Rajasthan: ಮುಂದೂಡಿದ್ದ ಈ ಕ್ಷೇತ್ರದ ಚುನಾವಣೆಗೆ 'ಕೈ' ಅಭ್ಯರ್ಥಿ ಫೈನಲ್

ನವದೆಹಲಿ, ಡಿಸೆಂಬರ್ 14: ಕಾಂಗ್ರೆಸ್ ಅಭ್ಯರ್ಥಿ ನಿಧನಾನಂತರ ತೆರವಾಗಿದ್ದ ರಾಜಸ್ಥಾನ ರಾಜ್ಯದ 3-ಕರಣ್‌ಪುರ ವಿಧಾನಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ತನ್ನ ಅಭ್ಯರ್ಥಿಯಾಗಿ ರೂಪಿಂದರ್ ಸಿಂಗ್ ಕುನ್ನಾರ್ ಅವರನ್ನು ಕಣಕ್ಕಿಳಿಸಿದೆ. ಈ ಕುರಿತು ಎಐಸಿಸಿ ಗುರುವಾರ ಅಧಿಕೃತವಾಗಿ ತಿಳಿಸಿದೆ.

ಇದೇ ವರ್ಷ ಕಳೆದ ನವೆಂಬರ್ 25 ರಂದು ರಾಜ್ಯಸ್ಥಾನ 200 ವಿಧಾನಸಭಾ ಸ್ಥಾನಗಳ ಪೈಕಿ 199 ಸ್ಥಾನಗಳಿಗೆ ವಿಧಾನಸಭಾ ಚುನಾವಣೆ ನಡೆಯಿತು. ಈ ವೇಳೆ ಕರಣ್‌ಪುರ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗುರ್ಮೀತ್ ಸಿಂಗ್ ಕೂನಾರ್ ಅವರ ನಿಧನದಿಂದ ಚುನಾವಣೆಯನ್ನು ಮುಂದೂಡಲ್ಪಟ್ಟಿತ್ತು.

Congress Final Candidate Rupinder Singh Kunnar For 3 Karanpur Assembly Constituency of Rajasthan

ಇದೀಗ ಈ ಕ್ಷೇತ್ರಕ್ಕೆ ಚುನಾವಣೆ ನಡೆಯಲಿದೆ. ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ರಾಜಸ್ಥಾನದ ವಿಧಾನಸಭೆಗೆ "ಮುಂದೂಡಲ್ಪಟ್ಟ ಚುನಾವಣೆ" ಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ರೂಪಿಂದರ್ ಸಿಂಗ್ ಕುನ್ನಾರ್ ದಿವಂಗತ ಗುರ್ಮೀತ್ ಸಿಂಗ್ ಕುನ್ನಾರ್ ಅವರ ಉಮೇದುವಾರಿಕೆಯನ್ನು ಅನುಮೋದಿಸಿದ್ದಾರೆ.

ರಾಜಸ್ಥಾನದಲ್ಲಿ ಗೆಲುವು ಪಡೆದ ಬಿಜೆಪಿ

ರಾಜಸ್ಥಾನದಲ್ಲಿ ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆ 2023 ಯಲ್ಲಿ ಬಿಜೆಪಿ 115 ಸ್ಥಾನಗಳಲ್ಲಿ ಗೆಲುವು ಸಾಧಿಸಿದರೆ, ಕಾಂಗ್ರೆಸ್ 69 ಸ್ಥಾನಗಳನ್ನು ಪಡೆದು ನಂತರ ಸ್ಥಾನ ಪಡೆದುಕೊಂಡಿದೆ. ಈ ರಾಜಸ್ಥಾನದಲ್ಲಿ ಬಹುಮತ ಪಡೆಯಲು ಒಂದು ಪಕ್ಷ ಮ್ಯಾಜಿಕ್ ನಂಬರ್ 100 ಅಂಕ ಪಡೆಯಬೇಕಿದ್ದು, ಅದನ್ನು ಬಿಜೆಪಿ ಸಾಧಿಸಿದೆ.

Congress Final Candidate Rupinder Singh Kunnar For 3 Karanpur Assembly Constituency of Rajasthan

ಮೊದಲ ಬಾರಿಗೆ ಶಾಸಕನಾದವ ಸಿಎಂ ಆಗಿ ಆಯ್ಕೆ

ಕೆಲವು ದಿನಗಳ ಕುತೂಹಲಕ್ಕೆ ಭಾರತೀಯ ಜನತಾ ಪಕ್ಷವು ರಾಜಸ್ಥಾನದ ಮುಖ್ಯಮಂತ್ರಿಯಾಗಿ ಸಂಗನೇರ್ ವಿಧಾನಸಭಾ ಕ್ಷೇತ್ರದಿಂದ ಮೊದಲ ಬಾರಿಗೆ ಶಾಸಕರಾದ ಭಜನ್ಲಾಲ್ ಶರ್ಮಾ ಅವರನ್ನು ಆಯ್ಕೆ ತೆರೆ ಎಳೆದಿದೆ. ಅಲ್ಲದೇ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಗೊಂಡ ವ್ಯಕ್ತಿಗೆ ಬಿಜೆಪಿ ಸಿಎಂ ಸ್ಥಾನ ನೀಡಿರುವುದು ರಾಷ್ಟ್ರಮಟ್ಟದಲ್ಲಿ ಚರ್ಚೆ ಆಗಿದೆ.

ಮುಖ್ಯಮಂತ್ರಿ ಸ್ಥಾನ ಅಲಂಕರಿಸಿರುವ ಭಜನ್‌ಲಾಲ್ ಶರ್ಮಾ ಅವರು ರಾಜಸ್ಥಾನದ ಪೂರ್ವ ಜಿಲ್ಲೆ ಭರತ್‌ಪುರದ ಮೂಲ ನಿವಾಸಿಯಾಗಿದ್ದಾರೆ. ಅವರು ಇದೇ ವರ್ಷ ನಡೆದ ವಿಧಾನಸಭೆಯಲ್ಲಿ ಮೊದಲ ಬಾರಿಗೆ ಸಂಗನೇರ್ ಕ್ಷೇತ್ರದಿಂದ ವಿಧಾನಸಭೆಗೆ ಆಯ್ಕೆ ಆದರು. ಇವರು ರಾಷ್ಟ್ರೀಯ ಸ್ವಯಂಸೇವಕ ಸಂಘದಿಂದ ಬಲವಾದ ಬೆಂಬಲ ಪಡೆದ ಬಿಜೆಪಿ ಸದಸ್ಯರಾಗಿದ್ದರಿಂದ ಸಿಎಂ ಸ್ಥಾನ ಲಭಿಸಿದೆ ಅಂತಲೂ ಹೇಳಲಾಗುತ್ತಿದೆ.

ಸಿಎಂ ಆಯ್ಕೆ ಬಳಿ ಬಿಜೆಪಿಯು ಪ್ರೇಮ್ ಚಂದ್ ಬೈರ್ವಾ ಮತ್ತು ದಿಯಾ ಕುಮಾರಿ ಅವರನ್ನು ರಾಜಸ್ಥಾನಕ್ಕೆ ಉಪಮುಖ್ಯಮಂತ್ರಿಗಳಾಗಿ ಆಯ್ಕೆ ಮಾಡಿತು. ಸದ್ಯ ಈ ರಾಜ್ಯದಲ್ಲಿ ಮುಂದೂಡಲ್ಪಟ್ಟಿದ್ದ ಕ್ಷೇತ್ರಕ್ಕೆ ಚುನಾವಣೆ ನಡೆಯಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+