'ಕಲಾಂರನ್ನು ರಾಷ್ಟ್ರಪತಿ ಮಾಡಿದ್ದು ಮುಸ್ಲಿಮರ ಮತಕ್ಕಾಗಿ'
ನವದೆಹಲಿ, ಜು. 29: ಸದಾ ಗಡಿ ತಂಟೆಯಲ್ಲೇ ಮುಳುಗಿರುವ ಪಾಕಿಸ್ತಾನ ಅಗಲಿದ ಚೇತನ ಅಬ್ದುಲ್ ಕಲಾಂ ಅವರ ಸಾವಿನ ಸಂಬಂಧ ವಿವಾದಾತ್ಮಕ ಹೇಳಿಕೆ ನೀಡಿ ಜನರ ಆಕ್ರೋಶಕ್ಕೆ ಕಾರಣವಾಗಿದೆ.
ಕ್ಷಿಪಣಿ ಮಾನವ ಡಾ. ಎಪಿಜೆ ಅಬ್ದುಲ್ ಕಲಾಂ ಬಗ್ಗೆ ಪಾಕಿಸ್ತಾನ ಭೌತಶಾಸ್ತ್ರಜ್ಞ ಅಬ್ದುಲ್ ಖಾದಿರ್ ಖಾನ್ ಕೇವಲವಾಗಿ ಮಾತನಾಡಿದ್ದು ಸಾಮಾಜಿಕ ಜಾಲತಾಣದಲ್ಲಿ ನಾಗರಿಕರ ಆಕ್ರೋಶಕ್ಕೆ ಕಾರಣರಾಗಿದ್ದಾರೆ.[ಅಬ್ದುಲ್ ಕಲಾಂರ ಜೀವನ ಮತ್ತು ಸಾಧನೆ ಚಿತ್ರಗಳು]

ಕಲಾಂ ಒಬ್ಬ ಸಾಧಾರಣ ವಿಜ್ಞಾನಿ ಎಂದು ಬಿಬಿಸಿಗೆ ನೀಡಿರುವ ದೂರವಾಣಿ ಸಂದರ್ಶನದಲ್ಲಿ ಹೇಳಿದ್ದಾರೆ. ಕಲಾಂ ಅವರ ಹೆಸರು ಹೇಳಿದರೆ ಯಾವುದೇ ಅತ್ಯುನ್ನತ ಸಂಶೋಧನೆಗಳು ನೆನಪಿಗೆ ಬರುವುದಿಲ್ಲ ಎಂದು ಹೇಳಿರುವ ಖಾನ್ ಮೇಲೆ ಟ್ವಿಟ್ಟಿಗರು ಛೀಮಾರಿ ಹಾಕಿದ್ದಾರೆ.[ಮಿಸೈಲ್ ಮ್ಯಾನ್ ಕಲಾಂಗೆ ಗಣ್ಯರ ಅಂತಿಮ ನಮನ]
ಕಲಾಂ ಸರಳ ಜೀವನ ಅನುಸರಿಸಿಕೊಂಡು ಬಂದ ಸಾಮಾನ್ಯ ವಿಜ್ಞಾನಿ ಎಂದು ಹೇಳಿಕೆ ನೀಡಿದ್ದು ವಿವಾದಕ್ಕೆ ಕಾರಣವಾಗಿತ್ತು. ಅಲ್ಲದೆ ಭಾರತದ ಮಿಸ್ಸೈಲ್ ಯೋಜನೆ ಕಾರ್ಯಗತವಾದದ್ದು ರಷ್ಯಾ ಸಹಕಾರದಿಂದ ಎಂದು ಖಾನ್ ಹೇಳಿಕೆ ನೀಡಿದ್ದರು.[ಕಲಾಂಗೆ ಅಂತಿಮ ನಮನದ ಚಿತ್ರಗಳು]
ಬಿಜೆಪಿ ಮುಸ್ಲಿಂ ಮತ ಬ್ಯಾಂಕ್ ನ ಪಡೆಯಲು ಕಲಾಂ ಅವರನ್ನು ರಾಷ್ಟ್ರಪತಿಯನ್ನಾಗಿ ಮಾಡಿತ್ತು. ಇದರಲ್ಲಿ ಬೇರೆ ಯಾವ ಉದ್ದೇಶಗಳು ಇರಲಿಲ್ಲ ಎಂಬ ಹೇಳಿಕೆಗೆ ದೇಶಾದ್ಯಂತ ವ್ಯಾಪಕ ವಿರೋಧ ವ್ಯಕ್ತವಾಗತೊಡಗಿದೆ.
ಖಾನ್ ಯಾರು?
ಅಬ್ದುಲ್ ಖಾದಿರ್ ಖಾನ್ ಪಾಕಿಸ್ತಾನದ ವಿವಾದಾತ್ಮಕ ಅಣು ವಿಜ್ಞಾನಿ. ಬಾಂಬ್ ತಯಾರಿಕೆ ತಂತ್ರಜ್ಞಾನದಲ್ಲಿ ಖಾನ್ ನಿಪುಣ. ಕೋರಿಯಾಕ್ಕೆ ಪಾಕಿಸ್ತಾನದ ಕೆಲ ರಹಸ್ಯ ಮಾಹಿತಿಗಳನ್ನು ಖಾನ್ ಬಿಟ್ಟುಕೊಟ್ಟಿದ್ದಾರೆ ಎಂದು 2004 ರಲ್ಲಿ ಆರೋಪ ಬಂದಿತ್ತು. ಈ ಸಂದರ್ಭ ಖಾನ್ ಅವರನ್ನು ಬಂಧಿಸಿ ಸರ್ಕಾರದ ಪ್ರಮುಖ ಹುದ್ದೆಯಿಂದ ವಜಾ ಮಾಡಲಾಗಿತ್ತು. ಆದರೆ 2009 ರಲ್ಲಿ ಇಸ್ಲಾಮಾಬಾದ್ ಹೈ ಕೋರ್ಟ್ ಖಾನ್ ನಿರ್ದೋಷಿ ಎಂದು ತೀರ್ಮಾನ ನೀಡಿತ್ತು.












Click it and Unblock the Notifications