ನವದೆಹಲಿ: ಪೊಲೀಸ್ ಪೇದೆಯಿಂದಲೇ ಅತ್ಯಾಚಾರ
ನವದೆಹಲಿ, ಫೆ. 26 : ಜನರ ರಕ್ಷಣೆ ಮಾಡಬೇಕಾದ ಆರಕ್ಷಕರೇ ಭಕ್ಷಕರಾಗುತ್ತಿರುವ ಘಟನೆಗೆ ಮತ್ತೊಂದು ಸಾಕ್ಷಿ ದೊರೆತಿದೆ. ಮಹಿಳೆಯರಿಗೆ ರಕ್ಷಣೆ ನೀಡಬೇಕಿದ್ದ ಪೊಲೀಸ್ ಪೇದೆಯೇ ಅತ್ಯಾಚಾರ ಎಸಗಿರುವ ಪ್ರಕರಣ ದೆಹಲಿಯಲ್ಲಿ ಬೆಳಕಿಗೆ ಬಂದಿದೆ.
ದೆಹಲಿಯಲ್ಲಿ ಮತ್ತೆ ಅತ್ಯಾಚಾರದ ಕರಾಳ ಮುಖ ದರ್ಶನವಾಗಿದ್ದು ಪೊಲೀಸ್ ಪೇದೆಯೊಬ್ಬ 30 ವರ್ಷದ ಮಹಿಳೆಯ ಮೇಲೆ ಅತ್ಯಾಚಾರ ಮಾಡಿದ ಪ್ರಕರಣ ಸಂಬಂಧ ದೂರು ದಾಖಲಾಗಿದೆ.[ವಿಡಿಯೋ ನೋಡಿ, ಅತ್ಯಾಚಾರಿಗಳನ್ನು ಹಿಡಿದುಕೊಡಿ]

ದೆಹಲಿಯ ವಿಪತ್ತು ನಿರ್ವಹಣಾ ದಳದ ಮುಖ್ಯ ಪೇದೆ ದೇವಿ ಸಿಂಗ್ ಅತ್ಯಾಚಾರದ ಆರೋಪಿ. ಪಶ್ಚಿಮ ದೆಹಲಿಯ ಅಲಿಪುರ್ ಪೋಲೀಸ್ ಠಾಣೆಯಲ್ಲಿ ದೇವಿ ಸಿಂಗ್ ವಿರುದ್ಧ ಮಹಿಳೆಯೊಬ್ಬರು ಅತ್ಯಾಚಾರದ ದೂರು ದಾಖಲಿಸಿದ್ದಾರೆ.
ಬುಧವಾರ ರಾತ್ರಿ ಮಹಿಳೆ ದೂರು ದಾಖಲಿಸಿದ್ದು ತನ್ನ ಮೇಲೆ ಪೇದೆ ಅತ್ಯಾಚಾರ ಎಸಗಿದ್ದಾನೆ ಎಂದು ಆರೋಪಿಸಿದ್ದಾಳೆ. ಸಿಂಗ್ ತನ್ನ ದೂರದ ಸಂಬಂಧಿಯಾಗಿದ್ದು ಪಶ್ಚಿಮ ದೆಹಲಿಯ ನರೆಲ್ಲಾ ಪ್ರದೇಶದ ಮನೆಯೊಂದರಲ್ಲಿ ಅತ್ಯಾಚಾರ ಎಸಗಿದ್ದಾನೆ ಎಂದು ದೂರಿನಲ್ಲಿ ತಿಳಿಸಿದ್ದಾಳೆ.ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ಆರೋಪಿ ಪೇದೆಗಾಗಿ ಹುಡುಕಾಟ ನಡೆಸಿದ್ದಾರೆ. (ಒನ್ ಇಂಡಿಯಾ ನ್ಯೂಸ್)












Click it and Unblock the Notifications