ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೈನಿಕರ ಮೇಲಿನ ದಾಳಿಯಲ್ಲಿ ರಾಜಕೀಯ ಹುಡುಕಿದ ಕಾಂಗ್ರೆಸ್

|
Google Oneindia Kannada News

ಉಗ್ರ ಚಟುವಟಿಕೆ ಸ್ವಾತಂತ್ರ್ಯಾನಂತರದ ಭಾರತದ ಯಾವ ಸರಕಾರವನ್ನೂ ಬಿಟ್ಟಿಲ್ಲ. ಪಾಕಿಸ್ತಾನವೇ ಭಯೋತ್ಪಾದಕರಿಗೆ ನೆಲೆ ಎನ್ನುವುದು ಸಾಕ್ಷಿಸಮೇತ ರುಜುವಾತಾದರೂ, ಮುಟ್ಟಿ ನೋಡುವಂತಹ ಪ್ರತೀಕಾರಕ್ಕೆ ಭಾರತ ಸರಕಾರ ಮುಂದಾಗುತ್ತಿಲ್ಲ.

ಸರ್ಜಿಕಲ್ ಸ್ಟ್ರೈಕ್ ನಲ್ಲೂ ರಾಜಕೀಯ ಮಾಡುವ, ದೇಶ ಒಗ್ಗಟ್ಟಾಗಿರಬೇಕಾದಂತಹ ಸಮಯದಲ್ಲೂ 56 ಇಂಚಿನ ಬಗ್ಗೆ ಮಾತನಾಡುವ ರಾಜಕೀಯ ವ್ಯವಸ್ಥೆ ನಮ್ಮದು. ವಿರೋಧಿಗಳನ್ನು ಟೀಕೆ ಮಾಡಲು ಪರಿಸ್ಥಿತಿಯಾವುದೇ ಇರಲಿ, ಬೇಳೆ ಬೇಯಿಸಿಕೊಂಡೇ ತೀರುತ್ತಾರೆ ನಮ್ಮ ರಾಜಕಾರಣಿಗಳು.

19 ವರ್ಷಗಳ ಬಳಿಕ ಜಮ್ಮು ಮತ್ತು ಕಾಶ್ಮೀರದಲ್ಲಿ ದೊಡ್ಡ ದಾಳಿ19 ವರ್ಷಗಳ ಬಳಿಕ ಜಮ್ಮು ಮತ್ತು ಕಾಶ್ಮೀರದಲ್ಲಿ ದೊಡ್ಡ ದಾಳಿ

'ಇನ್ಸಾ ಅಲ್ಲಾ.. ಭಾರತ್ ತೇರಿ ತುಕುಡೇ ತುಕುಡೇ ಹೋಂಗೆ' ಎನ್ನುವವರನ್ನು ಸಮರ್ಥಿಸಿಕೊಳ್ಳುವ ಮತ್ತು ಅಂತವರಿಗೆ ಮುಂಬರುವ ಚುನಾವಣೆಯಲ್ಲಿ ಪಕ್ಷದ ಟಿಕೆಟ್ ನೀಡಲು ಮುಂದಾಗಿರುವ ಪಕ್ಷಗಳೂ ನಮ್ಮ ದೇಶದಲ್ಲಿವೆ.

ಪುಲ್ವಾಮದ ಉಗ್ರರ ದಾಳಿ : ಮಂಡ್ಯದ ಸಿಆರ್‌ಪಿಎಫ್ ಜವಾನ ಹುತಾತ್ಮಪುಲ್ವಾಮದ ಉಗ್ರರ ದಾಳಿ : ಮಂಡ್ಯದ ಸಿಆರ್‌ಪಿಎಫ್ ಜವಾನ ಹುತಾತ್ಮ

ಹುತಾತ್ಮರಾದ ಸೈನಿಕರ ಒಂದೊಂದು ರಕ್ತಕ್ಕೂ ಪ್ರತೀಕಾರ ತೀರಿಸದೇ ಬಿಡೆವು ಎಂದು ಭೂಸೇನಾ ಮುಖ್ಯಸ್ಥರು ಹೇಳಿದ್ದಾರೆ. ಯೋಧರ ಬಲಿದಾನವನ್ನು ವ್ಯರ್ಥವಾಗಲು ಬಿಡೆವು ಎಂದು ಪ್ರಧಾನಿಗಳು ಹೇಳಿದ್ದಾರೆ. ದೇಶ ಬಯಸುವುದೂ ಇದನ್ನೇ ಕೂಡಾ.. ಇನ್ನು, ಪುಲ್ವಾಮಾದಲ್ಲಿ ನಡೆದ ಆತ್ಮಹತ್ಯಾ ದಾಳಿಯನ್ನು ಕಾಂಗ್ರೆಸ್ ಖಂಡಿಸುತ್ತಾ, ಅದರಲ್ಲೂ ರಾಜಕೀಯ ಬೆರೆಸಿದೆ..

ರಾಷ್ಟ್ರೀಯ ಭದ್ರತೆಯ ವಿಚಾರದಲ್ಲಿ ಮೋದಿ ಸರಕಾರದ ರಾಜಿ

ಶಾಸಕ ಮತ್ತು ಕಾಂಗ್ರೆಸ್ಸಿನ ವಕ್ತಾರ ರಣದೀಪ್ ಸಿಂಗ್ ಸುರ್ಜೇವಾಲಾ ಉಗ್ರ ಕೃತ್ಯವನ್ನು ಖಂಡಿಸುತ್ತಾ, ಪುಲ್ವಾಮಾದಲ್ಲಿ ನಡೆದದ್ದು ಹೇಡಿಕೃತ್ಯ. ಹುತಾತ್ಮರಾದ ನಮ್ಮ ಯೋಧರಿಗೆ ನಾವು ಶ್ರದ್ದಾಂಜಲಿ ಅರ್ಪಿಸುತ್ತೇವೆ. ಉರಿ, ಪಠಾಣ್ ಕೋಟ್ ನಂತರ ಈಗ ಪುಲ್ವಾಮಾ. ರಾಷ್ಟ್ರೀಯ ಭದ್ರತೆಯ ವಿಚಾರದಲ್ಲಿ ಮೋದಿ ಸರಕಾರದ ರಾಜಿ ಮುಂದುವರಿದಿದೆ' ಎಂದು ಟ್ವೀಟ್ ಮಾಡಿದ್ದರು.

Array

ಒಂದು ಸಾವಿರಕ್ಕೂ ಹೆಚ್ಚುಬಾರಿ ಪಾಕ್ ಮಾತು ತಪ್ಪಿದೆ

ಕಳೆದ 55 ತಿಂಗಳಲ್ಲಿ ಪಾಕಿಸ್ತಾನ ಐದು ಸಾವಿರಕ್ಕೂ ಹೆಚ್ಚು ಯುದ್ದವಿರಾಮವನ್ನು ಉಲ್ಲಂಘಿಸಿದೆ. ಇದು ಯುಪಿಎ ಸರಕಾರಕ್ಕೆ ಹೋಲಿಸಿದರೆ, ಒಂದು ಸಾವಿರಕ್ಕೂ ಹೆಚ್ಚು ಹಲವು ಬಾರಿ ಪಾಕ್ ಮಾತು ತಪ್ಪಿದೆ. ಎಲ್ಲಿದೆ 56 ಇಂಚು, ಎಲ್ಲಿದೆ ಕೆಂಪು ಕಣ್ಣು ಎಂದು ಸುರ್ಜೇವಾಲಾ ಟ್ವೀಟ್ ಮಾಡಿದ್ದರು. ಜೈಶ್ ಮೊಹಮ್ಮದ್ ಸಂಘಟನೆಯ ಉಗ್ರ ಮೊಹಮ್ಮದ್ ಅಜರ್ ಅನ್ನು ಕಂದಹಾರ್ ನಲ್ಲಿ ಬಿಟ್ಟಿದ್ದು ಬಿಜೆಪಿ ಸರಕಾರವೇ ಎಂದೂ ಸುರ್ಜೇವಾಲಾ ಟ್ವೀಟ್ ಮಾಡಿದ್ದಾರೆ.

ಪುಲ್ವಾಮ ದಾಳಿಯ ಬಗ್ಗೆ ಇಷ್ಟು ಪ್ರಶ್ನೆಗಳಿಗೆ ಉತ್ತರಿಸುವುದು ಯಾರು?ಪುಲ್ವಾಮ ದಾಳಿಯ ಬಗ್ಗೆ ಇಷ್ಟು ಪ್ರಶ್ನೆಗಳಿಗೆ ಉತ್ತರಿಸುವುದು ಯಾರು?

ಇಂತಹ ಸಮಯದಲ್ಲಾದರೂ ನಿಮ್ಮ ರಾಜಕೀಯ ಬಿಡುತ್ತೀರಾ

ಇಂತಹ ಸಮಯದಲ್ಲಾದರೂ ನಿಮ್ಮ ರಾಜಕೀಯ ಬಿಡುತ್ತೀರಾ

ರಣದೀಪ್ ಸುರ್ಜೇವಾಲ ಅವರ ಟ್ವೀಟಿಗೆ ಸರಿಯಾಗಿ ಬೆಂಡೆತ್ತಿರುವ ಟ್ವಿಟ್ಟಿಗರು, ಇಂತಹ ಸಮಯದಲ್ಲಾದರೂ ನಿಮ್ಮ ರಾಜಕೀಯ ಬಿಡುತ್ತೀರಾ? ಮಕ್ಕಳಿಗಿಂತ ಕಡೆಯಾಗಿ ನೀವು ರಾಜಕಾರಣಿಗಳು ನಿಮ್ಮ ಬುದ್ದಿಯನ್ನು ತೋರಿಸುತ್ತೀರಾ, ಕಾಂಗ್ರೆಸ್ ಚರಿತ್ರೆ ಇಡೀ ದೇಶಕ್ಕೆ ಗೊತ್ತು..ಇದು ದೇಶ ಒಗ್ಗಟ್ಟಾಗಿರಬೇಕಾದಂತಹ ಸಮಯ.

ಎಲ್ಲಾ ವಿಚಾರದಲ್ಲೂ ವಿರೋಧ ಪಕ್ಷಗಳು ರಾಜಕೀಯ

ಎಲ್ಲಾ ವಿಚಾರದಲ್ಲೂ ವಿರೋಧ ಪಕ್ಷಗಳು ರಾಜಕೀಯ

ನಿಮಗೆ ಹೃದಯ ಅನ್ನೋದು ಇದೆಯಾ.. ದಾಳಿಯನ್ನು ಟೀಕಿಸುವುದನ್ನು ಬಿಟ್ಟು ಇದರಲ್ಲೂ ರಾಜಕೀಯ ಮಾಡುತ್ತೀರಲ್ಲಾ.. ಕಾಶ್ಮೀರದಲ್ಲಿ ದಾಳಿ.. ಪುಲ್ವಾಮಾ ದಾಳಿ ಎಲ್ಲಾ ವಿಚಾರದಲ್ಲೂ ವಿರೋಧ ಪಕ್ಷಗಳು ರಾಜಕೀಯ ಮಾಡುತ್ತವೆ ಎನ್ನುವ ಟ್ವೀಟ್ ಪ್ರತಿಕ್ರಿಯೆಗಳು.

ಉಗ್ರರ ದಾಳಿಯಲ್ಲಿ ಹುತಾತ್ಮರಾದ ಸಿಆರ್‌ಪಿಎಫ್‌ ಯೋಧರ ಹೆಸರುಗಳುಉಗ್ರರ ದಾಳಿಯಲ್ಲಿ ಹುತಾತ್ಮರಾದ ಸಿಆರ್‌ಪಿಎಫ್‌ ಯೋಧರ ಹೆಸರುಗಳು

ಕೇಜ್ರಿವಾಲ್ ಅವರಂತಹ ಮುಖಂಡರೇ ಈ ವಿಚಾರದಲ್ಲಿ ರಾಜಕೀಯ ಮಾಡುತ್ತಿಲ್ಲ

ಕೇಜ್ರಿವಾಲ್ ಅವರಂತಹ ಮುಖಂಡರೇ ಈ ವಿಚಾರದಲ್ಲಿ ರಾಜಕೀಯ ಮಾಡುತ್ತಿಲ್ಲ

ಕೇಜ್ರಿವಾಲ್ ಅವರಂತಹ ಮುಖಂಡರೇ ಈ ವಿಚಾರದಲ್ಲಿ ರಾಜಕೀಯ ಮಾಡುತ್ತಿಲ್ಲ, ಆದರೆ ನೀವು ಮಾಡುತ್ತಿದ್ದೀರಾ.. ರಷ್ಯಾದಲ್ಲಿ ಪಾಕಿಸ್ತಾನದ ಆರ್ಮಿ ಮುಖ್ಯಸ್ಥರನ್ನು ಭೇಟಿಯಾಗಿದ್ದು ಯಾರು? ಗಲ್ಫ್ ನಲ್ಲಿ ಯಾರನ್ನು ಯಾರು ಭೇಟಿಯಾಗಿದ್ದರು? ಸಿದ್ದು ಪಾಕಿಸ್ತಾನಕ್ಕೆ ಹೋದಾಗ, ಅದರನ್ನು ಸಮರ್ಥಿಸಿಕೊಂಡವರು ಯಾರು? ಇದಕ್ಕಾಗಿಯೇ, ಉಗ್ರರು ಕಾಂಗ್ರೆಸ್ ಸರಕಾರ ಇರಬೇಕೆಂದು ಬಯಸುತ್ತಾರೆ.

English summary
Congress spokes person Randeep Singh Surjewala, tweet on Pulwama attack twitterite angry.He tweeted, Uri, Pathankot, Pulwama- the terror list & compromise of National Security by Modi Govt continues unabated.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X