ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಧ್ಯ ಪ್ರದೇಶದಲ್ಲಿ 60 ಲಕ್ಷ ಅಕ್ರಮ ಮತದಾರರು: ಕಾಂಗ್ರೆಸ್ ಆರೋಪ

By Sachhidananda Acharya
|
Google Oneindia Kannada News

ನವದೆಹಲಿ, ಜೂನ್ 4: ಈ ವರ್ಷದ ಡಿಸೆಂಬರ್ ನಲ್ಲಿ ಚುನಾವಣೆ ನಡೆಯಲಿರುವ ಮಧ್ಯ ಪ್ರದೇಶದ ಮತದಾರರ ಪಟ್ಟಿಯಲ್ಲಿ ಬರೋಬ್ಬರಿ 60 ಲಕ್ಷ ಅಕ್ರಮ ಮತದಾರರಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ. ಮಾತ್ರವಲ್ಲ ಈ ಅಕ್ರಮಕ್ಕೆ ಕಾರಣವಾಗಿರುವ ಅಧಿಕಾರಿ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿದೆ.

ಈ ಕುರಿತು ಹೇಳಿಕೆ ನೀಡಿರುವ ಮಧ್ಯ ಪ್ರದೇಶ ಕಾಂಗ್ರೆಸ್ ಮುಖ್ಯಸ್ಥ ಕಮಲ್ ನಾಥ್, ಎಲ್ಲಾ ಪಕ್ಷಗಳು ಮತದಾರರ ಪಟ್ಟಿಗೆ ಬೇಡಿಕೆ ಸಲ್ಲಿಸಿದ್ದರೆ, ಬಿಜೆಪಿ ಮಾತ್ರ ಮತದಾರರ ಪಟ್ಟಿಗೆ ಬೇಡಿಕೆ ಸಲ್ಲಿಸದೆ ಅಕ್ರಮ ಎಸಗಿದೆ ಎಂದಿದ್ದಾರೆ.

Congress demands action against irregularities in MP electoral lists

"ಮಧ್ಯ ಪ್ರದೇಶದ ಜನಸಂಖ್ಯೆ ಶೇಕಡಾ 24 ರಷ್ಟು ಹೆಚ್ಚಾಗಿದ್ದರೆ, ಮತದಾರರ ಸಂಖ್ಯೆ ಮಾತ್ರ ಶೇಕಡಾ 40 ರಷ್ಟು ಹೆಚ್ಚಾಗಿದೆ. ಈ ರೀತಿಯ ಘಟನೆಗಳು ತೀರಾ ಅಪರೂಪ. ಪ್ರಕಟಗೊಂಡಿರುವ ಮಧ್ಯ ಪ್ರದೇಶದ ಮತದಾರರ ಪಟ್ಟಿಯಲ್ಲಿ ಉತ್ತರ ಪ್ರದೇಶದ ಮತದಾರರ ಹೆಸರುಗಳಿವೆ," ಎಂದು ಅವರು ಗಂಭೀರ ಆರೋಪ ಮಾಡಿದ್ದಾರೆ.

"ಓರ್ವ ಮತದಾರರ ಒಂದೇ ಫೋಟೋ ಹಲವು ಮತದಾರರ ಪಟ್ಟಿಯಲ್ಲಿ ಪ್ರಕಟಗೊಂಡಿದೆ. ಅವರ ತಂದೆಯ ಹೆಸರೂ ಬದಲಾಗಿಲ್ಲ," ಎಂದವರು ದೂರಿದ್ದಾರೆ.

ರಾಜ್ಯದ ಮತದಾರರ ಪಟ್ಟಿಯಲ್ಲಿ 60 ಲಕ್ಷ ನಕಲಿ ಮತದಾರರ ಹೆಸರುಗಳಿವೆ ಎಂದು ಕಾಂಗ್ರೆಸ್ ಆರೋಪಿಸಿದ ನಂತರ ಚುನಾವಣಾ ಆಯೋಗ ಭಾನುವಾರ ತನಿಖೆಗೆ ಆದೇಶ ನೀಡಿತ್ತು. ಇದೀಗ ಭೋಪಾಲ್ ಮತ್ತು ನರ್ಮದಾಪುರ ಭಾಗದ ಮತದಾರರ ಪಟ್ಟಿಯಲ್ಲಾಗಿರುವ ತಪ್ಪುಗಳನ್ನು ಪತ್ತೆ ಹಚ್ಚಲು ಚುನಾವಣಾ ಆಯೋಗ ಎರಡು ತಂಡಗಳನ್ನು ರಚಿಸಲು ಆದೇಶ ನೀಡಿದೆ.

ಈ ಹಿಂದೆ ಫೆಬ್ರವರಿಯಲ್ಲೇ ಮತದಾರರ ಪಟ್ಟಿಯಲ್ಲಿರುವ ಅಕ್ರಮ ಹೆಸರುಗಳನ್ನು ತೆಗೆಯುವಂತೆ ಕಾಂಗ್ರೆಸ್ ಆಯೋಗಕ್ಕೆ ಮನವಿ ಸಲ್ಲಿಸಿತ್ತು. ಇದಾದ ಬಳಿಕ ಏಪ್ರಿಲ್ ನಲ್ಲಿ ಚುನಾವಣಾ ಆಯೋಗ 6 ಲಕ್ಷ ಮತದಾರರ ಹೆಸರುಗಳನ್ನು ರದ್ದುಗೊಳಿಸಿರುವುದಾಗಿ ಹೇಳಿತ್ತು.
ಇದೀಗ ಮತ್ತೆ ಕಾಂಗ್ರೆಸ್ ದೂರು ದಾಖಲಿಸಿದ್ದು, ಈ ಬಾರಿ 60 ಲಕ್ಷ ಅಕ್ರಮ ಮತದಾರರ ಹೆಸರುಗಳಿವೆ ಎಂದು ದೂರಿತ್ತಿದೆ.

English summary
The Congress on Monday demanded strict action against the returning officers who were involved in the alleged irregularities in electoral lists in Madhya Pradesh.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X