ದೆಹಲಿಯಲ್ಲಿ ಭಾರೀ ಮಳೆಗೆ 2 ಸಾವು, 5 ಮಂದಿ ಗಾಯ, ಪ್ರವಾಹದ ಎಚ್ಚರಿಕೆ!
ಕಳೆದ ಕೆಲವು ದಿನಗಳಿಂದ ದೇಶದ ರಾಜಧಾನಿ ದೆಹಲಿಯಲ್ಲಿ ಭಾರೀ ಮಳೆಯಾಗುತ್ತಿರುವ ಕಾರಣ ಅನೇಕ ದುರಂತ ಘಟನೆಗಳು ಮುನ್ನೆಲೆಗೆ ಬರುತ್ತಿವೆ. ಉತ್ತರ ದೆಹಲಿಯ ಸಬ್ಜಿ ಮಂಡಿ ಪ್ರದೇಶದಲ್ಲಿ ಮನೆಯ ಗೋಡೆ ಕುಸಿದು ಮಹಿಳೆಯೊಬ್ಬರು ಸಾವನ್ನಪ್ಪಿದ್ದಾರೆ. ಮತ್ತೊಂದೆಡೆ ರೋಹಿಣಿಯಲ್ಲಿ ಮರ ಬಿದ್ದು ಆಟೋ ಚಾಲಕ ಮೃತಪಟ್ಟಿದ್ದಾನೆ. ಇದಲ್ಲದೇ ದೆಹಲಿಯಲ್ಲಿ ಮಳೆಯಿಂದಾಗಿ ವಿವಿಧ ಘಟನೆಗಳಲ್ಲಿ ಐವರು ಗಾಯಗೊಂಡಿದ್ದಾರೆ.
ಹವಮಾನ ಇಲಾಖೆ ಕೆಲ ದಿನಗಳ ಕಾಲ ದೆಹಲಿಯಲ್ಲಿ ಮಳೆ ಮುಂದುವರೆಯುವ ಸೂಚನೆ ನೀಡಿದ್ದು ಶಾಲೆಗಳಿಗೆ ಇಂದು ರಜೆ ಘೋಷಿಸಲಾಗಿದೆ. ಜೊತೆಗೆ ಪ್ರವಾಹದ ಎಚ್ಚರಿಕೆ ನೀಡಲಾಗಿದೆ. ದೆಹಲಿಯಲ್ಲಿ ಎಡಬಿಡದೆ ದಾಖಲೆಯ ಮಳೆ ಸುರಿದಿದೆ. ಇದರಿಂದಾಗಿ ಜನಜೀವನವೇ ಅಸ್ತವ್ಯಸ್ತವಾಗಿದೆ. ಹಲವಾರು ಸೋವು ನೋವು ಪ್ರಕರಣಗಳು ವರದಿಯಾಗುತ್ತಿವೆ. ಸೋನಿಪತ್ ಗನ್ನೂರ್ ನಿವಾಸಿ ಪ್ರೀತಿ ಎಂಬುವವರು ಭಾರೀ ಮಳೆಗೆ ಗೋಡೆ ಕುಸಿದು ಮೃತಪಟ್ಟಿದ್ದಾರೆ.

ಪಶು ಆಸ್ಪತ್ರೆಯ ಗೋಡೆ ಕುಸಿದು ಬಿದ್ದ ಪರಿಣಾಮ ಗೋಡೆಯ ಕೆಳಗೆ ಅವರು ಹೂತು ಹೋಗಿ ಪ್ರೀತಿ ಮೃತಪಟ್ಟಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಅಪಘಾತದಲ್ಲಿ ಪ್ರೀತಿ ಜತೆಗೆ ಮತ್ತೊಬ್ಬ ಬಾಲಕಿ ಕೂಡ ಇದ್ದಳೆಮದು ತಿಳಿದು ಬಂದಿದೆ. ಬಾಲಕಿಗೆ ಗಾಯಗಳಾಗಿದೆ ಎಂದು ತಿಳಿದು ಬಂದಿದೆ.
ಭಾನುವಾರ ಸಂಜೆ 5 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಪ್ರೀತಿ ಹುಡುಗಿಯೊಬ್ಬಳೊಂದಿಗೆ ಪಶು ಆಸ್ಪತ್ರೆಗೆ ತೆರಳುತ್ತಾಳೆ. ಪ್ರೀತಿ ಬಾಲಕಿಯೊಂದಿಗೆ ತೆರಳುತ್ತಿದ್ದ ವೇಳೆ ಆಕೆಯ ಮೇಲೆ ಗೋಡೆ ಬಿದ್ದು ಸಾವನ್ನಪ್ಪಿದ್ದಾಳೆ. ಘಟನೆಯ ನಂತರ, ಪ್ರೀತಿ ಮತ್ತು ಆಕೆಯ ಜೊತೆಗೆ ಹುಡುಗಿಯನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ವೈದ್ಯರು ಪ್ರೀತಿ ಮೃತಪಟ್ಟಿರುವುದಾಗಿ ಘೋಷಿಸಿದರು. ಸದ್ಯ ಬಾಲಕಿ ಅಪಾಯದಿಂದ ಪಾರಾಗಿದ್ದಾಳೆ. ಈ ಸಂಬಂಧ ಎಫ್‌ಐಆರ್ ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ.
ಇನ್ನೂ ರೋಹಿಣಿಯಲ್ಲಿ ಮರ ಬಿದ್ದು ಆಟೋರಿಕ್ಷಾ ಚಾಲಕ ಮೃತಪಟ್ಟಿದ್ದಾನೆ. ಆಟೊರಿಕ್ಷಾ ಚಾಲಕ ರಾಜೇಂದ್ರ ಅವರ ಆಟೋ ಮೇಲೆ ಮರ ಬಿದ್ದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆ ನಡೆದ ಬಳಿಕೆ ತಕ್ಷಣ ರಾಜೇಂದ್ರ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಅವರು ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದರು. ಸೆಕ್ಟರ್ 9 ರ ರೋಹಿಣಿ ಸ್ಪೋರ್ಟ್ಸ್ ಕಾಂಪ್ಲೆಕ್ಸ್ ಬಸ್ ನಿಲ್ದಾಣದ ಬಳಿ ಈ ಅಪಘಾತ ಸಂಭವಿಸಿದೆ.
ಮತ್ತೊಂಡೆದೆ ಪಶ್ಚಿಮ ದೆಹಲಿಯ ಮೋತಿ ನಗರ ಪ್ರದೇಶದಲ್ಲಿ ಎಂಟು ವರ್ಷದ ಇಬ್ಬರು ಬಾಲಕರು ಗಾಯಗೊಂಡಿದ್ದಾರೆ. ಇಲ್ಲಿನ ತಗಡಿನ ಶೆಡ್ ಕುಸಿದು ಬಿದ್ದಿರುವುದರಿಂದ ಈ ಅವಘಡ ಮುನ್ನೆಲೆಗೆ ಬಂದಿದೆ. ಅಗ್ನಿಶಾಮಕ ದಳದವರು ಅವಶೇಷಗಳಡಿಯಲ್ಲಿ ಸಿಲುಕಿದ್ದ ಆಲಂ ಮತ್ತು ಮರಲುದ್ದೀನ್ ಎಂಬ ಇಬ್ಬರು ಬಾಲಕರನ್ನು ರಕ್ಷಿಸಿದ್ದಾರೆ. ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಸ್ಥಿತಿ ಸ್ಥಿರವಾಗಿದೆ. ರಕ್ಷಣಾ ಕಾರ್ಯಾಚರಣೆ ವೇಳೆ ಅಗ್ನಿಶಾಮಕ ಅಧಿಕಾರಿ ದಲ್ಜಿತ್‌ಗೆ ಸಣ್ಣಪುಟ್ಟ ಗಾಯಗಳಾಗಿವೆ.
ದೆಹಲಿಯಲ್ಲಿ ದಾಖಲೆಯ ಮಳೆ
ರಾಷ್ಟ್ರ ರಾಜಧಾನಿಯಲ್ಲಿ ಶನಿವಾರ ಮತ್ತು ಭಾನುವಾರ ಬೆಳಗಿನವರೆಗೂ ಕಳೆದ 41 ವರ್ಷಗಳಲ್ಲೇ ದಾಖಲೆಯ 153 ಮಿಮೀ ಮಳೆ ಆಗಿದೆ. ಭಾರತೀಯ ಹವಾಮಾನ ಇಲಾಖೆ ಪ್ರಕಾರ, ಜುಲೈ 25, 1982ರ ನಂತರ ಒಂದೇ ದಿನದಲ್ಲಿ ಇಷ್ಟೊಂದು ದಾಖಲೆಯ ಮಳೆಯಾಗಿದೆ.
ಯಮುನಾ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚುವ ಸಾಧ್ಯತೆಯಿದೆ ಎಂದು ಮುನ್ಸೂಚನೆ ನೀಡಲಾಗಿದೆ. ಕಳೆದ 24 ಗಂಟೆಗಳಲ್ಲಿ ಸರಾಸರಿ ಮಾನ್ಸೂನ್ ಕೋಟಾ ಶೇ. 20 ರಷ್ಟನ್ನು ನಗರ ಪೊರೈಸಿದ್ದು, ಈ ಮುಂಗಾರಿನಲ್ಲಿ ದೆಹಲಿಯಲ್ಲಿ ಸರಾಸರಿ ದಾಖಲೆಯ 700 ಮಿ ಮೀ ಮಳೆಯಾಗಿದೆ.
ದೆಹಲಿ ಪ್ರಾಥಮಿಕ ಹವಾಮಾನ ಕೇಂದ್ರ ಸಫ್ದರ್‌ಜಂಗ್ ವೀಕ್ಷಣಾಲಯ ದಾಖಲಿಸಿದ ಮಳೆಯ ಮಾಹಿತಿಯ ಪ್ರಕಾರ, ನಗರವು ಶನಿವಾರ ಬೆಳಿಗ್ಗೆ 8:30 ರಿಂದ ಭಾನುವಾರ ಬೆಳಿಗ್ಗೆ 8:30 ರ ನಡುವೆ ಸುಮಾರು 153 ಮಿಮೀ ಮಳೆಯನ್ನು ಪಡೆದಿದೆ. ಇದು 1958 ರ ನಂತರ ಜುಲೈನಲ್ಲಿ ಸುರಿದ ಮೂರನೇ ದಿನದ ಅತ್ಯಧಿಕ ಹೆಚ್ಚಿನ ಮಳೆಯಾಗಿದೆ.












Click it and Unblock the Notifications