Get Updates
Get notified of breaking news, exclusive insights, and must-see stories!

2007-2017ರ ಮಧ್ಯೆ 37 ಬಾರಿ ಭಾರತಕ್ಕೆ ಕಾಲಿಟ್ಟಿತ್ತು ಚೀನಾ ಸೇನೆ!

ನವದೆಎಹಲಿ, ಆಗಸ್ಟ್ 1: ಉತ್ತರಖಂಡದ ಚಮೋಲಿ ಜಿಲ್ಲೆಯ ಬಾರಹೋಟಿಯಲ್ಲಿ ಭಾರತದ ಭೂ ಪ್ರದೇಶವನ್ನು ಚೀನಾ ಸೇನೆ ಪ್ರವೇಶಿಸಿದೆ. ಒಂದು ವಾರದ ಹಿಂದೆ ನಡೆದ ಈ ಘಟನೆ ಇದೀಗ ವಿವಾದಕ್ಕೆ ಕಾರಣವಾಗಿದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ದೆಹಲಿಯ ಗೃಹ ಇಲಾಖೆ ಉನ್ನತ ಅಧಿಕಾರಿ, ಇದೇನು ಹೊಸದಲ್ಲ. ಈ ರೀತಿ ಹಿಂದೆ ತುಂಬಾ ಸಲ ಆಗಿದೆ. ಮತ್ತು ಈ ಸಂದರ್ಭಗಳಲ್ಲಿ ಸಮಸ್ಯೆಯನ್ನು ಸ್ಥಳೀಯವಾಗಿಯೇ ಪರಿಹರಿಸಿರುವುದಾಗಿ ಹೇಳಿದ್ದಾರೆ.

ವರ್ಷದ ಹಿಂದೆಯೂ ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿ ಇದೇ ರೀತಿ ಇದೇ ಪ್ರದೇಶದಲ್ಲಿ ಕಾಣಿಸಿಕೊಂಡಿತ್ತು. ಆದರೆ ಈ ಸಮಸ್ಯೆಯನ್ನು ಅಲ್ಲೇ ಬಗೆಹರಿಸಲಾಗಿತ್ತು.

Chinese incursions at Uttarakhand have taken place 37 times between 2007-2012

ವಿಶೇಷವೆಂದರೆ ಈ ರೀತಿಯ ಸಮಸ್ಯೆಗಳು 1958ರಲ್ಲಿ ಮೊದಲ ಬಾರಿಗೆ ತಲೆದೋರಿದ್ದವು. ನಂತರ ಅದೇ ವರ್ಷ ಚೀನಾದ ನಿಯೋಗ ಭಾರತಕ್ಕೆ ಭೇಟಿ ನೀಡಿತ್ತು. ಕೊನೆಗೆ ಈ ಪ್ರದೇಶಕ್ಕೆ ಎರಡೂ ದೇಶಗಳು ಸೇನೆ ಕಳುಹಿಸುವುದು ಬೇಡ ಎಂಬ ತೀರ್ಮಾನಕ್ಕೆ ಬರಲಾಯಿತು. ಆದರೆ ಈ ಕುರಿತು ಅಂತಿಮ ತೀರ್ಮಾನ ಮಾತ್ರ ಇನ್ನೂ ಆಗಿಲ್ಲ.

ಇನ್ನು ಈ ಕುರಿತು ಇಂಡೋ ಟಿಬೇಟಿಯನ್ ಬಾರ್ಡರ್ ಪೊಲೀಸ್ (ಐಟಿಬಿಪಿ) ವರದಿಯೊಂದನ್ನು ಗೃಹ ಇಲಾಖೆಗ ಕಳುಹಿಸಿದೆ. ಈ ವರದಿಯಲ್ಲಿ ಚೀನಾ ಸೇನೆ 2007ರಿಂದ 2012ರ ನಡುವೆ 37 ಬಾರಿ ಭಾರತದ ಗಡಿಯೊಳಕ್ಕೆ ಬಂದಿತ್ತು ಎಂಬುದಾಗಿ ಹೇಳಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+