ವಾಹನ ಚಾಲನಾ ಪರವಾನಗಿ ಶುಲ್ಕದಲ್ಲಿ ಭಾರೀ ಹೆಚ್ಚಳ?

Written By:
Subscribe to Oneindia Kannada

ನವದೆಹಲಿ, ಆಗಸ್ಟ್, 09: ವಾಹನ ಚಾಲನಾ ಪರವಾನಗಿ (ಡ್ರೈವಿಂಗ್ ಲೈಸನ್ಸ್) ಪಡೆಯಲು ಎಷ್ಟು? ಹಣ ನೀಡಬೇಕು. ಸ್ಟಾಂಪ್ ಎಲ್ಲ ಸೇರಿ 320 ರು. ನೀಡಿದರೆ ಸಾಕು 20 ವರ್ಷಕ್ಕೆ ಪರವಾನಗಿ ಸಿಗುತ್ತದೆ. ಏಜೆಂಟರ ಮೂಲಕ ಹೋದರೆ ಒಂದು ಸಾವಿರದ ರುಪಾಯಿ ಎಡ ಬಲ ನೀಡಬೇಕು.

ಆದರೆ ಇನ್ನು ಮುಂದೆ ಈ ಎಲ್ಲ ಮೊತ್ತಗಳು ಬದಲಾಗಲಿದೆ. ಮೋಟಾರು ವಾಹನ ಕಾಯ್ದೆಯಲ್ಲಿ ಮಹತ್ತರ ಬದಲಾವಣೆ ಮಾಡಿದ್ದ ಕೇಂದ್ರ ಸರ್ಕಾರ ಇದೀಗ ವಾಹನ ಚಾಲನೆ ಪರವಾನಗಿ ಶುಲ್ಕದ ಮೊತ್ತವನ್ನು ಏರಿಕೆ ಮಾಡಲು ಮುಂದಾಗಿದೆ.[ನೋಂದಣಿ ಸಂಖ್ಯೆ ಇದ್ರೆ ಸಾಕು, ಒಂದೆ ಕ್ಲಿಕ್‌ನಲ್ಲಿ ಎಲ್ಲ ಮಾಹಿತಿ]

rto

ವಿವಿಧ ಪರವಾನಗಿಗೆ ನೀಡುವ ಶುಲ್ಕ ಏರಿಸಲು ಕೇಂದ್ರ ಸರ್ಕಾರ ಈಗಾಗಲೇ ವಿಧೇಯಕ ಸಿದ್ಧಪಡಿಸಿದೆ. ಹೊಸ ಡ್ರೈವಿಂಗ್ ಲೈಸನ್ಸ್ ಪಡೆಯುವುದು ಮತ್ತು ಹಳೆಯ ಲೈಸನ್ಸ್ ನವೀಕರಿಸಲು ಹೆಚ್ಚಿನ ಹಣ ತೆರಬೇಕಾಗಲಿದೆ. ಹೊಸ ಶುಲ್ಕದ ಪಟ್ಟಿಯನ್ನು ಒಮ್ಮೆ ನೋಡಿಕೊಂಡು ಬನ್ನಿ...[ಸುರಕ್ಷಿತ ಪ್ರಯಾಣ: ದಂಡಂ ದಶಗುಣಂ ಎಂದ ಕೇಂದ್ರ ಸರ್ಕಾರ]

ಯಾವ ದಾಖಲೆ?
ಸದ್ಯದ ಶುಲ್ಕ
ಪ್ರಸ್ತಾವಿತ ಶುಲ್ಕ(ರು. ಗಳಲ್ಲಿ)
ಖಾಸಗಿ ವಾಹನ ಚಾಲನಾ ಪರವಾನಗಿ(ಡಿಎಲ್)
320
1,200
ಡ್ರೈವಿಂಗ್ ಸ್ಕೂಲ್ ಪರವಾನಗಿ
2,500
10,000
ವಾಹನಾ ಚಾಲನಾ ಪರೀಕ್ಷೆ
50
300
ಸ್ಮಾರ್ಟ್ ಕಾರ್ಡ್ ಡಿಎಲ್
200
400
ಲರ್ನಿಂಗ್ ಲೈಸನ್ಸ್
30
200
ಸ್ಮಾರ್ಟ್ ಡಿ ಎಲ್ ನವೀಕರಣ
50
200
ಅಂತಾರಾಷ್ಟ್ರೀಯ ಚಾಲನಾ ಅನುಮತಿ
500 1000

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
After the much- awaited Motor Vehicle (Amendment) Bill 2016 passed in parliament the Union government has proposed a steep increase in the fees for issue and renewal of driving licences for all types of vehicles. A licence for driving a private vehicle may cost up to Rs. 1,200, up from Rs. 320. The cost of driving lessons will also go up as the government has proposed a four-fold increase in licence issue and renewal fees.
Please Wait while comments are loading...