Lok Sabha Opinion Poll: ತಕ್ಷಣ ಲೋಕಸಭೆ ಚುನಾವಣೆ ನಡೆದರೆ ಗೆಲ್ಲೋದು ಯಾರು?
ಜಗತ್ತೇ ಕಾಯುತ್ತಿರುವ ಭಾರತದ ಲೋಕಸಭೆ ಚುನಾವಣೆಗೆ ದಿನಗಣನೆ ಆರಂಭವಾಗಿದ್ದು, ಮುಂದಿನ ವರ್ಷ ಚುನಾವಣೆ ನಡೆಯಲಿದೆ. ಆದ್ರೆ ಈ ಹೊತ್ತಲ್ಲಿ ಸಮೀಕ್ಷೆ ಹೊರಬಿದ್ದಿದ್ದು ತಕ್ಷಣ ಲೋಕಸಭೆ ಚುನಾವಣೆ ನಡೆದರೆ ಯಾವ ಪಕ್ಷ ಗೆಲ್ಲಲಿದೆ? ಯಾರು ಬಹುಮತವನ್ನು ಪಡೆಯಲಿದ್ದಾರೆ ಅನ್ನೋ ಮಾಹಿತಿ ರಿವೀಲ್ ಆಗಿದೆ. ಹಾಗಾದರೆ ಪಿಎಂ ಮೋದಿ ನೇತೃತ್ವದ ಎನ್‌ಡಿಎ ಹ್ಯಾಟ್ರಿಕ್ ಗೆಲುವು ಸಾಧಿಸುತ್ತಾ? ಇಲ್ಲ ಸೋಲುತ್ತಾ? ಬನ್ನಿ ತಿಳಿಯೋಣ.
ಯೆಸ್, 2024ರ ಲೋಕಸಭೆ ಚುನಾವಣೆ ತಕ್ಷಣ ಅಂದರೆ ಈಗಲೇ ನಡೆದರೆ, ಈಗಿನ ಸ್ಥಿತಿಯಲ್ಲಿ ಯಾವ ರಾಜ್ಯದಲ್ಲಿ ಯಾರು ಗೆಲ್ಲಲಿದ್ದಾರೆ. ಯಾರಿಗೆ ಎಷ್ಟು ಸೀಟ್ ಸಿಗಬಹುದು ಎಂಬೆಲ್ಲಾ ಪ್ರಶ್ನೆಗಳಿಗೆ ಉತ್ತರ ಸಿಕ್ಕಿದೆ. ಅದರಲ್ಲೂ ಇತ್ತೀಚೆಗೆ ವಿಪಕ್ಷಗಳ ನಾಯಕರು ಒಗ್ಗೂಡಿ ಹೊಸ ಒಕ್ಕೂಟ ರಚಿಸಿದ್ದರು. ಇಂಡಿಯಾ ಎಂದು ಹೊಸ ಒಕ್ಕೂಟಕ್ಕೆ ಹೆಸರು ಕೂಡ ಇಟ್ಟಿದ್ದು, ಈ ಬಾರಿ ಲೋಕಸಭೆ ಚುನಾವಣೆ ಭಾರಿ ಜಿದ್ದಾಜಿದ್ದಿಯಿಂದ ಕೂಡಿರಲಿದೆ ಎನ್ನಲಾಗಿತ್ತು. ಆದರೆ ಈಗ ಹೊರಬಿದ್ದಿರುವ ಸಮೀಕ್ಷೆ ಎಲ್ಲಾ ಕುತೂಹಲಗಳಿಗೆ ಉತ್ತರ ನೀಡುತ್ತಿದ್ದು, ಆ ಬಗ್ಗೆ ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ.

ಕರ್ನಾಟಕದಲ್ಲಿ ಬಿಜೆಪಿ ಮತ್ತೆ ಕಿಂಗ್?
ಅಂದಹಾಗೆ ಇತ್ತೀಚೆಗಷ್ಟೇ ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ನಡೆದಿದೆ. ಹಾಗೇ ಬಿಜೆಪಿಗೆ ಭಾರಿ ಅಂತರದ ಸೋಲು ಕೂಡ ಎದುರಾಗಿದೆ. ಆದರೆ ಲೋಕಸಭೆ ಚುನಾವಣೆಯ ವೇಳೆ ಏನಾಗಬಹುದು? ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಅಷ್ಟಕ್ಕೂ ಕರ್ನಾಟಕದ 28 ಲೋಕಸಭಾ ಕ್ಷೇತ್ರಗಳ ಪೈಕಿ, ಈಗಲೇ ಚುನಾವಣೆ ನಡೆದರೆ ಬಿಜೆಪಿ 20 ಸೀಟುಗಳಲ್ಲಿ ಗೆಲ್ಲಲಿದೆ. ಇನ್ನು 7 ಸ್ಥಾನ ಕಾಂಗ್ರೆಸ್ ಪಾಲಾಗಲಿದ್ದರೆ, ಜೆಡಿಎಸ್ ಈಗಿರುವ ಒಂದು ಸ್ಥಾನವನ್ನು ಉಳಿಸಿಕೊಳ್ಳಲಿದೆ. 2019ರಲ್ಲಿ ಬಿಜೆಪಿ 25 ಸೀಟು ಗೆದ್ದಿತ್ತು. ಕಾಂಗ್ರೆಸ್, ಜೆಡಿಎಸ್ ಮತ್ತು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಸುಮಲತಾ ಅಂಬರೀಶ್ ಅವರು ತಲಾ ಒಂದು ಸ್ಥಾನ ಗೆದ್ದಿದ್ದರು. ಇಂಡಿಯಾ ಟಿವಿ-ಸಿಎನ್‌ಎಕ್ಸ್ ಸಮೀಕ್ಷೆ ಪ್ರಕಾರ ತಕ್ಷಣ ಲೋಕಸಭೆಗೆ ಚುನಾವಣೆ ನಡೆದರೆ ಕರ್ನಾಟಕದ ಮತದಾರ ಬಿಜೆಪಿ ಪರ ನಿಲ್ಲುವ ಸೂಚನೆ ಸಿಕ್ಕಿದೆ.
ಯಾವ ರಾಜ್ಯದಲ್ಲಿ ಎಷ್ಟು ಸ್ಥಾನ?
ಕರ್ನಾಟಕ:
ಬಿಜೆಪಿ- 20
ಕಾಂಗ್ರೆಸ್- 07
ಜೆಡಿಎಸ್- 01
ಉತ್ತರ ಪ್ರದೇಶ:
ಎನ್‌ಡಿಎ- 73
ಇಂಡಿಯಾ- 07
ಒಟ್ಟು ಸ್ಥಾನ- 80
ಮಹಾರಾಷ್ಟ್ರ:
ಬಿಜೆಪಿ- 20
ಕಾಂಗ್ರೆಸ್- 09
ಶಿವಸೇನೆ (ಶಿಂಧೆ ಬಣ)- 02
ಶಿವಸೇನಾ (ಉದ್ಧವ್ ಬಣ)- 11
ಎನ್‌ಸಿಪಿ (ಅಜಿತ್ ಬಣ)- 02
ಎನ್‌ಸಿಪಿ (ಶರದ್ ಬಣ)- 04
ಒಟ್ಟು ಸ್ಥಾನ- 48
ಬಿಹಾರ:
ಬಿಜೆಪಿ- 17
ಜೆಡಿಯು- 16
ಎಲ್‌ಜೆಪಿ- 06
ಕಾಂಗ್ರೆಸ್- 01
ಒಟ್ಟು ಸ್ಥಾನ- 40
ತಮಿಳುನಾಡು:
ಡಿಎಂಕೆ- 24
ಕಾಂಗ್ರೆಸ್- 08
ಸಿಪಿಎಂ- 02
ಸಿಪಿಐ- 02
ಇತರರು- 03
ಒಟ್ಟು ಸ್ಥಾನ- 39

ಮಧ್ಯಪ್ರದೇಶ:
ಬಿಜೆಪಿ- 24
ಕಾಂಗ್ರೆಸ್- 05
ಒಟ್ಟು ಸ್ಥಾನ- 29
ಆಂಧ್ರಪ್ರದೇಶ:
ವೈಎಸ್‌ಆರ್‌ಸಿಪಿ- 22
ಟಿಡಿಪಿ- 03
ಒಟ್ಟು ಸ್ಥಾನ- 25
ತೆಲಂಗಾಣ:
ಬಿಆರ್‌ಎಸ್- 09
ಬಿಜೆಪಿ- 04
ಕಾಂಗ್ರೆಸ್- 03
ಎಐಎಂಐಎಂ- 01
ಒಟ್ಟು ಸ್ಥಾನ- 17
ರಾಜಸ್ಥಾನ:
ಬಿಜೆಪಿ- 24
ಕಾಂಗ್ರೆಸ್- 00
ಆರ್‌ಎಲ್‌ಪಿ- 01
ಒಟ್ಟು ಸ್ಥಾನ- 25
ಅಸ್ಸಾಂ:
ಬಿಜೆಪಿ- 09
ಕಾಂಗ್ರೆಸ್- 03
ಇತರರು- 02
ಒಟ್ಟು ಸ್ಥಾನ- 14
ಇನ್ನು ಈ ಸಮೀಕ್ಷೆಗಾಗಿ ಹಲವು ರಾಜ್ಯಗಳಿಂದ ಜನಾಭಿಪ್ರಾಯ ಸಂಗ್ರಹಿಸಲಾಗಿತ್ತು. ಈ ಪೈಕಿ ಕರ್ನಾಟಕ, ಗುಜರಾತ್, ಹಿಮಾಚಲ ಪ್ರದೇಶ, ಹರ್ಯಾಣ, ದಿಲ್ಲಿ, ಮಧ್ಯಪ್ರದೇಶ, ಛತ್ತೀಸಗಡ, ಜಾರ್ಖಂಡ್ ಮತ್ತು ಮಣಿಪುರ ಹೊರತುಪಡಿಸಿ ಈಶಾನ್ಯ ರಾಜ್ಯಗಳಲ್ಲಿ ಬಿಜೆಪಿ ಸ್ಪಷ್ಟ ಮುನ್ನಡೆ ಪಡೆಯಬಹುದು ಎಂಬ ನಿರೀಕ್ಷೆ ಮೂಡಿದೆ. ತಮಿಳುನಾಡು, ಪಂಜಾಬ್, ಮಣಿಪುರ ಮತ್ತು ಬಿಹಾರ ರಾಜ್ಯಗಳಲ್ಲಿ ವಿರೋಧ ಪಕ್ಷಗಳು ಮೇಲುಗೈ ಸಾಧಿಸಲಿವೆ.












Click it and Unblock the Notifications