ಕೊಚ್ಚಿಹೋಗಿದ್ದ ಶಿವನ ಚಿನ್ನದ ಕಿರೀಟ ಸಿಕ್ಕಿತು!

dehradun-kedarnath-lord-shiva-missing-arti-gold-crown-found
ಡೆಹ್ರಾಡೂನ್, ಅ.11- ಆರು ತಿಂಗಳ ಶಿವ ಭೀಕರ ನೃತ್ಯತಾಂಡವ ಮಾಡುವಾಗ ಕೇದಾರನಾಥ ಪುಣ್ಯಕ್ಷೇತ್ರದಲ್ಲಿ ಆತನ ಮುಡಿಗೆ ತೊಡಿಸುತ್ತಿದ್ದ ಹಳೆಯ ಚಿನ್ನದ ಕಿರೀಟವೂ ನಾಪತ್ತೆಯಾಗಿತ್ತು. ಆದರೆ ಅದೀಗ ಸಿಕ್ಕಿದೆ.

ಲಕ್ಷಾಂತರ ರೂಪಾಯಿ ಬೆಲೆಬಾಳುವ ಸುಮಾರು ಅರ್ಧ ಕೆಜಿಗೂ ಹೆಚ್ಚು ತೂಕದ ಅಮೂಲ್ಯ ಚಿನ್ನದ ಕಿರೀಟವು ಹಿಮಾಲಯ ಸುನಾಮಿ ವೇಳೆ ನಾಪತ್ತೆಯಾಗಿತ್ತು. ಅದೀಗ ಕೇದಾರನಾಥ ದೇವಸ್ಥಾನದ ಸಿಬ್ಬಂದಿಯ ವಿಶ್ರಾಂತಿ ಗೃಹದಲ್ಲಿ ಪತ್ತೆಯಾಗಿದೆ ಎಂದು Badrinath-Kedarnath Mandir Samiti ಅಧ್ಯಕ್ಷ ಗಣೇಶ್ ಗೊಡಿಯಾಳ್ ಅವರು ತಿಳಿಸಿದ್ದಾರೆ.

ಕೇದಾರನಾಥದ ಗರ್ಭಗುಡಿಯಲ್ಲಿರುವ ಶಿವಲಿಂಗದ ಮೇಲೆ ಈ ಕಿರೀಟ ತೊಡಿಸಲಾಗುತ್ತಿತ್ತು. ಪ್ರತಿ ರಾತ್ರಿ ಪೂಜಾ ಸಮಯದಲ್ಲಿ (ಆರತಿ ಎತ್ತುವಾಗ) ಇದನ್ನು ವಿಶೇಷವಾಗಿ ಬಳಸಲಾಗುತ್ತಿತ್ತು. ಆದರೆ ಸುನಾಮಿಯಲ್ಲಿ ಕೊಚ್ಚಿಹೋಗಿದ್ದ ಚಿನ್ನದ ಕಿರೀಟವು ದೇವಸ್ಥಾನದ ವಿಶ್ರಾಂತಿ ಗೃಹವನ್ನು ಸ್ವಚ್ಛಗೊಳಿಸುವಾಗ ಸಿಬ್ಬಂದಿಯ ಕಣ್ಣಿಗೆ ಬಿದ್ದಿದೆ.

ಸರಿಯಾಗಿ 2 ತಿಂಗಳ ಹಿಂದೆ, ಪುರಾಣಪ್ರಸಿದ್ಧ ಕೇದಾರನಾಥ ಹಿಮಾಲಯ ಸುನಾಮಿಯಲ್ಲಿ ಜಲಪ್ರಳಯದಿಂದ ಅಕ್ಷರಶಃ ಕೊಚ್ಚಿಹೋದ ನಂತರ ಕೇದಾರನಾಥ ಕ್ಷೇತ್ರವನ್ನು ಶುಚಿಗೊಳಿಸುವ ವೇಳೆ ಅವಶೇಷಗಳ ನಡುವೆ ಹೂತುಹೋಗಿದ್ದ ಸ್ಥಳೀಯ SBI ಶಾಖೆಯ ಲಾಕರ್‌ ಮತ್ತು ಅದರಲ್ಲಿದ್ದ 1.90 ಕೋಟಿ ರೂ. ನಗದು ಸಿಕ್ಕಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+