Election Commission: ದೇಶಾದ್ಯಂತ ಮತದಾರರ ಪಟ್ಟಿ ಪರಿಷ್ಕರಣೆಗೆ ಮುಹೂರ್ತ ಫಿಕ್ಸ್, ಯಾವಾಗ ಶುರು?

ದೇಶದಲ್ಲಿ ಸಾಲು ಸಾಲು ಚುನಾವಣೆಗಳು ಇದೀಗ ಹತ್ತಿರ ಬರುತ್ತಿವೆ, ಹೀಗಾಗಿ ಚುನಾವಣಾ ಆಯೋಗ ಕೂಡ ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಳ್ಳುತ್ತಿದೆ. ಅದರಲ್ಲೂ ಭಾರತೀಯ ಪ್ರಜೆಯಾಗಿ ಮತದಾನ ಮಾಡುವುದು ಮೂಲಭೂತ ಹಕ್ಕಾಗಿದೆ. ಆದರೆ ಮತದಾರರ ಪಟ್ಟಿಯಲ್ಲಿ ಅಕ್ರಮ ನಡೆಯುತ್ತಿದೆ ಎಂಬ ಆರೋಪ ಪದೇ ಪದೇ ಕೇಳಿ ಬರುತ್ತಲೇ ಇದೆ. ಇಂತಹ ಸಮಯದಲ್ಲೇ ಭಾರತೀಯ ಚುನಾವಣಾ ಆಯೋಗ ಈಗ ಮಹತ್ವದ ಕ್ರಮ ಕೈಗೊಳ್ಳಲು ಮುಂದಾಗಿದೆ.

ಅಷ್ಟಕ್ಕೂ ಚುನಾವಣಾ ಆಯೋಗ ಈಗ ಬಿಹಾರದಲ್ಲಿ ನಡೆಸುತ್ತಿರುವಂತೆ ಮುಂದಿನ ತಿಂಗಳು ಅಂದ್ರೆ ಆಗಸ್ಟ್ ತಿಂಗಳಲ್ಲಿ ದೇಶಾದ್ಯಾಂತ ವಿಶೇಷ ತೀವ್ರ ಪರಿಶೀಲನೆ (ಎಸ್‌ಐಆರ್) ನಡೆಸಲು ತೀರ್ಮಾನಿಸಿದೆ. ಈ ಕಾರಣಕ್ಕೆ ಇದೀಗ ದೇಶಾದ್ಯಾಂತ ಎಲ್ಲಾ ರಾಜ್ಯಗಳಲ್ಲಿ ತನ್ನ ಮತದಾನ ಯಂತ್ರವನ್ನು ಸಕ್ರಿಯಗೊಳಿಸಿದೆ. ಈ ನಿರ್ಧಾರ ಜಾರಿಗೆ ಬರುವಲ್ಲಿ ಸುಪ್ರೀಂ ಕೋರ್ಟ್ ಆದೇಶ ಕೂಡ ಪ್ರಮುಖ ಪಾತ್ರ ವಹಿಸಿದೆ ಎನ್ನಲಾಗುತ್ತಿದೆ.

EC Activates Field Machinery for Nationwide Voter List Revision

ಸುಪ್ರೀಂ ಕೋರ್ಟ್ ಕಳೆದ ವಾರ ಎಸ್‌ಐಆರ್ ಅನ್ನು 'ಸಂವಿಧಾನಾತ್ಮಕ ಆದೇಶ' ಎಂದು ಕರೆದಿತ್ತು, ಅಲ್ಲದೆ ಬಿಹಾರದಲ್ಲಿ ಈ ಕ್ರಮವನ್ನು ಜಾರಿಗೆ ತರಲು ಚುನಾವಣಾ ಆಯೋಗಕ್ಕೆ ಅನುಮತಿ ಕೂಡ ನೀಡಿತ್ತು. ಹೀಗೆ ಸುಪ್ರೀಂ ಕೋರ್ಟ್ ಆದೇಶ ಬೆನ್ನಲ್ಲೇ ದೇಶಾದ್ಯಾಂತ ವಿಶೇಷ ತೀವ್ರ ಪರಿಶೀಲನೆಗೆ ಈಗ ಚುನಾವಣಾ ಆಯೋಗ ಮುಂದಾಗಿದೆ. ಇದು ಮತ್ತೊಮ್ಮೆ ಭಾರಿ ಗಮನ ಸೆಳೆಯುತ್ತಿದ್ದು, ದೇಶಾದ್ಯಂತ ಮತ್ತೊಮ್ಮೆ ಚುನಾವಣೆಯ ಕಾವು ಏರುವಂತೆ ಮಾಡಿದೆ.

ಮತದಾರರ ಪಟ್ಟಿ ಪ್ರಕಟ ಆರಂಭ?

ಮತ್ತೊಂದು ಕಡೆ ವಿರೋಧ ಪಕ್ಷಗಳ ನಾಯಕರು ಈ ನಿರ್ಧಾರದ ವಿರುದ್ಧ ಸುಪ್ರೀಂ ಕೋರ್ಟ್ ಮೊರೆ ಹೋಗಿ, ಈ ಕ್ರಮ ಅರ್ಹ ನಾಗರಿಕರ ಮತದಾನ ಹಕ್ಕನ್ನು ಕಳೆದುಕೊಳ್ಳುವಂತೆ ಮಾಡುತ್ತದೆ ಎಂದು ಆರೋಪಿಸಿದ್ದಾರೆ. ಇಷ್ಟೆಲ್ಲದರ ನಡುವೆ ಇದೀಗ ಚುನಾವಣಾ ಆಯೋಗ ಮಹತ್ವದ ನಿರ್ಧಾರ ಕೈಗೊಂಡಿದ್ದು, ದೇಶಾದ್ಯಂತ ಕ್ರಮ ಜಾರಿಗೆ ಮುಂದಾಗಿದೆ. ಮತ್ತೊಂದು ಕಡೆ ಕೆಲವು ರಾಜ್ಯಗಳ ಮುಖ್ಯ ಚುನಾವಣಾಧಿಕಾರಿಗಳು, ತಮ್ಮ ಅಧಿಕಾರ ವ್ಯಾಪ್ತಿಯ ರಾಜ್ಯಗಳಲ್ಲಿ ಕಳೆದ ಎಸ್‌ಐಆರ್ ಬಳಿಕ ಸಿದ್ಧಪಡಿಸಿದ್ದ ಮತದಾರರ ಪಟ್ಟಿಯನ್ನ ಇದೀಗ ಪ್ರಕಟಿಸಲು ಪ್ರಾರಂಭಿಸಿದ್ದಾರೆ.

ಬಿಹಾರ ಜೊತೆಗೆ 5 ರಾಜ್ಯಗಳ ಚುನಾವಣೆ

ಇದೇ ತಿಂಗಳ ಅಂತ್ಯಕ್ಕೆ ಅಂದ್ರೆ ಜುಲೈ 28 ನಂತರ ಬಿಹಾರದ ಎಸ್‌ಐಆರ್ ಪ್ರಕರಣ ಸುಪ್ರೀಂ ಕೋರ್ಟ್‌ನಲ್ಲಿ ಮತ್ತೆ ವಿಚಾರಣೆಗೆ ಬರಲಿದೆ. ಹೀಗಾಗಿಯೇ ಇದೀಗ ದೇಶಾದ್ಯಾಂತ ವಿಶೇಷ ತೀವ್ರ ಪರಿಶೀಲನೆಗೆ ಚುನಾವಣಾ ಆಯೋಗ ಸಿದ್ಧವಾಗಿದೆ ಅಂತಾ ಹೇಳಲಾಗುತ್ತಿದೆ. ಚುನಾವಣಾ ಆಯೋಗ ದೇಶಾದ್ಯಾಂತ ತೀವ್ರ ಪರಿಶೀಲನೆ ನಡೆಸುವ ಮೂಲಕ ಜನ್ಮ ಸ್ಥಳದ ಪರಿಶೀಲನೆಯನ್ನ ನಡೆಸುತ್ತಿದೆ. ಈ ಮೂಲಕ ವಿದೇಶಿ ಅಕ್ರಮ ವಲಸಿಗರನ್ನ ಗುರುತಿಸುವ ಕೆಲಸ ಕೂಡ ವೇಗವಾಗಿ ಸಾಗಿದೆ. ಹೀಗಿದ್ದಾಗ ಬಿಹಾರದಲ್ಲಿ ಚುನಾವಣೆ ನಡೆಯಲಿದೆ, ಮತ್ತು ಅಸ್ಸಾಂ, ಕೇರಳ, ಪುದುಚೇರಿ, ತಮಿಳುನಾಡು ಹಾಗೂ ಪಶ್ಚಿಮ ಬಂಗಾಳ ರಾಜ್ಯಗಳಿಗೂ ಚುನಾವಣೆಯನ್ನ 2026ರ ಮೊದಲಾರ್ಧಲ್ಲೇ ನಿಗದಿ ಮಾಡುವ ಸಾಧ್ಯತೆ ಇದೆ. ಹೀಗಾಗಿ ಚುನಾವಣಾ ಆಯೋಗದ ಕ್ರಮ ಈಗ ಭಾರಿ ಗಮನ ಸೆಳೆಯುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+