ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Important ಸುದ್ದಿ: ಭಾರತದ ಯಾವ ರಾಜ್ಯಕ್ಕೆ ಎಷ್ಟು ಕೊರೊನಾ ಲಸಿಕೆ?

|
Google Oneindia Kannada News

ನವದೆಹಲಿ, ಫೆಬ್ರವರಿ.03: ಭಾರತೀಯರು ಭಯಪಡುವಂತಾ ವಾತಾವರಣ ಇನ್ನಿಲ್ಲ. ದೇಶವನ್ನು ಕೊರೊನಾವೈರಸ್ ಮುಕ್ತಗೊಳಿಸುವ ನಿಟ್ಟಿನಲ್ಲಿ ಕ್ಷಿಪ್ರಗತಿಯ ಲಸಿಕೆ ಅಭಿಯಾನ ನಡೆಸಲಾಗುತ್ತಿದೆ. ಜೊತೆಗೆ ಕೊವಿಡ್-19 ಸೋಂಕಿತರ ಸಂಖ್ಯೆ ಮತ್ತು ಸಾವಿನ ಸಂಖ್ಯೆ ಸಹ ಇಳಿಮುಖವಾಗುತ್ತಿದೆ.

ಜನವರಿ.16ರಂದು ಮೊದಲ ಬಾರಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಕೊವಿಡ್-19 ಲಸಿಕೆ ನೀಡುವ ಅಭಿಯಾನಕ್ಕೆ ಚಾಲನೆ ನೀಡಿದ್ದರು. ಅಂದಿನಿಂದ ಇಂದಿನವರೆಗೂ 41 ಲಕ್ಷಕ್ಕೂ ಅಧಿಕ ಮಂದಿಗೆ ಕೊರೊನಾವೈರಸ್ ಲಸಿಕೆಯನ್ನು ನೀಡಲಾಗಿದೆ.

 ಪೋಲಿಯೋ ಹನಿ ಬದಲು 12 ಮಕ್ಕಳಿಗೆ ಸ್ಯಾನಿಟೈಸರ್ ಹಾಕಿದ ಸಿಬ್ಬಂದಿ ಪೋಲಿಯೋ ಹನಿ ಬದಲು 12 ಮಕ್ಕಳಿಗೆ ಸ್ಯಾನಿಟೈಸರ್ ಹಾಕಿದ ಸಿಬ್ಬಂದಿ

ಆಕ್ಸ್ ಫರ್ಡ್ ಮತ್ತು ಆಸ್ಟ್ರಾಜೆನಿಕಾ ಸಂಸ್ಥೆ ಸಂಶೋಧಿಸಿದ ಪುಣೆಯ ಸೆರಮ್ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾದಲ್ಲಿ ಉತ್ಪಾದನೆ ಆಗುತ್ತಿರುವ ಕೊವಿಶೀಲ್ಡ್ ಲಸಿಕೆ ಮತ್ತು ಭಾರತ್ ಬಯೋಟೆಕ್ ಉತ್ಪಾದಿಸುತ್ತಿರುವ ಕೊವ್ಯಾಕ್ಸಿನ್ ಲಸಿಕೆಯನ್ನು ರಾಜ್ಯವಾರು ಹಂಚಿಕೆ ಮಾಡಲಾಗಿದೆ. ಯಾವ ರಾಜ್ಯಕ್ಕೆ ಎಷ್ಟು ಡೋಸ್ ಲಸಿಕೆ ನೀಡಲಾಗಿದೆ. ದೇಶದಲ್ಲಿ ಕೊವಿಡ್-19 ಅಂಕಿ-ಸಂಖ್ಯೆಗಳು ಹೇಗಿವೆ. ಇದುವರೆಗೂ ಎಷ್ಟು ಜನರಿಗೆ ಲಸಿಕೆ ನೀಡಲಾಗಿದೆ ಹಾಗೂ ಅತಿಹೆಚ್ಚು ಲಸಿಕೆ ವಿತರಿಸಿದ ರಾಜ್ಯಗಳು ಯಾವುವು ಎನ್ನುವುದರ ಕುರಿತು ವಿಶೇಷ ವರದಿ ಇಲ್ಲಿದೆ.

ಯಾವ ರಾಜ್ಯಕ್ಕೆ ಎಷ್ಟು ಡೋಸ್ ಕೊರೊನಾ ಲಸಿಕೆ?

ಯಾವ ರಾಜ್ಯಕ್ಕೆ ಎಷ್ಟು ಡೋಸ್ ಕೊರೊನಾ ಲಸಿಕೆ?

ಭಾರತದಲ್ಲಿ ಒಟ್ಟು 92,61,227 ಡೋಸ್ ಕೊರೊನಾವೈರಸ್ ಲಸಿಕೆಯನ್ನು ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶವಾರು ಹಂಚಿಕೆ ಮಾಡಲಾಗಿದೆ. ಯಾವ ಕೇಂದ್ರಾಡಳಿತ ಪ್ರದೇಶ ಮತ್ತು ರಾಜ್ಯಕ್ಕೆ ಎಷ್ಟು ಪ್ರಮಾಣದಲ್ಲಿ ಲಸಿಕೆಯನ್ನು ಹಂಚಿಕೆ ಮಾಡಲಾಗಿದೆ ಎನ್ನುವುದರ ಕುರಿತು ಮಾಹಿತಿ ಇಂತಿದೆ.

ರಾಜ್ಯ ಕೊರೊನಾ ಲಸಿಕೆ
ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು 5,058
ಆಂಧ್ರಪ್ರದೇಶ 4,38,990
ಅರುಣಾಚಲ ಪ್ರದೇಶ 24,551
ಅಸ್ಸಾಂ 2,10,359
ಬಿಹಾರ 4,68,790
ಚಂಡೀಗಢ 18,890
ಛತ್ತೀಸ್ ಗಢ 2,73,442
ದಾದ್ರಾ ಮತ್ತು ನಗರ ಹವೇಲಿ 4,220
ದಮನ್ ಮತ್ತು ದಿಯು 1,440
ದೆಹಲಿ 2,78,343
ಗೋವಾ 19,181
ಗುಜರಾತ್ 5,16,425
ಹರಿಯಾಣ 2,24,376
ಹಿಮಾಚಲ ಪ್ರದೇಶ 79,551
ಜಮ್ಮು ಮತ್ತು ಕಾಶ್ಮೀರ 1,14,426
ಜಾರ್ಖಂಡ್ 1,63,844
ಕರ್ನಾಟಕ 7,73,362
ಕೇರಳ 4,07,016
ಲಡಾಖ್ 5,857
ಲಕ್ಷದ್ವೀಪ 895
ಮಧ್ಯಪ್ರದೇಶ 4,29,981
ಮಹಾರಾಷ್ಟ್ರ 9,36,857
ಮಣಿಪುರ 45,071
ಮೇಘಾಲಯ 33,234
ಮಿಜೋರಾಂ 15,534
ನಾಗಾಲ್ಯಾಂಡ್ 21,503
ಒಡಿಶಾ 3,59,653
ಪುದುಚೇರಿ 24,970
ಪಂಜಾಬ್ 1,97,481
ರಾಜಸ್ಥಾನ 5,24,218
ಸಿಕ್ಕಿಂ 10,691
ತಮಿಳುನಾಡು 5,32,605
ತೆಲಂಗಾಣ 3,45,775
ತ್ರಿಪುರಾ - 47,035
ಉತ್ತರ ಪ್ರದೇಶ 9,06,752
ಉತ್ತರಾಖಂಡ 1,00,433
ಪಶ್ಚಿಮ ಬಂಗಾಳ 7,00,418
ದೇಶದಲ್ಲಿ ಈವರೆಗೂ 41 ಲಕ್ಷ ಜನರಿಗೆ ಕೊವಿಡ್ ಲಸಿಕೆ

ದೇಶದಲ್ಲಿ ಈವರೆಗೂ 41 ಲಕ್ಷ ಜನರಿಗೆ ಕೊವಿಡ್ ಲಸಿಕೆ

ಭಾರತದಲ್ಲಿ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗು ನಿಯಂತ್ರಿಸುವುದಕ್ಕಾಗಿ ಕ್ಷಿಪ್ರಗತಿಯಲ್ಲಿ ಕೊರೊನಾವೈರಸ್ ಲಸಿಕೆ ವಿತರಣೆ ಅಭಿಯಾನ ನಡೆಸಲಾಗುತ್ತಿದೆ. ದೇಶದಲ್ಲಿ ಇದುವರೆಗೂ 41,20,741 ವೈದ್ಯಕೀಯ ಸಿಬ್ಬಂದಿ ಮತ್ತು ಆರೋಗ್ಯ ಕಾರ್ಯಕರ್ತರಿಗೆ ಸೆರಮ್ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾದ ಕೊವಿಶೀಲ್ಡ್ ಮತ್ತು ಭಾರತ್ ಬಯೋಟೆಕ್ ಸಂಸ್ಥೆಯ ಕೊವ್ಯಾಕ್ಸಿನ್ ಲಸಿಕೆ ನೀಡಲಾಗಿದೆ. ಪಶ್ಚಿಮ ಬಂಗಾಳ ಮತ್ತು ಗುಜರಾತ್ ನಲ್ಲಿ ಮುಂಚೂಣಿ ಕಾರ್ಯಕರ್ತರಿಗೂ ಕೊವಿಡ್-19 ಲಸಿಕೆಯ ನೀಡಲಾಯಿತು. ಮಂಗಳವಾರ ರಾತ್ರಿ 7 ಗಂಟೆ ವೇಳೆಗೆ 19,902 ಮುಂಚೂಣಿ ಕಾರ್ಮಿಕರು ಕೊರೊನಾವೈರಸ್ ಲಸಿಕೆ ಹಾಕಿಸಿಕೊಂಡಿದ್ದಾರೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಮಾಹಿತಿ ನೀಡಿದೆ.

ಅತಿಹೆಚ್ಚು ಜನರಿಗೆ ಲಸಿಕೆ ನೀಡಿದ ಟಾಪ್-5 ರಾಜ್ಯಗಳು

ಅತಿಹೆಚ್ಚು ಜನರಿಗೆ ಲಸಿಕೆ ನೀಡಿದ ಟಾಪ್-5 ರಾಜ್ಯಗಳು

ರಾಜ್ಯ ಲಸಿಕೆ ಹಾಕಿಸಿಕೊಂಡ ಫಲಾನುಭವಿಗಳು
ಉತ್ತರ ಪ್ರದೇಶ 4,63,793
ರಾಜಸ್ಥಾನ 3,38,960
ಮಹಾರಾಷ್ಟ್ರ 3,18,735
ಕರ್ನಾಟಕ 3,16,368
ಮಧ್ಯಪ್ರದೇಶ 2,98,376
ದೇಶದಲ್ಲಿ ಕೊರೊನಾವೈರಸ್ ಸೋಂಕಿತರ ಪ್ರಮಾಣ

ದೇಶದಲ್ಲಿ ಕೊರೊನಾವೈರಸ್ ಸೋಂಕಿತರ ಪ್ರಮಾಣ

ಕಳೆದ 8 ತಿಂಗಳ ನಂತರದಲ್ಲಿ ಮೊದಲ ಬಾರಿಗೆ ಭಾರತದಲ್ಲಿ ಮಹಾಮಾರಿಗೆ ಬಲಿಯಾದವರ ಸಂಖ್ಯೆ ಎರಡಂಕಿಗೆ ಇಳಿಕೆಯಾಗಿದೆ. 24 ಗಂಟೆಗಳಲ್ಲಿ ಕೊವಿಡ್-19 ಸೋಂಕಿಗೆ 94 ಮಂದಿ ಮೃತಪಟ್ಟಿದ್ದು, ಸಾವಿನ ಸಂಖ್ಯೆ 1,54,486ಕ್ಕೆ ಏರಿಕೆಯಾಗಿದೆ. ಕಳೆದೊಂದು ದಿನದಲ್ಲಿ 8635 ಮಂದಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. ಮಂಗಳವಾರದ ಅಂಕಿ-ಅಂಶಗಳ ಪ್ರಕಾರ, ದೇಶದಲ್ಲಿ ಒಟ್ಟು ಕೊರೊನಾವೈರಸ್ ಸೋಂಕಿತ ಪ್ರಕರಣಗಳ ಸಂಖ್ಯೆ 1,07,66,245ಕ್ಕೆ ಏರಿಕೆಯಾಗಿದೆ. 1,04,48,406 ಕೊವಿಡ್-19 ಸೋಂಕಿತರು ಗುಣಮುಖರಾಗಿದ್ದು, ಉಳಿದಂತೆ 1,63,353 ಸಕ್ರಿಯ ಪ್ರಕರಣಗಳಿವೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಮಾಹಿತಿ ನೀಡಿದೆ.

English summary
COVID-19 Vaccines Allocation For States And Union Territory In India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X