50 ಸಾವಿರದ ಸ್ಕೂಟರ್ ಫ್ಯಾನ್ಸಿ ನಂಬರ್ ಗೆ 8 ಲಕ್ಷ ರು.!

ಚಂಡಿಗಢ, ಮೇ.12: ಜನ ಏನೇನಕ್ಕೋ ಎಷ್ಟಷ್ಠೋ ದುಡ್ಡು ಖರ್ಚು ಮಾಡ್ತಾರೆ. ಇಲ್ಲೊಬ್ಬ ಮಹಾಶಯ ತನ್ನ 50 ಸಾವಿರ ಬೆಲೆ ಬಾಳುವ ಸ್ಕೂಟರ್ ಗೆ ಫ್ಯಾನ್ಸಿ ನಂಬರ್ ಪಡೆಯಲು ಬರೋಬ್ಬರಿ 8 ಲಕ್ಷಕ್ಕೂ ಅಧಿಕ ಹಣ ವ್ಯಯಿಸಿದ್ದಾನೆ!

ಹೊಟೆಲ್ ಉದ್ಯಮದಲ್ಲಿ ತೊಡಗಿಕೊಂಡಿರುವ ಕುನ್ವಲ್ ಜಿತ್ ವಾಲಾ ಎಂಬುವರು CH01BC 0001 ನಂಬರ್ ಪಡೆಯಲು ಹರಾಜಿನಲ್ಲಿ 50 ಸಾವಿರ ರು ಬಿಡ್ ಕೂಗಿದ್ದಾರೆ. ಕಳೆದ ವಾರದ ಕೊನೆಯಲ್ಲಿ ಸಾರಿಗೆ ಸಂಸ್ಥೆ ಏರ್ಪಡಿಸಿದ್ದ ಹರಾಜಿನಲ್ಲಿ ಫ್ಯಾನ್ಸಿ ನಂಬರ್ ಪಡೆದುಕೊಂಡಿದ್ದಾರೆ.[ಹೊಗೆ ಪ್ರಮಾಣಪತ್ರವಿರದಿದ್ದರೆ ಇಂಧನ ಸಿಗಲ್ಲ]

scooter

ಅಂಕೆಗಳ ಮೇಲೆ ಗೀಳು ಹಚ್ಚಿಕೊಂಡಿರುವ ವಾಲಾ ಹೊರಿಯ ಮಗನ ಬೈಕ್ ಗಾಗಿ ೦೦11 ಮತ್ತು ಕಿರಿಯ ಮಗನ ಬೈಕ್ ನಂಬರ್ 0026 ಪಡೆಯಲು 2 ಲಕ್ಷ ರೂ. ವ್ಯಯಿಸಿದ್ದಾನೆ.

ನನಗೆ ನನ್ನ ತಂದೆಯಿಂದ ಇಂಥ ನಂಬರ್ ಪಡೆಯುವ ಚಟ ಹುಟ್ಟಿಕೊಂಡಿತು. ಚಂಡಿಗಢದ ಟ್ಯಾಕ್ಸಿ ಅಸೋಸಿಯೇಷನ್ ಅಧ್ಯಕ್ಷರಾಗಿದ್ದ ಅವರು ಎರಡು ಫ್ಯಾನ್ಸಿ ನಂಬರ್ ಹೊಂದಿದ್ದರು ಎಂದು ವಾಲಾ ತಮ್ಮ ನಂಬರ್ ಗೇಮ್ ಬಗ್ಗೆ ಸಮರ್ಥನೆ ನೀಡುತ್ತಾರೆ.[ಬ್ಯಾಂಕುಗಳಿಂದ ಗೃಹಸಾಲ, ವಾಹನ ಸಾಲ ಬಡ್ಡಿದರ ಇಳಿಕೆ]

ಫ್ಯಾನ್ಸಿ ನಂಬರ್ ಹರಾಜು ಪ್ರಕ್ರಿಯೆ ಉತ್ತಮ ಆದಾಯ ತಂದುಕೊಡುತ್ತಿದೆ. ಕೇವಲ ಎರಡು ದಿನದಲ್ಲಿ 98 ಲಕ್ಷ ರು. ಸಂಗ್ರಹವಾಗಿದೆ ಎಂದು ಸಾರಿಗೆ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+