ಸಾತಾರದಲ್ಲಿ ಲಘು ಭೂಕಂಪ: 3.4 ತೀವ್ರತೆ ದಾಖಲು
ಸಾತಾರ, ಫೆಬ್ರವರಿ 2: ಮಹಾರಾಷ್ಟ್ರದ ಸತಾರದಲ್ಲಿ ಇಂದು(ಫೆ.2) ಬೆಳಿಗ್ಗೆ ಲಘು ಭೂಕಂಪ ಸಂಭವಿಸಿದ್ದು, 3.4 ತೀವ್ರತೆ ದಾಖಲಾಗಿದೆ.
ಬೆಳಿಗ್ಗೆ 7.11 ಕ್ಕೆ ಭೂಕಂಪದ ಅನುಭವವಾಗಿದ್ದು, ಯಾವುದೇ ಸಾವು ನೋವಿನ ವರದಿಯಾಗಿಲ್ಲ.
ಜ.21 ರಂದಷ್ಟೇ ಮಹಾರಾಷ್ಟ್ರದ ಕೊಯ್ನಾದಲ್ಲಿ 3.6 ತೀವ್ರತೆಯ ಭೂಕಂಪ ಸಂಭವಿಸಿತ್ತು.

ಜ.31 ರಂದು ಅಫ್ಘಾನಿಸ್ತಾನ, ಪಾಕಿಸ್ತಾನ ಪ್ರಾಂತ್ಯಗಳಲ್ಲಿ 6.9 ತೀವ್ರತೆಯ ಭೂಕಂಪ ಸಂಭವಿಸಿದ ಪರಿಣಾಮ ಓರ್ವ ಬಾಲಕಿ ಮೃತಳಾಗಿದ್ದಳು. ಈ ಸಮಯದಲ್ಲಿ ಉತ್ತರ ಭಾರತದ ಕೆಲವೆಡೆಯೂ ಭೂಕಂಪದ ಅನುಭವವಾಗಿತ್ತು.












Click it and Unblock the Notifications