ಕೇರಳದಲ್ಲಿ ಸಿಪಿಎಂ ಸದಸ್ಯನನ್ನು ಕೊಚ್ಚಿ ಕೊಂದ ದುಷ್ಕರ್ಮಿಗಳು
ಮಾಹೆ, ಮೇ 08: ಭಾರತೀಯ ಕಮ್ಯುನಿಸ್ಟ್ ಪಕ್ಷ(ಸಿಪಿಐ(ಎಂ)) ಸ್ಥಳೀಯ ಸಮಿತಿ ಸದಸ್ಯರೊಬ್ಬರನ್ನು ದುಷ್ಕರ್ಮಿಗಳು ಕೊಚ್ಚಿಕೊಂದ ಘಟನೆ ಕೇರಳದ ಕಣ್ಣೂರು ಗಡಿಯಲ್ಲಿರುವ ಪುದುಚೇರಿಯ ಮಾಹೆಯಲ್ಲಿ ನಿನ್ನೆ(ಮೇ 07) ರಾತ್ರಿ ಸುಮಾರು 9 ಗಂಟೆಯ ಸಮಯದಲ್ಲಿ ನಡೆದಿದೆ.
ಮಾಹೆಯ ಪಲ್ಲೂರ್ ಎಂಬಲ್ಲಿ ಬಾಬು ಎಂಬ ಸಿಪಿಎಂ ಸದಸ್ಯನ ಮೇಲೆ ಕೆಲ ಕಿಡಿಗೇಡಿಗಳು ದಾಳಿ ನಡೆಸಿದ್ದರು. ದಾಳಿಯ ನಂತರ ತೀವ್ರವಾಗಿ ಗಾಯಗೊಂಡ ಅವರನ್ನು ತಕ್ಷಣವೇ ಆಸ್ಪತ್ರೆಗೆ ರವಾನಿಸಲಾಯಿತಾದರೂ ಅವರು ಬದುಕುಳಿಯಲಿಲ್ಲ.

ಸಿಪಿಎಂ ಪಕ್ಷದ ಸದಸ್ಯರು, ಈ ಘಟನೆಯಲ್ಲಿ ಆರ್ ಎಸ್ ಎಸ್ ಮತ್ತು ಬಿಜೆಪಿಯ ಕೈವಾಡವಿದೆ ಎಂದು ದೂರಿದೆ. ಘಟನೆಗೆ ಸಂಬಂಧಿಸಿದಂತೆ ದೂರು ದಾಖಲಿಸಿಕೊಂಡಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಸಿಪಿಎಂ ಸದಸ್ಯನ ಹತ್ಯೆ ಖಂಡಿಸಿ ಇಂದು(ಮೇ 08) ಕಣ್ಣೂರು ಜಿಲ್ಲೆಯಲ್ಲಿ ಮುಷ್ಕರ ನಡೆಸಲು ನಿರ್ಧರಿಸಲಾಗಿದೆ.












Click it and Unblock the Notifications