ನೋಟು ನಿಷೇಧ ಪರಿಣಾಮ ಮಣಿಪುರದಲ್ಲಿ ದಿನಪತ್ರಿಕೆಗಳು ಬಂದ್

Posted By:
Subscribe to Oneindia Kannada

ಮಣಿಪುರ, ನವೆಂಬರ್, 18: ಗರಿಷ್ಠ ಮುಖಬೆಲೆಯ ನೋಟುಗಳ ನಿಷೇಧದ ಪರಿಣಾಮಗಳು ಎಲ್ಲಾ ಕ್ಷೇತ್ರಗಳ ಮೇಲೂ ಬೀರುತ್ತಿವೆ. ದಿನದಿನ್ಯದ ಖರ್ಚುಗಳಿಗೆ ಹಣವಿಲ್ಲದೆ ಒದ್ದಾಡುತ್ತಿದ್ದಾರೆ. ಸಾರ್ವಜನಿಕರಿಗೆ ಸುದ್ದಿ ತಲುಪಿಸಬೇಕಾದ ದಿನಪತ್ರಿಕೆಗಳೂ ಸಹ ಕಾರ್ಯ ಸ್ಥಗಿತಗೊಳಿಸಿವೆ.

ಕೆಲವು ಸಾರ್ವಜನಿಕ ಕ್ಷೇತ್ರಗಳೂ ಸಹ ಹಣದ ಕೊರತೆಯಿಂದ ಸೇವೆಯನ್ನು ಸ್ಥಗಿತಗೊಳಿಸಬೇಕಾದ ಪರಿಸ್ಥಿತಿಗೆ ತಲುಪಿವೆ. ಪ್ರಸ್ತುತ ಮಣಿಪುರದಲ್ಲೂ ಇದೇ ಪರಿಸ್ಥಿತಿ ಇದೆ. ಹಲವು ದಿನಪತ್ರಿಕೆಗಳು ಹಣದ ಕೊರತೆಯಿಂದಾಗಿ ಶುಕ್ರವಾರದಿಂದ ಪ್ರಕಟಣೆಯನ್ನೇ ನಿಲ್ಲಿಸಿವೆ.[10 ಪ್ರಶ್ನೆಗಳನ್ನು ಹುಟ್ಟುಹಾಕಿದ ದಿಢೀರ್ ತೀರ್ಮಾನಗಳು]

"ದಿನನಿತ್ಯ ಪತ್ರಿಕೆ ಹೊರತರಲು ಸಾಕಷ್ಟು ಹಣ ಬೇಕಾಗುತ್ತದೆ ನೋಟು ನಿಷೇಧದ ಪರಿಣಾಮ ಹಣದ ಕೊರತೆ ಎದುರಾಗಿದ್ದು, ಸ್ವಲ್ಪ ಕಾಲ ಪತ್ರಿಕಾ ಕಾರ್ಯವನ್ನು ನಿಲ್ಲಿಸಬೇಕಾಗಿದೆ ಎಂದು ಇಲ್ಲಿಯ ಪಾವ್ ಡೈಲಿ ಪತ್ರಿಕೆಯ ಸಂಪಾದಕ ಪೋನಮ್ ಲಬಾಂಗ್ ಮನ್ ಗ್ಯಾಂಗ್ ತಿಳಿಸಿದ್ದಾರೆ.

Demonetisation hits newspaper publication in Manipur

ಪ್ರಕಾಶಕರ ಬಳಿಯೂ ಹೊಸ ನೋಟುಗಳ ಲಭ್ಯತೆ ಇಲ್ಲದಿರುವುದರಿಂದ ಪತ್ರಿಕೆ ಮಾಲೀಕರು ನಷ್ಟ ಅನುಭವಿಸಿದ್ದಾರೆ. ಪತ್ರಿಕೆ ಆದಾಯವೂ ಕುಸಿದಿದೆ. ಆದ್ದರಿಂದ ಗರಿಷ್ಠ ಮುಖಬೆಲೆಯ ನೋಟುಗಳು ಜಾರಿಯಾಗುವವರೆಗೆ ಪತ್ರಿಕೆ ಹೊರ ತರುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಗುರವಾರ ಈ ಕುರಿತು ಸಭೆ ನಡೆಸಿರುವ ಆಲ್ ಮಣಿಪುರ್ ನ್ಯೂಸ್ ಪೇಪರ್ಸ್ ಪ್ರಕಾಶಕರ ಸಂಘ ಮತ್ತು ವಿತರಕರ ಸಂಘ. ಪತ್ರಿಕಾ ಕಾರ್ಯಕಲಾಪಗಳನ್ನು ನಿಲ್ಲಿಸಲು ತೀರ್ಮಾನಿಸಿದ್ದಾರೆ.

ಕಾನೂನು ಬದ್ಧ ವ್ಯವಹಾರಗಳಿಗೂ ಅವಕಾಶವಿಲ್ಲದಿರುವುದರಿಂದ ಪತ್ರಿಕಾ ಕಚೇರಿಗಳನ್ನು ಮುಚ್ಚಲು ಸಭೆಯಲ್ಲಿ ತೀರ್ಮಾನಿಸಲಾಗಿದೆ.

ನೋಟು ನಿಷೇಧ ಪರಿಣಾಮ ಶಾಲೆಗಳ ಮೇಲೂ ಬೀರುವ ಸಾಧ್ಯತೆ ಇದೆ ಎನ್ನಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
In a joint meeting held yesterday afternoon in Manipur capital Imphal, the All Manipur Newspaper Publishers Association and the All Manipur Newspaper Sales and Distributors Association unanimously decided to stop the publication of newspapers across the state from today.
Please Wait while comments are loading...