚಲಾವಣೆ; ವಯೋಮಿತಿ ಇಳಿಕೆ ಇಲ್ಲಅಂಚೆ ಮತಗಳ ಚಲಾವಣೆ; ವಯೋಮಿತಿ ಇಳಿಕೆ ಇಲ್ಲ

   6. ಮನೆ ಮನೆಗೆ ಪ್ರಚಾರದಲ್ಲಿ ಕೇವಲ ಐವರು ಮಾತ್ರವೇ ಭಾಗವಹಿಸಬೇಕು. ವಿದ್ಯುನ್ಮಾನ ಮತ ಯಂತ್ರದ ಗುಂಡಿಒತ್ತುವ ಮೊದಲು ಮತದಾರರು ಕೈಗವಸು ತೊಟ್ಟಿರಬೇಕು. ಮತಗಟ್ಟೆಯಲ್ಲಿ ಗರಿಷ್ಠ 1,000 ಮತದಾರರು ಒಂದು ಸಮಯಕ್ಕೆ ಹಾಜರಿರಬಹುದು.

   ದೇಹದ ಉಷ್ಣತೆ ಪರಿಶೀಲನೆ

   ದೇಹದ ಉಷ್ಣತೆ ಪರಿಶೀಲನೆ

   7. ಮತಗಟ್ಟೆ ಪ್ರವೇಶಿಸುವ ಪ್ರತಿ ವ್ಯಕ್ತಿಯ ದೇಹದ ಉಷ್ಣಾಂಶವನ್ನು ಪರಿಶೀಲಿಸಬೇಕು. ಆರೋಗ್ಯ ಸಚಿವಾಲಯ ನಿಗದಿಪಡಿಸಿರುವ ಸುರಕ್ಷಿತ ಮಟ್ಟಕ್ಕಿಂತ ಉಷ್ಣತೆ ಅಧಿಕವಾಗಿದ್ದರೆ ಮತ್ತೊಮ್ಮೆ ಪರಿಶೀಲನೆ ನಡೆಸಬೇಕು. ಎರಡನೆಯ ತಪಾಸಣೆಯಲ್ಲಿಯೂ ಅಷ್ಟೇ ಉಷ್ಣಾಂಶ ತೋರಿಸಿದರೆ ಮತದಾನದ ಕೊನೆಯ ಅವಧಿಯಲ್ಲಿ ಮತ್ತೆ ಬರುವಂತೆ ಸೂಚಿಸಬೇಕು. ಮತದಾನದ ಕೊನೆಯ ಗಂಟೆಯಲ್ಲಿ ಅಂತಹ ಮತದಾರರಿಗೆ ಕೋವಿಡ್-19 ಸಂಬಂಧಿತ ಮುನ್ನೆಚ್ಚರಿಕೆಯ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ಮತ ಚಲಾಯಿಸಲು ಅವಕಾಶ ನೀಡಬೇಕು.

   ಆನ್‌ಲೈನ್‌ನಲ್ಲಿ ನಾಮಪತ್ರ ಸಲ್ಲಿಕೆ

   ಆನ್‌ಲೈನ್‌ನಲ್ಲಿ ನಾಮಪತ್ರ ಸಲ್ಲಿಕೆ

   8. ಸಾರ್ವಜನಿಕ ಸಭೆಗಳು ಮತ್ತು ರೋಡ್ ಶೋಗಳನ್ನು ನಡೆಸಲು ಅವಕಾಶವಿದೆ. ಆದರೆ ಕೇಂದ್ರ ಸರ್ಕಾರ ಸಿದ್ಧಪಡಿಸಿರುವ ಷರತ್ತುಗಳಿಗೆ ಬದ್ಧವಾಗಿರಬೇಕು.

   9. ಅಭ್ಯರ್ಥಿಗಳು ಆನ್‌ಲೈನ್ ಮೂಲಕವೇ ಉಮೇದುವಾರಿಕೆ ಮತ್ತು ಠೇವಣಿ ಮೊತ್ತವನ್ನು ಸಲ್ಲಿಸಬಹುದು. ಚುನಾವಣೆ ಪ್ರಕ್ರಿಯೆ ಸಂದರ್ಭದಲ್ಲಿ ಮಾಸ್ಕ್, ಸ್ಯಾನಿಟೈಸರ್ ಬಳಕೆ, ಥರ್ಮಲ್ ಸ್ಕ್ಯಾನರ್ ಅಳವಡಿಕೆ ಮತ್ತು ಪಿಪಿಇ ಕೊಟ್ ಧರಿಸುವಿಕೆ ಮುಂತಾದ ಸುರಕ್ಷತಾ ಕ್ರಮಗಳನ್ನು ಅನುಸರಿಸಬೇಕು.

   ಮತಗಟ್ಟೆಯ ಸ್ಯಾನಿಟೈಸ್

   ಮತಗಟ್ಟೆಯ ಸ್ಯಾನಿಟೈಸ್

   10. ಮತದಾನದ ಹಿಂದಿನ ದಿನ ಮತಗಟ್ಟೆಯನ್ನು ಸ್ಯಾನಿಟೈಸ್ ಮಾಡಬೇಕು. ಮತಗಟ್ಟೆ ಪ್ರವೇಶ ಭಾಗದಲ್ಲಿ ಚುನಾವಣಾ ಸಿಬ್ಬಂದಿ, ಅರೆ ವೈದ್ಯಕೀಯ ಸಿಬ್ಬಂದಿ ಅಥವಾ ಆಶಾ ಕಾರ್ಯಕರ್ತರು ಪ್ರತಿ ಮತದಾರರ ಥರ್ಮಲ್ ಪರೀಕ್ಷೆ ನಡೆಸಬೇಕು.

   11. ಮತದಾರರ ಗುರುತು ಪತ್ತೆ ಮಾಡುವ ಪ್ರಕ್ರಿಯೆ ಸಂದರ್ಭದಲ್ಲಿ ಮತದಾರರು ತಮ್ಮ ಮುಖದ ಮೇಲಿನ ಮಾಸ್ಕ್ ಸರಿಸಬೇಕಾಗುತ್ತದೆ. ಕ್ವಾರೆಂಟೈನ್‌ನಲ್ಲಿರುವ ಎಲ್ಲ ಕೋವಿಡ್-19 ರೋಗಿಗಳು ತಮಗೆ ಸಂಬಂಧಿತ ಮತಗಟ್ಟೆಗಳಲ್ಲಿ ಕೊನೆಯ ಒಂದು ಗಂಟೆಯ ಅವಧಿಯಲ್ಲಿ ಮತ ಚಲಾಯಿಸಲು ಅವಕಾಶ ನೀಡಲಾಗುತ್ತದೆ. ಈ ಸಂದರ್ಭದಲ್ಲಿ ಆರೋಗ್ಯ ಇಲಾಖೆಯ ಅಧಿಕಾರಿಗಳು ಕಠಿಣ ಕ್ರಮಗಳೊಂದಿಗೆ ಉಸ್ತುವಾರಿ ನೋಡಿಕೊಳ್ಳಬೇಕು.

   ಕಂಟೇನ್ಮೆಂಟ್‌ಗೆ ಪ್ರತ್ಯೇಕ ಮಾರ್ಗಸೂಚಿ

   ಕಂಟೇನ್ಮೆಂಟ್‌ಗೆ ಪ್ರತ್ಯೇಕ ಮಾರ್ಗಸೂಚಿ

   12. ಕೋವಿಡ್-19 ಸಂದರ್ಭದಲ್ಲಿ ಸಾರ್ವತ್ರಿಕ ಚುನಾವಣೆ ಮತ್ತು ಉಪ ಚುನಾವಣೆಗಳನ್ನು ನಡೆಸಲು ವಿಶಾಲ ಮಾರ್ಗಸೂಚಿಯನ್ನು 12 ಪುಟಗಳಲ್ಲಿ ಬಿಡುಗಡೆ ಮಾಡಿರುವ ಚುನಾವಣಾ ಆಯೋಗವು, ಕಂಟೇನ್ಮೆಂಟ್ ವಲಯಗಳೆಂದು ಗುರುತಿಸಿರುವಲ್ಲಿ ನೆಲೆಸಿರುವವರು ಮತದಾನದಲ್ಲಿ ಪಾಲ್ಗೊಳ್ಳಲು ಪ್ರತ್ಯೇಕ ಮಾರ್ಗದರ್ಶಿಯನ್ನು ಬಿಡುಗಡೆ ಮಾಡುವುದಾಗಿ ತಿಳಿಸಿದೆ.

   English summary
   Election Commission Issued Guidelines for Conduct of Elections During COVID-19 Pandemic
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X