Get Updates
Get notified of breaking news, exclusive insights, and must-see stories!

Delhi Acid Attack : ವಿಡಿಯೋ: ದೆಹಲಿಯಲ್ಲಿ 17 ವರ್ಷದ ಬಾಲಕಿ ಮೇಲೆ ಆಸಿಡ್ ದಾಳಿ- ಓರ್ವನ ಬಂಧನ

ದೆಹಲಿ ಡಿಸೆಂಬರ್ 14: ದೆಹಲಿಯಲ್ಲಿ ಮೋಹನ್ ಗಾರ್ಡನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬೈಕ್‌ನಲ್ಲಿ ಬಂದ ಇಬ್ಬರು ವ್ಯಕ್ತಿಗಳು 17 ವರ್ಷದ ಬಾಲಕಿಯ ಮೇಲೆ ಆಸಿಡ್ ದಾಳಿ ನಡೆಸಿದ್ದಾರೆ. ಸಂತ್ರಸ್ತೆ ಬಾಲಕಿ ಸದ್ಯ ಚಿಕಿತ್ಸೆ ಪಡೆಯುತ್ತಿದ್ದಾರೆ. ಸಂತ್ರಸ್ತೆ ತನಗೆ ಪರಿಚಯವಿರುವ ಇಬ್ಬರ ಮೇಲೆ ಅನುಮಾನ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಪೊಲೀಸರು ಪ್ರಕರಣದಲ್ಲಿ ಒಬ್ಬನನ್ನು ಬಂಧಿಸಿದ್ದಾರೆ.

'ಮೋಹನ್ ಗಾರ್ಡನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬಾಲಕಿಯ ಮೇಲೆ ಆಸಿಡ್ ದಾಳಿ ನಡೆಸಿದ ಘಟನೆಗೆ ಸಂಬಂಧಿಸಿದಂತೆ ಬುಧವಾರ ಬೆಳಗ್ಗೆ 9 ಗಂಟೆ ಸುಮಾರಿಗೆ ಪೊಲೀಸ್ ನಿಯಂತ್ರಣ ಕೊಠಡಿಗೆ (ಪಿಸಿಆರ್) ಕರೆ ಬಂದಿತ್ತು. ಇಂದು ಬೆಳಗ್ಗೆ 7:30ರ ಸುಮಾರಿಗೆ ಆಕೆಯ ಮೇಲೆ ಆಸಿಡ್ ದಾಳಿ ನಡೆದಿದೆ' ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಘಟನೆಯ ವೇಳೆ ಅಪ್ರಾಪ್ತ ಬಾಲಕಿ ತನ್ನ ತಂಗಿಯೊಂದಿಗೆ ಇದ್ದಳು. ಘಟನೆ ಸಿಸಿಟಿವಿ ದೃಶ್ಯದಲ್ಲಿ ಸೆರೆಯಾಗಿದೆ.

Delhi: Acid attack on 17-year-old girl- one arrested

ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವನನ್ನು ವಶಕ್ಕೆ ಪಡೆಯಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ. ದೆಹಲಿ ಮಹಿಳಾ ಆಯೋಗದ (ಡಿಸಿಡಬ್ಲ್ಯು) ಅಧ್ಯಕ್ಷೆ ಸ್ವಾತಿ ಮಲಿವಾಲ್ ಅವರು ಘಟನೆಯ ಬಗ್ಗೆ ಟ್ವೀಟ್ ಮಾಡಿದ್ದಾರೆ ಮತ್ತು ಆಯೋಗವು ಸಂತ್ರಸ್ತೆಗೆ ನ್ಯಾಯವನ್ನು ಒದಗಿಸಲು ಪ್ರಯತ್ನಿಸುತ್ತದೆ ಎಂದು ಹೇಳಿದ್ದಾರೆ.

ಸಂತ್ರಸ್ತೆ ಬಾಲಕಿಯ ಸ್ಥಿತಿ ಚಿಂತಾಜನಕವಾಗಿದ್ದು ಆಸಿಡ್ ಆಕೆಯ ಮುಖಕ್ಕೆ ಚಿಮ್ಮಿ ಆಕೆಯ ಕಣ್ಣುಗಳನ್ನು ಸುಟ್ಟಿದೆ ಎಂದು ಮಾದ್ಯಗಳು ವರದಿ ಮಾಡಿವೆ.

ಆ ಪ್ರದೇಶದಲ್ಲಿನ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಹಿಡಿಯಲಾದ ಘಟನೆಯ ಆಘಾತಕಾರಿ ದೃಶ್ಯಗಳಲ್ಲಿ ಇಬ್ಬರು ಹುಡುಗಿಯರು ರಸ್ತೆಬದಿಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಅವರ ಬಳಿ ಬಂದ ಬೈಕ್ ವೇಗವನ್ನು ಸವಾರ ಕಡಿಮೆ ಮಾಡುತ್ತಾನೆ. ತಕ್ಷಣ ಆತನ ಹಿಂಬದಿಯಲ್ಲಿ ಕುಳಿತ ವ್ಯಕ್ತಿ 17 ವರ್ಷದ ಬಾಲಕಿ ಮೇಲೆ ಆಸಿಡ್ ಎರಚುತ್ತಾನೆ. ನಂತರ ಅವಳು ನೋವಿನಿಂದ ತನ್ನ ಮುಖವನ್ನು ಹಿಡಿದುಕೊಂಡು ಓಡಾಡುವುದನ್ನು ದೃಶ್ಯದಲ್ಲಿ ಕಾಣಬಹುದು.

ಸಂತ್ರಸ್ತೆಯ ತಂದೆ ಘಟನೆಯ ಬಗ್ಗೆ ಮಾತನಾಡಿ "ನನ್ನ ಇಬ್ಬರು ಹೆಣ್ಣುಮಕ್ಕಳಲ್ಲಿ ಒಬ್ಬರಿಗೆ 17 ವರ್ಷ ಮತ್ತು ಇನ್ನೊಬ್ಬರಿಗೆ 13 ವರ್ಷ. ಇಂದು ಬೆಳಿಗ್ಗೆ ಒಟ್ಟಿಗೆ ಶಾಲೆಗೆ ಹೋಗುತ್ತಿದ್ದರು. ಇದ್ದಕ್ಕಿದ್ದಂತೆ ಬೈಕ್‌ನಲ್ಲಿ ಬಂದ ಇಬ್ಬರು ವ್ಯಕ್ತಿಗಳು ನನ್ನ ಹಿರಿಯ ಮಗಳ ಮೇಲೆ ಆಸಿಡ್ ಎಸೆದು ಹೋಗಿದ್ದಾರೆ. ಅವರು ತಮ್ಮ ಮುಖವನ್ನು ಮುಚ್ಚಿಕೊಂಡಿದ್ದರು" ಎಂದು ಹುಡುಗಿಯ ತಂದೆ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಮಗಳು ಯಾರಿಂದಾದರೂ ಕಿರುಕುಳದ ಬಗ್ಗೆ ದೂರು ನೀಡಿದ್ದಾಳೆಯೇ ಎಂದು ಕೇಳಿದಾಗ, ಆಕೆಯ ತಂದೆ "ಇಲ್ಲ ಅವಳು ಯಾವುದೇ ದೂರು ನೀಡಿಲ್ಲ. ನಾನು ಅವಳೊಂದಿಗೆ ಪ್ರತೀ ಬಾರಿ ಇರುತ್ತಿದೆ. ಸಹೋದರಿಯರು ಮೆಟ್ರೋದಲ್ಲಿ ಒಟ್ಟಿಗೆ ಶಾಲೆಗೆ ಹೋಗುತ್ತಾರೆ" ಎಂದು ಹೇಳಿದರು. ಆಕೆಯ ಸ್ಥಿತಿ ಚಿಂತಾಜನಕವಾಗಿದೆ ಎಂದು ಬಾಲಕಿಯ ತಂದೆ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಬಾಲಕಿಯ ತಾಯಿ ಕೂಡ ಬಾಲಕಿ ಯಾರ ಮೇಲೂ ಈ ಹಿಂದೆ ದೂರು ನೀಡಿರಲಿಲ್ಲ ಎಂದು ಹೇಳಿಕೊಂಡಿದ್ದಾರೆ.

ದೆಹಲಿ ಮಹಿಳಾ ಸಮಿತಿ ಮುಖ್ಯಸ್ಥೆ ಸ್ವಾತಿ ಮಲಿವಾಲ್ ಘಟನೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದು, ಇಂತಹ ಘೋರ ಅಪರಾಧಗಳನ್ನು ತಡೆಯಲು ಆಸಿಡ್ ಮಾರಾಟವನ್ನು ಏಕೆ ನಿರ್ಬಂಧಿಸಲು ಸಾಧ್ಯವಿಲ್ಲ ಎಂದು ಪ್ರಶ್ನಿಸಿದ್ದಾರೆ. "ದೇಶದ ರಾಜಧಾನಿಯಲ್ಲಿ ಹಗಲು ಹೊತ್ತಿನಲ್ಲಿ ಇಬ್ಬರು ಗೂಂಡಾಗಳು ಶಾಲಾ ಬಾಲಕಿಯ ಮೇಲೆ ಆಸಿಡ್ ಎರಚಿದ್ದಾರೆ. ಯಾರಿಗಾದರೂ ಕಾನೂನಿಗೆ ಭಯವಿದೆಯೇ? ಆಸಿಡ್ ಮಾರಾಟವನ್ನು ಏಕೆ ನಿಷೇಧಿಸಬಾರದು?" ಎಂದು ಅವರು ಟ್ವೀಟ್ ಮಾಡಿದ್ದಾರೆ.

ಮತ್ತೊಂದು ಪೋಸ್ಟ್‌ನಲ್ಲಿ ಅವರು ತರಕಾರಿಗಳಂತೆ ಸುಲಭವಾಗಿ ಆಸಿಡ್ ಲಭ್ಯವಿದೆ ಎಂದು ಹೇಳಿದ್ದಾರೆ. ಸರ್ಕಾರವು ಅದರ ಮಾರಾಟವನ್ನು ಏಕೆ ನಿಷೇಧಿಸುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ. ಸರ್ಕಾರಗಳು ಯಾವಾಗ ಎಚ್ಚೆತ್ತುಕೊಳ್ಳುತ್ತವೆ? ದೆಹಲಿಯ ಮಹಿಳಾ ಸಮಿತಿಯು ಆಸಿಡ್ ನಿಷೇಧಕ್ಕೆ ಹಲವು ವರ್ಷಗಳಿಂದ ಒತ್ತಾಯಿಸುತ್ತಿದೆ ಎಂದು ಅವರು ಹೇಳಿದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+