Vande Bharat Train: ವಂದೇ ಭಾರತ್ ಸಿಬ್ಬಂದಿಗೆ ಥಳಿಸಿದ ವೃದ್ಧ ಪ್ರಯಾಣಿಕ: ವಿಡಿಯೋ ವೈರಲ್
ನೀವು ಸಸ್ಯಾಹಾರಿಯೇ? ಹೌದಾದರೆ ಕೆಲವೊಮ್ಮೆ ಆಕಸ್ಮಿಕವಾಗಿ ಮಾಂಸಾಹಾರ ಸಿಗುತ್ತದೆ. ಅದನ್ನು ನೀವು ತಿಳಿಯದೆ ತಿನ್ನುತ್ತಿರಬಹುದು. ಅದು ಸಸ್ಯಾಹಾರವಲ್ಲ ಮಾಂಸಾಹಾರ ಎಂದು ನಿಮಗೆ ತಿಳಿದಾಗ ನಿಮಗೆ ಹೇಗನಿಸುತ್ತದೆ?
ಪ್ರೀಮಿಯಂ ವಂದೇ ಭಾರತ್ ರೈಲಿನಲ್ಲಿ ಇದೇ ರೀತಿಯ ಘಟನೆ ನಡೆದಿದೆ. ಕಳೆದ ವಾರ ಹೌರಾದಿಂದ ರಾಂಚಿಗೆ ವಂದೇ ಭಾರತ್ ರೈಲಿನಲ್ಲಿ ಮಾಂಸಾಹಾರಿ ಬಡಿಸಿದ್ದಕ್ಕಾಗಿ ವೃದ್ಧ ಪ್ರಯಾಣಿಕರೊಬ್ಬರು ಸಿಬ್ಬಂದಿಗೆ ಕಪಾಳಮೋಕ್ಷ ಮಾಡಿದ್ದು ಆ ವಿಡಿಯೋ ಈಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.

ಈ ಘಟನೆ ಜುಲೈ 26ರಂದು ನಡೆದಿದೆ. ಈ ಘಟನೆಯ ವಿಡಿಯೋವನ್ನು ಆ ದಿನ ವಂದೇ ಭಾರತ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಸಹ-ಪ್ರಯಾಣಿಕ ಕುನಾಲ್ ವರ್ಮಾ ಅವರು ತಮ್ಮ 'ಎಕ್ಸ್' ಪುಟದಲ್ಲಿ ಹಂಚಿಕೊಂಡಿದ್ದಾರೆ. ಅದರಲ್ಲಿ ಈ ಘಟನೆಯನ್ನು ವಿವರಿಸಿದ್ದಾರೆ.
ವಯಸ್ಸಾದ ಪ್ರಯಾಣಿಕರೊಬ್ಬರು ವಂದೇ ಭಾರತ್ ರೈಲಿನಲ್ಲಿ ಸಸ್ಯಾಹಾರವನ್ನು ಆರ್ಡರ್ ಮಾಡಿದ್ದರು. ಆದರೆ ಅವರಿಗೆ ತಿಳಿಯದೆ ಮಾಂಸಾಹಾರವನ್ನು ನೀಡಲಾಯಿತು. ವಯಸ್ಸಾದ ಪ್ರಯಾಣಿಕ ಆಹಾರ ಪ್ಯಾಕೆಟ್ ಅನ್ನು ನೋಡದೆ ಅದನ್ನು ತೆರೆದು ಒಂದು ಭಾಗದಷ್ಟು ಆಹಾರವನ್ನು ತಿಂತಿದ್ದಾರೆ.
ಇದರಿಂದ ಕೋಪಗೊಂಡ ವಯಸ್ಸಾದ ಪ್ರಯಾಣಿಕ ರೈಲಿನಲ್ಲಿ ಗಲಾಟೆಯನ್ನು ಮಾಡಿದ್ದಾರೆ. ರೈಲಿನ ಕ್ಯಾಟರಿಂಗ್ ವಿಭಾಗಕ್ಕೆ ಕರೆ ಮಾಡಲು ಒತ್ತಾಯಿಸಿದ್ದಾರೆ. ಸ್ವಲ್ಪ ಸಮಯದ ನಂತರ, ಪೋಲೀಸ್ ಸಿಬ್ಬಂದಿಯೊಂದಿಗೆ ಅಡುಗೆ ವಿಭಾಗದ ಜನರು ಮತ್ತು ಊಟ ಬಡಿಸಿದ ಸಿಬ್ಬಂದಿ ಬಂದರು. ಸಿಬ್ಬಂದಿಯನ್ನು ನೋಡಿದ ಕೂಡಲೇ ವೃದ್ಧ ಪ್ರಯಾಣಿಕ ಆತನ ಮೇಲೆ ಕೈ ಮಾಡಿದ್ದಾರೆ.
Vande Bharat by mistake served Non-Veg food to a old person. He didn't saw instructions and ate the food. Being vegetarian he realised it tastes like non-veg so he got furious & gave 2 tight slap to the waiter.
— Kunal Verma (@itsmekunal07) July 27, 2024
Vande Bharat - Howrah to Ranchi
Date - 26/ July/ 24
Live recording- pic.twitter.com/Mg0skE3KLo
ಆದರೆ ವೃದ್ಧ ಪ್ರಯಾಣಿಕ ಕಪಾಳಮೋಕ್ಷ ಮಾಡಿದ್ದರಿಂದ ರೈಲಿನಲ್ಲಿದ್ದ ಇತರ ಕೆಲವು ಪ್ರಯಾಣಿಕರು ಆಕ್ರೋಶಗೊಂಡರು. ಈ ಪೈಕಿ ಒಬ್ಬ ಪ್ರಯಾಣಿಕರು ಮುದುಕನ ಮೇಲೆ ಕೂಗಾಡಲು ಪ್ರಾರಂಭಿಸಿದರು. ಈ ಸಂದರ್ಭದಲ್ಲಿ ಪ್ರಯಾಣಿಕರು ವೇಟರ್ ಬಳಿ ಕ್ಷಮೆಯಾಚಿಸಬೇಕು ಎಂದು ವೃದ್ಧನಿಗೆ ಹೇಳಿದರು. ಸಹ ಪ್ರಯಾಣಿಕರು ವಯೋವೃದ್ಧ ಪ್ರಯಾಣಿಕರ ಬಳಿ ಸಿಬ್ಬಂದಿಗೂ ಕ್ಷಮೆಯಾಚಿಸುವಂತೆ ಕೇಳಿದರು. ಇದು ಸಹ ವೀಡಿಯೊದಲ್ಲಿ ಕಾಣಬಹುದು.
ಘಟನೆಯ ಬಗ್ಗೆ ಪ್ರತಿಕ್ರಿಯಿಸಿದ ಪೂರ್ವ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಪ್ರಕಾಶ್ ಚರಣ್, 'ತಪ್ಪಾಗಿ ಬಡಿಸಲಾಗಿದೆ, ಆದರೆ ಅವರು ಅದನ್ನು ಸೇವಿಸಲಿಲ್ಲ. ಸಹ ಪ್ರಯಾಣಿಕರು ಕಪಾಳಮೋಕ್ಷ ಘಟನೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಆನಂತರ ಸಮಸ್ಯೆಯನ್ನು ಪರಿಹರಿಸಲಾಯಿತು' ಎಂದು ಹೇಳಿದ್ದಾರೆ.
ವಿಡಿಯೊದಲ್ಲಿ ಒಬ್ಬ ಪೊಲೀಸ್ ಕೂಡ ಕಾಣಿಸಿಕೊಂಡಿದ್ದು, ಅವರು ವಿಷಯವನ್ನು ಶಾಂತಗೊಳಿಸಲು ಪ್ರಯತ್ನಿಸುತ್ತಿದ್ದಾರೆ. ವೈರಲ್ ಆಗಿರುವ ವಿಡಿಯೋಗೆ ಜನರ ವಿವಿಧ ರೀತಿಯ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ. ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಪ್ರಯಾಣಿಕನ ತಪ್ಪಿನ ಬಗ್ಗೆ ಬರೆದು ಸಿಬ್ಬಂದಿಗೆ ಕ್ಷಮೆ ಕೇಳಬೇಕು ಎಂದು ಬರೆದರೆ, ಕೆಲವರು ಸಿಬ್ಬಂದಿ ದೊಡ್ಡ ತಪ್ಪು ಮಾಡಿದ್ದಾರೆ ಎಂದು ವೃದ್ಧನ ಮೇಲೆ ಸಹಾನುಭೂತಿಯಾಗಿ ಪ್ರತಿಕ್ರಿಯಿಸಿದ್ದಾರೆ. ಇನ್ನೂ ಕೆಲವರು ಇದು ರೈಲ್ವೆ ಆಡಳಿತದ ತಪ್ಪು ಎಂದು ಹೇಳುತ್ತಿದ್ದಾರೆ.












Click it and Unblock the Notifications