ಕೊರೊನಾ ಕಾರ್ಮೋಡ: ಬೆಂಗಳೂರಲ್ಲಿ 4, ಹಾಗಾದ್ರೆ ಭಾರತದಲ್ಲಿ ಎಷ್ಟು?
ಮಾರ್ಚ್ 10: ಚೀನಾದಲ್ಲಿ ಹುಟ್ಟಿಕೊಂಡು ಇಡೀ ವಿಶ್ವವನ್ನೇ ಬೆಚ್ಚಿ ಬೀಳಿಸುತ್ತಿರುವ ಮಾರಣಾಂತಿಕ ಕೊರೊನಾ ವೈರಸ್ ಭಾರತಕ್ಕೂ ವಕ್ಕರಿಸಿಬಿಟ್ಟಿದೆ. ಕರ್ನಾಟಕಕ್ಕೂ ಕೊರೊನಾ ವೈರಸ್ ಕಾಲಿಟ್ಟಿದ್ದು, ಒಟ್ಟು ನಾಲ್ಕು ಮಂದಿಗೆ ಸೋಂಕು ತಗುಲಿದೆ.
Recommended Video
ಅಮೇರಿಕಾದಿಂದ ಬೆಂಗಳೂರಿಗೆ ಬಂದ 40 ವರ್ಷ ವಯಸ್ಸಿನ ಸಾಫ್ಟ್ ವೇರ್ ಎಂಜಿನಿಯರ್ ಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಸದ್ಯಕ್ಕೆ ಬೆಂಗಳೂರಿನ ಟೆಕ್ಕಿ, ಪತ್ನಿ, ಮಗಳು ಮತ್ತು ಸಹೋದ್ಯೋಗಿಗೆ ಕೊರೊನಾ ಸೋಂಕು ತಗುಲಿರುವುದು ಕನ್ಫರ್ಮ್ ಆಗಿದೆ.
ಹಾಗಾದ್ರೆ, ಇಡೀ ಭಾರತದಲ್ಲಿ ಎಷ್ಟು ಮಂದಿ ಕೊರೊನಾ ಸೋಂಕಿನಿಂದ ಬಳಲುತ್ತಿದ್ದಾರೆ ಅಂತೀರಾ.. ಸಂಪೂರ್ಣ ಅಂಕಿ-ಅಂಶ ಇಲ್ಲಿದೆ, ಓದಿರಿ...

ಕರ್ನಾಟಕದಲ್ಲಿ ನಾಲ್ಕು ಮಂದಿಗೆ ಸೋಂಕು
ಮಾರ್ಚ್ 1 ರಂದು ಅಮೇರಿಕಾದಿಂದ ಬೆಂಗಳೂರಿಗೆ ವಾಪಸ್ ಆದ ಟೆಕ್ಕಿ, ಪತ್ನಿ, ಮಗಳು ಮತ್ತು ಸಹೋದ್ಯೋಗಿಗೆ ಕೊರೊನಾ ಸೋಂಕು ತಗುಲಿದೆ. ಹೀಗಾಗಿ, ಟೆಕ್ಕಿ ಅಂಡ್ ಫ್ಯಾಮಿಲಿಯನ್ನ ಬೆಂಗಳೂರಿನ ರಾಜೀವ್ ಗಾಂಧಿ ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿದೆ. ಪ್ರತ್ಯೇಕ ವಾರ್ಡಿನಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ಕೇರಳದಲ್ಲಿ ಎಷ್ಟು.?
ಹಾಗ್ನೋಡಿದ್ರೆ, ಭಾರತದಲ್ಲಿ ಕೊರೊನಾ ವೈರಸ್ ಪಾಸಿಟೀವ್ ಕೇಸ್ ಮೊಟ್ಟ ಮೊದಲ ಬಾರಿಗೆ ವರದಿಯಾಗಿದ್ದು ಕೇರಳದಲ್ಲಿ. ಇಲ್ಲಿಯವರೆಗೂ ಕೇರಳದಲ್ಲಿ 12 ಮಂದಿಗೆ ಕೊರೊನಾ ಸೋಂಕು ತಗುಲಿದೆ.

ಭಾರತದಲ್ಲಿ ಎಷ್ಟು.?
ಭಾರತಕ್ಕೆ ಆಗಮಿಸಿದ 16 ಇಟಲಿ ಪ್ರಯಾಣಿಕರು ಮತ್ತು ಓರ್ವ ಭಾರತೀಯ ಸೇರಿದಂತೆ, ದೆಹಲಿಯಲ್ಲಿ 3, ಲಡಾಕ್ ನಲ್ಲಿ 2 ಕೊರೊನಾ ಸೋಂಕಿತ ಪ್ರಕರಣಗಳು ದಾಖಲಾಗಿವೆ. ತಮಿಳು ನಾಡು, ತೆಲಂಗಾಣ, ಹರಿಯಾಣ, ಜಮ್ಮು ಮತ್ತು ಕಾಶ್ಮೀರ, ಪಂಜಾಬಿನಲ್ಲಿ ತಲಾ ಒಂದು ಕೊರೊನಾ ಸೋಂಕಿತ ಪ್ರಕರಣಗಳಿವೆ. ಒಟ್ಟಾರೆ ಭಾರತದಲ್ಲಿ ಈ ಕ್ಷಣದವರೆಗೆ 47 ಮಂದಿಗೆ ಕೊರೊನಾ ಸೋಂಕು ತಗುಲಿದೆ.

ನಾಲ್ವರು ಗುಣಮುಖ
47 ಕೊರೊನಾ ಸೋಂಕಿತರ ಪೈಕಿ ನಾಲ್ಕು ಮಂದಿ ಈಗಾಗಲೇ ಗುಣಮುಖರಾಗಿದ್ದಾರೆ. ಉಳಿದ 43 ಮಂದಿಯನ್ನ ಪ್ರತ್ಯೇಕವಾಗಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಕೊರೊನಾ ಸೋಂಕು ಇತರರಿಗೆ ಹರಡದಂತೆ ಸುರಕ್ಷತಾ ಕ್ರಮಗಳನ್ನು ಭಾರತದಲ್ಲಿ ಕೈಗೊಳ್ಳಲಾಗಿದೆ.

ಜಾಗತಿಕ ಮಟ್ಟದಲ್ಲಿ ಗುಣಮುಖರ ಸಂಖ್ಯೆ
ಚೀನಾ, ಇಟಲಿ, ದಕ್ಷಿಣ ಕೊರಿಯಾ, ಇರಾನ್, ಫ್ರಾನ್ಸ್, ಸ್ಪೇನ್, ಜರ್ಮನಿ, ಯು.ಎಸ್.ಎ, ಜಪಾನ್, ಸ್ವಿಟ್ಜರ್ಲ್ಯಾಂಡ್, ಯು.ಕೆ, ನೆದರ್ ಲ್ಯಾಂಡ್ ಸೇರಿದಂತೆ ವಿಶ್ವದ 115 ದೇಶಗಳಲ್ಲಿ ಕೊರೊನಾ ಸೋಂಕು ಹರಡಿದೆ. ವಿಶ್ವದಾದ್ಯಂತ ಇಲ್ಲಿಯವರೆಗೂ 114,508 ಕೊರೊನಾ ಸೋಂಕಿತ ಪ್ರಕರಣಗಳು ದಾಖಲಾಗಿವೆ. ಅದರಲ್ಲಿ 4,027 ಮಂದಿ ಡೆಡ್ಲಿ ಕೊರೊನಾ ವೈರಸ್ ನಿಂದ ಮೃತಪಟ್ಟಿದ್ದಾರೆ. 64,273 ಮಂದಿ ಕೊರೊನಾ ಸೋಂಕಿನಿಂದ ಗುಣಮುಖರಾಗಿದ್ದಾರೆ.












Click it and Unblock the Notifications