ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Breaking: ಕಾರ್ಖಾನೆಯಲ್ಲಿ ರಸಾಯನಿಕ ಸೋರಿಕೆ: ಪಕ್ಕದ ಸರ್ಕಾರಿ ಶಾಲೆಯ 150 ಮಕ್ಕಳು ಅಸ್ವಸ್ಥ

|
Google Oneindia Kannada News

ಬೆಂಗಳೂರು, ಅಕ್ಟೋಬರ್ 14: ಕಾರ್ಖಾನೆಯೊಂದರಲ್ಲಿ ಕೆಮಿಕಲ್ ಟ್ಯಾಂಕ್ (ಮೀಥೇನ್ ಗ್ಯಾಸ್) ಒಡೆದ ಪರಿಣಾಮ ಪಕ್ಕದಲ್ಲಿದ್ದ ಸರ್ಕಾರಿ ಶಾಲೆಯ 150ಕ್ಕೂ ಅಧಿಕ ಮಕ್ಕಳಿಗೆ ಉಸಿರಾಟ ತೊಂದರೆ ಉಂಟಾಗಿ ಅಸ್ವಸ್ತರಾಗಿದ್ದಾರೆ. ಕೂಡಲೇ ಅಷ್ಟು ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ತಮಿಳುನಾಡು ರಾಜ್ಯದ ಹೊಸೂರು ಸರ್ಕಾರಿ ಶಾಲೆಯೊಂದರ ಹಿಂದೆ ಇದ್ದ ಕಾರ್ಖಾನೆಯಲ್ಲಿ ಶುಕ್ರವಾರ ರಸಾಯನಿಕ ತುಂಬಿಕೊಂಡಿದ್ದ ಟ್ಯಾಂಕ್ ಒಡೆದಿದೆ. ಪರಿಣಾಮ ಗಾಳಿಯಲ್ಲಿ ರಸಾಯನಿಕ (ಮೀಥೇನ್ ಗ್ಯಾಸ್) ವ್ಯಾಪಿಸಿದ್ದು, ಪಕ್ಕದಲ್ಲೆ ಇದ್ದ ಸರ್ಕಾರಿ ಶಾಲೆಯ ಮಕ್ಕಳಿಗೆ ಉಸಿರಾಟದ ತೊಂದರೆ ಉಂಟಾಗಿದೆ. ಮಕ್ಕಳು ರಸಾಯನಿಕ ಯುಕ್ತ ಗಾಳಿ ಸೇವಿಸಿ ಅಸ್ವಸ್ತರಾಗಿ ಬಿದ್ದಿದ್ದಾರೆ. ಕೂಡಲೇ ಒಟ್ಟು ಸುಮಾರು 150 ಮಕ್ಕಳನ್ನು ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

Chemical leak in factory nearby Government school 150 children sick in Hosur at Tamilnadu

ಈ ಘಟನೆಯಿಂದ ಹೊಸೂರು ಗ್ರಾಮಸ್ಥರು ಹಾಗೂ ಸರ್ಕಾರಿ ಶಾಲೆ ಶಿಕ್ಷಕರು, ಆಡಳಿತ ಸಿಬ್ಬಂದಿ ಆತಂಕಗೊಂಡಿದ್ದಾರೆ. ತಮ್ಮ ಮಕ್ಕಳಿಗೆ ಏನಾಗಿಬಿಡತ್ತದೋ ಎಂದು 150 ಮಕ್ಕಳ ಪೋಷಕರು ಕಣ್ಣೀರು ಹಾಕುತ್ತಿದ್ದಾರೆ. ವೈದ್ಯರಲ್ಲಿ ಮಕ್ಕಳನ್ನು ಉಳಿಸಿಕೊಡಿ ಎಂದು ಗೋಗರೆಯುತ್ತಿದ್ದಾರೆ. ಇತ್ತ ಆಸ್ಪತ್ರೆಗೆ ದಾಖಲಾದ ಮಕ್ಕಳು ಸರಿಯಾಗಿ ಉಸಿರಾಡಲು ಆಗದೇ ಹಾಸಿಗೆಯಲ್ಲಿ ಒದ್ದಾಡುತ್ತಿರುವ ದೃಶ್ಯಗಳು ಎಂಥವರ ಮನಸ್ಸನ್ನು ಹಿಂಡುತ್ತಿವೆ.

Chemical leak in factory nearby Government school 150 children sick in Hosur at Tamilnadu

ಇಷ್ಟೆಲ್ಲ ಅವಘಡಕ್ಕೆ ಶಾಲೆಯ ಹಿಂದಿದ್ದ ಕಾರ್ಖಾನೆಯ ಅಸರ್ಪಕ ನಿರ್ವಹಣೆಯೆ, ಅಲ್ಲಿನ ಸಿಬ್ಬಂದಿಯ ಬೇಜವಾಬ್ದಾರಿಯೇ ಕಾರಣ ಎಂದು ಸ್ಥಳಿಯರು ದೂರುತ್ತಿದ್ದಾರೆ. ಉಸಿರಾಟ ತೊಂದರೆ ಅನುಭವಿಸುತ್ತಿರುವ ಮಕ್ಕಳಿಗೆ ಆಸ್ಪತ್ರೆ ಚಿಕಿತ್ಸೆ ಮುಂದುವರಿದಿದ್ದು, ಪ್ರಕರಣ ದಾಖಲಾಗಿದೆ ಎಂದು ತಿಳಿದು ಬಂದಿದೆ.

ಆಸ್ಪತ್ರೆ, ಶಾಲೆ ಮುಂದೆ ಜನಸಾಗರ
ಕಾರ್ಖಾನೆಯಲ್ಲಿ ಮೀಥೇನ್ ಗ್ಯಾಸ್ ಸೋರಿಕೆಯಾದ ನಂತರ ಹೊಸೂರು ಸರ್ಕಾರಿ ಶಾಲೆ ಹಾಗೂ ಸ್ಥಳೀಯ ಆಸ್ಪತ್ರೆ ಬಳಿ ಮಕ್ಕಳ ಪೋಷಕರು ಜಮಾಯಿಸಿದರು. ಈವೇಳೆ ಸ್ಥಳೀಯ ಜನಪ್ರತಿನಿಧಿಗಳು ಸ್ಥಳಕ್ಕೆ ದೌಡಾಯಿಸಿ ಪೋಷಕರು ಸಮಾಧಾನ ಹೇಳಿದ್ದು ಕಂಡು ಬಂತು.
ವಿದ್ಯಾರ್ಥಿಗಳು ಅಸ್ವಸ್ಥರಾಗುತ್ತಿದ್ದಂತೆ ಅಕ್ಕಪಕ್ಕದವರ ನೆರವಿನಿಂದ ಆಸ್ಪತ್ರೆ ಸಾಗಿಸಲಾಯಿತು. ಕೆಲವು ವಿದ್ಯಾರ್ಥಿಗಳು ಪ್ರಜ್ಞೆ ತಪ್ಪಿದ್ದು ಕಂಡು ಪೋಷಕರು ಚಿರಾಟ ಮುಗಿಲು ಮುಟ್ಟಿತು. ಕೆಲವೇ ನಿಮಿಷಗಳಲ್ಲಿ ಆಸ್ಪತ್ರೆ ಮುಂದೆ ಸಾಗರೋಪಾದಿಯಲ್ಲಿ ಜನರು ಆಗಮಿಸಿದರು. ಸಂಜೆ ಬಳಿಕ ಮಕ್ಕಳ ಆರೋಗ್ಯದಲ್ಲಿ ತುಸು ಚೇತರಿಕೆ ಆಗಿರುವುದು ಪೋಷಕರಲ್ಲಿ ಸಮಾಧಾನ ತಂದಿದೆ ಎಂದು ಮೂಲಗಳು ತಿಳಿಸಿವೆ.

English summary
Chemical leak in factory nearby Government school 150 children sick in Hosur at Tamilnadu admit hospital.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X