ರಾಜಕೀಯ ಪ್ರಚಾರಕ್ಕೆ ಮಕ್ಕಳ ದುರುಪಯೋಗ: ಎಎಪಿಯ ಅತಿಶಿ ವಿರುದ್ಧ ಮಕ್ಕಳ ಆಯೋಗದಿಂದ ದೂರು

ಮನೋಜ್ ತಿವಾರಿ ಸಲ್ಲಿಸಿರುವ ದೂರಿನ ಆಧಾರದ ಮೇಲೆ ಅತಿಶಿ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಮಕ್ಕಳ ಹಕ್ಕುಗಳ ರಾಷ್ಟ್ರೀಯ ಆಯೋಗ (ಎನ್‌ಸಿಪಿಸಿಆರ್) ದೆಹಲಿ ಮುಖ್ಯ ಕಾರ್ಯದರ್ಶಿ ಮತ್ತು ಪೊಲೀಸ್ ಆಯುಕ್ತರಿಗೆ ಪತ್ರ ಬರೆದಿದೆ.

ನವದೆಹಲಿ, ಮಾರ್ಚ್ 05: "ವೈಯಕ್ತಿಕ ಅಜೆಂಡಾಗಳಿಗಾಗಿ" ಮಕ್ಕಳನ್ನು ದುರುಪಯೋಗಪಡಿಸಿಕೊಂಡ ಆರೋಪದ ಮೇಲೆ ಆಮ್ ಆದ್ಮಿ ಪಕ್ಷದ (ಎಎಪಿ) ನಾಯಕಿ ಅತಿಶಿ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಮಕ್ಕಳ ಹಕ್ಕುಗಳ ರಾಷ್ಟ್ರೀಯ ಆಯೋಗ (ಎನ್‌ಸಿಪಿಸಿಆರ್) ಆಗ್ರಹಿಸಿದೆ. ಈ ಬಗ್ಗೆ ಬಿಜೆಪಿ ನಾಯಕ ಮನೋಜ್ ತಿವಾರಿ ದೂರು ಸಲ್ಲಿಸಿದ್ದರು.

ಮನೋಜ್ ತಿವಾರಿ ಸಲ್ಲಿಸಿರುವ ದೂರಿನ ಆಧಾರದ ಮೇಲೆ ಅತಿಶಿ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಮಕ್ಕಳ ಹಕ್ಕುಗಳ ರಾಷ್ಟ್ರೀಯ ಆಯೋಗ (ಎನ್‌ಸಿಪಿಸಿಆರ್) ದೆಹಲಿ ಮುಖ್ಯ ಕಾರ್ಯದರ್ಶಿ ಮತ್ತು ಪೊಲೀಸ್ ಆಯುಕ್ತರಿಗೆ ಪತ್ರ ಬರೆದಿದೆ. ತಮ್ಮ ವೈಯಕ್ತಿಕ ಅಜೆಂಡಾಗಳಿಗಾಗಿ ಮಕ್ಕಳನ್ನು ದುರುಪಯೋಗಪಡಿಸಿಕೊಂಡ ಆರೋಪದ ಮೇಲೆ ಆಕೆಯ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಆಗ್ರಹಿಸಿದೆ.

Child Rights Commission Wants Case Against AAPs Atishi

"ಅತಿಶಿ ಸಿಂಗ್ ಅವರ ನಿರ್ದೇಶನದ ಮೇರೆಗೆ ದೆಹಲಿ ಶಿಕ್ಷಣ ಕಾರ್ಯಪಡೆಯು ತಮ್ಮ ವೈಯಕ್ತಿಕ ಅಜೆಂಡಾಗಳು ಮತ್ತು ರಾಜಕೀಯ ಪ್ರಚಾರಗಳಿಗಾಗಿ ಶಾಲೆಗಳಲ್ಲಿ ಕಲಿಯುತ್ತಿರುವ ಅಪ್ರಾಪ್ತ ಮಕ್ಕಳನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು ತಿಳಿಸಲಾಗಿದೆ" ಎಂದು ಎನ್‌ಸಿಪಿಸಿಆರ್ ಹೇಳಿದೆ. ಈ ಬಗ್ಗೆ ತಕ್ಷಣ ಎಫ್‌ಐಆರ್ ದಾಖಲಿಸಿ ತನಿಖೆ ನಡೆಸುವಂತೆ ಆಯುಕ್ತರಿಗೆ ಮನವಿ ಮಾಡಿದೆ.

ದೆಹಲಿ ಅಬಕಾರಿ ನೀತಿ ಹಗರಣದಲ್ಲಿ ಆರೋಪಿಯಾಗಿರುವ ದೆಹಲಿಯ ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರಿಂದ ಗಮನವನ್ನು ಬೇರೆಡೆಗೆ ಸೆಳೆಯಲು ಮತ್ತು ಸಿಸೋಡಿಯಾ ಪರವಾಗಿ ಪ್ರಚಾರ ಮಾಡಲು ಅಪ್ರಾಪ್ತ ಮಕ್ಕಳನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ ಎಂದು ಎನ್‌ಸಿಪಿಸಿಆರ್ ಪತ್ರದಲ್ಲಿ ಆರೋಪಿಸಿದೆ.

ಮನೋಜ್ ತಿವಾರಿ ಅವರ ದೂರಿನ ಆಧಾರದ ಮೇಲೆ ಆಯೋಗವು ದೆಹಲಿ ಶಿಕ್ಷಣ ಕಾರ್ಯಪಡೆಯ ಸದಸ್ಯರಾದ ಶೈಲೇಶ್, ರಾಹುಲ್ ತಿವಾರಿ, ಮೈತ್ರೇಯಿ ಕಾಲೇಜಿನ ಅಧ್ಯಕ್ಷ ವೈಭವ್ ಶ್ರೀವಾಸ್ತವ್ (ಶಿಕ್ಷಣ ಕಾರ್ಯಪಡೆಯ ಸದಸ್ಯ ಕೂಡ) ಮತ್ತು ಶಿಕ್ಷಣ ಕಾರ್ಯಪಡೆಯ ಸದಸ್ಯ ಮತ್ತು ಉಪ ಮುಖ್ಯಮಂತ್ರಿ ಕಚೇರಿಯ ಅಧಿಕಾರಿಯಾಗಿರುವ ತಾರಿಶಿ ಶರ್ಮಾ ಅವರನ್ನೂ ಹೆಸರಿಸಿದೆ. ದೆಹಲಿಯ ಸಂವಾದ ಮತ್ತು ಅಭಿವೃದ್ಧಿ ಆಯೋಗದ ಉಪಾಧ್ಯಕ್ಷ ಜಾಸ್ಮಿನ್ ಶಾ ಅವರನ್ನೂ ಪತ್ರದಲ್ಲಿ ಹೆಸರಿಸಲಾಗಿದೆ.

Child Rights Commission Wants Case Against AAPs Atishi

ಎಎಪಿಯ ಅತಿಶಿ ಮತ್ತು ಶಿಕ್ಷಣ ಕಾರ್ಯಪಡೆಯ ಸದಸ್ಯ ಶೈಲೇಶ್ ಸೇರಿದಂತೆ ಹಲವರ ವಿರುದ್ಧ ಬಿಜೆಪಿ ನಾಯಕ ಮನೋಜ್ ತಿವಾರಿ ಎನ್‌ಸಿಪಿಸಿಆರ್ ಅಧ್ಯಕ್ಷ ಪ್ರಿಯಾಂಕ್ ಕಾನೂಂಗೊ ಅವರಿಗೆ ಪತ್ರ ಬರೆದ ನಂತರ ಆಯೋಗದ ಕ್ರಮಕ್ಕೆ ಆಗ್ರಹಿಸಿದೆ. ಎಎಪಿ ಪಕ್ಷಕ್ಕೆ ಯಾವುದೇ ಆಯ್ಕೆ ಉಳಿದಿಲ್ಲದ ಕಾರಣ ಮನೀಶ್ ಸಿಸೋಡಿಯಾಗೆ ಜಾಮೀನು ನೀಡಲು ಸುಪ್ರೀಂ ಕೋರ್ಟ್ ನಿರಾಕರಿಸಿದ ನಂತರ ಎಎಪಿ ಇಂತಹ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+