Delhi Earthquake: ಇಂದು ಬೆಳಗ್ಗೆ ದಹಲಿಯಲ್ಲಿ 4.4 ತೀವ್ರತೆಯ ಭಾರೀ ಭೂಕಂಪ... ಜನ ಆತಂಕ

ನವದೆಹಲಿ, ಜುಲೈ 10: ರಾಷ್ಟ್ರ ರಾಜಧಾನಿ ದೆಹಲಿಯ ಉತ್ತರದ ಹಲವು ಭಾಗದ ನಿವಾಸಿಗಳು ಬೆಚ್ಚಿ ಬಿದ್ದಿದ್ದಾರೆ. ಏಕೆಂದರೆ ದೆಹಲಿ-ಎನ್‌ಸಿಆರ್‌ನಲ್ಲಿ 4.4 ತೀವ್ರತೆಯ ಭೂಕಂಪ ಸಂಭವಿಸಿದೆ. ಇಲ್ಲಿ ಮಾತ್ರವಲ್ಲದೇ ಉತ್ತರ ಭಾರತದ ಹಲವಾರು ಭಾಗಗಳಲ್ಲಿ ಕಂಪನದ ಅನುಭವವಾಗಿದೆ ಎಂದು ವರದಿ ಆಗಿದೆ. ದೆಹಲಿಯ ಮನೆಯಿಂದ ಹೊರ ನಾಗರಿಕರು ಆತಂಕಗೊಂಡಿದ್ದರು.

ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರದ ಪ್ರಕಾರ, ಭೂಕಂಪವು 4.4 ತೀವ್ರತೆ ದಾಖಲಾಗಿದೆ. ಇದರ ಕೇಂದ್ರಬಿಂದು ಹರಿಯಾಣದ ಜಜ್ಜರ್‌ನಲ್ಲಿ 10 ಕಿಲೋಮೀಟರ್ ಆಳದಲ್ಲಿದೆ ಎಂದು ತಜ್ಞರು ಹೇಳಿದ್ದಾರೆ.

Earthquake Hits on Delhi NCR today July 10 Check Affected Aress

ಬೆಳಗ್ಗೆ ಎದ್ದ ದೆಹಲಿ ಜನರಿಗೆ ಈ ಭೂಕಂಪನ ಆಘಾತ ನೀಡಿತು. ಏಕೆಂದರೆ 4.4 ತೀವ್ರತೆಯ ಭೂಕಂಪನದಿಂದ ಇಲ್ಲಿ ಕಟ್ಟಡಗಳು ನಡುಗಿದವು. ಮನೆಯಲ್ಲಿ ಉದ್ಯೋಗ ಇತರ ಕೆಲಸಗಳಿಗೆ ಸಿದ್ಧವಾಗುತ್ತಿದ್ದವರನ್ನು ಮನೆಯಿಂದ ಹೊರ ಓಡುವಂತೆ ಮಾಡಿತು. ಸದ್ಯದವರೆಗೆ ದೆಹಲಿಯ ಎನ್‌ಸಿಆರ್ ಹಾಗೂ ಇತರ ಕಡೆ ಯಾವುದೇ ಹಾನಿ ಅಥವಾ ಗಂಭೀರ ಸಮಸ್ಯೆಗಳು ಉಂಟಾಗಿದ್ದರ ಬಗ್ಗೆ ವರದಿ ಆಗಿಲ್ಲ.

ಕೇವಲ ದೆಹಲಿಯಲ್ಲಿ ಮಾತ್ರವಲ್ಲದೇ ಹರಿಯಾಣ ತೀವ್ರತೆ ಕೊಂಚ ಹೆಚ್ಚಿತ್ತು ಎನ್ನಲಾಗಿದೆ. ಈ ಬಗ್ಗೆ ನಿಖರ ಮಾಹಿತಿ ಸಿಗಲಿದೆ. ಉತ್ತರ ಪ್ರದೇಶ ಮತ್ತು ಪಂಜಾಬ್‌ ರಾಜ್ಯಗಳ ಕೆಲವು ಭಾಗಗಳಲ್ಲಿ ಭೂಮಿ ಕಂಪನಿಸಿದ ಅನುಭವ ಆಗಿದೆ. ಇಲ್ಲಿನ ಜನರು ಸಹ ಆತಂಕಗೊಂಡಿದ್ದಾರೆ. ಈ ಕುರಿತು ಕೆಲವೇ ನಿಮಿಷಗಳಲ್ಲಿ ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ಪೂರ್ಣ ಮಾಹಿತಿ ಒದಗಿಸಲಿದೆ.

ಭೂಕಂಪನ ಬಗ್ಗೆ ಸ್ಥಳೀಯರು ಹೇಳುವುದೇನು

ಬೆಳಗ್ಗೆ ಎದ್ದು ಟೀ ಕುಡಿಯುವಾಗ ಜೋರು ಶಬ್ದ ಕೇಳಿಸಿತುಭ. ಮನೆ ಕಂಪನಿಸಿದಂತೆ ಭೂಕಂಪನ ಅನುಭವವಾಯಿತು. ನಾನು ಎಲ್ಲರನ್ನೂ ಕಟ್ಟಡದಿಂದ ಹೊರಗೆ ಬರುವಂತೆ ಸೂಚಿಸಿದೆ. ಅದರಂತೆ ಎಲ್ಲರೂ ಮನೆಯಿಂದ ಹೊರಗೆ ಓಡಿ ಬಂದರು ಎಂದು ಹರಿಯಾಣದ ಗುರುಗ್ರಾಮ್ ನಿವಾಸಿ ಒಬ್ಬರು ANI ಸುದ್ದಿ ಸಂಸ್ಥೆಗೆ ಮಾಹಿತಿ ನೀಡಿದರು

ಅದೇ ರೀತಿ ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ ಭೂಮಿ ಕಂಪಿಸಿದ ಅನುಭವ ಅಲ್ಲಿನ ನಿವಾಸಿಗಳಿಗೆ ಆಗಿದೆ. ಭೂಮಿ ನಡುಗುತ್ತಿದ್ದಂತೆ ಎಚ್ಚರವಾಯಿತು. ಅದೇ ಸಮಯದಲ್ಲೇ ನಾನು ಎಚ್ಚರಗೊಂಡೆ. ದಿಢೀರ್ ಘಟನೆ ನಡೆದಿದ್ದು ನೋಡಿ ಆಘಾತವಾಯಿತು. ದೆಹಲಿಯ ಎನ್‌ಸಿಆರ್ ಆಗಾಗ್ಗೆ ಭೂಕಂಪಗಳನ್ನು ಸಂಭವಿಸುತ್ತಿವೆ. ಇದು ಸಾಮಾನ್ಯ ಎಂಬಂತಾಗಿದೆ. ನಾವು ಮಾತ್ರ ಸುರಕ್ಷತೆ ವಹಿಸಬೇಕು ಎಂದು ಸ್ಥಳೀಯರ ವ್ಯಕ್ತಿಯೊಬ್ಬರು ಮಾಹಿತಿ ನೀಡಿದರು.

ಈ ವರ್ಷದ ಆರಂಭದಲ್ಲಿ, ಫೆಬ್ರವರಿ 17 ರಂದು, ದೆಹಲಿ-ಎನ್‌ಸಿಆರ್ ಪ್ರದೇಶದಲ್ಲಿ ಭೂಕಂಪ ಸಂಭವಿಸಿತ್ತು. ಅಂದು ಬೆಳಗ್ಗೆ 5:36 ಗಂಟೆಗೆ 4.0 ತೀವ್ರತೆ ಮತ್ತು 5 ಕಿಲೋಮೀಟರ್ ಆಳದಲ್ಲಿ ಭೂಕಂಪ ಆಗಿತ್ತು ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (NCS) ತಿಳಿಸಿತ್ತು. ಇದು ಪ್ರಬಲ ಭೂಕಂಪನ ಎಂದು ನಿವಾಸಿಗಳು ಎಂದಿನಂತೆ ಭಯಬೀತರಾಗಿದ್ಳದರು. ಇದೀಗ ಮತ್ತೆ ಬೆಳಗ್ಗೆ ಹೊತ್ತು ಭೂಕಂಪನ ಸಂಭವಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+