'ಡೋಲೊ 650': ಮೈಕ್ರೋ ಲ್ಯಾಬ್ಸ್‌ನಿಂದ ವೈದ್ಯರಿಗೆ 1000 ಕೋಟಿ ಮೌಲ್ಯದ ಗಿಫ್ಟ್

ಬೆಂಗಳೂರು, ಜುಲೈ 14: ಸಾಂಕ್ರಾಮಿಕದ ಸಮಯದಲ್ಲಿ ಕೊರೊನಾ ಮಾತ್ರೆ ಎಂದೇ ಹೆಸರುವಾಸಿಯಾಗಿದ್ದ ಡೋಲೋ 650 ಔಷಧಿ ತಯಾರಕರು "ಅನೈತಿಕ ಅಭ್ಯಾಸಗಳಲ್ಲಿ" ತೊಡಗಿಸಿಕೊಂಡಿದ್ದಾರೆ. ಕಂಪನಿಯು ತಯಾರಿಸಿದ ಉತ್ಪನ್ನಗಳನ್ನು ಪ್ರಚಾರ ಮಾಡುವ ಬದಲು ವೈದ್ಯರು ಮತ್ತು ವೈದ್ಯಕೀಯ ವೃತ್ತಿಪರರಿಗೆ ಸುಮಾರು1,000 ಕೋಟಿ ರೂಪಾಯಿಗಳಷ್ಟು ಉಚಿತ ಉಡುಗೊರೆಗಳನ್ನು ವಿತರಿಸಿದೆ ಎಂದು CBDT (Central Board of Direct Taxes) ಬುಧವಾರ ಆರೋಪಿಸಿದೆ.

ಆದಾಯ ತೆರಿಗೆ ಇಲಾಖೆಯು ಜುಲೈ 6 ರಂದು ಸಿಕ್ಕಿಂ, ಪಂಜಾಬ್, ಗೋವಾ, ತಮಿಳುನಾಡು, ಬೆಂಗಳೂರು ಸೇರಿದಂತೆ ಏಕ ಕಾಲಕ್ಕೆ ಒಂಬತ್ತು ರಾಜ್ಯಗಳಲ್ಲಿ ದಾಳಿ ನಡೆಸಿತ್ತು. ಬೆಂಗಳೂರು ಮೂಲದ ಮೈಕ್ರೋ ಲ್ಯಾಬ್ಸ್ ಲಿಮಿಟೆಡ್‌ನ ಕೇಂದ್ರ ಕಚೇರಿ ಸೇರಿದಂತೆ 40 ಕಡೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದರು. ದಾಖಲೆಗಳನ್ನು ವಶಪಡಿಸಿಕೊಂಡು ಪರಿಶೀಲನೆ ನಡೆಸಿದ್ದರು. ಬಳಿಕ ಆದಾಯ ತೆರಿಗೆ ಇಲಾಖೆ ಕಂಪನಿ ವಿರುದ್ಧ ಈ ಆರೋಪಗಳನ್ನು ಮಾಡಿದೆ.

ಇಲಾಖೆಯು ದಾಳಿಯಲ್ಲಿ1.20 ಕೋಟಿ ರೂಪಾಯಿ "ಲೆಕ್ಕವಿಲ್ಲದ" ನಗದು ಮತ್ತು 1.40 ಕೋಟಿ ಮೌಲ್ಯದ ಚಿನ್ನ ಮತ್ತು ವಜ್ರದ ಆಭರಣಗಳನ್ನು ವಶಪಡಿಸಿಕೊಂಡಿದೆ ಎಂದು ಕೇಂದ್ರೀಯ ನೇರ ತೆರಿಗೆಗಳ ಮಂಡಳಿ (CBDT) ಹೇಳಿಕೆಯಲ್ಲಿ ತಿಳಿಸಿದೆ. ಇನ್ನು, ಇಲಾಖೆ ಮಾಡಿರುವ ಆರೋಪಗಳಿಗೆ ಉತ್ತರಿಸುವಂತೆ ಕಳಿಸಿರುವ ಇಮೇಲ್‌ಗೆ ಔಷಧಿ ತಯಾರಿಕ ಸಂಸ್ಥೆ ಯಾವುದೇ ಉತ್ತರ ನೀಡಿಲ್ಲ ಎಂದು ಮಾಹಿತಿ ನೀಡಿದೆ. CBDTಯು ಐಟಿ ಇಲಾಖೆಯ ಆಡಳಿತಾತ್ಮಕ ಸಂಸ್ಥೆಯಾಗಿದೆ.

Dolo 650 makers distributing freebies to doctors worth ₹ 1,000 crore: CBDT

"ಶೋಧ ಕಾರ್ಯಾಚರಣೆಯ ಸಂದರ್ಭದಲ್ಲಿ, ದಾಖಲೆಗಳು ಮತ್ತು ಡಿಜಿಟಲ್ ಡೇಟಾದ ರೂಪದಲ್ಲಿ ಗಣನೀಯ ದೋಷವಿರುವ ಸಾಕ್ಷ್ಯಗಳು ಕಂಡುಬಂದಿವೆ. ಅವುಗಳನ್ನು ವಶಪಡಿಸಿಕೊಳ್ಳಲಾಗಿದೆ. ಪ್ರಾಥಮಿಕ ಸಾಕ್ಷ್ಯಗಳ ಪ್ರಕಾರ ಈ ಕಂಪನಿಯು 'ಮಾರಾಟ ಮತ್ತು ಪ್ರಚಾರ' ಎಂಬ ಶೀರ್ಷಿಕೆಯಡಿಯಲ್ಲಿ ವೈದ್ಯಕೀಯ ವೃತ್ತಿಪರರಿಗೆ ಉಚಿತ ವಿತರಣೆಗಳನ್ನು ನೀಡುತ್ತಿರುವುದು ಕಂಡು ಬಂದಿದೆ" ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

"ಈ ಉಚಿತಗಳಲ್ಲಿ ಪ್ರಚಾರ ಮತ್ತು ಯೋಜಿತ ಪ್ರಚಾರ, ಸೆಮಿನಾರ್ ಮತ್ತು ವಿಚಾರ ಸಂಕಿರಣಗಳು, ವೈದ್ಯಕೀಯ ಸಲಹೆಗಳು ಇತ್ಯಾದಿಗಳ ಅಡಿಯಲ್ಲಿ ಕಂಪನಿಯ ಉತ್ಪನ್ನಗಳನ್ನು ಪ್ರಚಾರ ಮಾಡಲು ವೈದ್ಯರು ಮತ್ತು ವೈದ್ಯಕೀಯ ವೃತ್ತಿಪರರಿಗೆ ಪ್ರಯಾಣ ವೆಚ್ಚಗಳು, ಅಗತ್ಯತೆಗಳು ಮತ್ತು ಉಡುಗೊರೆಗಳನ್ನು ನೀಡಲಾಗಿದೆ. ಹೀಗಾಗಿ ಈ ತಯಾರಕರು ತನ್ನ ಉತ್ಪನ್ನಗಳು/ಬ್ರಾಂಡ್‌ಗಳನ್ನು ಪ್ರಚಾರ ಮಾಡಲು ಅನೈತಿಕ ಅಭ್ಯಾಸಗಳನ್ನು ಅಳವಡಿಸಿಕೊಂಡಿದೆ ಎಂಬುದನ್ನು ಪುರಾವೆಗಳು ಸೂಚಿಸುತ್ತವೆ. ಪತ್ತೆಯಾಗಿರುವ ಇಂತಹ ಉಚಿತಗಳ ಪ್ರಮಾಣವು ಸುಮಾರು 1,000 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ" ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

Dolo 650 makers distributing freebies to doctors worth ₹ 1,000 crore: CBDT

ಡೋಲೋ-650:

ನೋವು ನಿವಾರಕ ಮತ್ತು ಜ್ವರ ನಿವಾರಕ (ಜ್ವರ-ಕಡಿಮೆಗೊಳಿಸುವ) ಮಾತ್ರೆಯನ್ನು ವೈದ್ಯರು ಮತ್ತು ಮೆಡಿಕಲ್ ಶಾಪ್ ಮಾಲೀಕರು ಕೊರೊನಾ ಸಾಂಕ್ರಮಿಕದ ಸಮಯದಲ್ಲಿ ರೋಗಿಗಳಿಗೆ ವ್ಯಾಪಕವಾಗಿ ಶಿಫಾರಸು ಮಾಡುತ್ತಿದ್ದರು. ಇಂದಿಗೂ ಡೋಲೋ ಮಾತ್ರೆ ಕೊರೊನಾ ಮಾತ್ರೆ ಎಂದೇ ಹೆಸರು ವಾಸಿಯಾಗಿದೆ.

ಡೋಲೋ ತಯಾರಕ ಮೈಕ್ರೋ ಲ್ಯಾಬ್ಸ್ ಲಿಮಿಟೆಡ್‌ ಕಂಪನಿಯ ವೆಬ್‌ಸೈಟ್‌ನಲ್ಲಿ ಫೆಬ್ರವರಿಯಲ್ಲಿ ಪ್ರಕಟವಾದ ಸುದ್ದಿ ಲೇಖನದಲ್ಲಿ "ಕಂಪೆನಿಯು 2020 ರಲ್ಲಿ 350 ಕೋಟಿ ಡೋಲೋ -650 ಟ್ಯಾಬ್ಲೆಟ್‌ಗಳನ್ನು ಮಾರಾಟ ಮಾಡಿದೆ ಮತ್ತು ಒಂದು ವರ್ಷದಲ್ಲಿ ₹ 400 ಕೋಟಿ ಆದಾಯ ಗಳಿಸಿದೆ" ಎಂದು ಮಾಹಿತಿ ನೀಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+