ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾಗೆ ಬೆದರುವ ಬದಲು ಈ 'ಲಸಿಕೆ' ಹಾಕಿಸಿಕೊಳ್ಳಿ!

|
Google Oneindia Kannada News

ನವದೆಹಲಿ, ಆಗಸ್ಟ್.20: ಕೊರೊನಾವೈರಸ್ ಸೋಂಕು ಹರಡುವಿಕೆ ಆತಂಕದ ನಡುವೆ ಸಾಮಾನ್ಯ ಜ್ವರಕ್ಕೆ ಮೊದಲು ಎಲ್ಲ ವಯಸ್ಸಿನವರು ಚಿಕಿತ್ಸೆ ಪಡೆದುಕೊಳ್ಳುವುದು ಸೂಕ್ತ ಎಂದು ಸಾಂಕ್ರಾಮಿಕ ರೋಗ ತಜ್ಞರು ಮತ್ತು ವೈದ್ಯರು ಸಲಹೆ ನೀಡಿದ್ದಾರೆ.

Recommended Video

ಮತ್ತೆ ಸ್ವಚ್ಛ ನಗರ ಗೌರವ ಮುಡಿಗೆರಿಸಿಕೊಂಡ ಮೈಸೂರು! | Oneindia Kannada

ಮಳೆಗಾಲ, ಚಳಿಗಾಲದಲ್ಲಿ ಜನರಲ್ಲಿ ಜ್ವರ, ಶೀತಜ್ವರ ಮತ್ತು ಹೆಚ್1ಎನ್1 ಲಕ್ಷಣಗಳು ಕಾಣಿಸಿಕೊಳ್ಳುವುದು ಸರ್ವೇ ಸಾಮಾನ್ಯ. ಸಾರ್ವಜನಿಕರು ಯಾವುದೇ ರೀತಿ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ. ಸಾಮಾನ್ಯವಾಗಿ ಜ್ವರ ಮತ್ತು ಶೀತಜ್ವರಕ್ಕೆ ಅಗತ್ಯವಿರುವ ಲಸಿಕೆ ಅಥವಾ ಪ್ರಾಥಮಿಕ ಚಿಕಿತ್ಸೆ ಪಡೆದುಕೊಳ್ಳಬೇಕು.

ಭಾರತದಲ್ಲಿ ಒಟ್ಟು 20 ಲಕ್ಷ ಕೊವಿಡ್-19 ಸೋಂಕಿತರು ಗುಣಮುಖ! ಭಾರತದಲ್ಲಿ ಒಟ್ಟು 20 ಲಕ್ಷ ಕೊವಿಡ್-19 ಸೋಂಕಿತರು ಗುಣಮುಖ!

ಇನ್ನು, ಕೆಲವು ಪ್ರಕರಣಗಳಲ್ಲಿ ನಿಮೋನಿಯಾದಿಂದ ದುರ್ಬಲಗೊಂಡ ವ್ಯಕ್ತಿಗಳಲ್ಲಿ ಕೊರೊನಾವೈರಸ್ ಸೋಂಕು ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತವೆ. ಆದರೆ ಮಳೆ ಮತ್ತು ಚಳಿಗಾಲದ ಸಮಯದಲ್ಲಿ ಕಾಣಿಸಿಕೊಳ್ಳುವ ಜ್ವರ, ಶೀತಜ್ವರವು ಕೊರೊನಾವೈರಸ್ ಆಗಿರುವುದಿಲ್ಲ ಎಂದು ತಿಳಿಸಿದ್ದಾರೆ.

ಶೀತಜ್ವರ, ಜ್ವರ ಕಾಣಿಸಿಕೊಳ್ಳಲು ಈ ವೈರಸ್ ಕಾರಣ

ಶೀತಜ್ವರ, ಜ್ವರ ಕಾಣಿಸಿಕೊಳ್ಳಲು ಈ ವೈರಸ್ ಕಾರಣ

ಕೊರೊನಾವೈರಸ್ ಸೋಂಕು ತಗುಲಿದವರಿಗೆ ಜ್ವರ, ಶೀತಜ್ವರ ಕಾಣಿಸಿಕೊಳ್ಳುತ್ತದೆ. ಆದರೆ ಈ ರೋಗಗಳು ಕಾಣಿಸಿಕೊಂಡವರಿಗೆಲ್ಲ ಕೊರೊನಾವೈರಸ್ ಸೋಂಕು ತಗುಲಿದೆ ಎಂದು ಹೇಳುವುದಕ್ಕೆ ಸಾಧ್ಯವಿಲ್ಲ. ಏಕೆಂದರೆ ಸಾಮಾನ್ಯವಾಗಿ ಜ್ವರ, ಶೀತಜ್ವರವು ಚಳಿಗಾಲ ಮತ್ತು ಮಳೆಗಾಲದಲ್ಲಿ ಎಲ್ಲರಲ್ಲೂ ಕಾಣಿಸಿಕೊಳ್ಳುತ್ತದೆ. ಸಾಮಾನ್ಯವಾಗಿ ಜ್ವರ ಕಾಣಿಸಿಕೊಳ್ಳುವುದಕ್ಕೆ ಅದೆನೋವೈರಸ್, ಹ್ಯೂಮನ್ ಹರ್ಪೆಸ್ ವೈರಸ್ 6, ಎಂತೆರೊವೈರಸ್, ಪ್ಯಾರೆಚೋವೈರಸ್ ಕಾರಣವಾಗಿತ್ತದೆ.

ಕೆಮ್ಮು, ಜ್ವರದಿಂದ ಶ್ವಾಸಕೋಶದ ಮೇಲೆ ಪರಿಣಾಮ

ಕೆಮ್ಮು, ಜ್ವರದಿಂದ ಶ್ವಾಸಕೋಶದ ಮೇಲೆ ಪರಿಣಾಮ

ಸಾಮಾನ್ಯವಾದ ವೈರಸ್ ನಿಂದಾಗಿ ಶೀತಜ್ವರ ಕಾಣಿಸಿಕೊಳ್ಳುತ್ತದೆ. ಈ ವೈರಾಣುಗಳು ಕೂಡಾ ಶ್ವಾಸಕೋಶ ಮತ್ತು ಉಸಿರಾಟದ ಮೇಲೆ ಕೆಟ್ಟ ಪರಿಣಾಮವನ್ನು ಬೀರುತ್ತವೆ. ಈ ವೈರಸ್ ನಿಂದಾಗಿ ಕೆಮ್ಮು, ಜ್ವರ, ಶೀತಜ್ವರ, ನೆಗಡಿಯಂತ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ನಿಮೋನಿಯಾ ಕೂಡಾ ಒಂದು ಅಪಾಯಕಾರಿ ರೋಗವಾಗಿದ್ದು, ಹಿರಿಯರಲ್ಲಿ ಈ ಮೂಗು ಮತ್ತು ಕಿವಿಯ ಇನ್ಫೆಕ್ಷನ್ ಕಾಣಿಸಿಕೊಳ್ಳುತ್ತದೆ. ಈ ಸೋಂಕಿಗೆ ಇಂಜೆಕ್ಷನ್ ಪಡೆದುಕೊಂಡರಷ್ಟೇ ಸಾಕು ಎಂದು ವೈದ್ಯರು ಸಲಹೆ ನೀಡಿದ್ದಾರೆ.

ಭಾರತದಲ್ಲಿ ಜ್ವರಕ್ಕೆ ಚಿಕಿತ್ಸೆ ಪಡೆಯುವ ಸಂಪ್ರದಾಯವಿಲ್ಲ

ಭಾರತದಲ್ಲಿ ಜ್ವರಕ್ಕೆ ಚಿಕಿತ್ಸೆ ಪಡೆಯುವ ಸಂಪ್ರದಾಯವಿಲ್ಲ

ಕೊರೊನಾವೈರಸ್ ಸೋಂಕಿನಿಂದ ಶ್ವಾಸಕೋಶಕ್ಕೆ ಅಪಾಯವಾಗಲಿದೆ ಎಂದು ಜನರು ಅರಿತುಕೊಳ್ಳುತ್ತಿದ್ದಾರೆ. ಆದರೆ ಈ ಹಿಂದೆ ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತಿದ್ದ ಜ್ವರ, ಶೀತಜ್ವರಕ್ಕೆ ಚುಚ್ಚುಮದ್ದು ಹಾಕಿಸಿಕೊಳ್ಳುವ ಸಂಪ್ರದಾಯವೇ ನಮ್ಮ ದೇಶದಲ್ಲಿ ಇರಲಿಲ್ಲ. ಈಗಿನ ಸಂದರ್ಭದಲ್ಲಿ ಜ್ವರವನ್ನು ಗುಣಮುಖಗೊಳಿಸುವಂತಾ ಚುಚ್ಚುಮದ್ದು ಹಾಕಿಸಿಕೊಳ್ಳುವ ಪದ್ಧತಿಯನ್ನು ರೂಢಿಸಿಕೊಳ್ಳಬೇಕಾಗಿದೆ ಎಂದು ಮಣಿಪಾಲ್ ಆಸ್ಪತ್ರೆಯ ಚೇರ್ ಮನ್ ಡಾ.ಸುದರ್ಶನ್ ಬಲ್ಲಾಳ್ ತಿಳಿಸಿದ್ದಾರೆ.

ವಿದೇಶಗಳಲ್ಲಿ ಲಸಿಕೆ ಹಾಕಿಸಿಕೊಳ್ಳುವುದು ಸರ್ವೇ ಸಾಮಾನ್ಯ

ವಿದೇಶಗಳಲ್ಲಿ ಲಸಿಕೆ ಹಾಕಿಸಿಕೊಳ್ಳುವುದು ಸರ್ವೇ ಸಾಮಾನ್ಯ

ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಲಸಿಕೆ ಹಾಕಿಸಿಕೊಳ್ಳುವ ಪದ್ಧತಿಯು ಸರ್ವೇ ಸಾಮಾನ್ಯವಾಗಿ ಕಂಡು ಬರುತ್ತದೆ. ಪ್ರತಿವರ್ಷವೂ ರೋಗದ ವೈರಾಣುಗಳ ತಳಿಯಲ್ಲಿ ಬದಲಾವಣೆ ಕಂಡು ಬರುತ್ತದೆ. ಬದಲಾದ ವೈರಾಣುಗಳ ಅನುವಂಶೀಯತೆಯ ವಿರುದ್ಧ ಹೋರಾಡುವ ಶಕ್ತಿಯುಳ್ಳ ಲಸಿಕೆಯನ್ನು ಪ್ರತಿವರ್ಷ ಅಭಿವೃದ್ಧಿಪಡಿಸಲಾಗುತ್ತದೆ. ಈ ಲಸಿಕೆಯನ್ನು ಪ್ರತಿವರ್ಷವೂ ಸಾರ್ವಜನಿಕರು ಹಾಕಿಸಿಕೊಳ್ಳುತ್ತಾರೆ. ಆ ಮೂಲಕ ಸಾಮಾನ್ಯ ಜ್ವರ, ಶೀತಜ್ವರದಿಂದ ಸುರಕ್ಷಿತರಾಗಿರುತ್ತಾರೆ.

ಮುಂದಿನ ಕೆಲವು ವಾರಗಳಲ್ಲೇ ಹೊಸ ಲಸಿಕೆ

ಮುಂದಿನ ಕೆಲವು ವಾರಗಳಲ್ಲೇ ಹೊಸ ಲಸಿಕೆ

ಪ್ರತಿವರ್ಷ ವಿಶ್ವ ಆರೋಗ್ಯ ಸಂಸ್ಥೆಯು ಒಂದು ಸಭೆಯನ್ನು ನಡೆಸಿ, ಸಾಮಾನ್ಯ ಜ್ವರ, ಶೀತಜ್ವರದ ವೈರಾಣುಗಳ ತಳಿಯಲ್ಲಿ ಆಗಿರುವ ಬದಲಾವಣೆಗಳನ್ನು ಗುರುತಿಸುತ್ತದೆ. ಅದಾಗಿ ಕೆಲವು ದಿನಗಳಲ್ಲೇ ವೈರಾಣುಗಳ ವಿರುದ್ಧ ಹೋರಾಡುವ ಲಸಿಕೆಯನ್ನು ಬಿಡುಗಡೆ ಮಾಡುತ್ತದೆ. ಅದೇ ರೀತಿ ಈ ವರ್ಷದಲ್ಲಿ ಬದಲಾದ ಶೀತಜ್ವರ, ಜ್ವರ ಮತ್ತು ಕೆಮ್ಮಿಗೆ ಸಂಬಂಧಿಸಿದ ವೈರಾಣುಗಳನ್ನು ಕೊಲ್ಲುವ ಸಾಮರ್ಥ್ಯಯುಳ್ಳ ಲಸಿಕೆಯನ್ನು ಮುಂದಿನ ಎರಡು ವಾರಗಳಲ್ಲಿ ಬಿಡುಗಡೆ ಮಾಡಲಾಗುತ್ತದೆ.

ಸಾಮಾನ್ಯವಾಗಿ ಕಾಣಿಸಿಕೊಳ್ಳುವ ಜ್ವರ, ಶೀತಜ್ವರದಿಂದ ವ್ಯಕ್ತಿಯು ಅಸ್ವಸ್ಥಗೊಳ್ಳುತ್ತಾರೆ. ದೇಹದಲ್ಲಿನ ಪ್ರತಿರಕ್ಷಣಾ ವ್ಯವಸ್ಥೆಗೆ ಹೊಡೆತ ಕೊಡುವ ವೈರಾಣುಗಳು ಶ್ವಾಸಕೋಶದ ಮೇಲೂ ದೀರ್ಘಕಾಲಿಕ ಪರಿಣಾಮ ಬೀರಲಿದೆ ಎಂದು ಅಪೋಲೋ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಅನುಪಮ್ ಸಿಬಲ್ ತಿಳಿಸಿದ್ದಾರೆ.

English summary
Doctors Advising People To Take Flu Shot As Primary Protection Against Coronavirus.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X