ಬಿಜೆಪಿ ಮೋದಿ ವಿರುದ್ಧ ಕಾಂಗ್ರೆಸ್ಸಿಗರ 'ನಪುಂಸಕ ಧ್ವನಿ'
ನವದೆಹಲಿ, ಮಾರ್ಚ್ 28: ಹೌದು, ಗುಜರಾತ್ ಮತ್ತು ಕೇರಳದಲ್ಲಿ ಮುಸ್ಲಿಮರು ಸುಭಿಕ್ಷವಾಗಿದ್ದಾರೆ ಎಂದು ಸ್ವತಃ ರಾಷ್ಟ್ರೀಯ ಮಾದರಿ ಸಮೀಕ್ಷೆ ಸಂಸ್ಥೆ ವರದಿ ನೀಡಿದೆ. ಇದರಿಂದ ಚುನಾವಣೆಯ ಹೊಸ್ತಿಲಲ್ಲಿರುವ ಬಿಜೆಪಿಯ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರಿಗೆ ಮತ್ತಷ್ಟು ಬೆಂಬಲ ಸಿಕ್ಕಿದಂತಾಗಿದೆ.
ಮೋದಿ ಒಬ್ಬ ಷಂಡ (napunsak) ಎಂದು ಕೇಂದ್ರ ವಿದೇಶ ವ್ಯವಹಾರಗಳ ಸಚಿವ ಸಲ್ಮಾನ್ ಖುರ್ಷಿದ್ ನೀಡಿದ್ದರು. ಇದು ಬಿಜೆಪಿ ಸೇರಿದಂತೆ ಪ್ರಜ್ಞಾವಂತ ನಾಗರಿಕರಲ್ಲಿ ತೀವ್ರ ಅಸಮಾಧಾನ ಹುಟ್ಟುಹಾಕಿತ್ತು.
ಆದರೆ ಅದಾಗುತ್ತಿದ್ದಂತೆ 'ನರೇಂದ್ರ ಮೋದಿಯನ್ನು ಷಂಡ ಎಂದು ನಾನು ಹೇಳಿಯೇ ಇಲ್ಲ. ಬಿಜೆಪಿಯವರು ನನ್ನ ಪದ ಬಳಕೆಯನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ' ಎಂದು ಖುರ್ಷಿದ್ ಕಿಡಿ ಕಾರಿದ್ದಾರೆ. [ಮೋದಿ ಮಾತನ್ನು ಕನ್ನಡದಲ್ಲಿ ಕೇಳಿರಿ]

ಕಾಂಗ್ರೆಸ್ ನಾಯಕರು ಹೀಗೆ 'ನಪುಂಸಕ' ಧ್ವನಿಯಲ್ಲಿ ಮೋದಿ ಮೇಳೆ ಮುಗಿಬಿದ್ದಿದ್ದು ಇದೇ ಮೊದಲಲ್ಲ. 2007ರಲ್ಲಿ ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಮೋದಿ ಅವರನ್ನು 'ಮೌತ್ ಕಾ ಸೌದಾಗರ್' ಎಂದು ಖುದ್ದು ಸೋನಿಯಾ ಗಾಂಧಿ ಅವರೇ ಜರಿದಿದ್ದರು.
ಎಐಸಿಸಿ ಅಧ್ಯಕ್ಷೆ ಸೋನಿಯಾರ ಈ ಮಾತಿಗೆ ಜನ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಆದರೂ ಕಾಂಗ್ರೆಸ್ ಅದರಿಂದ ಪಾಠ ಕಲಿತಂತಿಲ್ಲ. ಮುಂದೆ ಮತ್ತೆ ಸೋನಿಯಾರೇ ಬಿಜೆಪಿ ಮೇಲೆ ಮುಗಿಬಿದ್ದು 'ಜೆಹರ್ ಕಿ ಖೇತಿ' ಅಂದರೆ 'ಬಿಜೆಪಿ ವಿಷ ಕೃಷಿಯಲ್ಲಿ ತೊಡಗಿದೆ' ಎಂದು ಬಣ್ಣಿಸಿದ್ದರು.
ಕಾಂಗ್ರೆಸ್ಸಿನ ಮಹಾರಾಣಿಯನ್ನು ಸಂಪ್ರೀತಗೊಳಿಸುವ ಭರದಲ್ಲಿ ಪಕ್ಷದ ಅನೇಕ ಮಹಾಮಹಿಮರು ಮೋದಿ ಮತ್ತು ಬಿಜೆಪಿ ಬಗ್ಗೆ ಏನೆಲ್ಲಾ ಹೇಳಿದ್ದಾರೆ, ಬಳಸಿರುವ ಪದಪುಂಜಗಳೇನು ಎಂಬುದರ ವಾರೆ ನೊಟ ಇಲ್ಲಿದೆ.
ಹಾವು, ಚೇಳು, ಕೊಳಕು ಮನುಷ್ಯ - ಕಾಂಗ್ರೆಸ್ಸಿನ ಆಸ್ಥಾನ ವಿದ್ವಾಂಸ, ಮೇಲ್ಮನೆ ಸದಸ್ಯ ಮಣೀಶಂಕರ್ ಅಯ್ಯರ್ ಉವಾಚ.
ರಾವಣ, ಲಹು ಪುರುಷ (ರಕ್ತಪಿಪಾಸು), ಪಾನಿ ಪುರುಷ, ಅಸತ್ಯದ ವ್ಯಾಪಾರಿ - ದಿಗ್ವಿಜಯ್ ಸಿಂಗ್, ಜನ ಇವರನ್ನು ಕಾಂಗ್ರೆಸ್ಸಿನ ಆಸ್ಥಾನದ ಶಕುನಿ ಎಂದು ಗುರುತಿಸುತ್ತಾರೆ.
ಕೊಳಚೆ ಕಾಲುವೆಯ ಕೀಟ - ಕರ್ನಾಟಕ ಕಾಂಗ್ರೆಸ್ಸಿನ ನಾಯಕ ಬಿಕೆ ಹರಿಪ್ರಸಾದ್.
ಘಾಂಚಿ - ಮೋದಿ ಅವರು ಕೆಳಸ್ತರದ ಜಾತಿಯಲ್ಲಿ ಹುಟ್ಟಿದವರು ಎಂದು ಹೇಳಲು ಗುಜರಾತಿನ ಕಾಂಗ್ರೆಸ್ ಸಂಸದ ಸೋಮ ಗಂಡ ಪಟೇಲ್ ಅವರು ಬಳಸಿದ ಪದವಿದು.
ರೇಬಿಸ್ ಅಂಟಿಸಿಕೊಂಡಿರುವ ಕೋತಿ - ಗುಜರಾತ್ ಕಾಂಗ್ರೆಸ್ ಅಧ್ಯಕ್ಷ ಅರ್ಜುನ್ ಮೋದ್ವಾಡಿಯಾ.
ಛಾಯ್ ವಾಲಾ : ಮಣಿಶಂಕರ್ ಅಯ್ಯರ್
ಮೋದಿ ಒಬ್ಬ ದಾವೂದ್ ಇಬ್ರಾಹಿಂ - ಕಾಂಗ್ರೆಸ್ ವಕ್ತಾರ ಮನೀಶ್ ತಿವಾರಿ ಹೇಳಿಕೆ.
ಮೋದಿ ಒಬ್ಬ ನಾಲಾಯಕ್, ಹೌದು ಆತನ ಅಪ್ಪ-ಅಮ್ಮ ಯಾರು? - ಕಾಂಗ್ರೆಸ್ ಮುಸ್ಲಿಂ ನಾಯಕ ರಿಜ್ವಾನ್ ಉಸ್ಮಾನಿ.
ಹಿಟ್ಲರ್ - ಕಾಂಗ್ರೆಸ್ ಸಂಸದ ಶಾಂತಾರಾಂ ನಾಯಕ್
ಜ್ವರದಂತೆ ಕಾಡುವ ನಮೋನಿಟಿಸ್ ಎಂಬ ವೈಸರ್ ಮೋದಿ - ಕಾಂಗ್ರೆಸ್ಸಿನ ನಾಟಕ ರಾಣಿ ರೇಣುಕಾ ಚೌಧರಿ
ಭಸ್ಮಾಸುರ: ಸಂಸದ, ಸಚಿವ ಜೈರಾಂ ರಮೇಶ್
ಗಂಗು ಟೆಲಿ : ಪಕ್ಷದ ಮತ್ತೊಬ್ಬ ಸಂಸದ, ಸಚಿವ ಗುಲಾಂ ನಬಿ ಅಜಾದ್ ಅವರು ಮೋದಿಯ ಜಾತಿಯನ್ನು (ಘಾಂಚಿ ಅಥವಾ ತೆಲಿ) ಕೆಣಕುತ್ತಾ ಹೇಳಿದ ಮಾತಿದು.
ಮೋದಿಯನ್ನು ತುಂಡು ತುಂಡು ಕತ್ತರಿಸುವೆ : ಉತ್ತರ ಪ್ರದೇಶದ ಷಹರಣಪುರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಇಮ್ರಾನ್ ಮಸೂದ್
(ಕೃಪೆ: niticentral.com)
-
Rain Alert: ಕರ್ನಾಟಕದ ಈ 9 ಜಿಲ್ಲೆಗಳಿಗೆ ಮುಂದಿನ 2 ದಿನ ವ್ಯಾಪಕ ಆಲಿಕಲ್ಲು ಮಳೆ ಎಚ್ಚರಿಕೆ -
IMD Weather Forecast: ಈ ಭಾಗಗಳಲ್ಲಿ ಮುಂದಿನ 3 ದಿನ ಬಿರುಗಾಳಿ, ಆಲಿಕಲ್ಲು ಸಹಿತ ಭಾರೀ ಮಳೆ -
ರಾಮಚಂದ್ರ ರಾವ್ ಪ್ರಕರಣ: 'ಎಐ' ಅಲ್ಲ ಅಸಲಿ ವಿಡಿಯೋ; ಎಫ್ಎಸ್ಎಲ್ ವರದಿಯಲ್ಲಿ ಬಯಲಾಯ್ತು ಸತ್ಯ -
New Railway Lines: ಬಿರೂರು-ಶಿವಮೊಗ್ಗ ರೈಲು ಹಳಿ ಡಬ್ಲಿಂಗ್, ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ಸಂಪರ್ಕಕ್ಕೆ ಒತ್ತಾಯ -
Rishab Shetty: ಹೊಂಬಾಳೆ ಫಿಲ್ಮ್ಸ್ ಅನ್ಫಾಲೋ ಮಾಡಿದ ರಿಷಬ್ ಶೆಟ್ಟಿ: ಕಾಂತಾರ ಕುಟುಂಬದಲ್ಲಿ ಬಿರುಕು ವದಂತಿ -
Anil Kumble: ವಿರಾಟ್ ಕೊಹ್ಲಿ-ಬೆಂಗಳೂರು ನಡುವಿನ ಅವಿನಾಭಾವ ಸಂಬಂಧದ ಬಗ್ಗೆ ಕನ್ನಡಿಗ ಅನಿಲ್ ಕುಂಬ್ಳೆ ಮನದಾಳದ ಮಾತು -
Bengaluru Second Airport: ಬೆಂಗಳೂರು ಎರಡನೇ ವಿಮಾನ ನಿಲ್ದಾಣದ ಸ್ಥಳ: ಸಚಿವ ಎಂ.ಬಿ.ಪಾಟೀಲ್ ಮಹತ್ವದ ಮಾಹಿತಿ -
ಮಳೆ.. ಮಳೆ.. ಮುಂದಿನ 48 ಗಂಟೆಯಲ್ಲಿ ಮಳೆ ಬಗ್ಗೆ ಹವಾಮಾನ ಇಲಾಖೆ ಮಹತ್ವದ ಮಾಹಿತಿ... Karnataka Rain -
March 20 Horoscope: ಆರೋಗ್ಯ ಮತ್ತು ಹಣಕಾಸು ವಿಷಯದಲ್ಲಿ ಈ ರಾಶಿಗೆ ಲಾಭ -
Karnataka Rain: ಬೆಂಗಳೂರು ಸೇರಿ 18 ಜಿಲ್ಲೆಗಳಲ್ಲಿ ನಾಳೆವರೆಗೆ ಗುಡುಗು ಸಹಿತ ಮಳೆ ಸಾಧ್ಯತೆ -
March 19 Horoscope: ಈ ರಾಶಿಯವರಿಗೆ ಶುಭಸುದ್ದಿ, ಇತರರಿಗೆ ಎಚ್ಚರಿಕೆ -
40,000 ಹೋಟೆಲ್ ಮಾಲೀಕರಿಗೆ ಭರ್ಜರಿ ಸುದ್ದಿ, ಎಲ್ಪಿಜಿ ಸಿಲಿಂಡರ್ ನಿಯಮ ಬದಲಾವಣೆ... LPG Cylinder Supply












Click it and Unblock the Notifications