ಕಾರವಾರ ಕೊಡಿ ಎಂದಿದ್ದ ಚರ್ಚಿಲ್, ಲಂಚದ ಕೇಸಲ್ಲಿ ಅಂದರ್

ಪಣಜಿ, ಆಗಸ್ಟ್ 06: ಕೊಂಕಣಿ ಹೆಚ್ಚಿನ ಭಾಷಿಗರು ಇರುವ ಕಾರವಾರ ಗಡಿಪ್ರದೇಶ ಅಭಿವೃದ್ದಿ ಇಲ್ಲದೆ ನಿರ್ಲಕ್ಷ್ಯ ಗೊಂಡಿದೆ. ಗೋವಾ ರಾಜ್ಯವನ್ನು ವಿಸ್ತರಿಸಬೇಕು. ಬಹುಭಾಷಿಗರಾದ ಕೊಂಕಣಿಯರು ಇದನ್ನು ಬೆಂಬಲಿಸಬೇಕು. ಕಾರವಾರವನ್ನು ಗೋವಾಕ್ಕೆ ಸೇರಿಸಿ ಎಂದು ಹಿಂದೆ ಒಮ್ಮೆ ಹೇಳಿದ್ದ ಗೋವಾದ ಮಾಜಿ ಸಚಿವ ಚರ್ಚಿಲ್ ಅಲೆಮಾವೋ ಈಗ ಪೊಲೀಸರ ಅತಿಥಿ.

ಅಮೆರಿಕದ ಕಂಪನಿ ಲೂಯಿಸ್ ಬರ್ಗರ್ ಲಂಚ ಪ್ರಕರಣಕ್ಕೆ ಸಂಬಂಧಿಸಿದಂತೆ ಗೋವಾದ ಮಾಜಿ ಕಾಂಗ್ರೆಸ್ ಸಚಿವ ಚರ್ಚಿಲ್ ಅಲೆಮಾವೋ ಅವರನ್ನು ಬಂಧಿಸಿ ವಿಚಾರಣೆಗೊಳಪಡಿಸಲಾಗಿದೆ. ಮಾಜಿ ಮುಖ್ಯಮಂತ್ರಿ ದಿಗಂಬರ ಕಾಮತ್ ಅವರಿಗೆ ಕೋರ್ಟ್ ಮಧ್ಯಂತರ ಜಾಮೀನು ನೀಡಿ ಕೆಲವೇ ಗಂಟೆಗಳಲ್ಲಿ ಅಲೆಮಾವೋ ಅವರ ಬಂಧನವಾಗಿದೆ.

Digambar Kamat

ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಅಲ್ಮೆಲೊ ಲೋಕೋಪಯೋಗಿ ಖಾತೆ ಸಚಿವರಾಗಿದ್ದರು. 2010ರಲ್ಲಿ ಸಿದ್ಧಗೊಂಡ ನೀರು ಮತ್ತು ಒಳಚರಂಡಿ ಯೋಜನೆಗೆ ಸಂಬಂಧಿಸಿದಂತೆ ಅಮೆರಿಕದ ಕಂಪನಿಯಿಂದ ಲಂಚ ಪಡೆದ ಆರೋಪ ಹೊಂದಿದ್ದಾರೆ.

ಸುಮಾರು 976,630 ಯುಎಸ್ ಡಾಲರ್ ಲಂಚವನ್ನು ಲೂಯಿಸ್ ಬರ್ಗರ್ ಅಧಿಕಾರಿಗಳು 2010ರಲ್ಲಿ ಯೋಜನಾ ಅಧ್ಯಕ್ಷ ಆನಂದ್ ವಾಚ್ಸುಂದರ್ ಗೆ ನೀಡಿದ್ದರು.

ಜಪಾನ್ ಇಂಟರ್ ನ್ಯಾಷನಲ್ ಕೋ ಆಪರೇಷನ್ ಏಜೆನ್ಸಿ ಬಂಡವಾಳ ಹೂಡಿಕೆಯ ಈ ನೀರು ಮತ್ತು ಒಳ ಚರಂಡಿ ಯೋಜನೆಯಲ್ಲಿ ಆನಂದ್, ಲೂಯಿಸ್ ಬರ್ಗರ್ ನ ಭಾರತ ವಿಭಾಗದ ಮಾಜಿ ಮುಖ್ಯಸ್ಥ ಸತ್ಯಾಕಾಮ್ ಮೊಹಂತಿ, ದಿಗಂಬರ್ ಕಾಮರ್, ಆಂದಿನ ಲೋಕೋಪಯೋಗಿ ಸಚಿವ ಚರ್ಚಿಲ್ ಅವರು ಆರೋಪ ಎದುರಿಸುತ್ತಿದ್ದಾರೆ. (ಐಎಎನ್ಎಸ್) ಈ ಸುದ್ದಿಯನ್ನು ಕೇಳಿಸಿಕೊಳ್ಳಿ:

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+