ಪಾಳಿ ಬದಲಾಯಿಸಿದರೆ ಮಿದುಳು ಮುದಿಯಾಗುತ್ತೆ
ಕಚೇರಿಯಲ್ಲಿ ನಿರಂತರವಾಗಿ ಕೆಲಸದ ಪಾಳಿ ಬದಲಾಯಿಸುತ್ತಿದ್ದೀರಾ? ಹಾಗಿದ್ದರೆ ನಿಮ್ಮ ಮಿದುಳು ನೈಜ ವಯಸ್ಸಿಗಿಂತ 6.5 ವರ್ಷ ಹೆಚ್ಚು ಮುದಿಯಾಗುತ್ತದೆ..!
ಆತಂಕವಾಯಿತೇ..? ಹೌದು, ಅಧ್ಯಯನವೊಂದರ ಪ್ರಕಾರ ಕಚೇರಿಯಲ್ಲಿ ಕನಿಷ್ಠ 10 ವರ್ಷಗಳ ಕಾಲ ನಿರಂತರವಾಗಿ ಕೆಲಸದ ಪಾಳಿ ಬದಲಾಯಿಸುವವರು ಮಾನಸಿಕ ಸಂವೇದನಾ ಶಕ್ತಿ ಹಾಗೂ ದೈಹಿಕ ಆರೋಗ್ಯವನ್ನು ವೇಗವಾಗಿ ಕಳೆದುಕೊಳ್ಳುತ್ತಿದ್ದಾರೆ. ಅಲ್ಲದೆ, ಇಂತವರಿಗೆ ಕ್ಯಾನ್ಸರ್, ಹೃದಯಾಘಾತ, ಪಾರ್ಶ್ವವಾಯು, ಆಲ್ಸರ್, ಡಯಾಬಿಟೀಸ್ ಸೇರಿದಂತೆ ಅಜೀರ್ಣ ಸಮಸ್ಯೆ ಹೆಚ್ಚಾಗುತ್ತಿದೆ.

ಈ ಕುರಿತು ಫ್ರಾನ್ಸ್ ದೇಶದ ವಿಶ್ವವಿದ್ಯಾಲಯವೊಂದರ ವಿದ್ಯಾರ್ಥಿಗಳು ಮೂರು ಸಾವಿರ ಜನರನ್ನು 1996, 2001 ಹಾಗೂ 2006ರಲ್ಲಿ ಅಧ್ಯಯನಕ್ಕೊಳಪಡಿಸಿದ್ದು, ಮಿದುಳಿನ ಆರೋಗ್ಯದ ಕುರಿತು ಎಚ್ಚರಿಕೆ ನೀಡಿದೆ.
ರಾತ್ರಿ ಅಥವಾ ಬೆಳಗ್ಗಿನ ಪಾಳಿಯಲ್ಲಿ ದುಡಿದವರಲ್ಲಿ ನೆನಪಿನ ಶಕ್ತಿ ಹಾಗೂ ಯೋಚಿಸುವ ವೇಗ ಸೇರಿದಂತೆ ಒಟ್ಟು ಮಿದುಳಿನ ಸಾಮರ್ಥ್ಯವು ಸಾಮಾನ್ಯ ಪಾಳಿ (ಬೆಳಗ್ಗೆ 8ರಿಂದ ಸಂಜೆ 6)ಯಲ್ಲಿ ಕೆಲಸ ಮಾಡಿದವರಿಗಿಂತ ಕಡಿಮೆ ಕಂಡುಬಂದಿದೆ. ಅಲ್ಲದೆ, ಆಗಾಗ ಬೆಳಗ್ಗೆ, ಸಾಮಾನ್ಯ ಹಾಗೂ ರಾತ್ರಿ ಪಾಳಿಯನ್ನು ನಿರಂತರವಾಗಿ 10 ವರ್ಷ ಬದಲಾಯಿಸುತ್ತ ಕೆಲಸ ಮಾಡಿದವರಲ್ಲಿಯೂ ಈ ಸಮಸ್ಯೆ ಕಂಡುಬಂದಿದೆ.
ಅಷ್ಟೇ ಅಲ್ಲ, ಅನಿಯಮಿತ ಪಾಳಿಯಲ್ಲಿ ಕೆಲಸ ಮಾಡಿದವರು ಸಾಮಾನ್ಯ ಸಮಯಕ್ಕೆ ಬದಲಾದರೂ ಸುಧಾರಿಸಿಕೊಳ್ಳಲು ಕನಿಷ್ಠ ಐದು ವರ್ಷಗಳೇ ಬೇಕಾದವು. ಪಾಳಿ ಕೆಲಸ ಬದಲಾವಣೆಯಿಂದ ವೈಯಕ್ತಿಕ ಆರೋಗ್ಯವಷ್ಟೇ ಅಲ್ಲದೆ, ಸಮಾಜದಲ್ಲಿಯೂ ಅಸಹನೆ ಹೆಚ್ಚಾಗುತ್ತಿದೆ ಎಂದು ಸಮೀಕ್ಷೆಯಲ್ಲಿ ಭಾಗವಹಿಸಿದವರು "Occupational and Environmental Medicine" ಜರ್ನಲ್ ನಲ್ಲಿ ತಿಳಿಸಿದ್ದಾರೆ.
-
Dhurandhar 2 Pakistan: ಅರಬ್ ರಾಷ್ಟ್ರದ ಸಾಲ ತೀರಿಸಲು ದುರಂಧರ್ 2 ಬಿಡುಗಡೆಗೆ ಮುಂದಾಯ್ತಾ ಪಾಕಿಸ್ತಾನ, ಟ್ವಿಸ್ಟ್ -
Lata Mangeshkar & Asha Bhosle: ಆ ಒಂದು ಕಾರಣಕ್ಕೆ ತಂಗಿ ಆಶಾ ಬೋಸ್ಲೆ ಜೊತೆ ಮಾತು ಬಿಟ್ಟಿದ್ದ ಲತಾ ಮಂಗೇಶ್ಕರ್ -
Karntaka Weather: ಹವಾಮಾನ ವೈಪರೀತ್ಯ! ರಾಜ್ಯದ ಒಳನಾಡು, ಕರಾವಳಿ ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ -
ಗಂಡ-ಹೆಂಡತಿ ಜಗಳ ಇಡೀ ದಿನ ತೋರಿಸಿದರೆ ಸಮಾಜಕ್ಕೆ ಏನು ಪ್ರಯೋಜನ: ಮಾಧ್ಯಮಗಳಿಗೆ ಸಿಎಂ ಪ್ರಶ್ನೆ -
Gas Booking New Rules: ಎಲ್ಪಿಜಿ ಗ್ಯಾಸ್ ಬುಕ್ಕಿಂಗ್ನಲ್ಲಿ ಹೊಸ ನಿಯಮ, ಎಷ್ಟು ದಿನಕ್ಕೆ ಸಿಗುತ್ತೆ ಗ್ಯಾಸ್ ಸಿಲಿಂಡರ್ -
ಮೈಸೂರು-ಬೆಂಗಳೂರು ರೈಲು ಪ್ರಯಾಣಿಕರಿಗೆ ಗುಡ್ನ್ಯೂಸ್ ಕೊಟ್ಟ ವಿ.ಸೋಮಣ್ಣ -
'ಕೋಟಿಗೊಬ್ಬ' ರೀರಿಲೀಸ್: ವಿಷ್ಣುದಾದಾ ಅಭಿಮಾನಿಗಳಿಂದ ಸಂಭ್ರಮ, ಪ್ರಸನ್ನ ಥಿಯೇಟರ್ನಲ್ಲಿ ನಾಳೆ 10,000 ಮಂದಿಗೆ ನಾನ್ವೆಜ್ ಊಟ -
Ram Gopal Varma: ದಾವೂದ್ ಇಬ್ರಾಹಿಂ ಇಲ್ಲದಿದ್ದರೆ ನಾನು ಬದುಕು ಕಟ್ಟಿಕೊಳ್ಳುತ್ತಿರಲಿಲ್ಲ: ನಿರ್ದೇಶಕ ರಾಮ್ ಗೋಪಾಲ್ ವರ್ಮಾ -
Smriti Mandhana: ಸ್ಮೃತಿ ಮಂಧಾನ-ಪಲಾಶ್ ಮುಚ್ಚಲ್ ಮತ್ತೆ ಒಂದಾಗ್ತಾರಾ? ಇಬ್ಬರ ಕುಟುಂಬಗಳ ಸೀಕ್ರೆಟ್ ಮೀಟಿಂಗ್ ವಿಡಿಯೋ ವೈರಲ್ -
Asha Bhosle Kannada Songs: ಆಶಾ ಭೋಸ್ಲೆ ಹಾಡಿದ ಕನ್ನಡದ ಹಾಡುಗಳು: ಕರ್ನಾಟಕದ ಜನರ ಮನ ಗೆದ್ದ ಖ್ಯಾತ ಗಾಯಕಿ -
Government Schools: ಈ ವರ್ಷದಿಂದಲೇ ಸರ್ಕಾರಿ ಶಾಲೆಗಳಲ್ಲಿ ದ್ವಿಭಾಷಾ ನೀತಿ: ಎಲ್ಲ ಶಿಕ್ಷಕರಿಗೆ ಇಂಗ್ಲಿಷ್ ಟ್ರೈನಿಂಗ್ -
Arecanut Price: ದಾವಣಗೆರೆ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಭರ್ಜರಿ ಏರಿಕೆ: ಇಲ್ಲಿದೆ ಏಪ್ರಿಲ್ 11ರ ದರಪಟ್ಟಿ












Click it and Unblock the Notifications