'ಸೆ.25ರೊಳಗೆ ಹಿಂತಿರುಗಿ, ಸೌದಿಯಲ್ಲಿರುವ ಭಾರತೀಯರಿಗೆ ಕರೆ'

Posted By:
Subscribe to Oneindia Kannada

ನವದೆಹಲಿ, ಆಗಸ್ಟ್ 24: ತೈಲ ಬೆಲೆ ವ್ಯತ್ಯಯದಿಂದಾಗಿ ಸೌದಿಯಲ್ಲಿ ಆರ್ಥಿಕ ಬಿಕ್ಕಟ್ಟು ಉಂಟಾಗಿದ್ದು, ಭಾರತೀಯ ಮೂಲದ ಸಾವಿರಾರು ಕಾರ್ಮಿಕರು ಉದ್ಯೋಗ ಕಳೆದುಕೊಂಡಿದ್ದಾರೆ.

ಸೌದಿಯಲ್ಲಿ ಕೆಲಸ ಕಳೆದುಕೊಂಡ ಭಾರತೀಯರಿಗೆ ನೆರವಾಗಲು ವಿದೇಶಾಂಗ ಸಚಿವಾಲಯ ಮುಂದಾಗಿದ್ದು, ಸೆಪ್ಟೆಂಬರ್ 25ರೊಳಗೆ ಭಾರತಕ್ಕೆ ಹಿಂತಿರುಗಿ. ಇಲ್ಲವಾದಲ್ಲಿ ನಿಮ್ಮದೇ ವ್ಯವಸ್ಥೆ ಮಾಡಿಕೊಳ್ಳಿ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಕರೆ ನೀಡಿದ್ದಾರೆ.

ಸೌದಿ ಅರೇಬಿಯಾದಲ್ಲಿ ತೊಂದರೆಗೆ ಸಿಲುಕಿರುವ ಭಾರತೀಯ ಕಾರ್ವಿುಕರಿಗೆ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಮಂಗಳವಾರದಿಂದಲೇ ಟ್ವಿಟ್ಟರ್ ಮೂಲಕ ಸೂಚನೆಗಳನ್ನು ನೀಡುತ್ತಾ ಬಂದಿದ್ದಾರೆ.

ಸುಮಾರು 3,172 ಕಾರ್ವಿುಕರಿಗೆ ವೇತನ ಪಾವತಿ ಬಾಕಿಯ ಜತೆಗೆ ಪಾಸ್​ಪೋರ್ಟ್ ಮತ್ತು ವೀಸಾ ಸಮಸ್ಯೆ ಎದುರಾಗಿತ್ತು. ಜತೆಗೆ ವೇತನ ಸಮಸ್ಯೆಯಿಂದ ಇತರ 10,000 ಕಾರ್ವಿುಕರು ಸಂಕಷ್ಟದಲ್ಲಿದ್ದರು. ಇವರಿಗೆ ಬಾಕಿ ವೇತನ ಪಾವತಿಗೆ ಸೌದಿ ಸರ್ಕಾರ ಆದೇಶಿಸಿದೆ.

ಈ ಕುರಿತು ಟ್ವೀಟ್ ಮಾಡಿರುವ ಸಚಿವೆ ಸುಷ್ಮಾ, ಭಾರತೀಯ ಕಾರ್ವಿುಕರನ್ನು ಸುರಕ್ಷಿತವಾಗಿ ವಾಪಸ್ ಕರೆತರಲು ಸರ್ಕಾರ ಎಲ್ಲ ವ್ಯವಸ್ಥೆ ಮಾಡಿದೆ ಎಂದು ಮಾಹಿತಿ ನೀಡಿದ್ದಾರೆ.

ಸೌದಿಗೆ ವಿಕೆ ಸಿಂಗ್ ಭೇಟಿ ಫಲಪ್ರದ

ಸೌದಿಗೆ ವಿಕೆ ಸಿಂಗ್ ಭೇಟಿ ಫಲಪ್ರದ

ವಿದೇಶಾಂಗ ಖಾತೆ ರಾಜ್ಯ ಸಚಿವ ವಿ. ಕೆ. ಸಿಂಗ್ ಈಗಾಗಲೇ ಎರಡು ಬಾರಿ ಸೌದಿ ಆರೇಬಿಯಾಗೆ ತೆರಳಿ ಅಲ್ಲಿನ ಸರ್ಕಾರ ಮತ್ತು ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ್ದಾರೆ. ಸಂಕಷ್ಟದಲ್ಲಿರುವ ಭಾರತೀಯ ಕಾರ್ವಿುಕರಿಗೆ ಅಗತ್ಯ ನೆರವನ್ನು ನೀಡಿದ್ದಾರೆ ಎಂದು ಸುಷ್ಮಾ ಹೇಳಿದ್ದಾರೆ.

ಸೆಪ್ಟೆಂಬರ್ 25ರೊಳಗೆ ನೀವು ಹಿಂದಿರುಗದಿದ್ದಲ್ಲಿ

ಸೆಪ್ಟೆಂಬರ್ 25ರೊಳಗೆ ನೀವು ಹಿಂದಿರುಗದಿದ್ದಲ್ಲಿ ಬಳಿಕ ನಿಮ್ಮ ಪ್ರಯಾಣ, ವಸತಿ ಮತ್ತು ಊಟಕ್ಕೆ ನೀವೇ ಅಗತ್ಯ ವ್ಯವಸ್ಥೆಯನ್ನು ಮಾಡಿಕೊಳ್ಳಬೇಕಾಗುತ್ತದೆ ಎಂದು ಸುಷ್ಮಾ ಹೇಳಿದ್ದಾರೆ. ಸಂಬಂಧಪಟ್ಟ ಟ್ವಿಟ್ಟರ್ ಐಡಿಗಳನ್ನು ನೀಡಿದ್ದಾರೆ.

ಸ್ಥಳೀಯ ಕಾನೂನು ಪಾಲಿಸಿ, ಪ್ರಕ್ರಿಯೆ ಬೇಗ ಆಗುತ್ತದೆ

ಸ್ಥಳೀಯ ಕಾನೂನು ಪಾಲಿಸಿ, ಪ್ರಕ್ರಿಯೆ ಬೇಗ ಆಗುತ್ತದೆ ಎಂದ ಸುಷ್ಮಾ

ಸೆ.25ರೊಳಗೆ ಹಿಂತಿರುಗದಿದ್ದರೆ ಏನು?

ಸೆ.25ರೊಳಗೆ ಹಿಂತಿರುಗದಿದ್ದರೆ ಪ್ರಯಾಣ, ವಸತಿ ವ್ಯವಸ್ಥೆ ಸೌಲಭ್ಯ ಲಭ್ಯವಿರುವುದಿಲ್ಲ.

ಎಕ್ಸಿಟ್ ವೀಸಾ ಪ್ರಕ್ರಿಯೆ ವಿಳಂಬವಾಗುತ್ತಿದೆ

ಆದರೆ, ಎಕ್ಸಿಟ್ ವೀಸಾ ಪ್ರಕ್ರಿಯೆ ವಿಳಂಬವಾಗುತ್ತಿದೆ ಅನೇಕರು ತಮ್ಮ ನೋವು ತೋಡಿಕೊಂಡಿದ್ದಾರೆ. ಸೌದಿಯಲ್ಲಿರುವ ಭಾರತೀಯ ರಾಯಭಾರ ಕಚೇರಿ ಈ ಬಗ್ಗೆ ಗಮನ ಹರಿಸುತ್ತಿದ್ದು, ಅಲ್ಲಿನ ಕಾನೂನಿನ ಪ್ರಕಾರ ನಡೆದುಕೊಳ್ಳಿ ಎಂದು ಸುಷ್ಮಾ ಸಲಹೆ ನೀಡಿದ್ದಾರೆ.

ಸಾಲ ಸೋಲ ಮಾಡಿಕೊಂಡಿದ್ದರೆ ಏನು ಮಾಡಬೇಕು?

ಸೌದಿಯಲ್ಲಿಸಾಲ ಸೋಲ ಮಾಡಿಕೊಂಡಿದ್ದರೆ ಏನು ಮಾಡಬೇಕು? ಎಂಬ ಪ್ರಶ್ನೆಗೆ ಉತ್ತರಿಸಿರುವ ಸುಷ್ಮಾ, ವೈಯಕ್ತಿಕ ಸಮಸ್ಯೆಗೆ ವಿದೇಶಾಂಗದ ಪ್ರತ್ಯೇಕ ವಿಭಾಗದಲ್ಲಿ ಪರಿಹಾರ ಕೇಳಿ ಎಂದು ಸೂಚಿಸಿದ್ದಾರೆ.

ವೈಯಕ್ತಿಕ ಆರ್ಥಿಕ ಸಮಸ್ಯೆಯಿದ್ದರೆ ಏನು ಮಾಡಬೇಕು?

ವೈಯಕ್ತಿಕ ಆರ್ಥಿಕ ಸಮಸ್ಯೆಯಿದ್ದರೆ ಏನು ಮಾಡಬೇಕು? ಎಂಬ ಪ್ರಶ್ನೆಗೆ ಇಲ್ಲಿದೆ ಉತ್ತರ ಇಲ್ಲಿದೆ

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
External Affairs Minister Sushma Swaraj today appealed to the Indian workers, who have lost their jobs in Saudi Arabia, to file their claims for unpaid dues with their employers and come back home soon(by September 25) and said the government will bear the cost of their return.
Please Wait while comments are loading...