ECI ಉಪ ಚುನಾವಣಾ ಆಯುಕ್ತರಾಗಿ 'ಪ್ರಕಾಶ್ ರಾಜ್‌ಪುರೋಹಿತ್' ನೇಮಕ: ಯಾರಿವರು? ಇವರ ಹಿನ್ನೆಲೆ ಏನು?
ನವದೆಹಲಿ: ಭಾರತೀಯ ಚುನಾವಣಾ ಆಯೋಗದ (ECI) ಆಡಳಿತ ವಿರುದ್ಧ ಅಪಸ್ವರ ಕೇಳಿ ಬರುತ್ತಿದ್ದ ಬೆನ್ನಲ್ಲೆ ಉಪ ಚುನಾವಣಾ ಆಯುಕ್ತರ (DEC) ಹುದ್ದೆಗೆ 2010ರ ಬ್ಯಾಚ್‌ನ ಐಎಎಸ್ (IAS) ಅಧಿಕಾರಿ ಪ್ರಕಾಶ್ ರಾಜ್‌ಪುರೋಹಿತ್ ಅವರನ್ನು ನೇಮಿಸಲಾಗಿದೆ. ಶನಿವಾರ ಕೇಂದ್ರ ಸಚಿವ ಸಂಪುಟದ ನೇಮಕಾತಿ ಸಮಿತಿಯು ಹುದ್ದೆಗೆ ನಿಯೋಜಿಸಿದೆ. ಈ ವ್ಯಕ್ತಿ ಯಾರು, ಇವರ ವೃತ್ತಿಪರ ಹಿನ್ನೆಲೆಯ ವಿವರ ಇಲ್ಲಿದೆ.
ಮತದಾರರ ಪಟ್ಟಿ ಮತ್ತು ಐಟಿ (IT) ವಿಭಾಗದ ಉಸ್ತುವಾರಿ ಜವಾಬ್ದಾರಿ ವಹಿಸಿಕೊಂಡಿದ್ದ ಉಪ ಚುನಾವಣಾ ಆಯುಕ್ತರಾಗಿದ್ದ ಸಂಜಯ್ ಕುಮಾರ್ ಅವರನ್ನು ಸೇವಾವಧಿಗೂ ಮೊದಲೇ ಆಗಸ್ಟ್‌ನಲ್ಲಿ ಅವರ ಮೂಲ ಕೇಡರ್‌ಗೆ (ಸೇವಾವಲಯಕ್ಕೆ) ಹಿಂತಿರುಗಿ ಕಳುಹಿಸಲಾಗಿತ್ತು. ಸುಮಾರು ಎರಡು ತಿಂಗಳಿನಿಂದ ತೆರವಾಗಿದ್ದ ಆ ಸ್ಥಾನವನ್ನು ಇದೀಗ ರಾಜ್‌ಪುರೋಹಿತ್ ಅವರು ತುಂಬಿದ್ದಾರೆ. ಏಪ್ರಿಲ್ 2030ರವರೆಗೆ ಮುಂದುವರಿಯಲಿದ್ದಾರೆ..

ಮಹತ್ವದ ಜವಾಬ್ದಾರಿ ನಿರ್ವಹಿಸಿರುವ ರಾಜ್‌ಪುರೋಹಿತ್
ರಾಜಸ್ಥಾನ ರಾಜ್ಯದ ಐಎಎಸ್ ಕೇಡರ್‌ನ 2010ರ ಬ್ಯಾಚ್ ಅಧಿಕಾರಿಯಾಗಿದ್ದಾರೆ. ರಾಜ್‌ಪುರೋಹಿತ್ ಅವರು ಇದೇ ವರ್ಷ (2026) ಮೇ ತಿಂಗಳಿನಿಂದ ರಕ್ಷಣಾ ಸಚಿವಾಲಯದಲ್ಲಿ ಸಚಿವರ ರಾಜನಾಥ್ ಸಿಂಗ್ ಅವರ ಅಡಿಯಲ್ಲಿ ಕೆಲಸ ಮಾಡಿದ್ದಾರೆ. ರಕ್ಷಣಾ ಸಚಿವಾಲಯದ ವ್ಯಾಪ್ತಿಯ ರಕ್ಷಣಾ ಉತ್ಪಾದನಾ ಇಲಾಖೆಯಲ್ಲಿ ಜಂಟಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದರು.
ಈ ಹಿಂದೆ ಎನ್‌ಡಿಎ (NDA) ಸರ್ಕಾರದ ಅವಧಿಯಲ್ಲಿ ಹಣಕಾಸು ಸಚಿವಾಲಯದಲ್ಲಿಯೂ ಕೆಲಸ ಮಾಡಿದ ಅನುಭವ ಅವರಿಗೆ ಇದೆ. ಅಲ್ಲದೇ 2009ರ ಯುಪಿಎಸ್‌ಸಿ (UPSC) ಪಟ್ಟಿಯಲ್ಲಿ ಎರಡನೇ ಶ್ರೇಣಿ ಪಡೆದ ಖ್ಯಾತಿ ಇವರದ್ದಾಗಿದೆ.
ಈ ಹಿಂದೆ ಇದ್ದ ಸಂಜಯ್ ಕುಮಾರ್ ಅವರು 2024ರ ಆಗಸ್ಟ್ ತಿಂಗಳಿನಿಂದ 202ರ ಆಗಸ್ಟ್ ವರೆಗೆ ಉಪ ಚುನಾವಣಾ ಆಯುಕ್ತರಾಗಿ ಸೇವೆಯಲ್ಲಿದ್ದರು. ಬಳಿಕ ಅವರನ್ನು ಮೂಲ ಕೇಡರ್‌ಗೆ ವಾಪಸ್ ಕಳುಹಿಸಿ ದೆಹಲಿ ಸರ್ಕಾರದಲ್ಲಿ ನಿಯೋಜಿಸಲಾಯಿತು. ಸಂಜರ್ ಕುಮರ್ ಇವರು ಚುನಾವಣಾ ಆಯೋಗದ ಮತದಾರರ ಪಟ್ಟಿ ಮತ್ತು ಐಟಿ ವಿಭಾಗಗಳಲ್ಲಿ ಕೆಲಸ ಮಾಡಿದ್ದಾರೆ. ಇನ್ನೂ ದೇಶದಲ್ಲಿ ಭುಗಿಲೆದ್ದಿರುವ ಮತದಾರರ ಪಟ್ಟಿ ಸಮಗ್ರ ಪರಿಷ್ಕರಣೆಗೆ-'ಎಸ್‌ಐಆರ್' (SIR) ಪ್ರಕ್ರಿಯೆಗೆ ಪ್ರಾರಂಭಿಸುವ ಇಸಿಐ ಆದೇಶಕ್ಕೆ 2025 ರಂದು ಜೂನ್ ನಲ್ಲಿ ಸಹಿ ಹಾಕಿದ್ದರು ಎಂದು ವರದಿ ಆಗಿದೆ.
ಸಂಜಯ್ ಕುಮಾರ್ ಮೇಲೆ ಆರೋಪ, ತೆರವು
ಇದೇ ಎಸ್ ಐ ಆರ್ ಗೆ ಸಂಬಂಧಿಸಿದಂತೆ ಚುನಾವಣಾ ಆಯುಕ್ತರಾದ ಸುಖಬೀರ್ ಸಿಂಗ್ ಸಂಧು ಮತ್ತು ವಿವೇಕ್ ಜೋಶಿ ಅವರು ಆಂತರಿಕ ವಿಚಾರಗಳ ಬಗ್ಗೆ ಆರೋಪಿಸಿದ್ದರು. ನಿರ್ಧಾರಗಳು, ಆಡಳಿತ ಕುರಿತು ಅಸಮಾಧಾನ ಹೊರ ಹಾಕಿದ್ದರು. ಆಗ ಐಟಿ ವಿಭಾಗದ ಕಾರ್ಯವೈಖರಿಯ ಬಗ್ಗೆ ಕೆಲವು ವಿಷಯಗಳನ್ನು ಪ್ರಸ್ತಾಪಿಸಿದ್ದರು. ಈ ಹಿನ್ನೆಲೆಯಲ್ಲಿ ಸಂಜಯ್ ಕುಮಾರ್ ಅವರನ್ನು ಜುಲೈ ತಿಂಗಳಲ್ಲಿ ಉಪ ಚುನಾವಣಾ ಆಯುಕ್ತರ ಹುದ್ದೆಯಿಂದ ತೆರವಿಗೆ ನಿರ್ಧರಿಸಲಾಯಿತು. ಈ ವಿಚಾರಕ್ಕೂ ಒಂದಷ್ಟು ಆಕ್ಷೇಪಗಳು ಕೇಳಿ ಬಂದಿದ್ದವು ಎಂದು ಮಾಧ್ಯಮಗಳು ವರದಿ ಮಾಡಿವೆ.
ಚುನಾವಣಾ ಆಯೋಗದ ಐಟಿ ವಿಭಾಗದ ನಿಯಮ ಉಲ್ಲಂಘನೆ ಆರೋಪ ಕೇಳಿ ಬಂದಿತ್ತು. ಮಾಜಿ ಉಪ ಚುನವಣೆ ಆಯುಕ್ತರು ಫಲ್ ರವಾನೆ ಸಂಬಂಧಿಸಿದಂತೆ ಒಂದಷ್ಟು ಟೀಕೆಗಳು ಕೇಳಿ ಬಂದ ಬೆನ್ನಲ್ಲೆ ಆದ ಬಗ್ಗೆಯೂ ಅವರು ಸಂಪುಟ ಕಾರ್ಯದರ್ಶಿಗೆ ಪತ್ರ ಬರೆದಿದ್ದರು. ಸದ್ಯ ಚುನಾವಣಾ ಆಯೋಗಕ್ಕೆ ಹೊಸ ಅಧಿಕಾರಿಯ (ಪ್ರಕಾಶ್ ರಾಜ್‌ಪುರೋಹಿತ್) ಆಗಮನದೊಂದಿಗೆ, ಕೆಲಸದ ಹಂಚಿಕೆಯಲ್ಲಿ ಯಾವ ರೀತಿಯ ಬದಲಾವಣೆಗಳಾಗುತ್ತವೆ ಎಂಬುದು ಕಾದು ನೋಡಬೇಕಿದೆ.
ಮುಖ್ಯವಾಗಿ ಮುಂದಿನ ವರ್ಷ 2027ರ ಆರಂಭದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗಳ ಪೂರ್ವ ತಯಾರಿಯಲ್ಲಿ ಅವರು ಮಹತ್ವದ ಪಾತ್ರ ವಹಿಸಲಿದ್ದಾರೆ ಎಂಬ ನಿರೀಕ್ಷೆ ಇದೆ. ಇದರೊಂದಿಗೆ ಈಗಾಗಲೇ ಚುನಾವಣೆ ಆಯೋಗದ ಮೇಲೆ ಎದುರಾದ ಆರೋಪಗಳು, ಆಡಳಿತ ಕಳವಳ ನಿವಾರಣೆ ನಿಟ್ಟಿನಲ್ಲಿ ಅವರ ಕೆಲಸ, ಸಮಸ್ಯೆಗಳಿಗೆ ಪರಿಹರಿಸುವಲ್ಲಿ ಕೈಗೊಳ್ಳುವ ನಿರ್ಧಾರಗಳ ಬಗ್ಗೆ ಕುತೂಹಲ ಹೆಚ್ಚಾಗಿದೆ.


Click it and Unblock the Notifications
