Get Updates
Get notified of breaking news, exclusive insights, and must-see stories!

Delhi Pollution: ದೇಶದಲ್ಲೇ ಅತಿ ಕಲುಷಿತ ನಗರ ದೆಹಲಿ!

ದೇಶದಲ್ಲಿ ಅದೆಷ್ಟೋ ನಗರಗಳು ಮಾಲಿನ್ಯದಲ್ಲಿ ಮುಳುಗಿ ಹೋಗಿವೆ. ಆದರೂ ರಾಜಧಾನಿ ದೆಹಲಿ ಎಲ್ಲಾ ನಗರಗಳನ್ನೂ ಮೀರಿಸಿ ಮುನ್ನುಗ್ಗುತ್ತಿದೆ. ಅಲ್ಲಿ ವಾಸ ಮಾಡುವ ಜನಗಳಿಗೆ ಉಸಿರು ಬಿಗಿಹಿಡಿದು ಬದುಕುವ ಪರಿಸ್ಥಿತಿ ಇದೆ. ಈಗ ಮತ್ತೊಂದು ವರದಿ ದೆಹಲಿ ಕುರಿತು ಆತಂಕ ಹುಟ್ಟಿಸುವ ಮಾಹಿತಿ ನೀಡಿದೆ. ಹಾಗಾದ್ರೆ ಏನಾಗಿದೆ ರಾಷ್ಟ್ರ ರಾಜಧಾನಿ ದೆಹಲಿಗೆ? ಬನ್ನಿ ತಿಳಿಯೋಣ.

ಪ್ರತಿ ವರ್ಷ ಮಾಲಿನ್ಯದ ಮೂಲಕ ಸದ್ದು ಮಾಡುವ ದೆಹಲಿಗೆ ದೇಶದಲ್ಲೇ ಅತ್ಯಂತ ಕಲುಷಿತ ನಗರ ಎಂಬ ಹಣೆಪಟ್ಟಿ ಸಿಕ್ಕಿದೆ. ಸೆಪ್ಟೆಂಬರ್ 30ರ ತನಕ ಒಂದು ವರ್ಷದ ಅವಧಿಯಲ್ಲಿ ದೆಹಲಿ ಅತಿ ಮಾಲಿನ್ಯ ತುಂಬಿದ ನಗರ ಎಂಬ ಅಪಖ್ಯಾತಿಗೆ ಗುರಿಯಾಗಿದೆ. ವಾಯು ಮಾಲಿನ್ಯವನ್ನು ಅಂದಾಜು ಮಾಡುವ ಪಿಎಂ 2.5 ಸಾಂದ್ರತೆಯು, ಪ್ರತಿ ಘನ ಮೀಟರ್‌ಗೆ 100 ಮೈಕ್ರೋಗ್ರಾಂ ಇದೆ. ಸರ್ಕಾರ ನಿಗದಿ ಮಾಡಿದ ಸುರಕ್ಷಿತ ಮಟ್ಟಕ್ಕಿಂತಲೂ ಇದು 3 ಪಟ್ಟು ಹೆಚ್ಚು. ಹೀಗಾಗಿ ಆತಂಕ ಮತ್ತಷ್ಟು ಹೆಚ್ಚಾಗಿದೆ.

most-polluted-city-in-india

ದೇಶದಲ್ಲಿ ಶುದ್ಧಗಾಳಿ ಎಲ್ಲಿ ಸಿಗುತ್ತಿದೆ?

ಕ್ಲೈಮೆಟ್ ಟ್ರೆಂಡ್ಸ್ & ಟೆಕ್ ಫರ್ಮ್ ರೆಸ್ಪಿರರ್ ಲಿವಿಂಗ್ ಸೈನ್ಸಸ್ ಈ ವಿಶ್ಲೇಷಣೆ ಮಾಡಿದೆ. ಸಂಸ್ಥೆ ನೀಡಿರುವ ವರದಿ ಪ್ರಕಾರ ಐಜ್ವಾಲ್ & ಮಿಜೋರಾಂ ದೇಶದಲ್ಲೇ ಅತ್ಯಂತ ಶುದ್ಧ ಗಾಳಿಯನ್ನು ಹೊಂದಿದೆ. ಐಜ್ವಾಲ್ & ಮಿಜೋರಾಂ ಪ್ರದೇಶದಲ್ಲಿ ಪಿಎಂ 2.5 ಪ್ರಮಾಣವು ಪ್ರತಿ ಘನ ಮೀಟರ್‌ಗೆ 11.1 ಮೈಕ್ರೋಗ್ರಾಂ ಇದೆಯಂತೆ. ಈ ಮೂಲಕ ದೆಹಲಿಗೆ ಹೋಲಿಕೆ ಮಾಡಿದ್ರೆ ಐಜ್ವಾಲ್ & ಮಿಜೋರಾಂ ಬೆಸ್ಟ್ ಎನಿಸಿಕೊಂಡಿವೆ. ಆದರೆ ದೆಹಲಿ ಜನರು ಮಾತ್ರ ಮಾಲಿನ್ಯ ತುಂಬಿದ ಗಾಳಿಯಲ್ಲೇ ಬದುಕಬೇಕಿದೆ. ಇನ್ನೇನು ಚಳಿಗಾಲ ಕೂಡ ಹತ್ತಿರ ಬರುತ್ತಿದ್ದು, ಈ ಸಮಸ್ಯೆ ದೆಹಲಿಯಲ್ಲಿ ಮತ್ತಷ್ಟು ಹೆಚ್ಚಾಗಲಿದೆ.

ದೆಹಲಿ ಜೊತೆಗೆ ಈ ನಗರದಲ್ಲೂ ಸಮಸ್ಯೆ

ಸಾಮಾನ್ಯವಾಗಿ ಚಳಿಗಾಲದಲ್ಲಿ ರಾಷ್ಟ್ರ ರಾಜಧಾನಿ ದೆಹಲಿಯನ್ನ ನರಕ ಎಂದು ಕರೆಯುವುದು ಮಾಮೂಲು. ಯಾಕಂದ್ರೆ ಅಲ್ಲಿ ಹೊಗೆ & ಮಂಜು ಸೇರಿಕೊಂಡು ಹೂಂಜು ನಿರ್ಮಾಣವಾಗಿ, ದೆಹಲಿ ಜನರನ್ನ ಇನ್ನಿಲ್ಲದ ರೀತಿ ಬಾಧಿಸುತ್ತದೆ. ಎಷ್ಟೋ ಜನ ಚಳಿಗಾಲ ಬಂತು ಅಂದರೆ ಸಾಕು ದೆಹಲಿ ಬಿಟ್ಟು ಓಡಿ ಬಿಡುತ್ತಾರೆ. ಅದರಲ್ಲೂ ಡಿಸೆಂಬರ್ ಸಂದರ್ಭದಲ್ಲಿ ಅಸ್ತಮಾ ಮತ್ತು ಡಸ್ಟ್ ಅಲರ್ಜಿ ಇರುವವರು ದೆಹಲಿಯಲ್ಲಿ ಇರುವುದೇ ಇಲ್ಲ. ದೆಹಲಿ ಮಾತ್ರವಲ್ಲದೆ ಅಕ್ಕಪಕ್ಕದಲ್ಲಿನ ಫರಿದಾಬಾದ್ 89, ನೋಯ್ಡಾ 79, ಘಾಜಿಯಾಬಾದ್ 78.3, ಮೀರತ್ ನಗರ 76.9ನಷ್ಟು ಅಶುದ್ಧ ಗಾಳಿ ಹೊಂದಿದೆ ಎನ್ನಲಾಗಿದೆ.

most-polluted-city-in-india

ಯಾರಿಗೆ ಹೇಳೋದು ಇವರ ಪ್ರಾಬ್ಲಂ?

ದೆಹಲಿ ನಿವಾಸಿಗಳ ಪೈಕಿ ಬಹುತೇಕರು ಚಳಿಗಾಲ ಬಂದಾಗ ದಕ್ಷಿಣ ಭಾರತ ಅಥವಾ ಈಶಾನ್ಯ ಭಾರತದ ಕಡೆ ಪ್ರಯಾಣ ಬೆಳೆಸ್ತಾರೆ. ಅಲರ್ಜಿ ಇರುವವರಿಗೆ ವೈದ್ಯರೇ ಬೇರೆ ಕಡೆಗೆ ಹೋಗಲು ಸೂಚಿಸ್ತಾರೆ ಎಂಬ ಮಾಹಿತಿ ಇದೆ. ಕೆಲವರು ಮಾತ್ರ ಮಾಲಿನ್ಯ ಇದ್ದರೂ ಅನಿವಾರ್ಯವಾಗಿ ದೆಹಲಿಯಲ್ಲಿ ವಾಸಿಸುತ್ತಾರೆ. ಇದೀಗ ಪ್ರಕಟವಾದ ವರದಿಯು ಅಕ್ಟೋಬರ್ 1, 2022ರಿಂದ ಸೆಪ್ಟೆಂಬರ್ 30, 2023 ರವರೆಗಿನ ಸರ್ಕಾರದ ಪಿಎಂ 2.5 ದತ್ತಾಂಶದ ವಿಶ್ಲೇಷಣೆ ಆಧರಿಸಿದೆ. ಹೀಗೆ ದೆಹಲಿ ಗಾಳಿ ಗುಣಮಟ್ಟ ಚಳಿಗಾಲದಲ್ಲಿ ಮಾತ್ರವಲ್ಲ ಬೇಸಿಗೆ & ಮಳೆಗಾಲದಲ್ಲೂ ಹದಗೆಟ್ಟು ಹೊಗಿದೆ.

ದೆಹಲಿ ಮಾತ್ರವಲ್ಲ ಬಿಹಾರದ ರಾಜಧಾನಿ ಪಟ್ನಾ ಕೂಡ ಅತ್ಯಂತ ಮಾಲಿನ್ಯಕಾರಕ ನಗರ ಎಂಬ ಕುಖ್ಯಾತಿ ಪಡೆದಿದೆ. ಪಾಟ್ನಾ ನಗರದಲ್ಲಿ ಒಂದು ಘನ ಮೀಟರ್‌ಗೆ ಸರಾಸರಿ 99.7 ಮೈಕ್ರೋಗ್ರಾಂ ಪಿಎಂ 2.5 ಸಾಂದ್ರತೆ ಇದೆ ಎನ್ನಲಾಗಿದೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ನಗರದ ಗಾಳಿ ಗುಣಮಟ್ಟ ಶೇ.24ರಷ್ಟು ಕ್ಷೀಣಿಸಿದೆ ಎನ್ನಲಾಗಿದೆ. ಮುಂದಿನ ದಿನಗಳಲ್ಲಿ ಈ ಪರಿಸ್ಥಿತಿ ಮತ್ತಷ್ಟು ಕೈಮೀರಿ ಹೋಗುವ ಸೂಚನೆ ಇದೆ.

ಹೀಗೆ ದೆಹಲಿ, ಪಟ್ನಾ, ಮುಜಾಫರ್‌ಪುರ್, ಫರಿದಾಬಾದ್, ನೋಯ್ಡಾ, ಗಾಜಿಯಾಬಾದ್ ಮತ್ತು ಮೀರತ್ ಭಾರತದ ಪ್ರಮುಖ 7 ಕಲುಷಿತ ನಗರಗಳಾಗಿವೆ. ಗಾಳಿಯ ಗುಣಮಟ್ಟ ಇಷ್ಟು ಕೆಟ್ಟು ಹೋದ್ರೆ ಉಸಿರಾಟ ಸಮಸ್ಯೆ ಉಂಟಾಗಿ ಅಸ್ತಮಾ & ಶ್ವಾಸನಾಳ ಒಳಪೊರೆ ಉರಿಯೂತ & ಅಲರ್ಜಿಯಂಥ ಸಮಸ್ಯೆ ತಲೆದೋರಬಹುದು ಎಂದು ತಜ್ಞರು ಮುನ್ನೆಚ್ಚರಿಕೆ ನೀಡುತ್ತಿದ್ದಾರೆ. ಈ ನಡುವೆ ಮಕ್ಕಳಲ್ಲಿ ಸಮಸ್ಯೆ ಮತ್ತಷ್ಟು ಹೆಚ್ಚಾಗುತ್ತಿರುವುದು ಆತಂಕ ಹೆಚ್ಚಿಸಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+