ಕೊವಿಡ್ 19 ಲಸಿಕೆ ಉತ್ಪಾದನೆಯ ದೊಡ್ಡ ಕೇಂದ್ರವಾಗಲಿದೆ ಭಾರತ
ನವದೆಹಲಿ, ನವೆಂಬರ್ 03: ಇಡೀ ವಿಶ್ವದಾದ್ಯಂತ ವಿಜ್ಞಾನಿಗಳು, ಔಷಧ ತಯಾರಕರು ಕೊರೊನಾ ಸೋಂಕಿಗೆ ಸುರಕ್ಷಿತ ಔಷಧವನ್ನು ಕಂಡುಹಿಡಿಯುವ ಕುರಿತು ಚಿಂತಾಕ್ರಾಂತರಾಗಿದ್ದಾರೆ.
ಲಸಿಕೆ ಬಂದ ಬಳಕವೂ ಎಲ್ಲರಿಗೂ ಅದನ್ನು ಲಭ್ಯವಾಗುವಂತೆ ಮಾಡುವುದು ಕೂಡ ಇವರ ಕೈಯಲ್ಲಿಯೇ ಇದೆ. ಈ ಕುರಿತು ಕಳವಳ ವ್ಯಕ್ತಪಡಿಸಿದ್ದಾರೆ.
ಜಾಗತಿಕ ಲಸಿಕೆ ಸ್ಪರ್ಧೆಯಲ್ಲಿ ಭಾರತವು ಮೊದಲನೇ ಸ್ಥಾನವನ್ನು ಹೊಂದಿದೆ, ಶೀಘ್ರವೇ ಭಾರತವು ಔಷಧ ಹಬ್ ಆಗುವುದರಲ್ಲಿ ಸಂದೇಹವಿಲ್ಲ. ದೇಶದಲ್ಲಿ ಪ್ರಸ್ತುತ ಮೂರು ಕೊವಿಡ್ 19 ಲಸಿಕೆಗಳಿವೆ. ಇದರಲ್ಲಿ ಇಬ್ಬರು ಸ್ಥಳೀಯ ಅಭ್ಯರ್ಥಿಗಳು ಇದ್ದಾರೆ, ಲಸಿಕೆಯು ಮೌಲ್ಯಮಾಪನದ ವಿವಿಧ ಹಂತಗಳಲ್ಲಿವೆ.

ಇತ್ತೀಚೆಗಷ್ಟೇ ಡಿಜಿಸಿಐ ಡಾ. ರೆಡ್ಡೀಸ್ ಅವರ ಪ್ರಯೋಗಾಲಯದಲ್ಲಿ ಸ್ಪುಟ್ನಿಕ್ V ಕೊವಿಡ್ 19 ಲಸಿಕೆಯ ಪ್ರಯೋಗವನ್ನು ನಡೆಸಲು ಅನುಮತಿ ನೀಡಿದೆ.
ಇದರ ಮಧ್ಯೆ ಸ್ವೀಡಿಷ್ ಬಹುರಾಷ್ಟ್ರೀಯ ಔಷಧೀಯ ಕಂಪನಿ ಮತ್ತು ಜೈವಿಕ ಔಷಧೀಯ ಕಂಪನಿ ಆಸ್ಟ್ರಾಜೆನೆಕಾ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದೊಂದಿಗೆ ಜಂಟಿಯಾಗಿ ಅಭಿವೃದ್ಧಿಪಡಿಸಿದ ತನ್ನ ಪ್ರಾಯೋಗಿಕ ಕೊರೊನಾ ವೈರಸ್ ಲಸಿಕೆಯ ಬಗ್ಗೆ ತ್ವರಿತ ವಿಮರ್ಶೆಯನ್ನು ಪ್ರಾರಂಭಿಸಿದೆ ಎಂದು ಹೇಳಿದೆ.
ಭಾರತದಲ್ಲಿ ಕನಿಷ್ಠ ಮೂರು ಲಸಿಕೆಗಳನ್ನು ಪರೀಕ್ಷಿಸಲಾಗುತ್ತಿದೆ. ಇವುಗಳಲ್ಲಿ ಭಾರತ್ ಬಯೋಟೆಕ್ ಮತ್ತು ಐಸಿಎಂಆರ್‌ನ ಕೋವಾಕ್ಸಿನ್ ಜೈಡಸ್ ಕ್ಯಾಡಿಲಾ ಮತ್ತು ಆಕ್ಸ್‌ಫರ್ಡ್‌ನ ಆಸ್ಟ್ರಾಜೆನೆಕಾ ಕೂಡ ಒಂದಾಗಿದೆ. ಇನ್ನು ಕೊವಿಶೀಲ್ಡ್‌ನ್ನು ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಅಭಿವೃದ್ಧಿಪಡಿಸುತ್ತಿದೆ.
ಒಟ್ಟಿನಲ್ಲಿ ಭಾರತವು ಔಷಧೀಯ ಹಬ್ ಆಗಿ ಹೊರಹೊಮ್ಮಲಿದೆ. ಆಸ್ಟ್ರಾಜೆನೆಕಾ ಕುರಿತು ಬ್ರಿಟನ್ ಆರೋಗ್ಯ ನಿಯಂತ್ರಕರು ವಿಮರ್ಶೆಯನ್ನು ಆರಂಭಿಸಿದ್ದಾರೆ.












Click it and Unblock the Notifications