ವ್ಯತಿರಿಕ್ತ ಚುನಾವಣಾ ಸಮೀಕ್ಷೆ: ಕಾಂಗ್ರೆಸ್ ಕಂಗಾಲು

Congress demands to ban pre-poll survey- hits hornets nest
ನವದೆಹಲಿ, ನ.4: ಸಿಪಿಐ ಹಿರಿಯ ನಾಯಕ ಡಿ. ರಾಜಾ ಅವರು ಹೇಳಿದಂತೆ ವ್ಯತಿರಿಕ್ತ ಚುನಾವಣಾ ಸಮೀಕ್ಷೆಗಳಿಂದ ಪೀಕಲಾಟಕ್ಕಿಟ್ಟುಕೊಂಡ ಕಾಂಗ್ರೆಸ್ ಪಕ್ಷವು ಚುನಾವಣಾಪೂರ್ವ ಸಮೀಕ್ಷೆಗಳು ಜನರ ದಿಕ್ಕು ತಪ್ಪಿಸುತ್ತವೆ. ಅದನ್ನು ನಿಷೇಧಿಸಿದೆ ಎಂದು ಅಲವತ್ತುಕೊಂಡಿದೆ.

'ಕಾಂಗ್ರೆಸ್ ಪಕ್ಷವು ಸೋಲುವ ಭೀತಿಯಲ್ಲಿದೆ ಎಂದೇ ಸಮೀಕ್ಷೆಗಳು ಹೇಳಿವೆ. ಅದಕ್ಕಾಗಿಯೇ ಕಾಂಗ್ರೆಸ್ ಹೆದರುತ್ತಿದೆ' ಎನ್ನುವ ರಾಜಾ ಅವರ ಮಾತಿಗೆ ಬಹುತೇಕ ವಿರೋಧ ಪಕ್ಷಗಳು ದನಿಗೂಡಿಸಿವೆ. ಗಮನಾರ್ಹವೆಂದರೆ ಪ್ರಸ್ತುತ, ಚುನಾವಣೆಗೆ 48 ಗಂಟೆಗಳಿರುವಾಗ ಪೂರ್ವ ಸಮೀಕ್ಷೆ ಫಲಿತಾಂಶ ಪ್ರಕಟಿಸುವುದಕ್ಕೆ ನಿರ್ಬಂಧವಿದೆ.

ಬಿಜೆಪಿ ವಕ್ತಾರ ಪ್ರಕಾಶ್‌ ಜಾವ್ಡೇಕರ್ ಹೇಳುವಂತೆ ಈ ಹಿಂದೆಲ್ಲಾ ಕಾಂಗ್ರೆಸ್‌, ಸಮೀಕ್ಷೆಯನ್ನು ಬೆಂಬಲಿಸಿತ್ತು. ಆದರೆ ಲೋಕಸಭಾ ಚುನಾವಣೆ ಸಮೀಕ್ಷೆಗಳಲ್ಲಿ ಕಾಂಗ್ರೆಸ್‌ ಪಕ್ಷಕ್ಕೆ ಹಿನ್ನಡೆಯಾಗಿರುವುದು ಅದರಲ್ಲಿ ಅಭದ್ರತೆ ಹೆಚ್ಚಿಸಿದೆ. ಹೀಗಾಗಿ ಅದೀಗ ನಿಷೇಧದ ಮಾತನ್ನಾಡುತ್ತಿದೆ.

ಆದರೆ ಚುನಾವಣಾ ಪೂರ್ವ ಸಮೀಕ್ಷೆಗಳು ಜನರ ದಿಕ್ಕು ತಪ್ಪಿಸುತ್ತವೆ ಮತ್ತು ಮತದಾರರನ್ನು ಮರಳು ಮಾಡುತ್ತವೆ. ಹೀಗಾಗಿಯೇ ಸಮೀಕ್ಷೆಗಳನ್ನು ನಿಷೇಧಿಸುವ ಚುನಾವಣಾ ಆಯೋಗದ ಪ್ರಸ್ತಾಪವನ್ನು ತಾನು ಬೆಂಬಲಿಸುವುದಾಗಿ ಕಾಂಗ್ರೆಸ್‌ ಘೋಷಿಸಿದೆ.

ಮುಂಬರುವ ಪಂಚರಾಜ್ಯ ಚುನಾವಣೆ ಹಾಗೂ 2014ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷ ಹಿನ್ನಡೆ ಅನುಭವಿಸಲಿದೆ ಎಂದು ಒಂದಾದ ಮೇಲೊಂದರಂತೆ ವಿವಿಧ ಸಮೀಕ್ಷೆಗಳು ಭವಿಷ್ಯ ನುಡಿಯುತ್ತಿರುವ ಸಂದರ್ಭದಲ್ಲೇ, ಪಂಚ ರಾಜ್ಯಗಳ ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವಂತೆಯೇ ಕಾಂಗ್ರೆಸ್ ಚುನಾವಣಾ ಪೂರ್ವ ಸಮೀಕ್ಷೆಗಳಿಗೆ ನಿಷೇಧ ಹೇರುವಂತೆ ಚುನಾವಣಾ ಆಯೋಗಕ್ಕೆ ಸಲಹೆ ಮಾಡಿದೆ.

ಸಮೀಕ್ಷೆಗಳು ತಪ್ಪು, ವಿಶ್ವಾಸಾರ್ಹತೆ ಕೊರತೆಯಿಂದ ಕೂಡಿರುತ್ತವೆ ಹಾಗೂ ಅದನ್ನು ಪಟ್ಟಭದ್ರ ಹಿತಾಸಕ್ತಿಗಳು ತಮ್ಮ ಅನುಕೂಲಕ್ಕೆ ತಕ್ಕಂತೆ ತಿರುಚಬಹುದಾಗಿದೆ ಎಂದು ಸಮೀಕ್ಷೆ ನಿಷೇಧಿಸುವ ಕುರಿತು ಅಭಿಪ್ರಾಯ ಕೋರಿದ್ದ ಆಯೋಗಕ್ಕೆ ಕಾಂಗ್ರೆಸ್‌ ಬರೆದಿರುವ ಪತ್ರದ ಸಾರಾಂಶ.

ಈ ಪತ್ರ ಬಯಲಾಗುತ್ತಿದ್ದಂತೆ ವಿವಾದ ಸೃಷ್ಟಿಯಾಗಿದ್ದು ವಿರೋಧ ಪಕ್ಷಗಳು ಕಾಂಗ್ರೆಸ್‌ ನಿಲುವನ್ನು ಹಿಗ್ಗಾಮುಗ್ಗಾ ಟೀಕಿಸಿವೆ. ಗಾಳಿ ತನ್ನ ಪರವಾಗಿ ಬೀಸುತ್ತಿರುವಾಗ ಸಮೀಕ್ಷೆ ಬೇಕು ಎಂದು ವಾದಿಸುವ ಕಾಂಗ್ರೆಸ್‌, ವಿರೋಧಿ ಗಾಳಿ ಬೀಸಲಾರಂಭಿಸಿದರೆ ಸಮೀಕ್ಷೆಯೇ ಬೇಡ ಎನ್ನುತ್ತದೆ ಎಂದು ವಿವಿಧ ಪಕ್ಷಗಳು ವಾಗ್ದಾಳಿ ನಡೆಸಿವೆ.

ಜೇನುಗೂಡಿಗೆ ಕಲ್ಲು: ಚುನಾವಣಾ ಸಮೀಕ್ಷೆಗಳನ್ನು ನಿಷೇಧಿಸುವಂತೆ ಚುನಾವಣಾ ಆಯೋಗ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿತ್ತು. ಈ ಸಂಬಂಧ ಹೊಸದಾಗಿ ಸಮಾಲೋಚನೆ ನಡೆಸುವಂತೆ ಸೂಚಿಸಿದ್ದ ಕೇಂದ್ರ ಸರ್ಕಾರ, ಆಯೋಗದ ಬೇಡಿಕೆಯನ್ನು ತಿರಸ್ಕರಿಸಿತ್ತು. ಹೀಗಾಗಿ ಕಳೆದ ತಿಂಗಳು ಎಲ್ಲ ರಾಜಕೀಯ ಪಕ್ಷಗಳಿಗೂ ಪತ್ರ ಬರೆದಿದ್ದ ಆಯೋಗ, ಚುನಾವಣೆ ಸಮೀಕ್ಷೆ ನಿಷೇಧ ಕುರಿತು ಅ. 21ರೊಳಗೆ ಅಭಿಪ್ರಾಯ ಬಯಸಿತ್ತು. ಆದರೆ ಅ. 30ರಂದು ತನ್ನ ಅಭಿಪ್ರಾಯ ತಿಳಿಸಿರುವ ಕಾಂಗ್ರೆಸ್‌, ಸಮೀಕ್ಷೆ ನಿಷೇಧಿಸುವ ಆಯೋಗದ ಪ್ರಸ್ತಾಪವನ್ನು ಸಂಪೂರ್ಣವಾಗಿ ಬೆಂಬಲಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+