Salman Khan: 25 ಲಕ್ಷ ರೂಪಾಯಿ ನೀಡಿ ಸಲ್ಮಾನ್‌ ಖಾನ್‌ ಹತ್ಯೆ...

ಭಾರತದ ಸಿನಿಮಾ ರಂಗವೇ ಇಂದು ಬೆಚ್ಚಿ ಬಿದ್ದಿದೆ, ಸ್ಯಾಂಡಲ್‌ವುಡ್, ಕಾಲಿವುಡ್, ಟಾಲಿವುಡ್ ಹಾಗೂ ಮಾಲಿವುಡ್ ಸಿನಿಮಾ ರಂಗವನ್ನು ಮೀರಿ ಬೆಳೆದಿದ್ದ ಬಾಲಿವುಡ್ ಚಿತ್ರರಂಗ ಇಂದು ಆಘಾತಕ್ಕೆ ಒಳಗಾಗಿದೆ. ಇತ್ತೀಚೆಗಷ್ಟೇ ಮಹಾರಾಷ್ಟ್ರ ರಾಜ್ಯದಲ್ಲಿ ದೊಡ್ಡ ರಾಜಕಾರಣಿಯನ್ನೇ ಹತ್ಯೆ ಮಾಡಿದ ನಂತರ ಇದೀಗ ಸಿನಿಮಾ ರಂಗದ ದೊಡ್ಡ ದೊಡ್ಡ ನಟರಿಗೆ ಭಯ ಶುರುವಾಗಿ ಭದ್ರತೆ ಹೆಚ್ಚಿಸಲಾಗಿತ್ತು. ಹೀಗಿದ್ದಾಗಲೇ 25 ಲಕ್ಷ ರೂಪಾಯಿ ನೀಡಿ ಸಲ್ಮಾನ್‌ ಖಾನ್‌ ಹತ್ಯೆಗೆ....

ಸಲ್ಮಾನ್ ಖಾನ್ ಅವರಿಗೆ ಜೀವ ಭಯ ಕಾಡುತ್ತಿತ್ತು, ಹೀಗಾಗಿಯೇ ಸಲ್ಮಾನ್ ಖಾನ್ ಅವರಿಗೆ ಹೆಚ್ಚಿನ ಭದ್ರತೆ ಕೂಡ ನೀಡಲಾಗಿತ್ತು. ಮಹಾರಾಷ್ಟ್ರ ರಾಜಧಾನಿ ಮುಂಬೈ ಈ ಕಾರಣಕ್ಕೆ, ದೊಡ್ಡ ಮಟ್ಟದಲ್ಲಿ ಸಂಚಲನಕ್ಕೂ ಕಾರಣವಾಗಿದ್ದು, ಬಾಲಿವುಡ್ ಸ್ಟಾರ್ ನಟ & ನಟಿಯರು ಭಯದಲ್ಲೇ ದಿನ ದೂಡುತ್ತಿದ್ದರು. ಹೀಗಿದ್ದಾಗ, ಕೆಲವು ದಿನಗಳ ಹಿಂದಷ್ಟೇ ಮಾಜಿ ಸಚಿವ ಬಾಬಾ ಸಿದ್ದೀಕಿ ಹತ್ಯೆ ಆಗಿತ್ತು. ಅಲ್ಲದೆ ಮಹಾರಾಷ್ಟ್ರ ಮಾಜಿ ಸಚಿವ ಬಾಬಾ ಸಿದ್ದೀಕಿ ಹತ್ಯೆಗೆ ಬಾಲಿವುಡ್ ಕಣ್ಣೀರು ಹಾಕಿತ್ತು. ಇಷ್ಟೆಲ್ಲದರ ನಡುವೆ ಮತ್ತೊಮ್ಮೆ ಮುಂಬೈ ನಡುಗಿ ಹೋಗಿದೆ. 25 ಲಕ್ಷ ರೂಪಾಯಿ ನೀಡಿ ಸಲ್ಮಾನ್‌ ಖಾನ್‌ ಹತ್ಯೆಗೆ...

Chargesheet Reveals 25 Lakh Contract on Salman Khan s Life

ಸಲ್ಮಾನ್‌ ಖಾನ್‌ ಹತ್ಯೆಗೆ...

ಬಾಲಿವುಡ್ ನೋಡುವ ಉತ್ತರ ಭಾರತವೇ ಇರಲಿ, ಅಥವಾ ಹಿಂದಿ ಸಿನಿಮಾಗಳನ್ನು ಕಡಿಮೆ ನೋಡುವ ದಕ್ಷಿಣ ಭಾರತವೇ ಇರಲಿ. ಬಹುತೇಕ ಭಾರತೀಯರಿಗೆ ಸಲ್ಮಾನ್ ಖಾನ್ ಎಂಬ ಹೆಸರು ಚಿರಪರಿಚಿತ. ಯಾಕಂದ್ರೆ ಸಲ್ಮಾನ್ ಖಾನ್ ಭಾರತದಲ್ಲಿ ಮಾತ್ರವಲ್ಲ, ಜಗತ್ತಿನಾದ್ಯಂತ ಹೆಸರು ಮಾಡಿರುವ ನಟ. ಹೀಗಿದ್ದಾಗ ಗ್ಯಾಂಗ್ ಸ್ಟರ್ ಲಾರೆನ್ಸ್ ಬಿಷ್ಣೋಯಿ ಸಾರಥ್ಯದ ತಂಡ ಸಲ್ಮಾನ್ ಖಾನ್ ಅವರನ್ನು ಟಾರ್ಗೆಟ್ ಮಾಡಿದೆ ಎಂಬ ಆರೋಪ ಕೇಳಿಬಂದಿತ್ತು. ಹೀಗಾಗಿ ಭದ್ರತೆ ಕೂಡ ಹೆಚ್ಚಿಸಲಾಗಿತ್ತು.

25 ಲಕ್ಷ ರೂಪಾಯಿ ಸುಪಾರಿ...

ಇದೀಗ ಸಲ್ಮಾನ್ ಖಾನ್ ಅವರ ಹತ್ಯೆ ಸಂಚು ವಿಚಾರದಲ್ಲಿ ಸ್ಫೋಟಕ ಮಾಹಿತಿ ಬಯಲಾಗಿ ಭಾರತದಲ್ಲಿ ಸಂಚಲನ ಸೃಷ್ಟಿಯಾಗಿದೆ. ಸಿನಿಮಾ ಮಂದಿ ಈಗ ನಡುಗಿ ಹೋಗಿದ್ದು, ತಾವು ಕೂತ ಜಾಗದಲ್ಲೇ ಈ ಸುದ್ದಿ ಕೇಳಿ ಬೆವತು ಹೋಗಿದ್ದಾರೆ. ಬಾಲಿವುಡ್ ಸ್ಟಾರ್ ನಟ ಸಲ್ಮಾನ್ ಖಾನ್ ಹತ್ಯೆಗೆ ಬರೋಬ್ಬರಿ 25 ಲಕ್ಷ ರೂಪಾಯಿ ಸುಪಾರಿ ನೀಡಲಾಗಿತ್ತು. ಮಹಾರಾಷ್ಟ್ರದ ಪನ್ವೇಲ್‌ ಪ್ರದೇಶದಲ್ಲಿರುವ ಫಾರ್ಮ್ ಹೌಸ್‌ನಲ್ಲಿ ಸಲ್ಮಾನ್ ಖಾನ್‌ ಅವರನ್ನು ಹತ್ಯೆ ಮಾಡಲು ಸ್ಕೆಚ್ ಹಾಕಲಾಗಿತ್ತು ಎಂಬ ಆರೋಪ ಕೇಳಿಬಂದಿದೆ. ಈ ಬಗ್ಗೆ ಮುಂಬೈ ಪೊಲೀಸರು ಈಗ ನ್ಯಾಯಾಲಯಕ್ಕೆ ಸಲ್ಲಿಸಿರುವ ಆರೋಪ ಪಟ್ಟಿಯಲ್ಲಿ ಸ್ಫೋಟಕ ಆರೋಪ ಬಯಲಾಗಿದೆ.

ಪಾಕಿಸ್ತಾನದಿಂದ ಎಕೆ-47 ಬರ್ತಾ ಇದ್ವಾ?

ಇದೀಗ ಸಲ್ಮಾನ್ ಖಾನ್ ಅವರ ಹತ್ಯೆಗೆ ಸುಪಾರಿ ನೀಡಿದ್ದಾರೆ ಎಂಬ ಆರೋಪದ ಸಂಬಂಧ ಒಟ್ಟು ಐವರ ಹೆಸರನ್ನು ಚಾರ್ಜ್ ಶೀಟ್‌ನಲ್ಲಿ ಉಲ್ಲೇಖ ಮಾಡಲಾಗಿದೆ. ಜೈಲಿನಲ್ಲೇ ಇರುವ ಗ್ಯಾಂಗ್ ಸ್ಟರ್ ಲಾರೆನ್ಸ್ ಬಿಷ್ಣೋಯಿ ನೇತೃತ್ವದ ಗ್ಯಾಂಗ್‌ನಿಂದ, ಈ ಸುಪಾರಿ ಪಡೆಯಲಾಗಿತ್ತು ಎಂಬ ಆರೋಪ ಮಾಡಲಾಗಿದೆ. ಮತ್ತೊಂದು ಆತಂಕಕಾರಿ ಸಂಗತಿ ಏನು ಅಂದ್ರೆ, ಪಾಪಿ ಪಾಕಿಸ್ತಾನದಿಂದ ಎಕೆ 47, ಎಕೆ 92 ರೈಫಲ್ಸ್ ತರಿಸಿಕೊಳ್ಳಲು ತೀರ್ಮಾನ ಮಾಡಲಾಗಿತ್ತು ಎಂಬ ಗಂಭೀರ ಆರೋಪ ಕೂಡ ಕೇಳಿ ಬಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+