ಶಾಲೆ ಪಠ್ಯಕ್ರಮ ಇಲ್ಲವೇ ಇಲ್ಲ, ಪ್ರಕೃತಿಯ ಮಡಿಲಲ್ಲಿ ಜೀವನ ಪಾಠ: ಮಗನ ಒತ್ತಡರಹಿತ ಶಿಕ್ಷಣಕ್ಕಾಗಿ ಸಿಂಗಾಪುರ ಬಿಟ್ಟು ಬಂದ ದಂಪತಿ

ಕಾರ್ಪೊರೇಟ್ ಉದ್ಯೋಗದಲ್ಲಿದ್ದವರಿಗೆ ಕಾರ್ಪೋರೇಟ್‌ ಲೈಫ್‌ಸ್ಟೈಲ್‌ಗೆ ಹೊಂದಿಕೊಂಡವರಿಗೆ ಮತ್ತೆ ತಮ್ಮ ಊರುಗಳಿಗೆ ವಾಪಸ್‌ ಆಗಿ ಅಲ್ಲಿನ ರೀತಿ ನೀತಿಯಂತೆ ಬದುಕುವುದು ಕಷ್ಟವಾಗಬಹುದು. ಇದೇ ಕಾರಣಕ್ಕೆ ದುಡಿಮೆಗಾಗಿ ಒಮ್ಮೆ ಊರು ಬಿಟ್ಟವರು ಮತ್ತೆ ತಮ್ಮ ಊರಿಗೆ ವಾಪಸ್‌ ಬರುವುದಕ್ಕೆ ಹಿಂದೆ ಮುಂದೆ ಯೋಚಿಸುತ್ತಾರೆ. ಆದರೆ ಇಲ್ಲೊಬ್ಬ ದಂಪತಿ ತಮ್ಮ ಮಗನನ್ನು ಪ್ರಕೃತಿಯ ಮಡಿಲಲ್ಲಿಯೇ ಬೆಳೆಸಬೇಕು ಎನ್ನುವ ಆಸೆಯಿಂದ ಸಿಂಗಾಪುರದ ಜೀವನಕ್ಕೆ ಗುಡ್‌ಬೈ ಹೇಳಿ ತಮ್ಮ ಊರಿಗೆ ವಾಪಾಸಾಗಿದ್ದಾರೆ.

ತಮ್ಮ ಮಗ ಶಾಲೆ, ಓದು, ಪುಸ್ತಕ, ಮಾರ್ಕ್ಸ್, ಕಾಂಪಿಟೇಶನ್‌ ಇವುಗಳ ಮಧ್ಯೆ ಸಿಲುಕಿ ತನ್ನ ಬಾಲ್ಯವನ್ನು ಕಳೆದುಕೊಳ್ಳಬಾರದು, ಆತ ಬಾಲ್ಯವನ್ನು ಎಂಜಾಯ್‌ ಮಾಡಬೇಕು. ಸಣ್ಣ ವಯಸ್ಸಿನಲ್ಲಿ ಬೇಡದ ಹೊರೆಯನ್ನು ಆತನ ಮೇಲೆ ಹಾಕಬಾರದು ಎನ್ನುವ ಯೋಚನೆಯೇ ದಂಪತಿಯ ಈ ನಿರ್ಧಾರಕ್ಕೆ ಕಾರಣ.

Couple Left Singapore And Settled In Uttarakhand Village To Give Their Son Best Stress Free Childhod

ಸಿಂಗಾಪುರದಿಂದ ಉತ್ತರಖಂಡಕ್ಕೆ :

ಗರಿಮಾ ಮತ್ತು ಆದಿತ್ಯ ಇಬ್ಬರೂ ಸಿಂಗಾಪುರದಲ್ಲಿ ನೆಮ್ಮದಿಯ ಜೀವನ ನಡೆಸುತ್ತಿದ್ದರು. ಕಾರ್ಪೋರೇಟ್‌ ಉದ್ಯೋಗಿಯಾಗಿದ್ದರಿಂದ ಹಣಕ್ಕೇನೂ ಕೊರತೆ ಇರಲಿಲ್ಲ. ಆದರೆ ಅವರ ಮಗ ವೇದಾಸ್‌ ಅನ್ನು ತಮ್ಮ ಊರಿನಲ್ಲಿ, ಊರ ಪ್ರಕೃತಿ ಮಧ್ಯೆ ಬೆಳೆಸಬೇಕು ಎನ್ನುವ ಆಸೆ ಅವರದ್ದಾಗಿತ್ತು. ಹಾಗಾಗಿ ಸಿಂಗಾಪುರದಿಂದ ಉತ್ತರಾಖಂಡದ ಶಾಂತ ಹಳ್ಳಿಗೆ ವಾಪಸಾಗುತ್ತಾರೆ.

ಬೇಡದ ಒತ್ತಡದಿಂದ ಮಗನನ್ನು ದೂರ ಇಡುವುದೇ ಉದ್ದೇಶ :

@lifeofmaai Instagram ಖಾತೆಯಲ್ಲಿ ಈ ಬಗ್ಗೆ ವಿಡಿಯೋವೊಂದನ್ನು ಶೇರ್‌ ಮಾಡಿದ್ದಾರೆ. ಶಾಲೆ, ಹೋಂ ವರ್ಕ್‌, ಪರೀಕ್ಷೆಗಳು ಮತ್ತು ರಿಪೋರ್ಟ್ ಕಾರ್ಡ್‌ಗಳ ಸಾಂಪ್ರದಾಯಿಕ ಮಾರ್ಗದಿಂದ ತಮ್ಮ ಮಗನನ್ನು ದೂರವಿರುವ ಅವರ ನಿರ್ಧಾರ ಸ್ಪಷ್ಟವಾಗಿ ಕಾಣುತ್ತದೆ. ಬದಲಾಗಿ, ದಂಪತಿ ತಮ್ಮ ಮಗ ಪ್ರಕೃತಿಯ ಮಧ್ಯೆ ಆಟವಾಡುತ್ತಾ, ಈಡಾಡುತ್ತಾ, ಹೊಸದನ್ನು ಕಲಿಯುತ್ತಾ, ಹುಡುಕುತ್ತಾ, ಪ್ರಶ್ನೆಗಳನ್ನು ಕೇಳುತ್ತಾ, ಆ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುತ್ತಾ ಬೆಳೆಯಬೇಕು ಎನ್ನುವ ಆಸೆ ಹೊಂದಿದ್ದರು. ತನ್ನದೇ ಆದ ವೇಗದಲ್ಲಿ ಕಲಿಯುವ ಸ್ವಾತಂತ್ರ್ಯ ಮಗನಿಗೆ ಇರಬೇಕು ಎನ್ನುವುದು ಅವರ ನಿಲುವಾಗಿತ್ತು.

ಯೋಚನೆ ಬದಲಿಸಿದ ಚೈಲ್ಡ್‌ ಸೈಕಾಲಜಿ :

ಆದಿತ್ಯ ಶಿಮ್ಲಾದ ಮಧ್ಯಮ ವರ್ಗದ ಕುಟುಂಬದಲ್ಲಿ ಹುಟ್ಟಿ ಬೆಳೆದವರು. ವೃತ್ತಿಪರ ಯಶಸ್ಸು ಎಂದರೆ ಕಾರ್ಪೊರೇಟ್ ಏಣಿಯನ್ನು ಹತ್ತುವುದು ಎನ್ನುವುದೇ ಅವರ ನಂಬಿಕೆಯಾಗಿತ್ತು. ಫ್ಯಾಷನ್ ಮ್ಯಾನೇಜ್‌ಮೆಂಟ್ ಅಧ್ಯಯನಕ್ಕಾಗಿ ಅವರು ಕಾಲೇಜಿಗೆ ದೆಹಲಿಗೆ ಸೇರುತ್ತಾರೆ. ಅಲ್ಲಿ ಗರಿಮಾ ಭೇಟಿಯಾಗುತ್ತದೆ. ತನ್ನ ಅಧ್ಯಯನವನ್ನು ಪೂರ್ಣಗೊಳಿಸಿದ ನಂತರ, ಗರಿಮಾ ಹೆಚ್ಚು ಸಂಬಳದ ಕೆಲಸಕ್ಕೆ ಸೇರುತ್ತಾರೆ. ನಂತರ ತರಬೇತಿಗಾಗಿ ವಿದೇಶಕ್ಕೆ ಹೋಗುತ್ತಾರೆ. 2015 ರಲ್ಲಿ, ಗರಿಮಾ ಮತ್ತು ಆದಿತ್ಯ ಮದುವೆಯಾಗುತ್ತಾರೆ. ಕೆಲಸದ ನಿಮಿತ್ತ ಇಬ್ಬರೂ ಸಿಂಗಾಪುರದಲ್ಲಿ ನೆಲೆಯಾಗುತ್ತಾರೆ. ಗರಿಮಾ ತನ್ನ ಕೆಲಸವನ್ನು ಬಿಟ್ಟು ಚೈಲ್ಡ್‌ ಸೈಕಾಲಜಿ ಬಗ್ಗೆ ಅಧ್ಯಯನ ಮಾಡಲು ಶುರು ಮಾಡುತ್ತಾರೆ. ಇಲ್ಲಿಂದ ಅವರು ಬಾಲ್ಯ, ಶಿಕ್ಷಣ ಮತ್ತು ಪೋಷಕರನ್ನು ನೋಡುವ ವಿಧಾನವೇ ಬದಲಾಗುತ್ತದೆ.

ಎಂಟು ವರ್ಷಗಳ ತಯಾರಿ :

ಎಲ್ಲವನ್ನೂ ಬಿಟ್ಟು ಮತ್ತೆ ಹುಟ್ಟೂರಿಗೆ ಮರಳುವುದು ಅಂದುಕೊಂಡಷ್ಟು ಸುಲಭ ಅಲ್ಲ. ಇದಕ್ಕಾಗಿ ಅವರು ಎಂಟು ವರ್ಷಗಳ ಯೋಜನೆ ಹಾಕಿಕೊಳ್ಳುತ್ತಾರೆ. ಅವರ ಸೋಶಿಯಲ್‌ ಮಿಡಿಯಾ ಪೋಸ್ಟ್‌ ಪ್ರಕಾರ ಆದಿತ್ಯ ಮತ್ತು ಗರಿಮಾ ಸುಮಾರು ಎಂಟು ವರ್ಷಗಳ ಕಾಲ ಯೋಜನೆ ಮತ್ತು ಸಂಶೋಧನೆಯಲ್ಲಿ ಕಳೆದಿದ್ದಾರೆ. ನಂತರ ಕೊನೆಗೆ ಎಲ್ಕವನ್ನೂ ಬಿಟ್ಟು ಮತ್ತೆ ತಮ್ಮೂರಿಗೆ ವಾಪಸ್‌ ಆಗುವ ನಿರ್ಧಾರಕ್ಕೆ ಬರುತ್ತಾರೆ. ಆ ಸಮಯದಲ್ಲಿ ಗರಿಮಾ ಗರ್ಭಿಣಿ. ದಂಪತಿಗಳು ಪ್ರಕೃತಿ ಆಧಾರಿತ ಜೀವನ, ಸಾಂಪ್ರದಾಯಿಕ ಜ್ಞಾನ, ಗಿಡಮೂಲಿಕೆಗಳು ಮತ್ತು ಶಿಕ್ಷಣಕ್ಕೆ ಪರ್ಯಾಯ ವಿಧಾನಗಳಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದರು. ಸಾಂಪ್ರದಾಯಿಕ ಶಾಲಾ ಶಿಕ್ಷಣಕ್ಕೆ ಸಂಬಂಧಿಸಿದ ಒತ್ತಡಗಳಿಗೆ ತಮ್ಮ ಮಗನನ್ನು ತಳ್ಳುವುದು ಅವರಿಗೆ ಬೇಕಿರಲಿಲ್ಲ. ಇದರ ಬದಲು ಮಗು ಬಾಲ್ಯವನ್ನು ಅನುಭವಿಸಲು ಸಾಧ್ಯವಾಗುವಂಥಹ ವಾತಾವರಣವನ್ನು ಸೃಷ್ಟಿ ಮಾಡುವುದು ಅವರ ಬಯಕೆಯಾಗಿತ್ತು. ಉತ್ತರಾಖಂಡದ ಬಾಸ್ಗಾಂವ್‌ನಲ್ಲಿರುವ ಅವರ ಹೊಸ ಮನೆ ನಿಧಾನಗತಿಯ ಜೀವನದ ಈ ಪ್ರಯೋಗಕ್ಕೆ ವೇದಿಕೆಯಾಯಿತು.

ಆವಿಷ್ಕಾರ ಮತ್ತು ಕಲಿಕೆಗೆ ಒಂದು ಅವಕಾಶ :

ಯೂನಿಫಾರಂ, ರಿಪೋರ್ಟ್ ಕಾರ್ಡ್‌ ನಿಗದಿತ ಪಠ್ಯಕ್ರಮ ಯಾವುದೂ ಇಲ್ಲ :

ದಿ ಬೆಟರ್ ಇಂಡಿಯಾ ಪ್ರಕಾರ, ಅವರ ಮಗ ವೇದಾಸ್ ಎಂದಿಗೂ ಸಾಂಪ್ರದಾಯಿಕ ಶಾಲೆಯಲ್ಲಿ ಓದಿಲ್ಲ. ಅವನಿಗೆ, ಕಲಿಕೆ ಎನ್ನುವುದು ಕ್ಲಾಸ್‌ ರೂಮ್‌ನ ನಾಲ್ಕು ಗೋಡೆ ಮಧ್ಯೆ ಶುರುವಾಗಿ ಅಲ್ಲಿಯೇ ಕೊನೆಯಾಗುವುದಿಲ್ಲ. ಅವನ ಜೀವನ ಸುತ್ತಲಿನ ನೈಸರ್ಗಿಕ ಪ್ರಪಂಚದಿಂದ ರೂಪುಗೊಳ್ಳುತ್ತವೆ. ಅವನು ಮುಂಜಾನೆ ಸೂರ್ಯ ಉದಯದೊಂದಿಗೆ ಏಳುತ್ತಾನೆ. ಪಕ್ಷಿಗಳ ಕಲರವ ಕೇಳುತ್ತಾನೆ. ಮಳೆಯನ್ನು ಆನಂದಿಸುತ್ತಾನೆ. ಸುತ್ತಮುತ್ತಲಿನ ಪ್ರದೇಶಗಳನ್ನು ಅನ್ವೇಷಿಸುತ್ತಾನೆ. ಬೆಟ್ಟ ಹತ್ತುತ್ತಾನೆ, ಕಲ್ಲುಗಳೊಂದಿಗೆ ಆಟವಾಡುತ್ತಾನೆ, ಕೀಟಗಳು ಮತ್ತು ಸಸ್ಯಗಳನ್ನು ಗಮನಿಸುತ್ತಾನೆ, ತನ್ನದೇ ಆದ ಆಟಗಳನ್ನು ಆವಿಷ್ಕರಿಸುತ್ತಾನೆ ಮತ್ತು ಗೊಬ್ಬರವನ್ನು ತಯಾರಿಸಲು ಸಹಾಯ ಮಾಡುತ್ತಾನೆ. ಮಣ್ಣಿನಿಂದಲೂ ಬಣ್ಣ ಬಳಿಯುತ್ತಾನೆ. ಇದು ಕೇಳುವುದಕ್ಕೆ ಸರಳ ಎನ್ನುವಂತೆ ಇರಬಹುದು. ಆದರೆ ಇದು ಆತನಿಗೆ ಆವಿಷ್ಕಾರ ಮತ್ತು ಕಲಿಕೆಗೆ ಒಂದು ಅವಕಾಶ. ಸ್ಥಿರ ಪಠ್ಯಕ್ರಮವನ್ನು ಅನುಸರಿಸುವ ಬದಲು, ಕುತೂಹಲವನ್ನು ಉಳಿಸಿಕೊಳ್ಳಲು, ನೇರ ಅನುಭವದ ಮೂಲಕ ಜಗತ್ತನ್ನು ಅರ್ಥಮಾಡಿಕೊಳ್ಳಲು ಇದು ಸಹಾಯ ಮಾಡಿತು.

ಕಟ್ಟುನಿಟ್ಟಾದ ಶೈಕ್ಷಣಿಕ ಪದ್ದತಿಯನ್ನು ಅನುಸರಿಸುವ ಬದಲು ಮಗುವಿನ ಆಸಕ್ತಿಗಳು, ಕುತೂಹಲ ಮತ್ತು ವೇಗದ ಮೇಲೆ ಹೆಚ್ಚಿನ ಒತ್ತು ನೀಡುವ ಕಲಿಕೆಯ ಒಂದು ರೂಪವಾಗಿದೆ. ಈ ದಂಪತಿಗಳು ಪಠ್ಯಪುಸ್ತಕಗಳು, ಪರೀಕ್ಷೆಗಳು ಅಥವಾ ಔಪಚಾರಿಕ ಶಿಕ್ಷಣವನ್ನು ಸಂಪೂರ್ಣವಾಗಿ ವಿರೋಧಿಸುವುದಿಲ್ಲ.ಅವರ ಉದ್ದೇಶ ಮಗನನ್ನು ಶಿಕ್ಷಣದಿಂದ ದೂರವಿಡುವುದು ಅಲ್ಲ, ಬದಲಿಗೆ ಸಾಂಪ್ರದಾಯಿಕ ಶೈಕ್ಷಣಿಕ ಒತ್ತಡದಿಂದ ಮಗನನ್ನು ಮುಕ್ತವಾಗಿರಿಸುವುದು.

ನಿಧಾನವಾಗಿ ಮಗು ಕಲಿಯಲಿ ಎನ್ನುವ ಈ ಕುಟುಂಬದ ಯೋಚನೆ ಆನ್‌ಲೈನ್‌ನಲ್ಲಿ ಚರ್ಚೆಗಳನ್ನು ಹುಟ್ಟುಹಾಕಿದೆ. ಕಾರ್ಪೊರೇಟ್ ಓಟದಿಂದ ದೂರ ಸರಿದು ಪ್ರಕೃತಿ ಮತ್ತು ಕುಟುಂಬದ ಸುತ್ತ ಜೀವನವನ್ನು ನಿರ್ಮಿಸುವ ಅವರ ನಿರ್ಧಾರವನ್ನು ಅನೇಕ ಜನರು ಶ್ಲಾಘಿಸಿದ್ದಾರೆ. ಗರಿಮಾ ಮತ್ತು ಆದಿತ್ಯ ಅವರು ಮಾಡಿಕೊಂಡಿರುವ ಆಯ್ಕೆ ಪ್ರತಿ ಕುಟುಂಬಕ್ಕೂ ಸೂಕ್ತವಲ್ಲದೇ ಇರಬಹುದು. ಆದರೆ ಅವರ ಪ್ರಯಾಣವು ಒಂದು ಪ್ರಮುಖ ಪ್ರಶ್ನೆಯನ್ನು ಹುಟ್ಟುಹಾಕುತ್ತದೆ ಅನ್ನುವುದೂ ಸುಳ್ಳಲ್ಲ. ಬಾಲ್ಯವು ಯಾವಾಗಲೂ ತರಗತಿ ಕೊಠಡಿಗಳು, ಮೊಬೈಲ್‌, ಲ್ಯಾಪ್‌ಟಾಪ್‌, ಪರೀಕ್ಷೆಗಳು ಮತ್ತು ಟಾರ್ಗೆಟ್‌ ಸುತ್ತ ರಚನೆಯಾಗಬೇಕೇ ಅಥವಾ ಮಕ್ಕಳು ಕುತೂಹಲ, ಆಟ ಮತ್ತು ಅವರ ಸುತ್ತಲಿನ ಪ್ರಪಂಚದ ಮೂಲಕವೂ ಕಲಿಯಬಹುದೇ? ಎನ್ನುವುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+