Punjab: ಭ್ರಷ್ಟಾಚಾರ ಪ್ರಕರಣ, ಮತ್ತೊಬ್ಬ ಎಎಪಿ ನಾಯಕ ಬಂಧಿಸಿದ ED
ಚಂಡೀಗಢ, ನವೆಂಬರ್ 06: ಪಂಜಾಬ್ ರಾಜ್ಯದ ಶಾಸಕ ಜಸ್ವಂತ್ ಸಿಂಗ್ ಗಜ್ಜನ್ ಮಜ್ರಾ ಅವರನ್ನು ಜಾರಿ ನಿರ್ದೇಶನಾಲಯ (ED) ಅಧಿಕಾರಿಗಳು ಸೋಮವಾರ ಬಂಧಿಸಿದೆ. ಬ್ಯಾಂಕ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕರ ಬಂಧನವಾಗಿದೆ ಎಂದು ಹೇಳಲಾಗುತ್ತಿದೆ.
ಕಳೆದ ವರ್ಷ 2022ರಲ್ಲಿ ಸೆಪ್ಟೆಂಬರ್‌ನಲ್ಲಿ ಬ್ಯಾಂಕ್ ವೊಂದರ ₹41 ಕೋಟಿ ವಂಚನೆಗೆ ಸಂಬಂಧಿಸಿದಂತೆ ಕೇಂದ್ರ ತನಿಖಾ ದಳವು ಆಮ್ ಆದ್ಮಿ ಪಕ್ಷದ ನಾಯಕರ ನಿವಾಸ ಸೇರಿದಂತೆ ಮೂರು ಸ್ಥಳಗಳನ್ನು ಶೋಧಿಸಿತ್ತು. ಈ ವೇಳೆ 16.57 ಲಕ್ಷ ನಗದು ಹಣ ಪತ್ತೆ ಆಗಿತ್ತು. ಬ್ಯಾಂಕ್ ಹಾಗೂ ಆಸ್ತಿ ದಾಖಲೆಗಳನ್ನು ವಶಕ್ಕೆ ಪಡೆದಿದ್ದರು. ಆದರೆ ಇಂದು ಶಾಸಕರ ಬಂಧನಕ್ಕೆ ನಿಖರ ಕಾರಣ ಬಗ್ಗೆ ಅಧಿಕಾರಿಗಳು ತಿಳಿಸಿಲ್ಲ.

ಸಿಬಿಐ ಪ್ರಕಾರ, ಪಂಜಾಬ್ ರಾಜ್ಯದ ಲುಧಿಯಾನದಲ್ಲಿರುವ ಬ್ಯಾಂಕ್ ಆಫ್ ಇಂಡಿಯಾ ಶಾಖೆಯು ನೀಡಿದ್ದ ದೂರಿನ ಆಧಾರದಲ್ಲಿ ತಾರಾ ಕಾರ್ಪೊರೇಷನ್ ಲಿಮಿಟೆಡ್ ಸೇರಿದಂತೆ ಬಂಧಿತ ಶಾಸಕ ಜಸ್ವಂತ್ ಸಿಂಗ್ ಗಜ್ಜನ್ ಮಜ್ರಾ ಹಾಗೂ ಇನ್ನಿತರರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಪ್ರಕರಣದಲ್ಲಿ ಬಂಧಿತ ವ್ಯಕ್ತಿಗಳ ಪೈಕಿ ಸಾರ್ವಜನಿಕ ಸೇವೆಯಲ್ಲಿಯೇ ಇದ್ದ ಅಧಿಕಾರಿಗಳಾಗಿದ್ದಾರೆ ಎಂದು ತಿಳಿದು ಬಂದಿದೆ.
ವಿಪಕ್ಷ ನಾಯಕರ ವಿರುದ್ಧ ಕ್ರಮ
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸೇರಿದಂತೆ ವಿರೋಧ ಪಕ್ಷಗಳು ಮತ್ತವರ ನಾಯಕರ ವಿರುದ್ಧ ಕೇಂದ್ರ ತನಿಖಾ ಸಂಸ್ಥೆಗಳು ಕ್ರಮ ಕೈಗೊಂಡ ಬೆನ್ನಲ್ಲೆ ಆಮ್ ಆದ್ಮಿ ಪಕ್ಷಕ್ಕೆ ಮತ್ತೊಂದು ಸಂಕಟ ಎದುರಾಗಿದೆ. ಇದೀಗ ಶಾಸಕ ಮಜ್ರಾ ಅವರನ್ನು ಬಂಧಿಸಲಾಗಿದೆ.
ಛತ್ತೀಸ್‌ಗಢ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರು ಮಹಾದೇವ್ ಬೆಟ್ಟಿಂಗ್ ಆಪ್ ಮಾಲೀಕರಿಂದ ₹508 ಕೋಟಿ ಲಂಚ ಪಡೆದ ಆರೋಪದ ಮೇಲೆ ಇಡಿ ಅಧಿಕಾರಿಗಳು ತನಿಖೆ ನಡೆಸುತ್ತಿದೆ. ಇನ್ನೇನು ಮಂಗಳವಾರದಿಂದ ಮತದಾನ ಆರಂಭವಾಗಲಿದೆ. ಈ ಸಮಯದಲ್ಲಿ ಇಡಿಯನ್ನು 'ಅಸ್ತ್ರ'ವಾಗಿ ಬಳಸಿಕೊಳ್ಳಲಾಗಿದೆ ಎಂದು ಕೇಂದ್ರ ಬಿಜೆಪಿ ವಿರುದ್ಧ ಬಘೇಲ್ ಅವರು ಟೀಕಿಸಿದ್ದಾರೆ.
ವಿಚಾರಣೆಗೆ ಗೈರಾಗಿದ್ದ ದೆಹಲಿ ಸಿಎಂ
ಮದ್ಯ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ನವೆಂಬರ್ 2 ರಂದು ವಿಚಾರಣೆ ನಡೆಸಲು ತನಿಖಾಧಿಕಾರಿಗಳು ನವದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಸಂಪರ್ಕಿಸಿದರು. ಆದರೆ ಕರೆ ಸ್ವೀಕರಿಸದೇ ನಿರ್ಲಕ್ಷಿಸಿದ್ದಾರೆ. ಇದೇ ವೇಳೆ ಅವರು ಮಧ್ಯ ಮಧ್ಯಪ್ರದೇಶದಲ್ಲಿ ಚುನಾವಣಾ ಪ್ರಚಾರಕ್ಕೆ ತೆರಳಿದ್ದರು.












Click it and Unblock the Notifications