ಅಂಗಿಕ ಅಭಿನಯದ ರಾಹುಲ್ ಭಾಷಣದ ಗುಟ್ಟೇನು?
ಬರೇನ್,
ರಾಜಸ್ಥಾನ, ಸೆಪ್ಟೆಂಬರ್ 17: ಕಾಂಗ್ರೆಸ್ ಪಕ್ಷದ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಇಂದು ಸಂಜೆ ರಾಜಸ್ಥಾನದಲ್ಲಿ ಚುನಾವಣಾ ಸಮಾವೇಶದಲ್ಲಿ ಭರ್ಜರಿ ಭಾಷಣ ಮಾಡಿದ್ದಾರೆ. ಅವರು ಪಕ್ಷದ ಕಾರ್ಯಕರ್ತರನ್ನುದ್ದೇಶಿಸಿ ಏನು ಮಾತನಾಡಿದ್ದಾರೆ ಅನ್ನುವುದಕ್ಕಿಂತ ಅಂಗಿಕ ಅಭಿನಯದ ಮೂಲಕ ಹೇಗೆ ಭಾಷಣ ಮಾಡಿದ್ದಾರೆ ಎಂಬುದು ಸ್ವಾರಸ್ಯಕರವಾಗಿದೆ. id="toptextpromo"> id='are-slot-1' class='oiad oi-axt oiadv'>ಬಹುಶಃ
ಹಿಂದೆಂದೂ ಕಾಂಗ್ರೆಸ್ಸಿನ ಯುವರಾಜ ಈ ಪರಿಯ ಭೀಕರ ಭಾಷಣ ಮಾಡಿರಲಿಲ್ಲ ಅನ್ನಿಸುತ್ತಿದೆ. ಮುಂದಿನ ಲೋಕಸಭಾ ಚುನಾವಣೆಗಾಗಿ ಬಿಜೆಪಿ ಪಕ್ಷದ ಪ್ರಧಾನಿ ಅಭ್ಯರ್ಥಿಯಾಗಿ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಆಯ್ಕೆಯಾದ ಮೇಲೆ ಮೊದಲ ಭಾಷಣ ಮಾಡಿರುವ ರಾಹುಲ್ ಯುದ್ಧೋತ್ಸಾಹದಲ್ಲಿದ್ದಂತೆ ಕಂಡುಬರುತ್ತಿದೆ. id='are-slot-2' class='oiad oi-axt oiadv'>ಇಷ್ಟಕ್ಕೂ
ರಾಹುಲ್ ದಿಢೀರನೆ ಇಷ್ಟೊಂದು ಚೈತನ್ಯ ತುಂಬಿಕೊಂಡಿದ್ದಾರೂ ಹೇಗೆ? ಇದರ ಹಿಂದಿನ 'ಕೈ'ಗಳು ಯಾವುವು ಎಂದು ನೋಡಿದಾಗ... ಮೋದಿಯನ್ನು ಎದುರಿಸಲು ಕಾಂಗ್ರೆಸ್ ಪಕ್ಷ ಭರ್ಜರಿ ತಯಾರಿ ನಡೆಸಿದೆ. ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಇದೀಗ ತಮ್ಮ ಚಿಂತಕರ
ಮೋದಿಗೆ ರಾಹುಲ್ ಹೈಟೆಕ್ ಸವಾಲ್
ರಾಹುಲ್ ಗಾಂಧಿ ಚಿಂತಕರ ಚಾವಡಿಗೆ ಆಕ್ಸ್‌ಫರ್ಡ್ ವಿದ್ಯಾರ್ಥಿ Kaushal Vidyarthee ಸೇರಿದಂತೆ ಕೆಲ ನಿವೃತ್ತ ಐಎಎಸ್ ಅಧಿಕಾರಿಗಳ ನೇಮಕ

ರಾಹುಲ್ ಗಾಂಧಿ ಚಿಂತಕರ ಚಾವಡಿ
ಮೊನ್ನೆ ಮೊನ್ನೆಯವರೆಗೂ ಬಿಲ್ ಗೇಟ್ಸ್, ಸ್ಟೀವ್ ಜಾಬ್ಸ್ ಕುರಿತು ಬ್ಲಾಗ್ ನಲ್ಲಿ ಬರೆಯುತ್ತಾ ಕುಳಿತಿರುತ್ತಿದ್ದ ಕೌಶಲ್ ಇದೀಗ, ಕಾಂಗ್ರೆಸ್ ಪಕ್ಷದ ಜನಪ್ರಿಯ ಯೋಜನೆಗಳ ಕುರಿತ ಮಾಹಿತಿ ಸಿದ್ಧಪಡಿಸುವುದು, ಭಾಷಣ ಕಟ್ಟಿಕೊಡುವುದು ಮುಂತಾದ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ.
ಜತೆಗೆ, G Mohan Gopal- MoGo, ಮಧುಸೂದನ್ ಮಿಸ್ತ್ರಿ, ಎಕೆ ಆಂಟನಿ, ಅಹಮದ್ ಪಟೇಲ್, Kanishka Singh ಮುಂತಾದ ಹಳೆ ಹುಲಿಗಳು ಶಕ್ತಿಮೀರಿ ಪಕ್ಷದ ಯುವರಾಜನ ವರ್ಚಸ್ಸು ಹೆಚ್ಚಿಸಲು ಅಹಿರ್ನಿಶಿ ದುಡಿಯುತ್ತಿದ್ದಾರೆ.

ಕೊಪ್ಪುಲ ರಾಜು ನಿವೃತ್ತ ಐಎಎಸ್ ಅಧಿಕಾರಿ
ಇನ್ನು, ಕೊಪ್ಪುಲ ರಾಜು ಎಂಬ 1981ನೇ ಬ್ಯಾಚ್ ಐಎಎಸ್ ಅಧಿಕಾರಿ ಮೊನ್ನೆ ಜುಲೈನಲ್ಲಿ ಸೇವೆಯಿಂದ ನಿವೃತ್ತಿ ಪಡೆದು, ರಾಹುಲ್ ಬಳಗಕ್ಕೆ ಸೇರಿಕೊಂಡಿದ್ದಾರೆ.
National Advisory Councilನ ಜಂಟಿ ಕಾರ್ಯದರ್ಶಿಯಾಗಿ ಪಕ್ಷದ ಸೇವೆಯಲ್ಲಿದ್ದಾರೆ. ಆಂಧ್ರದ ಕೃಷ್ಣ ಜಿಲ್ಲೆಯವರು. ದಲಿತರು ಮತ್ತು ಗ್ರಾಮೀಣಾಭಿವೃದ್ಧಿಯೆಂದರೆ ಇವರಿಗೆ ಅಪ್ಯಾಯಮಾನ. 1987ರಲ್ಲಿ ನಕ್ಸಲರಿಂದ ಇವರು ಅಪಹೃತಗೊಂಡಿದ್ದರು. Food Security Bill ಮತ್ತು Land Acquisition Policy ರಚನೆಯಲ್ಲಿ ಇವರ ಕೈವಾಡವೂ ಇದೆ.

ಹೊಸ ಥಿಂಕ್ ಟ್ಯಾಂಕ್
ಈ ವಿಶೇಷ ತಂಡ ರಚಿಸಿಕೊಂಡಿರುವ ರಾಹುಲ್, ಇವರೊಂದಿಗೆ ನಿರಂತರ ಚರ್ಚೆ ಮೂಲಕ ಪಕ್ಷದ ಕಾರ್ಯತಂತ್ರ ರಚನೆ, ಭಾಷಣಗಳು, ಯೋಜನೆಗಳ ಜಾರಿಗೆ ಮುಂದಾಗಿದ್ದಾರೆ.
ಹೀಗೆ ಹೊಸಬರು ಮತ್ತು ಅನುಭವಿಗಳ ಮಿಶ್ರಣ ಮಾಡುವ ಮೂಲಕ ತಮ್ಮ ರಾಜಕೀಯವನ್ನು ಹೈಟೆಕ್ ಮಾಡುವ ಮತ್ತು ಮೋದಿಗೆ ಸಮಾನವಾಗಿ ಬೆಳೆಯಲು ರಾಹುಲ್ ನಿರ್ಧರಿಸಿದ್ದಾರೆ.












Click it and Unblock the Notifications