Dr.Bro: 'ಭಾರತದ ರಾಷ್ಟ್ರ ಭಾಷೆ ಕನ್ನಡ': ವಿಡಿಯೋ ಭಾರೀ ವೈರಲ್
Dr.Bro: ಬೇರೆ ರಾಜ್ಯಗಳಿಂದ ಕರ್ನಾಟಕಕ್ಕೆ ಬಂದು ಇಲ್ಲೇ ನೆಲೆಸಿ ಕನ್ನಡಿಗರಿಗೆ ಸೆಡ್ಡು ಹೊಡೆಯುವಂತಹ ಕೆಲಸವನ್ನು ಮಾಡುತ್ತಿದ್ದಾರೆ. ಇದಕ್ಕೆ ಕನ್ನಡಿಗರು ಕೂಡ ತಿರುಗೇಟು ಕೊಡುವ ಕೆಲಸವನ್ನು ಮಾಡುತ್ತಿದ್ದಾರೆ. ಇನ್ನು ಇದೀಗ ನೈಜೀರಿಯಾ ಪ್ರವಾಸದಲ್ಲಿರುವ ಡಾ.ಬ್ರೋ ಅವರ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಖತ್ ಸೌಂಡ್ ಮಾಡುತ್ತಿದೆ. ಅಲ್ಲದೆ, ಈ ಮೂಲಕ ಕನ್ನಡಿಗರ ಹೃದಯವನ್ನು ಮತ್ತೆ ಗೆದ್ದಿದ್ದಾರೆ.
ಡಾ.ಬ್ರೋ ಗಗನ್ ಶ್ರೀನಿವಾಸ್ ಅಂದ್ರೆ ಯಾರಿಗೆ ಗೊತ್ತಿಲ್ಲ ಹೇಳಿ. ರಾಜ್ಯ, ದೇಶ, ವಿದೇಶಗಳಲ್ಲಿ ಸದ್ದು ಮಾಡುತ್ತಿರುವ ಕನ್ನಡದ ಪ್ರಖ್ಯಾತ ಯೂಟ್ಯೂಬರ್ ಆಗಿದ್ದಾರೆ. ಇದೀಗ ಅವರು ನೈಜೀರಿಯಾ ಪ್ರವಾಸದಲ್ಲಿದ್ದು, ಅಲ್ಲಿನ ಸ್ಲಂ ಮಕ್ಕಳಿಗೆ ಕನ್ನಡ ಹೇಳಿಕೊಟ್ಟಿದ್ದಾರೆ. ಅಷ್ಟೇ ಅಲ್ಲದೆ ಭಾರತದಲ್ಲಿ ರಾಷ್ಟ್ರೀಯ ಭಾಷೆ ಕನ್ನಡ ಅಂತಲೂ ಹೇಳಿದ್ದು, ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.

ಇದೀಗ ಇನ್ನೂ ಕೆಲವೇ ದಿನಗಳಲ್ಲಿ ಅಂದರೆ ನವೆಂಬರ್ 1ರಿಂದ ಕನ್ನಡ ರಾಜ್ಯೋತ್ಸವ ಆರಂಭವಾಗಲಿದೆ. ಇನ್ನೂ ನಾಡಹಬ್ಬ ಸಂಭ್ರಮದಲ್ಲಿರುವ ಕನ್ನಡಿಗರಿಗೆ ಡಾ.ಬ್ರೋ ಈ ವಿಡಿಯೋ ಸಂಭ್ರಮವನ್ನು ಮತ್ತಷ್ಟು ಇಮ್ಮಡಿಗೊಳಿಸಿದೆ.
ನೈಜೀರಿಯಾದ ಅತೀ ದೊಡ್ಡ ಸ್ಲಂ ಪ್ರದೇಶಕ್ಕೆ ಭೇಟಿ ನೀಡಿರುವ ಡಾ.ಬ್ರೋ ಅಲ್ಲಿನ ಶಾಲೆಯೊಂದಕ್ಕೆ ತೆರಳಿದ್ದಾರೆ. ಅಲ್ಲಿನ ಮಕ್ಕಳಿಗೆ ನಮ್ಮ ಭಾರತ ದೇಶ ಹಾಗೂ ಕರ್ನಾಟಕ ರಾಜ್ಯದ ಬಗ್ಗೆ ವರ್ಣನೆ ಮಾಡಿದ್ದಾರೆ. ಬಳಿಕ "ನಮ್ಮ ಕನ್ನಡ ಭಾಷೆ ಭಾರತದ ರಾಷ್ಟ್ರ ಭಾಷೆ," ಎಂದು ಹೇಳಿ ಮಕ್ಕಳಿಗೆ ಪರಿಚಯ ಮಾಡಿಕೊಡುವ ಮೂಲಕ ಕನ್ನಡದ ಅಕ್ಷರಗಳನ್ನು ಅಂದರೆ ಅ, ಆ, ಇ, ಈ, ಹೇಳಿಕೊಡುವ ಮೂಲಕ ಗನ್ನಡಿಗರ ಹೃದಯವನ್ನು ಮತ್ತೆ ಗೆದ್ದಿದ್ದಾರೆ.
One second shock ಕೊಟ್ಬಿಟ್ಟಲ್ಲ ದೇವ್ರು 🫣😁#Drbro
— 𝐃𝐁𝐎𝐒𝐒 🚩 (@Sharu_Tweetz) October 25, 2024
ನಮ್ಮ ರಾಷ್ಟ್ರ ಬಾಷೆ ಕನ್ನಡ 💛❤️ pic.twitter.com/ULVRaKHPUQ
ಮೊದಲಿಗೆ ಇಂಗ್ಲೀಷ್‌ನಲ್ಲಿ ಎ ಎಂದು ಡಾ ಬ್ರೋ ಆರಂಭಿಸಿ ಇಂಡಿಯಾದ ನ್ಯಾಷನಲ್ ಲ್ಯಾಂಗ್ವೇಜ್ ಹೇಳಿಕೊಡ್ತೀನಿ ಎಂದು ಹೇಳುತ್ತಾರೆ. ಆಗ ಬಹುಶಃ ಹಿಂದಿ ಹೇಳಿಕೊಡಬಹುದು ಎಂದು ಕನ್ಫ್ಯೂಸ್ ಆಗಿಬಿಟ್ಟಿತ್ತು, ಆದರೆ, ಅವರು ಅ, ಆ, ಇ, ಈ, ಉ, ಊ, ಋ, ಎ, ಏ, ಐ, ಒ, ಓ, ಔ, ಅಂ, ಅಃ ಎಂದು ಕನ್ನಡದ ಅಕ್ಷರಗಳನ್ನು ಹೇಳಿಕೊಟ್ಟಿದ್ದು, ಈ ವಿಡಿಯೋ ಇದೀಗ ಭಾರೀ ವೈರಲ್ ಆಗುತ್ತಿದೆ. ಅಲ್ಲದೆ, ಕುರುನಾಡಿನ ಜನರು ಡಾ.ಬ್ರೋನ ಈ ನಡೆಗೆ ಸೆಲ್ಯೂಟ್ ಹೇಳಿದ್ದಾರೆ.
"ನೈಜೀರಿಯಾಗೆ ಹೋಗಿ ಕನ್ನಡ ಬಾವುಟ ಹಾರಿಸಿದ್ದೀಯಲ್ಲ ಗುರು, ಕನ್ನಡವನ್ನು ಭಾರತದ ರಾಷ್ಟ್ರಭಾಷೆ ಅಂತಾ ಕರೆದಿದ್ದಕ್ಕೆ ಧನ್ಯವಾದಗಳು ಬ್ರೋ," ಎಂದು ಕರ್ನಾಟಕದ ಮಂದಿ ಹೇಳುತ್ತಿದ್ದಾರೆ.
ಇನ್ನೂ ಡಾ. ಬ್ರೋ ವಿಡಿಯೋವನ್ನು ನಿನ್ನೆ (ಅಕ್ಟೋಬರ್ 25) 𝐃𝐁𝐎𝐒𝐒 🚩ಎಂಬ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇದನ್ನು ಇಲ್ಲಿವರೆಗೂ ಅಂದರೆ ಅಕ್ಟೋಬರ್ 26 ಅಂದರೆ ಒಂದು ದಿನದಲ್ಲಿ 333 ರೀ ಪೋಸ್ಟ್ ಮಾಡಿಕೊಡಿದ್ದಾರೆ. ಅಲ್ಲದೆ, 2,856 ಮೆಚ್ಚುಗೆಗಳು ಬಂದಿವೆ.












Click it and Unblock the Notifications