• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಭಾರತದಲ್ಲಿ ಕೊರೊನಾ ವೈರಸ್ ದ್ವಿಗುಣಗೊಳ್ಳುವ ಪ್ರಮಾಣದಲ್ಲಿ ಇಳಿಕೆ

|

ನವದೆಹಲಿ, ಮೇ 13: ಭಾರತದಲ್ಲಿ ಕೊರೊನಾ ವೈರಸ್ ದ್ವಿಗುಣಗೊಳ್ಳುವ ಪ್ರಮಾಣದಲ್ಲಿ ಇಳಿಕೆ ಕಂಡಿದೆ.

ಮಾರಕ ಕೊರೊನಾ ವೈರಸ್ ಪ್ರಸರಣ ಪ್ರಮಾಣ ಭಾರತದಲ್ಲಿ ಮತ್ತಷ್ಟು ನಿಧಾನಗತಿಯಾಗಿದ್ದು, ದೇಶದಲ್ಲಿ ವೈರಸ್ ಸೋಂಕಿತರ ದ್ವಿಗುಣ ಪ್ರಮಾಣ ಮತ್ತಷ್ಟು ಕುಸಿತವಾಗಿದೆ.

ಸಿಎಂ ಪರಿಹಾರ ನಿಧಿಗೆ ಒಂದು ದಿನದ ವೇತನ ನೀಡಿದ ಸಾರಿಗೆ ಸಂಸ್ಥೆಯ ನೌಕರರು

ಈ ಬಗ್ಗೆ ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದ್ದು, ಕೊರೊನಾ ವೈರಸ್ ವ್ಯಾಪಕವಾಗುವುದನ್ನು ತಡೆಯಲು ಕೇಂದ್ರ ಸರ್ಕಾರ ಘೋಷಿಸಿರುದ್ದ ದೇಶವ್ಯಾಪಿ ಲಾಕ್ ಡೌನ್ ನಿಂದಾಗಿ ವೈರಸ್ ಸೋಂಕಿತರ ದ್ವಿಗುಣ ಪ್ರಮಾಣ ಮತ್ತಷ್ಟು ಕುಸಿದಿದೆ. ಈ ಹಿಂದೆ ಪ್ರತೀ 10.9 ದಿನಗಳಿಗೆ ಸೋಂಕಿತರ ಸಂಖ್ಯೆ ದ್ವಿಗುಣವಾಗುತ್ತಿತ್ತು. ಇದೀಗ ಈ ಪ್ರಮಾಣ 12.2 ದಿನಗಳಿಗೆ ಇಳಿಕೆಯಾಗಿದೆ.

12.2 ದಿನಕ್ಕೆ ಇಳಿಕೆಯಾಗಿದೆ

12.2 ದಿನಕ್ಕೆ ಇಳಿಕೆಯಾಗಿದೆ

ರಾಷ್ಟ್ರವ್ಯಾಪಿ ಲಾಕ್ಡೌನ್ ಜಾರಿಗೊಳಿಸುವುದಕ್ಕಿಂತ ಮೊದಲು ದೇಶದಲ್ಲಿ 3 ದಿನಕ್ಕೊಮ್ಮೆ ದುಪ್ಪಟ್ಟಾಗುತ್ತಿದ್ದ ಕೊರೋನಾ ಸೋಂಕಿತರ ಸಂಖ್ಯೆ ಇದೀಗ 12.2 ದಿನಕ್ಕೆ ದುಪ್ಪಟ್ಟಾಗುತ್ತಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲವಯ ಮಾಹಿತಿ ನೀಡಿದೆ. ಮಾರ್ಚ್ 25ಕ್ಕಿಂತ ಮೊದಲ ಅಂಕಿಅಂಶ ಹಾಗೂ ಕಳೆದ 7 ದಿನಗಳ ಅಂಕಿಅಂಶಗಳನ್ನು ತುಲನೆ ಮಾಡಿ ಈ ಮಾಹಿತಿ ನೀಡಿದೆ.

19 ರಾಜ್ಯಗಳ ಪರಿಸ್ಥಿತಿ ಹೇಗಿದೆ?

19 ರಾಜ್ಯಗಳ ಪರಿಸ್ಥಿತಿ ಹೇಗಿದೆ?

19 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ದುಪ್ಪಟ್ಟಾಗುವ ವೇಗ ಇನ್ನೂ ಕಡಿಮೆಯಿದೆ. ದೇಶದಾದ್ಯಂತ ಕೊರೋನಾ ಸೋಂಕಿತರು ಗುಣಮುಖರಾಗುವ ಪ್ರಮಾಣ ಕೂಡ ಸುಧಾರಿಸಿದೆ. ಈಗಲೂ ಬೇರೆ ಬೇರೆ ದೇಶಗಳಲ್ಲಿ ಗುಣಮುಖರಾಗುವ ದರಕ್ಕಿಂದ ನಮ್ಮದು ಹೆಚ್ಚಿದೆ ಎಂದು ಸಚಿವಾಲಯ ಮಾಹಿತಿ ನೀಡಿದೆ.

24 ಗಂಟೆಯಲ್ಲಿ ದೇಶದಲ್ಲಿ 3525 ಹೊಸ ಕೇಸ್ ಪತ್ತೆ, 122 ಸಾವು

ಭಾರತದಲ್ಲಿ ಕೊರೊನಾ ಆರ್ಭಟ ಮುಂದುವರಿಕೆ

ಭಾರತದಲ್ಲಿ ಕೊರೊನಾ ಆರ್ಭಟ ಮುಂದುವರಿಕೆ

ಇನ್ನು ಭಾರತದಲ್ಲಿಯೂ ಮಾರಕ ಕೊರೋನಾ ವೈರಸ್ ಆರ್ಭಟ ಮುಂದುವರೆದಿದ್ದು, ಕಳೆದ 24 ಗಂಟೆಗಳಲ್ಲಿ ದೇಶಾದ್ಯಂತ ಮತ್ತೆ 3,604 ಹೊಸ ಪಾಸಿಟಿವ್ ಪ್ರಕರಣಗಳು ದಾಖಲಾಗಿವೆ. ಆ ಮೂಲಕ ದೇಶದಲ್ಲಿನ ಒಟ್ಟಾರೆ ಸೋಂಕಿತರ ಸಂಖ್ಯೆ 74,281ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಗಳಲ್ಲಿ 122 ಮಂದಿ ಕೊರೋನಾ ಸೋಂಕಿತರು ಸಾವನ್ನಪ್ಪಿದ್ದು, ಆ ಮೂಲಕ ಕೊರೋನಾ ವೈರಸ್ ಗೆ ಬಲಿಯಾದವರ ಸಂಖ್ಯೆ 2,415ಕ್ಕೆ ಏರಿಕೆಯಾಗಿದೆ. ದೇಶದಲ್ಲಿ ಈ ವರೆಗೂ 24,453 ಮಂದಿ ಕೊರೋನಾ ಸೋಂಕಿತರು ಗುಣಮುಖರಾಗಿದ್ದು, ಆ ಮೂಲಕ ದೇಶದಲ್ಲಿ 47480 ಮಂದಿ ಸೋಂಕಿತರು ಇನ್ನೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

24 ಗಂಟೆಯಲ್ಲಿ ದೇಶದಲ್ಲಿ 3525 ಹೊಸ ಕೇಸ್ ಪತ್ತೆ, 122 ಸಾವು

24 ಗಂಟೆಯಲ್ಲಿ ದೇಶದಲ್ಲಿ 3525 ಹೊಸ ಕೇಸ್ ಪತ್ತೆ, 122 ಸಾವು

ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 74 ಸಾವಿರ ಗಡಿ ದಾಟಿದೆ. ಕಳೆದ 24 ಗಂಟೆಯಲ್ಲಿ 3525 ಪ್ರಕರಣಗಳು ಭಾರತದಲ್ಲಿ ದಾಖಲಾಗಿದೆ. 122 ಸಾವು ವರದಿಯಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

English summary
Even as the number of Covid-19 cases continues to increase the doubling time has slowed to 12.2 days over the last slowed to 12.2 days over the last three days from10.9 days in the past 14 days.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X