ಯಾವ ವಯಸ್ಸಿನವರಿಗೆ ಯಾವ ಕೊರೊನಾ ಲಸಿಕೆ ನೀಡಲಾಗುತ್ತಿದೆ?
ನವದೆಹಲಿ, ಜನವರಿ 04: ಕೊರೊನಾ ಸೋಂಕಿನ ನಿವಾರಣೆಗೆ ಸೆರಂ ಇನ್ ಸ್ಟಿಟ್ಯೂಟ್ ನ ಕೋವಿಶೀಲ್ಡ್ ಲಸಿಕೆಯ ತುರ್ತು ಬಳಕೆಗೆ ಜನವರಿ 1ರಂದು ಅನುಮೋದನೆ ದೊರೆತಿದೆ.
12 ವರ್ಷ ಮೇಲ್ಪಟ್ಟ ಮಕ್ಕಳಿಗೆ ಭಾರತ್ ಬಯೋಟೆಕ್ ನ ಕೊವಾಕ್ಸಿನ್ ಲಸಿಕೆ ನೀಡಲು ಹಾಗೂ ಪುಣೆ ಮೂಲದ ಸೆರಂ ಇನ್ ಸ್ಟಿಟ್ಯೂಟ್ ಆಫ್ ಇಂಡಿಯಾ ಆಕ್ಸ್ ಫರ್ಡ್ ಆಸ್ಟ್ರಾಜೆನಿಕಾ ಅಭಿವೃದ್ಧಿಪಡಿಸಿದ ಕೋವಿಶೀಲ್ಡ್ ಲಸಿಕೆಯನ್ನು 18 ವರ್ಷ ಮೇಲ್ಪಟ್ಟವರಿಗೆ ಬಳಸಲು ಭಾರತೀಯ ಔಷಧ ನಿಯಂತ್ರಕ ಕೇಂದ್ರ ಭಾನುವಾರ ಅನುಮತಿ ನೀಡಿದೆ. ಭಾರತ್ ಬಯೋಟೆಕ್ ನ ಕೊವಾಕ್ಸಿನ್ ಹಾಗೂ ಸೆರಂ ಇನ್ ಸ್ಟಿಟ್ಯೂಟ್ ನ ಕೋವಿಶೀಲ್ಡ್ ಲಸಿಕೆಯ ತುರ್ತು ಬಳಕೆಗೆ ಭಾರತದ ಡಿಸಿಜಿಐ ಅನುಮೋದನೆ ನೀಡಿದ್ದು, ಭಾರತದಲ್ಲಿ ಬೃಹತ್ ಲಸಿಕಾ ಕಾರ್ಯಕ್ರಮಕ್ಕೆ ದಾರಿ ಮಾಡಿಕೊಟ್ಟಿದೆ. ಮುಂದೆ ಓದಿ...

ನಿರ್ಬಂಧಿತ ಬಳಕೆಗೆ ಮಾತ್ರ ಅನುಮತಿ
ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ನಿರ್ಬಂಧಿತ ಬಳಕೆಗೆ ಮಾತ್ರ ಈ ಎರಡು ಲಸಿಕೆಗಳನ್ನು ಬಳಸಲು ಡಿಸಿಜಿಐ ಅನುಮತಿ ನೀಡಿದೆ. ಅನುಮತಿ ಪತ್ರದಲ್ಲಿ, ಈ ಎರಡೂ ಲಸಿಕೆಗಳನ್ನು ಎರಡು ಡೋಸ್ ನೀಡಬೇಕೆಂದು ತಿಳಿಸಿದೆ. ಕೇಂದ್ರ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆಯ ಕೊರೊನಾ ಸೋಂಕಿನ ವಿಷಯ ತಜ್ಞರ ಸಮಿತಿ ಸಲ್ಲಿಸಿದ ಶಿಫಾರಸ್ಸುಗಳ ಆಧಾರದ ಮೇಲೆ ಡಿಸಿಜಿಐ ಲಸಿಕೆಗಳಿಗೆ ಅನುಮೋದನೆ ನೀಡಿದೆ. 12 ವರ್ಷ ಮೇಲ್ಪಟ್ಟ ಮಕ್ಕಳಿಗೆ ಕೊವಾಕ್ಸಿನ್ ಲಸಿಕೆ ಹಾಗೂ ಕೋವಿಶೀಲ್ಡ್ ಲಸಿಕೆಯನ್ನು 18 ವರ್ಷ ಮೇಲ್ಪಟ್ಟವರಿಗೆ ಬಳಸಲು ಭಾರತೀಯ ಔಷಧ ನಿಯಂತ್ರಕ ಕೇಂದ್ರ ಭಾನುವಾರ ಅನುಮತಿ ನೀಡಿದೆ.
"ಬೇಡಿಕೆ ಬಂದ ಹತ್ತು ದಿನಗಳಲ್ಲೇ ಸಿದ್ಧಗೊಳ್ಳುತ್ತದೆ ಲಸಿಕೆ"

ಅನುಮೋದನೆ ಅಪಾಯಕಾರಿ ಎಂದ ಕಾಂಗ್ರೆಸ್
ಮೂರನೇ ಹಂತದ ಪ್ರಯೋಗಕ್ಕೆ ಒಳಪಡದೇ ಭಾರತ್ ಬಯೋಟೆಕ್ ನ ಕೊರೊನಾ ವೈರಸ್ ಲಸಿಕೆಯ ತುರ್ತು ಬಳಕೆಗೆ ಅಧೀಕೃತ ಅನುಮೋದನೆ ನೀಡಿದ ಬೆನ್ನಲ್ಲೇ ಪ್ರಶ್ನೆಗಳು ಎದ್ದಿವೆ. ಈ ಅನುಮೋದನೆ ಅಪಾಯಕಾರಿ ಎಂದು ಕಾಂಗ್ರೆಸ್ ಆರೋಪಿಸಿದ್ದು, ಅನುಮೋದನೆಯಲ್ಲಿ ಶಿಷ್ಟಾಚಾರ ಪಾಲನೆಯನ್ನು ಏಕೆ ಮಾಡಿಲ್ಲ? ಮಾಹಿತಿಯ ಪರಿಶೀಲನೆಯನ್ನು ಏಕೆ ಸರಿಯಾಗಿ ಮಾಡಿಲ್ಲ ಎಂದು ಪ್ರಶ್ನಿಸಿದೆ.

ಲಸಿಕೆ ಸಮರ್ಥಿಸಿಕೊಂಡ ಸಂಸ್ಥೆ
ಇದಕ್ಕೆ ಉತ್ತರಿಸಿರುವ ಡಿಸಿಜಿಐ, ಭಾರತ್ ಬಯೋಟೆಕ್ ನ ಕೊವಾಕ್ಸಿನ್ ಲಸಿಕೆ ಸುರಕ್ಷಿತ ಹಾಗೂ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಎಂಬುದು ಸಾಬೀತಾಗಿದೆ. ಔಷಧ ನಿಯಂತ್ರಕ ಸಂಸ್ಥೆ, ಯಾವುದೇ ಲಸಿಕೆಯನ್ನು ಸುರಕ್ಷೆ ಇಲ್ಲದೇ ಅನುಮೋದನೆ ನೀಡುವುದಿಲ್ಲ. ಈ ಲಸಿಕೆ ಶೇ. 110ರಷ್ಟು ಸುರಕ್ಷಿತ ಎಂದು ಸಮರ್ಥಿಸಿಕೊಂಡಿದೆ.
ಸಮರ್ಪಕ ದಾಖಲೆಗೂ ಮುನ್ನ ಕೋವ್ಯಾಕ್ಸಿನ್ ಲಸಿಕೆಗೆ ಅನುಮತಿ: ವಿಜ್ಞಾನಿಗಳ ಆಕ್ಷೇಪ

ಭಾರತ್ ಬಯೋಟೆಕ್ ಗೆ ಪರವಾನಗಿ ಅನುಮತಿ
ಭಾನುವಾರ ಸಂಜೆ ಡಿಸಿಜಿಐ ಕೊವಾಕ್ಸಿನ್- ಭಾರತ್ ಬಯೋಟೆಕ್ ಗೆ ಪರವಾನಗಿ ಅನುಮತಿಯನ್ನೂ ನೀಡಿದೆ. ತನ್ನ ಪ್ರಾಯೋಗಿಕ ಹಂತ 1,2 ಹಾಗೂ 3ರ ಪ್ರಾಯೋಗಿಕ ಹಂತಗಳಲ್ಲಿ ಸುರಕ್ಷೆತೆ, ಪರಿಣಾಮಕಾರಿತ್ವದ ಕುರಿತು ಮಾಹಿತಿ ನೀಡುವಂತೆ ಸೂಚಿಸಿದೆ. ಇದೇ ಸಂದರ್ಭ ಸೆರಂ ಇನ್ ಸ್ಟಿಟ್ಯೂಟ್ ನ ಸಿಇಒ ಪೂನವಾಲಾ, ಆಕ್ಸ್ ಫರ್ಡ್ ಆಸ್ಟ್ರಾಜೆನಿಕಾ ಕೊರೊನಾ ಲಸಿಕೆ "ಕೋವಿಶೀಲ್ಡ್" ಅನ್ನು ಭಾರತದ ಸರ್ಕಾರಕ್ಕೆ ಡೋಸ್ ಗೆ 200 ರೂನಂತೆ ಹಾಗೂ ಖಾಸಗಿದಾರರಿಗೆ ಡೋಸ್ ಗೆ 1000ರೂ ನೀಡುವುದಾಗಿ ತಿಳಿಸಿದೆ.