ರಾಹುಲ್ ಜನ್ಮದಿನಕ್ಕೆ ಅಭಿಮಾನಿಗಳ ಶುಭಹಾರೈಕೆಯ ಮಹಾಪೂರ

Recommended Video

      48ನೇ ವರ್ಷದ ಬರ್ತ್ ಡೇ ಆಚರಿಸಿಕೊಳ್ಳುತ್ತಿದ್ದಾರೆ ರಾಹುಲ್ ಗಾಂಧಿ | ಟ್ವಿಟ್ಟರ್ ವಿಷಸ್ ಇಲ್ಲಿದೆ

      ನವದೆಹಲಿ, ಜೂನ್ 19: "ರಾಹುಲ್ ಗಾಂಧಿಯವರನ್ನು ಕೆಲವರು ಕುಟುಂಬ ರಾಜಕಾರಣದಿಂದಾಗಿ ರಾಜಕೀಯಕ್ಕೆ ಬಂದವರು ಎನ್ನಬಹುದು. ಆದರೆ, ನನ್ನ ಅಜ್ಜಿ ತನ್ನ ಭದ್ರತಾ ಸಿಬ್ಬಂದಿಗಳಿಂದಲೇ ಮೃತರಾದರೂ, ಉಗ್ರರಿಂದ ನನ್ನ ತಂದೆ ಹತರಾದರೂ, ನಾನು ಭಾರತ ದೇಶಕ್ಕಾಗಿ ಅವರು ತುಳಿದಿದ್ದ ಹಾದಿಯನ್ನೇ ತುಳಿಯುತ್ತೇನೆ ಎಂದರೆ ಅದು ನಿಜಕ್ಕೂ ಮಹಾನ್ ಚಿಂತನೆ. ನನಗೆ ರಾಹುಲ್ ಗಾಂಧಿ ಅವರಲ್ಲಿ ಅಂಥ ಮಹಾನ್ ವ್ಯಕ್ತಿ ಕಾಣುತ್ತಾನೆ" ಎಂದು ರಾಹುಲ್ ಗಾಂಧಿ ಜನ್ಮದಿನಕ್ಕೆ ಅಭಿಮಾನಿಯೊಬ್ಬರು ಶುಭಹಾರೈಸಿದ್ದಾರೆ.

      ಇಂದು ತಮ್ಮ 48 ನೇ ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಿರುವ ರಾಹುಲ್ ಗಾಂಧಿ ಅವರಿಗೆ ದೇಶದಾದ್ಯಂತ ನಾನಾ ಗಣ್ಯರು ಶುಭ ಹಾರೈಸಿದ್ದಾರೆ. ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರು ಸಹ ಶುಭ ಹಾರೈಸಿ, ರಾಹುಲ್ ಅವರಿಗೆ ದೇವರು ಸುದೀರ್ಘ ಬದುಕು ಮತ್ತು ಆರೋಗ್ಯ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದಿದ್ದಾರೆ.

      ಅಪ್ರಬುದ್ಧ ಮಾತುಗಳು, ಕಾಮಿಡಿಯನ್ ಎಂಬ ಕುಹಕ ಈ ಎಲ್ಲವುಗಳ ಹೊರತಾಗಿಯೂ ತಮ್ಮ ಸರಳತೆ, ಎಂದೂ ಮಾಸದ ಮುಗುಳುನಗೆ, ಮುಗ್ಧತೆಯಿಂದ ಹಲವರಿಗೆ ಇಷ್ಟವಾಗುವವರು ರಾಹುಲ್ ಗಾಂಧಿ. ಅವರಿಗೆ ಟ್ವಿಟ್ಟರ್ ನಲ್ಲಿ ಹರಿದುಬಂದ ಶುಭಾಶಯಗಳ ಮಹಾಪೂರದಲ್ಲಿ ಕೆಲವು ಇಲ್ಲಿವೆ.

      ಅವರು ನಿಮ್ಮನ್ನೆಲ್ಲ ಪ್ರೀತಿಸುತ್ತಾರೆ!

      ರಾಹುಲ್ ಗಾಂಧಿ ಅವರನ್ನು ದ್ವೇಷಿಸುವ ಎಲ್ಲರಿಗೂ ತಿಳಿದಿರಲಿ. ನೀವು ಅವರನ್ನು ಸ್ವೇಷಿಸಿದರೂ ಅವರು ನಿಮ್ಮೆಲ್ಲರನ್ನೂ ಪ್ರೀತಿಸುತ್ತಾರೆ. ಹುಟ್ಟು ಹಬ್ಬದ ಶುಭಾಶಯಗಳು ರಾಹುಲ್ ಗಾಂಧಿ ಎಂದಿದ್ದಾರೆ ರೋಮನ್ ಡಿಸೋಜಾ.

      ಅತ್ಯುತ್ತಮ ನಾಯಕತ್ವ

      ರಾಹುಲ್ ಗಾಂಧೀಜಿ, ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು. ನಿಮಗೆ ಅತ್ಯುತ್ತಮ ದೂರದೃಷ್ಟಿ ಮತ್ತು ನಾಯಕತ್ವದ ಗುಣವಿದೆ. ನಿಮ್ಮ ಜನ್ಮದಿನದಂದು, ನಿಮಗೆ ಶಾಂತಿ, ಉತ್ತಮ ಆರೋಗ್ಯ, ಯಶಸ್ಸು ಸಿಗಲಿ ಎಂದು ಹಾರೈಸುತ್ತೇನೆ. ಅಭಿನಂದನೆಗಳು ಎಂದಿದ್ದಾರೆ ಆರ್ ಜೆಡಿ ಮುಖಂಡ ತೇಜಸ್ವಿ ಯಾದವ್.

      ದೇಶದ ಭವಿಷ್ಯಕ್ಕೆ ನೀವು ಬೇಕು!

      ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ದೇಶ ಭವಿಷ್ಯಕ್ಕಾಗಿ ಭಾರತಕ್ಕೆ ನಿಮ್ಮ ನಾಯಕತ್ವ ಬೇಕು. ನಿಮಗೆ ಉತ್ತಮ ಆರೋಗ್ಯ ಸಿಗಲಿ ಎಂದಿದ್ದಾರೆ ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್ ಖರ್ಗೆ.

      ನಮ್ಮ ನಾಯಕ ನೂರ್ಕಾಲ ಬಾಳಲಿ

      ಯಾರಿಗಾದರೂ ನಿಮ್ಮ ಅವಶ್ಯಕತೆ ಇದೆ ಎಂದಾಗ ನೀವು ಅಲ್ಲಿ ಇದ್ದೇ ಇರುತ್ತೀರಿ. ಹಾಗೆಯೇ ನಿಮಗೆ ಯಾರದಅದರೂ ಅಗತ್ಯವಿದ್ದರೆ, ನಿಮ್ಮೊಂದಿಗೆ ನಾವಿರುತ್ತೇವೆ. ನಮ್ಮ ನಅಯಕ ನೂರ್ಕಾಲ ಬಾಳಲಿ ಎಂದಿದ್ದಾರೆ ಸುಧಿನ್ ಸುರೇಶ್.

      ರಾಜಕುಮಾರನ ಜನ್ಮದಿನ!

      ಇದು ಭಾರತಕ್ಕೆ ವಿಶೇಷ ದಿನ. ಏಕೆಂದರೆ ಇಂದು ಭಾರತದ ರಾಜಕುಮಾರನ ಜನ್ಮದಿನ. ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರಿಗೆ ಜನ್ಮದಿನದ ಶುಭಾಶಯಗಳು. ದೇಶಕ್ಕೆ ನಿಮ್ಮಂಥವರು ಬೇಕು. ನಿಮ್ಮ ದೇಶಸೇವೆ ಹೀಗೆಯೇ ಸಾಗಲಿ ಎಮದಿದ್ದಾರೆ ಅರುಣ್ ಸ್ಟಿಫನ್.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+